ಟೀಮ್ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧನಾ ಹಾಗೂ ಪಲಾಶ್ ಮುಚ್ಚಾಲ್ ಮದುವೆ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಸ್ಮೃತಿ ತಂದೆಯ ಅನಾರೋಗ್ಯದ ಕಾರಣ ಎನ್ನಲಾಗಿತ್ತಾದರೂ, ಮದುವೆಯ ಹಿಂದಿನ ದಿನ ಪಲಾಶ್ ತನ್ನ ಮಾಜಿ ಗೆಳತಿಯೊಂದಿಗೆ ಸಿಕ್ಕಿಬಿದ್ದಿದ್ದೇ ಕಾರಣ ಎಂಬ ಹೊಸ ವದಂತಿಗಳು ಹರಿದಾಡುತ್ತಿವೆ.

ಟೀಮ್‌ ಇಂಡಿಯಾ ಬ್ಯಾಟರ್‌ ಸ್ಮೃತಿ ಮಂಧನಾ ಹಾಗೂ ಸಂಗೀತ ನಿರ್ದೇಶಕ, ಗಾಯಕ ಪಲಾಶ್‌ ಮುಚ್ಚಾಲ್‌ ಅವರ ವಿವಾಹ ಅನಿರ್ದಿಷ್ಟಾವಧಿಗೆ ಮುಂದೆ ಹೋಗಿದೆ. ಆದರೆ, ಮದುವೆ ಮುಂದಕ್ಕೆ ಹೋಗಿದೆಯೋ ಅಥವಾ ಶಾಶ್ವತವಾಗಿ ನಿಂತೆ ಹೋಗಿದೆಯೋ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಮದುವೆಯ ದಿನ ಸ್ಮೃತಿ ಮಂಧನಾ ಅವರ ತಂದೆಗೆ ಹೃದಯಾಘಾತವಾಗಿದ್ದರಿಂದಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅದಕ್ಕಾಗಿ ಮದುವೆಯನ್ನು ಮುಂದೂಡಲಾಗಿದೆ ಎನ್ನಲಾಗಿತ್ತು. ಅದಾದ ಕೆಲವೇ ಹೊತ್ತಲ್ಲಿ ಸ್ಮೃತಿ ಮಂಧನಾ ಪತಿ ಆಗಬೇಕಿದ್ದ ಪಲಾಶ್‌ ಮುಚ್ಚಾಲ್‌ ಕೂಡ ಆಸ್ಪತ್ರೆಗೆ ದಾಖಲಾಗಿದ್ದು ಅನುಮಾನಕ್ಕೆ ಕಾರಣವಾಗಿತ್ತು.

ಇದರ ನಡುವೆ ಪಲಾಶ್‌ ಮುಚ್ಚಾಲ್‌ ಬಗ್ಗೆ ದಿನಕ್ಕೊಂದು ಕಥೆಗಳು ಹುಟ್ಟಿಕೊಳ್ಳಲು ಆರಂಭಿಸಿದೆ. ಪಲಾಶ್‌ ಮುಚ್ಚಾಲ್‌, ಸ್ಮೃತಿಗೆ ಮೋಸ ಮಾಡಿದ್ದು ರೆಡ್‌ಹ್ಯಾಂಡ್‌ ಆಗಿ ಗೊತ್ತಾಗಿದ್ದರಿಂದ ಮದುವೆಯ ದಿನವೇ ಈ ನಿರ್ಧಾರಕ್ಕೆ ಬರಲು ಕಾರಣವಾಗಿದೆ. ಇನ್ನು ಹೊಸ ರೂಮರ್‌ಗಳ ಪ್ರಕಾರ, ಮದುವೆಯ ಹಿಂದಿನ ದಿನ ಪಲಾಶ್‌ ಮುಚ್ಚಾಲ್‌ ತನ್ನ ಮಾಜಿ ಗೆಳತಿಯ ಜೊತೆಗಿನ ಚಕ್ಕಂದವನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದು, ಸ್ಮೃತಿ ಮಂಧನಾ ಅವರ ಗೆಳತಿ ಹಾಗೂ ಕರ್ನಾಟಕದ ಆಟಗಾರ್ತಿ ಶ್ರೇಯಾಂಕಾ ಪಾಟೀಲ್‌.

