Asianet Suvarna News Asianet Suvarna News

ಜೊತೆಯಾಗಿ ಅಶ್ಲೀಲ ವಿಡಿಯೋ ನೋಡಿ ಸೆಕ್ಸ್; ಅಕ್ಕ ಗರ್ಭಿಣಿ, 13 ವರ್ಷದ ತಮ್ಮ ಪೊಲೀಸ್ ವಶಕ್ಕೆ!

ಇಬ್ಬರು ಜೊತೆಯಾಗಿ ಪೊರ್ನ್ ವಿಡಿಯೋ ನೋಡಿ ಸೆಕ್ಸ್ ಮಾಡಿದ್ದಾರೆ. ಪರಿಣಾಮ ಅಕ್ಕ ಗರ್ಭಿಣಿಯಾಗಿದ್ದರೆ, 13 ವರ್ಷದ ಅಪ್ರಾಪ್ತ ತಮ್ಮ ಇದೀಗ ಪೊಲೀಸರ ವಶದಲ್ಲಿದ್ದಾನೆ.  

Mumbai 13 year old boy impregnant elder sister after watching porn videos ckm
Author
First Published May 21, 2024, 1:07 PM IST

ಮುಂಬೈ(ಮೇ.21) ಅಶ್ಲೀಲ ವಿಡಿಯೋಗಳು ಮಕ್ಕಳ ಭವಿಷ್ಯ ಹಾಳುಮಾಡುತ್ತಿದೆ ಅನ್ನೋ ಮಾತು, ಚರ್ಚೆಗಳು ನಡೆಯುತ್ತಲೇ ಇದೆ. ಇದೀಗ 13 ವರ್ಷದ ಬಾಲಕ ಅಶ್ಲೀಲ ವಿಡಿಯೋಗಳ ಚಟಕ್ಕೆ ಬಿದ್ದು ತನ್ನ ಅಕ್ಕನ ಗರ್ಭಿಣಿ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ. ಪ್ರಕರಣ ದಾಖಲಾಗಿದ್ದು, ಅಪ್ರಾಪ್ತ ಬಾಲಕನ ಪೊಲೀಸರು ವಶಕ್ಕೆ ಪಡೆದು ಬಾಲಾಪರಾಧಿ ಕೇಂದ್ರಕ್ಕೆ ಒಪ್ಪಿಸಿದ್ದಾರೆ.

13 ವರ್ಷದ ಬಾಲಕ ಪೊರ್ನ್ ವಿಡಿಯೋ ನೋಡುವ ಚಟಕ್ಕೆ ಬಿದ್ದಿದ್ದ. ಬಳಿಕ ತನ್ನ 15 ವರ್ಷದ ಅಕ್ಕನಿಗೂ ಪೊರ್ನ್ ವಿಡಿಯೋ ತೋರಿಸಿದ್ದಾನೆ. ಇಬ್ಬರು ಜೊತೆಯಾಗಿ ಪೊರ್ನ್ ವಿಡಿಯೋ ನೋಡಿದ್ದಾರೆ. ಕೆಲವು ವಿಡಿಯೋಗಳನ್ನು ನೋಡಿದ್ದಾರೆ. ಬಳಿಕ ಕಳೆದ ಡಿಸೆಂಬರ್ ತಿಂಗಳಲ್ಲಿ ತಮ್ಮನ ಬಯಕೆಯಂತೆ ಇಬ್ಬರು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾರೆ.

ವಿಡಿಯೋ ಚಟ, ಲೈಂಗಿಕತೆಯಿಂದ ರೊಚ್ಚಿಗೆದ್ದಿದ್ದ 13 ವರ್ಷದ ತಮ್ಮ ಜನವರಿಯಲ್ಲಿ ಮತ್ತೆ ಅಕ್ಕನಲ್ಲಿ ಲೈಂಗಿಕತೆಗೆ ಒತ್ತಾಯಿಸಿದ್ದಾನೆ. ಇದಕ್ಕೆ ಒಪ್ಪದ ಅಕ್ಕ, ತಮ್ಮನಿಗೆ ಗದರಿಸಿದ್ದಾಳೆ. ಇದರಿಂದ ರೊಚ್ಚಿಗೆದ್ದ ಬಾಲಕ, ಪೋಷಕರು ಮನೆಯಲ್ಲಿ ಇಲ್ಲದ ವೇಳೆ ರೂಂನಲ್ಲಿ ಕೂಡಿ ಹಾಕಿ ಅತ್ಯಾಚಾರ ಎಸಗಿದ್ದಾನೆ. ಈ ರೀತಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ.

ಬಾಲಕಿಯ ಆರೋಗ್ಯದಲ್ಲಿ ಬದಲಾವಣೆಯಾಗುತ್ತಿದ್ದಂತೆ ತಾಯಿಗೆ ನಡೆದ ಘಟನೆ ವಿವರಿಸಿದ್ದಾರೆ. ಅಷ್ಟರಲ್ಲೇ ಅಪ್ರಾಪ್ತ ಬಾಲಕಿ 3 ತಿಂಗಳ ಗರ್ಭಿಣಿಯಾಗಿದ್ದಾಳೆ. ಪೋಷಕರು ಆತಂಕಗೊಂಡಿದ್ದಾರೆ. ಮುಂಬೈನ ವಾಶಿಯ ಜನರಲ್ ಆಸ್ತತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಬಾಲಕಿ 3 ತಿಂಗಳ ಗರ್ಭಿಣಿಯಾಗಿರುವುದು ದೃಡಪಟ್ಟಿದೆ.

ಆಸ್ಪತ್ರೆ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಗೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪ್ರಾಪ್ತ ಬಾಲಕನ ವಿರುದ್ದ ಸೆಕ್ಷನ್ 376(ರೇಪ್),  376(2) ಎನ್ ( ನಿರಂತರ ಅತ್ಯಾಚಾರ) ಜೊತೆಗೆ ಪೋಕ್ಸೋ ಕೇಸ್ ದಾಖಲಾಗಿದೆ.ಬಾಲಕನ ವಶಕ್ಕೆ ಪಡೆದ ಪೊಲೀಸರು ಬಾಲಾಪರಾಧಿ ಕೇಂದ್ರಕ್ಕೆ ಒಪ್ಪಿಸಿದ್ದಾರೆ. ಇತ್ತ ಪೋಷಕರು ಕಂಗಾಲಾಗಿದ್ದಾರೆ. ಇಬ್ಬರು ಮಕ್ಕಳ ಪೈಕಿ 15 ವರ್ಷದ ಮಗಳು ಗರ್ಭಿಣಿಯಾಗಿದ್ದರೆ, 13 ವರ್ಷ ಮಗ ಪೊಲೀಸರ  ವಶದಲ್ಲಿದ್ದಾನೆ.
 

Latest Videos
Follow Us:
Download App:
  • android
  • ios