ಕಾವ್ಯಾ ಮಾರನ್‌ಗೆ ಈಗ 33 ವರ್ಷ ಮತ್ತು ಅನಿರುದ್ಧ್‌ಗೆ 35 ವರ್ಷ. ವಯಸ್ಸು ಮತ್ತು ಸ್ಟೇಟಸ್‌ಗೆ ಈ ಜೋಡಿ ಸಖತ್ ಮ್ಯಾಚ್ ಆಗುತ್ತದೆ ಎಂಬುದು ಅಭಿಮಾನಿಗಳ ಅಭಿಪ್ರಾಯ. ಒಟ್ಟಿನಲ್ಲಿ, ಐಪಿಎಲ್ ಮೈದಾನದಲ್ಲಿ ಟೆನ್ಶನ್‌ನಲ್ಲಿ ಕಾಣಿಸಿಕೊಳ್ಳುವ ಕಾವ್ಯಾ ಮತ್ತು ಸ್ಟೇಜ್ ಮೇಲೆ ಬೆಂಕಿ ಹಚ್ಚುವ ಅನಿರುದ್ಧ್ ಆಗಸ್ಟ್‌ನಲ್ಲಿ ಒಂದಾಗ್ತಾರಾ?

ಐಪಿಎಲ್ ಸುಂದರಿ ಮತ್ತು ಮ್ಯೂಸಿಕ್ ರಾಕ್‌ಸ್ಟಾರ್ ಮದುವೆ ಫಿಕ್ಸ್? ಕಾವ್ಯಾ ಮಾರನ್-ಅನಿರುದ್ಧ್ ವಿವಾಹದ ಸುತ್ತ ಕುತೂಹಲದ ಹುತ್ತ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿನಿಮಾ ಮತ್ತು ಕ್ರಿಕೆಟ್ - ಈ ಎರಡೂ ಕ್ಷೇತ್ರಗಳ ಸಂಗಮ ಅಂದ್ರೆ ಅಲ್ಲಿ ಸಖತ್ ಮಜಾ ಇರುತ್ತೆ. ಸದ್ಯ ದಕ್ಷಿಣ ಭಾರತದಾದ್ಯಂತ ಒಂದು ದೊಡ್ಡ ಸುದ್ದಿ ಗುಸುಗುಸು ಕೇಳಿಬರುತ್ತಿದೆ. ಅದು ಬೇರೆ ಯಾವುದೂ ಅಲ್ಲ, ತಮಿಳು ಚಿತ್ರರಂಗದ 'ಮ್ಯೂಸಿಕ್ ಸೆನ್ಸೇಷನ್' ಅನಿರುದ್ಧ್ ರವಿಚಂದರ್ (Anirudh Ravichander) ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡದ 'ಐಕಾನ್' ಕಾವ್ಯಾ ಮಾರನ್ (Kavya Maran) ಅವರ ಮದುವೆ ವಿಚಾರ! ಹೌದು, ಕಳೆದ ಕೆಲವು ದಿನಗಳಿಂದ ಇವರಿಬ್ಬರ ಮದುವೆ ಫಿಕ್ಸ್ ಆಗಿದೆ ಅನ್ನೋ ಸುದ್ದಿ ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿದೆ.

ಆಗಸ್ಟ್ ಬಳಿಕ ಶುಭಮಂಗಳಂ?

