ಎಲ್ಲರಿಗೂ ಇಂಥಾ ಮಗನೇ ಸಿಗ್ಲಿ..ತಾಯಿಗಾಗಿ ಮಗ ಮಾಡಿದ ಮಹತ್ಕಾರ್ಯಕ್ಕೆ ನೆಟ್ಟಿಗರ ಶಹಬ್ಬಾಸ್
ಅಮ್ಮ, ಮಾತೆ, ಜನನಿ, ಅವ್ವ, ಮಾ ಹೀಗೆ ಹಲವು ಹೆಸರುಗಳಿಂದ ಕರೆಯಲ್ಪಡುವ ತಾಯಿ ಎಲ್ಲರ ಪಾಲಿಗೂ ಸರ್ವಸ್ವ. ಆಕೆ ತನ್ನ ಮಕ್ಕಳಿಗಾಗಿಯೇ ತನ್ನ ಸಂಪೂರ್ಣ ಜೀವನವನ್ನು ಮುಡಿಪಾಗಿಡುತ್ತಾಳೆ. ಹೀಗೆ ಕಷ್ಟಪಟ್ಟು ಸಾಕಿದ ತಾಯಿಗಾಗಿ, ಇಲ್ಲೊಬ್ಬ ಮಗ ಮಾಡಿದ ಮಹತ್ಕಾರ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಪ್ರತಿ ತಾಯಿಯೂ ತನ್ನ ಮಗುವನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡಲು ಒಂದಲ್ಲಾ ಒಂದು ರೀತಿಯಲ್ಲಿ ಕಷ್ಟಪಟ್ಟಿರುತ್ತಾಳೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಲವು ಸಮಸ್ಯೆಗಳನ್ನು ಎದುರಿಸಿ ಇರುತ್ತಾಳೆ. ಹೀಗಿದ್ದರೂ ಪ್ರತಿ ತಾಯಿಯೂ ತನ್ನ ಮಗುವಿನ ಏಳಿಗೆಗಾಗಿ ತನ್ನಿಂದಾಗುವ ಎಲ್ಲಾ ಕಾರ್ಯವನ್ನು ಮಾಡುತ್ತಾಳೆ. ಕೂಲಿ ಮಾಡ್ಕೊಂಡು, ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ಕೊಂಡು, ಬೀದಿ ವ್ಯಾಪಾರ ಮಾಡಿಕೊಂಡು ಮಗುವಿಗೆ ವಿದ್ಯಾಭ್ಯಾಸ ನೀಡುತ್ತಾಳೆ. ಉದ್ಯೋಗಕ್ಕೆಂದು ಹಣ ನೀಡಿ ಪಟ್ಟಣಕ್ಕೆ ಕಳುಹಿಸುತ್ತಾಳೆ. ಹೀಗೆ ತಮಗಾಗಿ ಎಲ್ಲಾ ಮಾಡುವ ತಾಯಿಯ ತ್ಯಾಗವನ್ನು ನೆನಪಿಟ್ಟು, ಕೆಲವು ಮಕ್ಕಳು ಉದ್ಯೋಗ ಸಿಕ್ಕ ಮೇಲೆ ತಾಯಿಗೆ ಆಸರೆಯಾಗುತ್ತಾರೆ. ಇನ್ನು ಕೆಲವರು ಆಕೆಯ ಪರಿಶ್ರಮವನ್ನು ಮರೆತುಬಿಡುತ್ತಾರೆ.