ರೆಡ್ಡಿಟ್‌ನಲ್ಲಿ ಅದರ ವಿವರಗಳನ್ನು ಕೂಡ ಒಬ್ಬರು ಹಂಚಿಕೊಂಡಿದ್ದಾರೆ ಅದರ ವಿವರ ಇಲ್ಲಿದೆ

ನನ್ನ ಮಾಜಿ ಸಿಚುಯೇಶನ್‌ಶಿಪ್‌ (ರಿಲೇಷನ್‌ಷಿಪ್‌ನ ಇನ್ನೊಂದು ವಿಧ) ಜನಪ್ರಿಯ ಪಿಆರ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಸ್ಮೃತಿ ಮಂಧನಾ ಕುರಿತಾಗಿ ಇದ್ದ ರೂಮರ್‌ಗಳ ವಿಚಾರವಾಗಿ ನಾನು ಏನಾದರೂ ವಿಚಾರ ಸಿಗಬಹುದು ಎಂದು ಆತನನ್ನು ಸಂಪರ್ಕ ಮಾಡಿದ್ದೆ.ಹಾಗಂತ ನಾನು ಇಲ್ಲಿ ಹೇಳುತ್ತಿರುವುದು ಕಟ್ಟು ಕಥೆಯಲ್ಲ. ಆ ಪಿಆರ್‌ಗಳು ತಮ್ಮ ವರ್ಕ್‌ ವಾಟ್ಸಾಪ್‌ ಗ್ರೂಪ್‌ನಲ್ಲಿ ಇದರ ಬಗ್ಗೆ ಚರ್ಚೆ ಮಾಡುತ್ತಿದ್ದರು. ನ್ನ ಮಾಜಿ ಪ್ರಿಯಕರ ಇದೇ ಚಾಟ್‌ಗಳನ್ನು ನನಗೆ ಕಳಿಸಿ, ಸ್ಮೃತಿ ಮಂದನಾ ಮದುವೆಯಲ್ಲಿ ಆದ ವಿವರಗಳನ್ನು ತಿಳಿಸಿದ್ದಾರೆ.

