16 ದಿನ ಕೋಮಾದ ಬಳಿಕ ಎಚ್ಚೆತ್ತ ಕಂದ: ಅಮ್ಮನ ಖುಷಿಗೆ ಹರಿಯಿತು ಕಣ್ಣೀರ ಹೊಳೆ: ವೈರಲ್ ವೀಡಿಯೋ

ಪುಟ್ಟ ಬಾಲಕನೋರ್ವ ಕೋಮಾಕ್ಕೆ ಜಾರಿ 16 ದಿನಗಳೇ ಕಳೆದಿವೆ.  ಕೋಮಾಕ್ಕೆ ಜಾರಿದ ಮಗ ಎದ್ದು ಕುಳಿತರೆ ತಾಯಿಗೆ ಅದೆಂಥಾ ಸಂತಸವಾಗಿರದು ಅಲ್ಲವೇ ಆ ಕ್ಷಣ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Son wakes up after 16 days in coma Mom sheds tears of joy like a river watch viral video

ತಾಯಿ ಮಗುವಿನ ಕರುಳ ಬಳ್ಳಿಯ ಸಂಬಂಧಕ್ಕೆ ಎಂದಿಗೂ ಬೆಲೆ ಕಟ್ಟಲಾಗದು. ತಾಯಿ ತನಗೇನಾದರು ಆದರೆ ಸಹಿಸಿಕೊಳ್ಳಬಲ್ಲಲು ಆದರೆ ತನ್ನ ಕಂದನಿಗೇನಾದರು ಆದರೆ ಆಕೆಯಿಂದ ಸಹಿಸಲಾಗದು. ಮಗುವಿನ ಖುಷಿಯೇ ತನ್ನ ಖುಷಿ ಮಗುವಿನ ಕಷ್ಟವೇ ತನ್ನ ಕಷ್ಟ ಎಂದು ಬಯಸುವವಳು ತಾಯಿ. ಮಗುವಿಗೆ/ಮಕ್ಕಳಿಗೆ ಸ್ವಲ್ಪ ಹುಷಾರು ತಪ್ಪಿದರು ತಾಯಿ ಇನ್ನಿಲ್ಲದಂತೆ ಚಡಪಡಿಸುತ್ತಾಳೆ.  ಹೀಗಿರುವಾಗ ಇಲ್ಲಿ ಪುಟ್ಟ ಬಾಲಕನೋರ್ವ ಕೋಮಾಕ್ಕೆ ಜಾರಿ 16 ದಿನಗಳೇ ಕಳೆದಿವೆ. ತಾಯಿಯ ಪಾಡಂತು ಯಾರಿಗೂ ಬೇಡ. ಕಣ್ಣಿಗೆ ಕಾಣದ ದೇವರನ್ನೆಲ್ಲಾ ಆಕೆ ಬೇಡಿದ್ದಾಳೆ. ಹೀಗಿರುವಾಗ ಬಾಲಕ ಎದ್ದು ಕುಳಿತಿದ್ದಾನೆ. 16 ದಿನಗಳ ಕಾಲ ಕೋಮಾಕ್ಕೆ ಜಾರಿದ ಮಗ ಎದ್ದು ಕುಳಿತರೆ ತಾಯಿಗೆ ಅದೆಂಥಾ ಸಂತಸವಾಗಿರದು ಅಲ್ಲವೇ ಆ ಕ್ಷಣ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

 ಗುಡ್‌ನ್ಯೂಸ್ ಮೂವೆಮೆಂಟ್ ಎಂಬ ಇನ್ಸ್ಟಾಗ್ರಾಮ್‌ ಪೇಜ್‌ನಿಂದ ಈ ವೀಡಿಯೋ ಅಪ್‌ಲೋಡ್ ಆಗಿದೆ.  ಈ  ಬಾಲಕ ಹುಟ್ಟಿನಿಂದಲೇ  ಡಿಸ್ಟ್ರೋಫಿಕ್ ಎಪಿಡರ್ಮಾಲಿಸಿಸ್ ಬುಲೋಸಾ ಎಂಬ ಅಪರೂಪದ ಚರ್ಮದ ಕಾಯಿಲೆಯಿಂದ ಬಳಲುತ್ತಿದ್ದಾನೆ.  ಇದು ಟೈಪ್ VII ಕಾಲಜನ್ ಕೊರತೆಯಿಂದ (lack of type VII collagen) ಬರುವ ಕಾಯಿಲೆ ಇದಾಗಿದೆ.  ಟೈಪ್ VII ಕಾಲಜನ್, ಒಳಚರ್ಮವನ್ನು ಎಪಿಡರ್ಮಿಸ್‌ಗೆ ಸೇರುವ ಪ್ರೋಟೀನ್ ಆಗಿದ್ದು ಇದನ್ನು 'ಬೈಂಡಿಂಗ್ ಪ್ರೋಟೀನ್' ಎಂದು ಕರೆಯಲಾಗುತ್ತದೆ. ಈ ಕಾಯಿಲೆ ಹೊಂದಿರುವವರು ಬಹಳ ಕಾಳಜಿ ವಹಿಸಬೇಕಾಗುತ್ತದೆ. ಪೋಷಕರು ಸೇರಿದಂತೆ ಸ್ವತಃ ರೋಗ ಹೊಂದಿರು ಮಗುವೂ ಕೂಡ ಈ ಕಾಯಿಲೆ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಚರ್ಮದ ಮೇಲೆ ಗಾಯಗಳು ಗುಳ್ಳೆಗಳನ್ನು ಉಂಟಾಗದಂತೆ ಸ್ವತಃ ಎಚ್ಚರಿಕೆ ವಹಿಸಬೇಕಾಗುತ್ತದೆ. ಈ ಕಾಯಿಲೆಯ ಕಾರಣದಿಂದ ಈ ಸಣ್ಣ ಹುಡುಗ 16 ದಿನಗಳ ಕಾಲ ಕೋಮಾಗೆ ಜಾರಿದ್ದ. ಅದರಲ್ಲಿ 14 ದಿನಗಳ ಕಾಲ ಆತನನ್ನು ಇಂಟ್ಯುಬೇಟೆಡ್‌ನಲ್ಲಿ (ಉಸಿರಾಟದ ಯಂತ್ರ ಅಳವಡಿಸಿ) ಇಡಲಾಗಿತ್ತು. ನಾವು ನಿನಗಾಗಿ ಪ್ರಾರ್ಥಿಸುತ್ತಿದ್ದೇವೆ ಗುಯ್ ಎಂದು  ಗುಡ್‌ನ್ಯೂಸ್ ಮೂವೆಮೆಂಟ್ ಈ ವೀಡಿಯೋ ಪೋಸ್ಟ್ ಮಾಡಿ ಬರೆದುಕೊಂಡಿದೆ. 