ಉದ್ಯೋಗ (Job) ಸಿಕ್ಕ ಮೇಲೆ ಕೆಲವರು ತಾಯಿಗೆ ಚಿನ್ನದ ಬಳೆ, ಸರ, ಸೀರೆ ಮೊದಲಾದವುಗಳನ್ನು ಮಾಡಿಸಿಕೊಡುತ್ತಾರೆ.ಕೆಲವರು ತಾಯಿಗೆ ಇಷ್ಟವಾದ ಸ್ಥಳಗಳಲ್ಲಿ ಕರೆದುಕೊಂಡು ಹೋಗುತ್ತಾರೆ. ಹಾಗೆಯೇ ಇಲ್ಲೊಬ್ಬ ವ್ಯಕ್ತಿ ಮಾಡಿರೋ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ವ್ಯಕ್ತಿಯೊಬ್ಬರು ಆನ್‌ಲೈನ್ ಕೆಲಸ ಮಾಡುತ್ತಾ ತಾಯಿಯ (Mother) ಕಡಿಮೆ ಸಂಬಳದ ಕೆಲಸದಿಂದ ಬಿಡಿಸಿ ಆಕೆಗೆ ಆರಾಮವಾಗಿ ಜೀವನ ನಡೆಸಲು ಸಹಾಯ ಮಾಡಿದ್ದಾರೆ.
ಒಟ್ಟಿಗೆ ವಿಮಾನ ಹಾರಿಸಿದ ಅಮ್ಮ ಮಗ ಪೈಲಟ್ ಜೋಡಿ : ವಿಡಿಯೋ ವೈರಲ್
ಕಾಲೇಜಿಗೆ ಹೋಗಲು ಹಣವಿಲ್ಲದೆ ಬಾತ್‌ರೂಮ್‌ನಲ್ಲಿ ಅತ್ತಿದ್ದ ತಾಯಿ-ಮಗ
ಟ್ವಿಟರ್, ಬಳಕೆದಾರ ಆಯುಷ್ ಗೋಯಲ್ ಎಂಬವರು ತನ್ನ ಮತ್ತು ತಾಯಿಯ ಬಾಂಧವ್ಯದ ಕುರಿತಾದ ಮಾಹಿತಿಯನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ತನ್ನ ಜೀವನದ ಹೆಮ್ಮೆಯ ಕ್ಷಣವನ್ನು ಹಂಚಿಕೊಂಡಿದ್ದಾರೆ. ಕಾಲೇಜಿಗೆ ಹೋಗಲು ಹಣವಿಲ್ಲದ (Money) ಕಾರಣ ನಾನು ಮತ್ತು ತಾಯಿ ಬಾತ್‌ರೂಮ್‌ನಲ್ಲಿ ಹೇಗೆ ಅಳುತ್ತಿದ್ದೆವು ಎಂಬುದನ್ನು ಅವರು ವಿವರಿಸಿದ್ದಾರೆ. 'ನಾನು ಪ್ರತಿದಿನ ಕಾಲೇಜಿಗೆ ಹೋಗಬೇಕಾದರೆ ನನ್ನ ತಾಯಿ ಹಗಲು ರಾತ್ರಿ ಕೆಲಸ (Work) ಮಾಡಲೇಬೇಕಾಗಿತ್ತು. ಕಡಿಮೆ ಹಣಕ್ಕಾಗಿ ಆಕೆ ಹಗಲು ರಾತ್ರಿ ದುಡಿಯುತ್ತಿದ್ದಳು' ಎಂದು ಆಯುಷ್ ಹೇಳಿದ್ದಾರೆ.