ವಿಚಾರ ಏನೆಂದರೆ, ಸ್ಮೃತಿಗೆ ಪಲಾಶ್‌ ನಿಜವಾಗಿಯೂ ಮೋಸ ಮಾಡಿದ್ದಾನೆ. ಆದರೆ, ಈಗ ತಾನು ಆಸ್ಪತ್ರೆಗೆ ಅಡ್ಮಿಟ್‌ ಆಗಿರುವ ಸುದ್ದಿಯನ್ನೇ ಹೆಚ್ಚಾಗಿ ವೈರಲ್‌ ಮಾಡಲು ಪಿಆರ್‌ ಸಂಸ್ಥೆಗಳಿಗೆ ಹಣ ನೀಡುತ್ತಿದ್ದಾರೆ. ಆಸ್ಪತ್ರೆಯ ಭೇಟಿಯ ಸುದ್ದಿಗಳ ಉಸ್ತುವಾರಿ ಕೂಡ ಆತನೇ ನೋಡಿಕೊಳ್ಳುತ್ತಿದ್ದಾನೆ. ತಾನು ಮಾಡಿದ ಅನಾಚಾರಗಳನ್ನು ವೈಟ್‌ವಾಶ್‌ ಮಾಡಲು ಕೂಡ ಮೀಮ್‌ ಪೇಜ್‌ಗಳಿಗೆ ಹಣ ನೀಡುತ್ತಿದ್ದಾನೆ. ಆದರೆ, ಇದು ಯಾವುದು ಈಗ ಕೆಲಸ ಮಾಡುತ್ತಿಲ್ಲ ಎಂದು ಯುವತಿಯೊಬ್ಬರು ರೆಡಿಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇದೆಲ್ಲದಕ್ಕೂ ಮೂಲ ಕಾರಣ ನಂದಿಕಾ ದ್ವಿವೇದಿ ಅನ್ನೋ ಹುಡುಗಿ. ಮದುವೆ ಕಾರ್ಯಕ್ರಮದ ಎಲ್ಲಾ ಹೊತ್ತಲ್ಲೂ ಪಲಾಶ್‌ ಪಕ್ಕದಲ್ಲಿಯೇ ಈಕೆ ನಿಂತಿದ್ದಳು. ಮೆಹಂದಿ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಿಗೆ ಡಾನ್ಸ್‌ ಟ್ರೇನಿಂಗ್‌ ನೀಡಲು ಬಾಸ್ಕೋ ತಂಡವು ಈಕೆಯನ್ನು ಪಲಾಶ್‌ಗೆ ನಿಯೋಜನೆ ಮಾಡಿದ್ದರೆ, ಗುಲ್ನಾಜ್‌ ಅನ್ನೋ ಹುಡುಗಿ ಸ್ಮೃತಿ ಮಂಧನಾಗೆ ಡಾನ್ಸ್‌ ಟ್ರೇನಿಂಗ್‌ ನೀಡುತ್ತಿದ್ದರು. ಆದರೆ, ಸ್ಮೃತಿಯ ಆಪ್ತ ಸ್ನೇಹಿತೆ ಮತ್ತು ಅಟಗಾರ್ತಿ ಶ್ರೇಯಂಕಾ ಪಾಟೀಲ್‌, ಮದುವೆಯ ಹಿಂದಿನ ದಿನ ಪಲಾಶ್ ಮತ್ತು ಹುಡುಗಿಯನ್ನು ಫುಲ್ ಬ್ಯಾಂಗ್ ಬ್ಯಾಂಗ್ ಇರುವ ಮೋಡ್‌ನಲ್ಲಿ ಪತ್ತೆ ಮಾಡಿದ್ದಾರೆ. ಬಳಿಕ ಸ್ಮೃತಿ ಎದರಲ್ಲೂ ಇಬ್ಬರೂ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ.

ಇದರ ಬೆನ್ನಲ್ಲಿಯೇ ಕುಟುಂಬಗಳ ನಡುವೆ ದೊಡ್ಡ ಮಟ್ಟದ ಗಲಾಟೆ ನಡೆದಿದೆ. ಸ್ಮೃತಿಯ ಸಹೋದರ ಪಲಾಶ್ ಮೇಲೆ ಹಲ್ಲೆ ನಡೆಸಿದ್ದರಿಂದ ಆತನಿಗೂ ಕೂಡ ಸಣ್ಣಪುಟ್ಟ ಗಾಯವಾಗಿತ್ತು. ಇದರ ಬೆನ್ನಲ್ಲಿಯೇ ಅವರ ತಂದೆಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಇದೆಲ್ಲಾ ನಡೆಯುವ ವೇಳೆಗೆ ಹೆಚ್ಚಿನ ಗೆಸ್ಟ್‌ಗಳು ನಿದ್ರೆಗೆ ಜಾರಿದ್ದರು. ಬೆಳಗಿನ ಸಮಯದಲ್ಲಿ ಅತಿಥಿಗಳಿಗೆ ಸ್ಮೃತಿಯ ತಂದೆಯ ಅನಾರೋಗ್ಯದ ಕಾರಣಕ್ಕೆ ಮದುವೆ ರದ್ದಾಗಿದೆ ಎಂದು ತಿಳಿಸಲಾಗಿತ್ತು. ಅದರೆ, ಸ್ಮೃತಿ ಮಾತ್ರ ಈ ಹಂತದಲ್ಲಿ ಹುಚ್ಚಿಯಂತೆ ಗೋಳಾಡುತ್ತಾ ಅಳುತ್ತಿದ್ದರು.