ಸದ್ಯದ ವರದಿಗಳ ಪ್ರಕಾರ, ಈ ವರ್ಷದ ಆಗಸ್ಟ್ ತಿಂಗಳ ನಂತರ ಈ ಹೈ ಪ್ರೊಫೈಲ್ ವಿವಾಹ ನಡೆಯಲಿದೆಯಂತೆ. ಸನ್ ನೆಟ್‌ವರ್ಕ್ ಮತ್ತು ಸನ್ ಪಿಕ್ಚರ್ಸ್‌ನ ವಾರಸುದಾರೆ ಕಾವ್ಯಾ ಮಾರನ್ ಮತ್ತು ಒಂದು ಸಿನಿಮಾಗೆ ಬರೋಬ್ಬರಿ 25 ಕೋಟಿ ರೂ. ಸಂಭಾವನೆ ಪಡೆಯುವ ಅನಿರುದ್ಧ್ ನಡುವೆ ಕಳೆದ ಒಂದು ವರ್ಷದಿಂದಲೇ 'ಸಮ್‌ಥಿಂಗ್ ಸಮ್‌ಥಿಂಗ್' ನಡೀತಿದೆ ಅನ್ನೋ ಮಾತುಗಳಿದ್ದವು. ಇವರಿಬ್ಬರು ವಿದೇಶದ ಲಾಸ್ ವೇಗಾಸ್‌ನಲ್ಲಿ ಒಟ್ಟಿಗೆ ಸುತ್ತಾಡುತ್ತಿದ್ದರು ಮತ್ತು ಅಲ್ಲಿ ಡಿನರ್ ಡೇಟ್ ಎಂಜಾಯ್ ಮಾಡುತ್ತಿದ್ದರು ಎನ್ನಲಾದ ಸುದ್ದಿಗಳು ಈ ವದಂತಿಗಳಿಗೆ ತುಪ್ಪ ಸುರಿದಿದ್ದವು.

ಅನಿರುದ್ಧ್ ರಿಯಾಕ್ಷನ್ ಏನು?

ಸಾಮಾನ್ಯವಾಗಿ ಅನಿರುದ್ಧ್ ಇಂತಹ ಸುದ್ದಿಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಇತ್ತೀಚೆಗೆ ಮಾಧ್ಯಮದವರು "ಸಾರ್, ಮದುವೆ ಇನ್ವಿಟೇಶನ್ ಯಾವಾಗ ಕೊಡ್ತೀರಾ?" ಅಂತ ಕೇಳಿದಾಗ, ಅನಿರುದ್ಧ್ ಸಖತ್ ಸ್ಮಾರ್ಟ್ ಆಗಿ ನಗುತ್ತಾ "ಇದು ಬೇರೆ ವಿಚಾರ.." ಎನ್ನುತ್ತಾ ಜಾರಿಕೊಂಡಿದ್ದರು. ಈ ಹಿಂದೆ ಮದುವೆ ವದಂತಿಗಳು ಹಬ್ಬಿದಾಗ, "ಸ್ವಲ್ಪ ರೂಮರ್ಸ್ ಹರಡೋದನ್ನ ನಿಲ್ಲಿಸಿ ಬಾಸ್" ಅಂತ ಟ್ವೀಟ್ ಮಾಡಿದ್ದರು. ಆದರೆ ಈ ಬಾರಿ ಕಾವ್ಯಾ ಮಾರನ್ ಹೆಸರು ಕೇಳಿಬರುತ್ತಿರುವುದರಿಂದ ಅನಿ ಅಷ್ಟೇನೂ ಕಟುವಾಗಿ ಪ್ರತಿಕ್ರಿಯಿಸಿಲ್ಲ, ಇದೇ ಈಗ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

ಸನ್ ಪಿಕ್ಚರ್ಸ್ ಮತ್ತು 'ಸೋಲೋ' ಮ್ಯೂಸಿಕ್!

