Parenting Tips: ಮಕ್ಕಳು, ಪೋಷಕರ ನಡುವಿನ ಸಂಬಂಧ ಹೇಗಿರಬೇಕು? ಬಿಲ್‌ಗೇಟ್ಸ್ ಏನ್ ಹೇಳ್ತಾರೆ ಕೇಳಿ

ಇವತ್ತಿನ ಮಕ್ಕಳನ್ನು ನೀವು ನೋಡಿರಬಹುದು. ವಿಪರೀತ ಹಠ. ಹೇಳಿದ ಮಾತು ಒಂದನ್ನೂ ಕೇಳುವುದಿಲ್ಲ. ಶಿಸ್ತು (Discipline) ಅಂತೂ ಇಲ್ಲವೇ ಇಲ್ಲ. ಚಿಕ್ಕಂದಿನಲ್ಲೇ ಮಕ್ಕಳು (Children) ಹೀಗಿದ್ದಾಗ ದೊಡ್ಡವರಾದಾಗಲೂ ಸರಿ ಮಾಡುವುದು ಕಷ್ಟ. ಹಾಗಿದ್ರೆ ಮಕ್ಕಳನ್ನು ಹೇಗೆ ಬಳಸ್ಬೇಕು ? ಮಕ್ಕಳು ಮತ್ತು ಪೋಷಕರ ನಡುವೆ ಸಂಬಂಧ ಹೇಗಿರಬೇಕು? ಬಿಲ್‌ಗೇಟ್ಸ್‌ (Bill Gates) ಏನ್ ಹೇಳ್ತಾರೆ ಕೇಳಿ.

Smart Parenting Tips From Bill Gates

ಇವತ್ತಿನ ಕಾಲದ ಮಕ್ಕಳು (Children) ಗೊತ್ತಲ್ಲ. ವಯಸ್ಸಿಗಿಂತ ಹೆಚ್ಚು ಬುದ್ಧಿ, ಚುರುಕುತನ ಇರುತ್ತದೆ. ಮಾತ್ರವಲ್ಲ ಒಳ್ಳೆಯ ಅಭ್ಯಾಸಗಳ ಜತೆಗೆ ಕೆಟ್ಟ ಅಭ್ಯಾಸಗಳೂ ಸೇರಿಕೊಂಡಿರುತ್ತವೆ. ಹೀಗಾಗಿ ಚಿಕ್ಕಂದಿನಲ್ಲೇ ಮಕ್ಕಳಿಗೆ ಒಳ್ಳೆಯ ಗುಣ, ನಡತೆಗಳನ್ನು ಹೇಳಿ ಕೊಡಬೇಕಾದುದು ಮುಖ್ಯ. ಒಳ್ಳೆಯ ವಿಷಯಗಳನ್ನು ಕಲಿಯುವಂತೆ, ಕೆಟ್ಟ ವಿಷಯಗಳನ್ನು ಕಲಿಯದಂತೆ ಹೇಳಿ ಕೊಡಬೇಕು. ಇದಕ್ಕೆ ಪೋಷಕರು ಹೆಚ್ಚು ಸ್ಟ್ರಿಕ್ಟ್ ಕೂಡಾ ಆಗಿರಬಾರದು. ಮಕ್ಕಳ ಜತೆ ಹೆಚ್ಚು ಸಲಿಗೆಯಿಂದಲೂ ಇರಬಾರದು. ಹಾಗಿದ್ರೆ ಪೋಷಕರು (Parents) ಮಕ್ಕಳ ಜೊತೆ ಹೇಗಿರಬೇಕು ?  ಮಕ್ಕಳನ್ನು ಹೇಗೆ ಬೆಳೆಸಬೇಕು ? ಎಂಬ ಬಗ್ಗೆ ಬಿಲ್‍ಗೇಟ್ಸ್ (Bill Gates) ಕೆಲವೊಂದು ವಿಚಾರಗಳನ್ನು ಹೇಳಿದ್ದಾರೆ. ಅದೇನೂಂತ ತಿಳಿಯೋಣ.

