Asianet Suvarna News Asianet Suvarna News

18 ತುಂಬಿದವರಿಗೆ ತಿಂಗಳಿಗೆ 30 ಅಶ್ಲೀಲ ಚಿತ್ರ ವೀಕ್ಷಣೆ ಮಾತ್ರ,ಏನಿದು ಪೋರ್ನ್ ಪಾಸ್‌ಪೋರ್ಟ್ ನಿಯಮ?

ಹೊಸ ನಿಯಮದ ಪ್ರಕಾರ ಅಶ್ಲೀಲ ವಿಡಿಯೋ ವೀಕ್ಷಿಸಲು 18 ತುಂಬಿರಬೇಕು. ಪ್ರತಿ ವಿಡಿಯೋ ನೋಡಲು ಐಡಿ ನಂಬರ್ ಹಾಕಬೇಕು. ಇನ್ನು ತಿಂಗಳಿಗೆ 30 ಮಾತ್ರ. ಇಷ್ಟೇ ಅಲ್ಲ ಹಲವು ಕಠಿಣ ನಿಯಮಗಳ ಪೋರ್ನ್ ಪಾಸ್‌ಪೋರ್ಟ್ ನಿಯಮ ಜಾರಿಯಾಗುತ್ತಿದೆ.

Spain introduce Digital wallet porn passport to prevent minors from pornography how it works ckm
Author
First Published Jul 7, 2024, 10:34 PM IST

ಸ್ಪೇನ್(ಜು.07) ನಿಮಗಿಷ್ಟ ಬಂದಂತೆ, ಮಕ್ಕಳು, ಅಪ್ರಾಪ್ತರು, ವಯಸ್ಕರು ಯಾರು ಬೇಕಾದರು ಅಶ್ಲೀಲ ವಿಡಿಯೋ ನೋಡುವ ಪರಿಪಾಠಕ್ಕೆ ಸ್ಪೇನ್ ಬ್ರೇಕ್ ಹಾಕಿದೆ. ಇದೀಗ ಪೋರ್ನ್ ಪಾಸ್‌ಪೋರ್ಟ್ ಅನ್ನೋ ಹೊಸ ನಿಯಮ ಜಾರಿಯಾಗಿದೆ. ಈ ನಿಯಮದ ಪ್ರಕಾರ ಕೇವಲ 18 ತುಂಬಿದ ವಯಸ್ಕರಿಗೆ ಮಾತ್ರ ಅಶ್ಲೀಲ ಚಿತ್ರ ವೀಕ್ಷಣೆಗೆ ಅವಕಾಶವಿದೆ. ಹಾಗಂತ ವಯಸ್ಕರಿಗೆ ಫೋನ್‌ನಲ್ಲಿ ಜಿಬಿ, ಟಿಬಿ ಸ್ಟೋರೇಜ್ ವಿಡಿಯೋ ಡೌನ್ಲೋಡ್ ಮಾಡಿ ನೋಡಲು ಸಾಧ್ಯವಿಲ್ಲ. ತಿಂಗಳಿಗೆ ಗರಿಷ್ಠ 30 ವಿಡಿಯೋ. ಈ 30 ವಿಡಿಯೋ ನೋಡಲು ನೋಂದಣಿ ಮಾಡಿಕೊಳ್ಳಬೇಕು. ಪ್ರತಿ ಬಾರಿ ಸ್ಕ್ಯಾನ್ ಮಾಡಿ ಆ್ಯಪ್ ಓಪನ್ ಮಾಡಬೇಕು, ಪ್ರತಿ ವಿಡಿಯೋ ಡೌನ್ಲೋಡ್ ಮಾಡುವಾಗಲು ಐಡಿ ನಂಬರ್ ಹಾಕಬೇಕು ಸೇರಿದಂತೆ ಹಲವು ನಿಯಮಗಳನ್ನು ಸ್ಪೇನ್ ಜಾರಿಗೆ ತಂದಿದೆ.