ಆ ದಿಟ್ಟ ತಾಯಿ ಹೋರಾಟಕ್ಕೆ ಸಿಗದ ಜಯ, ಕೈಗೆ ಬಂದ ಮಗನ ಕಿತ್ಕೊಂಡ ದೇವರು!

ಇತ್ತ ಕೋಮಾದಿಂದ ಹೊರಬಂದ ಕೂಡಲೇ ಮಗು ನೋಡಲು ಬಯಸಿದ್ದು, ಅಮ್ಮನನ್ನೇ ಆದರೆ ಅಷ್ಟು ದಿನವೂ ಜೊತೆಯಲ್ಲೇ ಇದ್ದ ಅಮ್ಮ ಆ ದಿನ ಮಾತ್ರ ಮನೆಗೆ ಹೋಗಿದ್ದಳು. ಹೀಗಾಗಿ ಮಗುವಿಗೆ ಪ್ರಜ್ಞೆ ಬಂದ ವಿಚಾರ ತಿಳಿದ ಕೂಡಲೇ ಓಡೋಡಿ ಬಂದ ಆಕೆ ಮಗು ಗುಯ್‌ನನ್ನು ತಬ್ಬಿಕೊಂಡು ಬಿಕ್ಕಳಿಸಲು ಶುರು ಮಾಡಿದ್ದಾಳೆ. ಇತ್ತ ಮಗನೂ ಅಳಲು ಶುರು ಮಾಡಿದ್ದಾನೆ. ಈ ದೃಶ್ಯವನ್ನು ಆಸ್ಪತ್ರೆ ಸಿಬ್ಬಂದಿ ಸೆರೆ ಹಿಡಿದಿದ್ದು, ಈಗ ವೈರಲ್ ಆಗಿದೆ. ವೀಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದು, ಅನೇಕರು ಕಾಮೆಂಟ್ ಮಾಡಿದ್ದಾರೆ.

ಎಲ್ಲರಿಗೂ ಇಂಥಾ ಮಗನೇ ಸಿಗ್ಲಿ..ತಾಯಿಗಾಗಿ ಮಗ ಮಾಡಿದ ಮಹತ್ಕಾರ್ಯಕ್ಕೆ ನೆಟ್ಟಿಗರ ಶಹಬ್ಬಾಸ್‌

ಗುಯ್ ತುಂಬಾ ತೀವ್ರವಾದ ನ್ಯುಮೋನಿಯಾವನ್ನು ಹೊಂದಿದ್ದ, ಇಷ್ಟು ದಿನ ಆತನೊಂದಿಗೆ ಇದ್ದ ಅಮ್ಮ ಇಂದು ಮನೆಗೆ ಹೋದ ಕೂಡಲೇ ಆತನಿಗೆ ಪ್ರಜ್ಞೆ ಬಂದಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅಮ್ಮನನ್ನು ನೋಡಿ ಆತ ಕಣ್ಣೀರಿಟ್ಟಿದ್ದು ನೋಡಿ ನಾನು ಭಾವುಕನಾದೆ ಇಡೀ ಕುಟುಂಬದ ಪರವಾಗಿ ನನ್ನ ಪ್ರಾರ್ಥನೆಗಳು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮಗುವಿನ ಅಳು ನೋಡಲಾಗುತ್ತಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ನೋಡಿದ ಅನೇಕರು ಭಾವುಕರಾಗಿದ್ದಾರೆ. 

https://www.instagram.com/p/Ct4MgCOM6JI/

Latest Videos
Follow Us:
Download App:
  • android
  • ios