ಅಮೇರಿಕನ್ ಉದ್ಯಮಿ ಲೋಕೋಪಕಾರಿ ಬಿಲ್ ಗೇಟ್ಸ್ ಎಲ್ಲರಿಗೂ ಪರಿಚಿತರು. ಗೇಟ್ಸ್ ಅಕ್ಟೋಬರ್ 28, 1955ರಂದು ವಾಷಿಂಗ್ಟನ್‌ನ ಸಿಯಾಟಲ್‌ನಲ್ಲಿ ವಿಲಿಯಂ ಎಚ್. ಗೇಟ್ಸ್ ಸೀನಿಯರ್ ಮತ್ತು ಮೇರಿ ಮ್ಯಾಕ್ಸ್‌ವೆಲ್ ಗೇಟ್ಸ್‌ಗೆ ಜನಿಸಿದರು. 1994ರಲ್ಲಿ ಗೇಟ್ಸ್ ತನ್ನ ತಾಯಿಯನ್ನು ಸ್ತನ ಕ್ಯಾನ್ಸರ್‌ನಿಂದ ಕಳೆದುಕೊಂಡರು. ಅವರ ತಂದೆ ವಿಲಿಯಂ ಎಚ್.ಗೇಟ್ಸ್ ಸೀನಿಯರ್ ಅವರು ಆಲ್ಝೈಮರ್‌ನ ಕಾಯಿಲೆಯಿಂದ ಸೆಪ್ಟೆಂಬರ್ 14, 2020ರಂದು ನಿಧನರಾದರು. ಅನೇಕ ಸಂದರ್ಶನಗಳಲ್ಲಿ ಮತ್ತು ಅವರ ಬ್ಲಾಗ್, ಗೇಟ್ಸ್ ನೋಟ್ಸ್‌ನಲ್ಲಿ, ಅವರು ತಮ್ಮ ಹೆತ್ತವರೊಂದಿಗೆ ಹೊಂದಿದ್ದ ಬಾಂಧವ್ಯದ ಬಗ್ಗೆ ಖುಷಿಯಿಂದ ಮಾತನಾಡಿದ್ದಾರೆ.

Parenting Tips: ಮಕ್ಕಳನ್ನು ಹೇಗೆ ಬೆಳೆಸ್ಬೇಕು ? ಸುಧಾ ಮೂರ್ತಿ ಏನ್ ಹೇಳ್ತಾರೆ ಕೇಳಿ

ಗೇಟ್ಸ್ ಅವರು ಪೋಷಕರೊಂದಿಗಿನ ತಮ್ಮ ಅನುಭವಗಳು, ಪೋಷಕರು ತನ್ನನ್ನು ಯಾವ ರೀತಿ ನಡೆಸಿಕೊಳ್ಳುತ್ತಿದ್ದರು ಎಂಬುದನ್ನು ವಿವರಿಸಿದ್ದಾರೆ. ಬೃಹತ್ ಉದ್ಯಮಿ ಮತ್ತು ಬಿಲಿಯನೇರ್, ಬಿಲ್ ಗೇಟ್ಸ್ ಎಂಬ ಯಶಸ್ವೀ ವ್ಯಕ್ತಿಯನ್ನು ಪೋಷಕರು ಹೇಗೆ ಬೆಳೆಸಿದರು ಎಂಬುದನ್ನು ತಿಳಿಯೋಣ.

ಮಕ್ಕಳು ಏನು ಮಾಡಲು ಇಷ್ಟಪಡುತ್ತಾರೋ ಅದನ್ನು ಮಾಡಲು ಅವರಿಗೆ ಸ್ವಾತಂತ್ರ್ಯ ನೀಡಬೇಕು ಎಂದು ಉದ್ಯಮಿ ಬಿಲ್‌ಗೇಟ್ಸ್ ತಿಳಿಸುತ್ತಾರೆ. ನನ್ನ ಪೋಷಕರು ನಾನು ಏನು ಮಾಡಲು ಇಷ್ಟಪಡುತ್ತಾರೋ ಅದನ್ನು ಮಾಡಲು ಸ್ವಾತಂತ್ರ್ಯವನ್ನು ನೀಡಿದರು. 13 ಮತ್ತು 18 ವರ್ಷ ವಯಸ್ಸಿನ ನಡುವೆ ಗೀಳಿನಿಂದ ಮಾಡುವ ಕೆಲಸ, ಅದು ನಿಮ್ಮನ್ನು ಯಶಸ್ವೀ ವ್ಯಕ್ತಿಯನ್ನಾಗಿ ಮಾಡಲು ಹೆಚ್ಚಿನ ಅವಕಾಶವಿದೆ ಎಂದು ಅವರು 2016ರಲ್ಲಿ ಸಂದರ್ಶನವೊಂದರಲ್ಲಿ ಹೇಳಿದರು. 

ಬಾಲ್ಯದಲ್ಲಿ ವಿಚಿತ್ರ ಮನೋಭಾವವನ್ನು ಹೊಂದಿದ್ದ ಬಿಲ್ ಗೇಟ್ಸ್ ಅವರನ್ನು ಅವರ ಪೋಷಕರು ಮನಶ್ಶಾಸ್ತ್ರಜ್ಞರ ಬಳಿಗೆ ಕರೆದೊಯ್ದರು ಎಂಬುದಾಗಿ ಬಿಲ್‌ಗೇಟ್ಸ್ ತಂದೆ ತಮ್ಮ ಪುಸ್ತಕವೊಂದರಲ್ಲಿ ಬರೆದಿದ್ದಾರೆ. ಬಿಲ್‌ಗೇಟ್ಸ್‌ ಕೆಲವು ವಿಷಯಗಳಲ್ಲಿ ಬಹಳ ಸ್ಥಿರವಾದ ಆಲೋಚನೆಗಳನ್ನು ಹೊಂದಿದ್ದರು. ತಮ್ಮ 13ನೇ ವಯಸ್ಸಿನಲ್ಲಿ, ಅವರು ಹೆಚ್ಚಿನ ಸಮಯವನ್ನು ಮನೆಯಿಂದ ದೂರ ಕಳೆಯುತ್ತಾರೆ, ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ತಂತ್ರಜ್ಞಾನದ ಬಳಕೆಯನ್ನು ಕಳೆಯಲು ಹಲವು ರಾತ್ರಿ ಅಲ್ಲಿಯೇ ಕಳೆದರು ಎಂದು ಬಿಲ್‌ಗೇಟ್ಸ್‌ ತಂದೆ ವಿವರಿಸುತ್ತಾರೆ.