ಸ್ಮಾರ್ಟ್‌ಫೋನ್‌ನಿಂದ ಮಕ್ಕಳಿಗೂ ಇದೀಗ ಅಶ್ಲೀಲ ವಿಡಿಯೋಗಳು ಸುಲಭವಾಗಿ ಕೈಸೇರುತ್ತಿದೆ. ಸ್ಪೇನ್‌ನಲ್ಲಿ ಯುವ ಸಮೂಹ, ಅಪ್ರಾಪ್ತರು ಅಶ್ಲೀಲ ಚಿತ್ರದ ದಾಸರಾಗುತ್ತಿದ್ದಾರೆ. ಇದರ ಪರಿಣಾಮ ಕಳೆದ ಐದು ವರ್ಷದಲ್ಲಿ ಅಪ್ರಾಪ್ತರ ಮೇಲಿನ ಲೈಂಗಿಕ ಕಿರುಕುಳ, ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳು ಶೇಕಡಾ 116ರಷ್ಟು ಹೆಚ್ಚಳವಾಗಿದೆ. ಈ ವರದಿಯಿಂದ ಸ್ಪೇನ್ ಎಚ್ಚೆತ್ತುಕೊಂಡಿದೆ. ಹೀಗಾಗಿ ಪೋರ್ನ್ ಪಾಸ್‌‌ಪೋರ್ಟ್ ನಿಯಮ ಜಾರಿಗೆ ತಂದಿದೆ.

ಜೊತೆಯಾಗಿ ಅಶ್ಲೀಲ ವಿಡಿಯೋ ನೋಡಿ ಸೆಕ್ಸ್; ಅಕ್ಕ ಗರ್ಭಿಣಿ, 13 ವರ್ಷದ ತಮ್ಮ ಪೊಲೀಸ್ ವಶಕ್ಕೆ!

ಹೌದು, ಸ್ಪೇನ್‌ನಲ್ಲಿ ಅಡಲ್ಟ್ ವಿಡಿಯೋ, ಚಿತ್ರಗಳನ್ನು ವೀಕ್ಷಿಸಲು ಪೋರ್ನ್ ಪಾಸ್‌ಪೋರ್ಟ್ ಅವಶ್ಯಕತೆ ಇದೆ. ಹೇಗೆ ಪಾಸ್‌ಪೋರ್ಟ್ ಪಡೆಯಲು ಅಗತ್ಯ ದಾಖಲೆ ನೀಡುವುದರ ಜೊತೆಗೆ ಸ್ಥಳೀಯ ಪೊಲೀಸ್ ಠಾಣೆಯಿಂದ ವೆರಿಫಿಕೇಶನ್ ಮಾಡಲಾಗುತ್ತದೋ ಅದೇ ರೀತಿ ಪೋರ್ನ್ ಪಾಸ್‌ಪೋರ್ಟ್ ಕೂಡ ವೆರಿಫಿಕೇಶನ್ ಮೂಲಕವೇ ಪಡೆದುಕೊಳ್ಳಬೇಕು.