ಎಲ್ಲದಕ್ಕೂ ಕಾರಣರಾದ ಆ ನೃತ್ಯ ನಿರ್ದೇಶಕಿ ಸ್ಥಳದಿಂದ ಪರಾರಿಯಾಗಿದ್ದರೆ, ಪ್ರಸಿದ್ಧ ಗಾಯಕಿ ಪಾಲಕ್‌ ಮುಚ್ಚಾಲ್‌ ತನ್ನ ಸಹೋದರ ಪಲಾಶ್‌ನನ್ನು ರಾತ್ರೋರಾತ್ರಿ ಮುಂಬೈಗೆ ಕರೆದುಕೊಂಡು ಹೋಗಿದ್ದರು. ಪಾಪರಾಜಿಗಳಿಂದ ತಪ್ಪಿಸಿಕೊಳ್ಳಲು ಆಸಿಡಿಟಿಯಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಅನ್ನೋ ಡ್ರಾಮಾ ಸೃಷ್ಟಿಸಲಾಯಿತು. ನಾನು ಈ ಹಂತದಲ್ಲಿ ಸ್ಮೃತಿ ಜೀವನ ತುಂಬಾ ಸಂತೋಷದಿಂದ ಇರಬೇಕು ಎಂದು ಬಯಸುತ್ತೇನೆ. ಆ ಹುಡುಗಿಯ ನರಕಯಾತನೆ ಯಾರಿಗೂ ಬೇಡ. ಆದರೆ, ದೇವರಿಗೆ ಧನ್ಯವಾದ ಹೇಳಬೇಕು. ಆಕೆಯ ತಂದೆ ಈಗ ಆರೋಗ್ಯವಾಗಿದ್ದಾರೆ. ಇನ್ನು ಆಕೆಯ ಕ್ರಿಕೆಟ್‌ ಸ್ನೇಹಿತೆಯರು ಆಕೆಯೊಂದಿಗೆ ಇದ್ದಾರೆ. ಯಾವ ಹಂತದಲ್ಲೂ ಆಕೆಯನ್ನು ಬಿಟ್ಟುಹೋಗಿಲ್ಲ. ಬಂಡೆಯಂತೆ ನಿಂತಿದ್ದಾರೆ.

ಈಗ ನಾನು ಎಷ್ಟು ಹತಾಶನಾಗಿದ್ದೇನೆ ಎನ್ನುವುದನ್ನೂ ಕೂಡ ತಿಳಿಸುತ್ತೇನೆ. ನನ್ನ ಮಾಜಿ ಲವರ್‌ ಪರಿಸ್ಥಿತಿಯೂ ಇದೇ ಕೂಡ. ಅತ ನನಗೆ ಮೋಸ ಮಾಡಿದ. ಅವನು ಇನ್ನೊಬ್ಬ ಹುಡುಗಿಯನ್ನು ಚುಂಬಿಸುತ್ತಿರುವುದನ್ನು ನಾನು ನೇರವಾಗಿಯೇ ನೋಡಿದ್ದೆ. ಅಲ್ಲದೆ, ಈ ಪೋಸ್ಟ್ ಹಾಕಿದ್ದಕ್ಕಾಗಿ ಆತ ನನಗೆ ಕಾನೂನು ನೋಟಿಸ್ ಕಳುಹಿಸಬಹುದೇ ಎನ್ನುವ ಬಗ್ಗೆ ಸ್ವಲ್ಪ ಭಯವಾಗಿದೆ. ನಾನು ಇದನ್ನು ಅಳಿಸಬೇಕೇ? ದಯವಿಟ್ಟು ನನಗೆ ತಿಳಿಸಿ.