ಕಾವ್ಯಾ ಮಾರನ್ ಅವರ ತಂದೆ ಕಲಾನಿಧಿ ಮಾರನ್ ಅವರ ಒಡೆತನದ 'ಸನ್ ಪಿಕ್ಚರ್ಸ್' ನಿರ್ಮಾಣದ ಸಾಲು ಸಾಲು ಬಿಗ್ ಸಿನಿಮಾಗಳಿಗೆ ಅನಿರುದ್ಧ್ ಅವರೇ ಸಂಗೀತ ನಿರ್ದೇಶಕರು. ರಜನಿಕಾಂತ್ ಅವರ 'ಜೈಲರ್' ಆಗಿರಲಿ ಅಥವಾ ಮುಂಬರುವ ದೊಡ್ಡ ಪ್ರಾಜೆಕ್ಟ್‌ಗಳೇ ಇರಲಿ, ಅನಿರುದ್ಧ್ ಮತ್ತು ಮಾರನ್ ಫ್ಯಾಮಿಲಿ ನಡುವೆ ಒಂದು ಬಲಿಷ್ಠ ವೃತ್ತಿಪರ ಸಂಬಂಧವಿದೆ. ಈ ವೃತ್ತಿಪರ ಸಂಬಂಧ ಈಗ ವೈಯಕ್ತಿಕ ಸಂಬಂಧವಾಗಿ ಬದಲಾಗಲಿದೆಯಾ? ಅನ್ನೋದು ಎಲ್ಲರ ಪ್ರಶ್ನೆ.

ಮಧ್ಯಪ್ರವೇಶಿಸಿದ್ರಾ 'ತಲೈವಾ' ರಜನಿಕಾಂತ್?

ಈ ಮದುವೆ ಸುದ್ದಿಯ ಹಿಂದಿರುವ ರೋಚಕ ಟ್ವಿಸ್ಟ್ ಅಂದ್ರೆ ಅದು ಸೂಪರ್ ಸ್ಟಾರ್ ರಜನಿಕಾಂತ್! ಅನಿರುದ್ಧ್ ಅವರು ರಜನಿಕಾಂತ್ ಅವರಿಗೆ ಸಂಬಂಧಿಯಾಗಬೇಕು (ರಜನಿಕಾಂತ್ ಪತ್ನಿ ಲತಾ ಅವರ ಸಹೋದರನ ಮಗ ಅನಿರುದ್ಧ್). ಅತ್ತ ಕಲಾನಿಧಿ ಮಾರನ್ ಮತ್ತು ರಜನಿಕಾಂತ್ ನಡುವೆ ದಶಕಗಳ ಸ್ನೇಹವಿದೆ. ಹೀಗಾಗಿ ಎರಡು ಪ್ರತಿಷ್ಠಿತ ಕುಟುಂಬಗಳ ನಡುವೆ ಸಂಬಂಧ ಬೆಸೆಯಲು ಸ್ವತಃ ತಲೈವಾ ಅವರೇ ಮಾತುಕತೆ ನಡೆಸಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ. ಎರಡೂ ಕಡೆಯ ಮನೆಯವರಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಕೇವಲ ಅಧಿಕೃತ ಘೋಷಣೆಯೊಂದೇ ಬಾಕಿ ಇದೆಯಂತೆ.

ಕಾವ್ಯಾ ಮಾರನ್‌ಗೆ ಈಗ 33 ವರ್ಷ ಮತ್ತು ಅನಿರುದ್ಧ್‌ಗೆ 35 ವರ್ಷ. ವಯಸ್ಸು ಮತ್ತು ಸ್ಟೇಟಸ್‌ಗೆ ಈ ಜೋಡಿ ಸಖತ್ ಮ್ಯಾಚ್ ಆಗುತ್ತದೆ ಎಂಬುದು ಅಭಿಮಾನಿಗಳ ಅಭಿಪ್ರಾಯ. ಒಟ್ಟಿನಲ್ಲಿ, ಐಪಿಎಲ್ ಮೈದಾನದಲ್ಲಿ ಟೆನ್ಶನ್‌ನಲ್ಲಿ ಕಾಣಿಸಿಕೊಳ್ಳುವ ಕಾವ್ಯಾ ಮತ್ತು ಸ್ಟೇಜ್ ಮೇಲೆ ಬೆಂಕಿ ಹಚ್ಚುವ ಅನಿರುದ್ಧ್ ನಿಜಕ್ಕೂ ಒಂದಾಗುತ್ತಾರಾ? ಅನ್ನೋ ರಹಸ್ಯಕ್ಕೆ ಆಗಸ್ಟ್‌ನಲ್ಲಿ ಉತ್ತರ ಸಿಗುವ ಸಾಧ್ಯತೆಯಿದೆ!