- Home
- Life
- Relationship
- ಸ್ನೇಹಿತನ ಜೊತೆ ಹನಿಮೂನ್, ಸ್ನಾನದ ವಿಡಿಯೋ ಹಂಚಿಕೊಂಡ Bigg Boss ತೇಜಸ್ವಿ; ಕಣ್ಣು ಕಿತ್ಕೊಳಪ್ಪಾ ಎಂದ ಫ್ಯಾನ್ಸ್
ಸ್ನೇಹಿತನ ಜೊತೆ ಹನಿಮೂನ್, ಸ್ನಾನದ ವಿಡಿಯೋ ಹಂಚಿಕೊಂಡ Bigg Boss ತೇಜಸ್ವಿ; ಕಣ್ಣು ಕಿತ್ಕೊಳಪ್ಪಾ ಎಂದ ಫ್ಯಾನ್ಸ್
ಬಿಗ್ಬಾಸ್ ಮೂಲಕ ಒಂದಾದ ಹಿಂದಿ ಕಿರುತೆರೆ ಜೋಡಿ ಕರಣ್ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್ ಸದ್ಯ ಮದುವೆಯಾಗಲು ನಿರ್ಧರಿಸಿದ್ದಾರೆ. ಆದರೆ, ಮದುವೆಗೂ ಮುನ್ನವೇ ಈ ಜೋಡಿ ಮಾರಿಷಸ್ ಪ್ರವಾಸದ ವ್ಲಾಗ್ ಹಂಚಿಕೊಂಡಿದ್ದು, ಇದರಲ್ಲಿ ಇಬ್ಬರೂ ಒಟ್ಟಿಗೆ ಸ್ನಾನ ಮಾಡುವ ದೃಶ್ಯವಿದೆ.

ಫೇಮಸ್ ಜೋಡಿ
ಹಿಂದಿ ಕಿರುತೆರೆಯ ಖ್ಯಾತ ಜೋಡಿಗಳಲ್ಲಿ ಒಂದು ಕರಣ್ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್ (Karan Kundra and Tejaswi Prakash). ಇವರಿಬ್ಬರ ನಡುವೆ ಲವ್ ಶುರುವಾಗಿದ್ದು ಹಿಂದಿಯ ಬಿಗ್ಬಾಸ್ ಮೂಲಕ. 2021ರಲ್ಲಿ ನಡೆದಿದ್ದ ಬಿಗ್ ಬಾಸ್ನಲ್ಲಿ ಲವ್ ಶುರುವಾಗಿತ್ತು. ಇದು ಹಿಂದಿಯ 15ನೇ ಸೀಸನ್. ಇದರಲ್ಲಿ ತೇಜಸ್ವಿ ಪ್ರಕಾಶ್ ವಿನ್ ಆಗಿದ್ದರು. ಕರಣ್ ಕುಂದ್ರಾ ರನ್ನರ್ ಅಪ್ ಆಗಿದ್ದರು.

ಸದ್ಯ ಮದುವೆ
ಅಲ್ಲಿಂದ ಇಲ್ಲಿಯವರೆಗೆ ಸಂಬಂಧದಲ್ಲಿದ್ದ ಜೋಡಿ, ಸದ್ಯ ಮದುವೆಯಾಗುವುದಾಗಿ ಹೇಳಿದ್ದಾರೆ. ಪರಸ್ಪರ ಅರ್ಥ ಮಾಡಿಕೊಳ್ಳಲು ಒಂದಷ್ಟು ವರ್ಷ ಬೇಕು, ಆಮೇಲೆ ಮದುವೆಯ ಬಗ್ಗೆ ಯೋಚನೆ ಮಾಡೋಣ ಎಂದಿದ್ದರಂತೆ ತೇಜಸ್ವಿ. ಅದರಂತೆ ನಾಲ್ಕು ವರ್ಷ ಸಂಬಂಧದಲ್ಲಿದ್ದು ಅರ್ಥ ಮಾಡಿಕೊಂಡ ಬಳಿಕ ಈಗ ಜೋಡಿ ಮದುವೆಯಾಗುವ ನಿರ್ಧಾರಕ್ಕೆ ಬಂದಿದೆ.
ಸ್ನಾನದ ವಿಡಿಯೋ ಶೇರ್
ಆದರೆ, ಮದುವೆಯಾಗುವ ಮೊದಲೇ ಈ ಜೋಡಿ ಸ್ನಾನದ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಅದಕ್ಕೂ ಮುನ್ನ ಇಬ್ಬರೂ ಹನಿಮೂನ್ ಮೂಡ್ನಲ್ಲಿ ಇದ್ದದ್ದನ್ನು ನೋಡಬಹುದು. ಈ ಬಗ್ಗೆ ಖುದ್ದು ತೇಜಸ್ವಿ ಹೇಳಿಕೊಂಡಿದ್ದಾರೆ. ತೇಜಸ್ವಿ ಪ್ರಕಾಶ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಕರಣ್ ಕುಂದ್ರಾ ಅವರೊಂದಿಗಿನ ಡೇಟ್ ನೈಟ್ ಅನ್ನು ತೋರಿಸುವ ಹೊಸ ವ್ಲಾಗ್ ಅನ್ನು ಹಂಚಿಕೊಂಡಿದ್ದಾರೆ.