ತನ್ನ ತಾಯಿಯ ಕನಸುಗಳನ್ನು ನನಸಾಗಿಸಲು, ಆಯುಷ್ ಕೂಡಾ ಕಷ್ಟಪಟ್ಟು ದುಡಿದು ಈಗ ತಾಯಿಯ ಕಡಿಮೆ ಸಂಬಳದ ಕೆಲಸವನ್ನು ಬಿಟ್ಟು ಆರಾಮವಾಗಿ ಜೀವನ ನಡೆಸಲು ಸಹಾಯ ಮಾಡಿದ್ದಾನೆ. ತಾಯಿ ಮತ್ತು ಮಗನ ಈ ಸ್ಪೂರ್ತಿದಾಯಕ ಪ್ರಯಾಣ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ತನ್ನ ಕಥೆಯನ್ನು ಹಂಚಿಕೊಳ್ಳುತ್ತಾ, ಆಯುಷ್ 'ನನ್ನ ತಾಯಿ ವರ್ಷ ಪೂರ್ತಿ 9-5 ದುಡಿಯುತ್ತಿದ್ದರು. ನನ್ನ ಕಾಲೇಜಿಗೆ ಹಣವಿಲ್ಲ ಎಂದು ನಾವಿಬ್ಬರೂ ಬಾತ್ ರೂಮಿನಲ್ಲಿ ಅತ್ತಿದ್ದು ನನಗೆ ಇನ್ನೂ ನೆನಪಿದೆ. ಟ್ವಿಟರ್ ನನ್ನ ಜೀವನವನ್ನು ಮಾತ್ರವಲ್ಲದೆ ನನ್ನ ತಾಯಿಯ ಜೀವನವನ್ನು ಕೂಡ ಬದಲಾಯಿಸಿತು. ನನ್ನ 764 ಸ್ನೇಹಿತರಿಗೆ ಕೃತಜ್ಞತೆಗಳು' ಎಂದು ಪೋಸ್ಟ್ ಮಾಡಿದ್ದಾರೆ. ಆಯುಷ್ ಅಕೌಂಟೆಂಟ್ ಕೆಲಸವನ್ನು ತೊರೆದು ಆನ್‌ಲೈನ್ ಬರೆಯುವ ಕೆಲಸವನ್ನು ಹೇಗೆ ಶುರು ಮಾಡಿದರು ಎಂಬುದನ್ನು ಬಹಿರಂಗಪಡಿಸಿದರು. ತಿಂಗಳೊಳಗೆ, ಅವರ ಶ್ರಮವು ಫಲ ನೀಡಿತು ಮತ್ತು ಅವರು ತಮ್ಮ ಒಂದು ಕೋಣೆಯ ಮನೆಯಿಂದ ಎರಡು ಕೋಣೆಗಳ ಅಪಾರ್ಟ್ಮೆಂಟ್‌ಗೆ ಶಿಫ್ಟ್ ಆಗಲು ಸಾಧ್ಯವಾಯಿತು ಎಂದು ತಿಳಿಸಿದರು.ಪೋಸ್ಟ್‌ನೊಂದಿಗೆ ಆಯುಷ್ ತನ್ನ ತಾಯಿಯ ಎರಡು ಪೋಟೋವನ್ನು ಸಹ ಶೇರ್ ಮಾಡಿದ್ದಾರೆ.
ಒಂದು ರೂಪಾಯಿಗೆ ಇಡ್ಲಿ ವಿತರಿಸುತ್ತಿದ್ದ ಇಡ್ಲಿ ಅಮ್ಮನಿಗೆ ಹೊಸ ಮನೆ ಹಸ್ತಾಂತರಿಸಿದ ಆನಂದ್ ಮಹೀಂದ್ರಾ
ಯುವಕನ ಮಹತ್ಕಾರ್ಯಕ್ಕೆ ನೆಟ್ಟಿಗರ ಶಹಬ್ಬಾಸ್
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು 'ಇದು ತುಂಬಾ ಸ್ಪೂರ್ತಿದಾಯಕವಾಗಿದೆ. ಇದು ನಿಮಗೆ ಆರಂಭ ಮಾತ್ರ, ನೀವು ಭವಿಷ್ಯದಲ್ಲಿ ಇನ್ನಷ್ಟು ಯಶಸ್ಸು ಕಾಣುತ್ತೀರಿ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು 'ನಿಮ್ಮ ಕಥೆಯನ್ನು ಕೇಳಿ ನನಗೆ ಕಣ್ಣೀರು ಬಂತು; ಎಂದಿದ್ದಾರೆ. ಮತ್ತೊಬ್ಬರು 'ಇನ್ನು ಕಷ್ಟಪಟ್ಟು ಕೆಲಸ ಮಾಡಬೇಕಾಗಿಲ್ಲ ಎನ್ನುವ ತಾಯಿಯ ಮುಖದ ಭಾವನೆ ನಿಜಕ್ಕೂ ಅದ್ಭುತವಾಗಿದೆ' ಎಂದು ತಿಳಿಸಿದ್ದಾರೆ.