ಸ್ಪೇನ್‌ನಲ್ಲಿ 18 ತುಂಬಿದ ವಯಸ್ಕರಿಗೆ ಮಾತ್ರ ಅಶ್ಲೀಲ ಚಿತ್ರ ನೋಡಲು ಅವಕಾಶವಿದೆ. ಅಶ್ಲೀಲ ಚಿತ್ರಗಳನ್ನು ನೋಡಲು ಇಚ್ಚಿಸುವ ವಯಸ್ಕರು ಯಾವದೇ ಪೋರ್ನ್, ಅಡಲ್ಟ್ ವೈಬ್‌ಸೈಟ್‌ನಿಂದ ಪಾಸ್ ಪಡೆಯಬೇಕು. ಈ ಪಾಸ್ ಪಡೆಯಲು ಹೆಸರು ವಿಳಾಸದ ಜೊತೆಗೆ ಮುಖ್ಯವಾಗಿ ವಯಸ್ಸು ಹಾಗೂ ಅದರ ದಾಖಲೆಗಳನ್ನು ಆನ್‌ಲೈನ್ ಮೂಲಕ ಸಬ್‌ಮಿಟ್ ಮಾಡಬೇಕು. ಡ್ರೈವಿಂಗ್ ಲೈಸೆನ್ಸ್, ಸ್ಪೇನ್ ಗುರುತಿನ ಚೀಟಿ ಸೇರಿದಂತೆ ಇತರ ಅಧಿಕೃತ ದಾಖಲೆ ಪತ್ರ ನೀಡಿ ವಯಸ್ಸು, ವಿಳಾಸ, ಹೆಸರು ಖಾತ್ರಿಪಡಿಸಿ ಪಾಸ್ ಪಡೆಯಬೇಕು.

ಮಗಳ ಪೋರ್ನ್ ವಿಡಿಯೋಗೆ ತಂದೆಯ ಸಬ್‌ಸ್ಕ್ರೈಬರ್, ಶಾಕಿಂಗ್ ಘಟನೆ ಬಿಚ್ಚಿಟ್ಟ ನಟಿ!

ಪಾಸ್ ಪಡೆದ ಬಳಿಕ ಬಳಕೆದಾರರ ಬೀಟಾ ಡಿಜಿಟಲ್ ವ್ಯಾಲೆಟ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಲು ಸಾಧ್ಯ. ಈ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವಾಗ 18 ತುಂಬಿದ ದಾಖಲೆಯನ್ನು ಸಲ್ಲಿಸಬೇಕು. ಇದು ಎಲೆಕ್ಟ್ರಾನಿಕ್ ಡಿಎನ್ಐ ಅಥವಾ ಡಿಜಿಟಲ್ ಸರ್ಟಿಫಿಕೇಶನ್ ಮೂಲಕ ವೆರಿಫಿಕೇಶನ್ ಆಗಲಿದೆ. ಈ ಆ್ಯಪ್ ಫೋನ್ ವ್ಯಾಲೆಟ್ ರೀತಿ ಕಾರ್ಯನಿರ್ವಹಿಸುತ್ತದೆ. ಈ ಆ್ಯಪ್ ಪೋರ್ನ್ ವೆಬ್‌ಸೈಟ್ ತೆರಳಿ ವಿಡಿಯೋ ಡೌನ್ಲೋಡ್ ಮಾಡಲು, ವೀಕ್ಷಣೆ ಮಾಡಲು ಕ್ಯೂಆರ್ ಕೋಡ್ ಸ್ಕ್ಯಾನರ್ ನೀಡಲಿದೆ. ಒಂದು ಬಾರಿ ಸ್ಕ್ಯಾನ್ ಮಾಡಿದರೆ ಒಂದು ತಿಂಗಳಿಗೆ 30 ವಿಡಿಯೋಗಳನ್ನು ಡೌನ್ಲೋಡ್, ವೀಕ್ಷಣೆ ಮಾಡಲು ಅವಕಾಶ ನೀಡುತ್ತದೆ. ಮುಂದಿನ ತಿಂಗಳು ಸ್ಕ್ಯಾನ್ ಮಾಡಲು ತಿಂಗಳ ಪಾಸ್ ನವೀಕರಣ ಮಾಡಬೇಕು. 

ಇದರಿಂದ ಅಪ್ರಾಪ್ತರು ಅಶ್ಲೀಲ ಚಿತ್ರಗಳನ್ನು ನೋಡಲು ನೇರವಾದ ಅವಕಾಶವಿರುವುದಿಲ್ಲ. ಹೀಗಾಗಿ ಈ ಕಠಿಣ ನಿಯಮ ಜಾರಿಗೆ ತರಲಾಗಿದೆ.
 

Latest Videos
Follow Us:
Download App:
  • android
  • ios