ವಿಮಾನ ನಿಲ್ದಾಣದಿಂದ ಪ್ರಾರಂಭ
ಈ ವಿಡಿಯೋ ವಿಮಾನ ನಿಲ್ದಾಣದಲ್ಲಿ ಪ್ರಾರಂಭವಾಗುತ್ತದೆ, ಅವರು ಮಾರಿಷಸ್‌ಗೆ ಆಗಮಿಸುವುದರಿಂದ ಹಿಡಿದು ಹೋಟೆಲ್‌ಗೆ ಆಗಮಿಸುವವರೆಗೆ ಎಲ್ಲವನ್ನೂ ತೋರಿಸುತ್ತದೆ. ನಂತರ ನಟಿ ತನ್ನ ಮತ್ತು ಕರಣ್ ಅವರ ಕೋಣೆಯನ್ನು ತೋರಿಸುತ್ತಾರೆ, ಅದು ತುಂಬಾ ಐಷಾರಾಮಿಯಾಗಿತ್ತು ಎಂದಿದ್ದಾರೆ. ಬಳಿಕ ಇಬ್ಬರೂ ಪ್ಲಂಜ್ ಪೂಲ್‌ನಲ್ಲಿ ಒಟ್ಟಾಗಿ ಸ್ನಾನ ಮಾಡುವುದನ್ನು ನೋಡಬಹುದಾಗಿದೆ.
ಲಕ್ಷ ಲಕ್ಷ ವ್ಯೂವ್ಸ್
ತೇಜಸ್ವಿ ಪ್ರಕಾಶ್ ಮತ್ತು ಕರಣ್ ಕುಂದ್ರಾ ಅವರ ಈ ಫೋಟೋಗಳು ವೈರಲ್ ಆಗುತ್ತಲೇ ಟ್ರೋಲ್ಗಳ ಸುರಿಮಳೆಯಾಗುತ್ತಿದೆ. ಅಷ್ಟಕ್ಕೂ ಹೀಗೆ ಆಗಲಿ ಎಂದೇ ಇಂಥವರು ಅಂಥ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವುದು ಅನ್ನಿ. ಒಳ್ಳೆಯ ವಿಡಿಯೋ ಹಾಕಿದ್ರೆ ನಾಲ್ಕಾರು ಮಂದಿಯೂ ನೋಡಲ್ಲ. ಇಂಥ ವಿಡಿಯೋಗಳು ಹಾಕಿದ ತಕ್ಷಣ ಟ್ರೋಲ್ ಮಾಡುತ್ತಲೇ ಲಕ್ಷ ಲಕ್ಷ ವ್ಯೂವ್ಸ್ ಬಂದಿರುತ್ತವೆ. ಸದ್ಯ ಈ ವಿಡಿಯೋಗೂ ಹಾಗೆಯೇ ಆಗಿದೆ.
ನಟ-ನಟಿ ಕುರಿತು
ಇನ್ನು ಕರಣ್ ಕುರಿತು ಹೇಳುವುದಾದರೆ, 'ಕಿತನಿ ಮೊಹಬ್ಬತ್ ಹೈ' ಸೀರಿಯಲ್ ಮೂಲಕ 2009ರಲ್ಲಿ ಕಿರುತೆರೆ ಪ್ರವೇಶಿಸಿದ್ದ ಅವರಿಗೆ ಯೇ ಕಹಾನ್ ಆ ಗಯೇ ಹಮ್, ದಿಲ್ ಹೀ ತೋ ಹೈ, ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಸೀರಿಯಲ್ ಬ್ರೇಕ್ ನೀಡಿದವರು. MTV ರೋಡೀಸ್, ಲವ್ ಸ್ಕೂಲ್, ಟೆಂಪ್ಟೇಶನ್ ಐಲ್ಯಾಂಡ್ ಇಂಡಿಯಾ ಸೇರಿ ಹಲವು ಷೋಗಳಲ್ಲಿ ಆ್ಯಂಕರಿಂಗ್ ಮಾಡಿದ್ರು. ಇನ್ನು ನಟಿ ತೇಜಸ್ವಿ ಪ್ರಕಾಶ್ ಅವರಿಗೆ 'ಸ್ವರಾಗಿಣಿ ಬ್ರೇಕ್ ನೀಡಿದ ಸೀರಿಯಲ್. ಪೆಹ್ರೆದಾರ್ ಪಿಯಾ ಕಿ, ರಿಶ್ತಾ ಲಿಖೇಂಗೆ ಹಮ್ ನಯಾ, ಧಾರಾವಾಹಿಯಲ್ಲಿ ಕಾಣಿಸಿಕೊಂಡ ಅವರು ಫುಲ್ ಫೇಮಸ್ ಆಗಿದ್ದು, ನಾಗಿನ್ 6 ಸೀರಿಯಲ್ ಮೂಲಕ. ಖತ್ರೋನ್ ಕೆ ಖಿಲಾಡಿ 10 ರಲ್ಲಿ ಕೂಡ ಕಾಣಿಸಿಕೊಂಡಿದ್ದರು ತೇಜಸ್ವಿ ಪ್ರಕಾಶ್.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