Parenting Tips : ಮಕ್ಕಳ ಮುಂದೆ ಪದೇ ಪದೇ ಈ ಡೈಲಾಗ್ ಹೇಳಿ ಅವರ ಭವಿಷ್ಯ ಹಾಳ್ಮಾಡ್ಬೇಡಿ

ಬ್ರಿಟಾನಿಕಾ ಪ್ರಕಾರ, ಗೇಟ್ಸ್ ತನ್ನ 13ನೇ ವಯಸ್ಸಿನಲ್ಲಿ ತನ್ನ ಮೊದಲ ಸಾಫ್ಟ್‌ವೇರ್ ಪ್ರೋಗ್ರಾಂ ಅನ್ನು ಬರೆದರು. ಪ್ರೌಢಶಾಲೆಯಲ್ಲಿ ಅವರು ತಮ್ಮ ಶಾಲೆಯ ವೇತನದಾರರ ವ್ಯವಸ್ಥೆಯನ್ನು ಗಣಕೀಕರಿಸಿದ ಪ್ರೋಗ್ರಾಮರ್‌ಗಳ ಗುಂಪನ್ನು ರೂಪಿಸಲು ಸಹಾಯ ಮಾಡಿದರು ಮತ್ತು ಟ್ರಾಫಿಕ್-ಒ-ಡೇಟಾವನ್ನು ಸ್ಥಾಪಿಸಿದರು. ಇದು ಸ್ಥಳೀಯ ಆಡಳಿತ ಟ್ರಾಫಿಕ್-ಎಣಿಕೆಯ ವ್ಯವಸ್ಥೆಯನ್ನು ಮಾರಾಟ ಮಾಡುವ ಕಂಪನಿಯಾಗಿದೆ.

ಪೋಷಕರು ನೀಡಿದ ಸ್ವಲ್ಪ ಸ್ವಾತಂತ್ರ್ಯವು ನಾನು ನಿಜವಾಗಿ ಜೀವನದಲ್ಲಿ ಏನು ಮಾಡಬೇಕೆಂದು ನನಗೆ ತೋರಿಸಿದೆ. ಮಕ್ಕಳು ನಿಮ್ಮ ಜವಾಬ್ದಾರಿ, ಅವರ ಭವಿಷ್ಯವಲ್ಲ. ಅವರ ಮಹತ್ವಾಕಾಂಕ್ಷೆ ಅಲ್ಲ. ಅವರ ಉತ್ಸಾಹ, ಬಯಕೆ ಮತ್ತು ಪ್ರತಿಭೆಯನ್ನು ಪೋಷಿಸಲು ಅವರಿಗೆ ಅವಕಾಶ ನೀಡಿ ಎಂದು ಬಿಲ್‌ಗೇಟ್ಸ್‌ ಹೇಳುತ್ತಾರೆ. ಕಠಿಣ ಪರಿಶ್ರಮ ಮತ್ತು ಶ್ರಮವು ಸಾಧಿಸಲು ಸಹಾಯ ಮಾಡುತ್ತದೆ ಎಂದು ಬಿಲ್ ಗೇಟ್ಸ್ ಹೇಳುತ್ತಾರೆ. ಪೋಷಕರು ನನ್ನ ನಿರೀಕ್ಷೆಗಳು ಮತ್ತು ಗುರಿಗಳನ್ನು ಹೊಂದಿಸಲು ಸಹಾಯ ಮಾಡಿದರು. ನಾನು ಕೋಟ್ಯಾಧಿಪತಿಯಾಗುತ್ತಾರೆ ಎಂದು ಅವರು ನಿರೀಕ್ಷಿಸಿರಲಿಲ್ಲ. ನಾನೊಬ್ಬ ಉತ್ತಮ ಮತ್ತು ವಿದ್ಯಾವಂತ ವ್ಯಕ್ತಿಯಾಗಬೇಕೆಂದು ಅವರು ಬಯಸಿದ್ದರು ಎಂದು ಹೇಳಿದರು. 

ಬಿಲ್ ಗೇಟ್ಸ್ ಹಾರ್ವರ್ಡ್‌ನಿಂದ ಹೊರಗುಳಿಯಲು ನಿರ್ಧರಿಸಿದಾಗ, ಅವರ ಪೋಷಕರು ಅವನನ್ನು ಬೆಂಬಲಿಸಿದರು, ಆದರೂ ಅದು ಕಠಿಣ ನಿರ್ಧಾರವಾಗಿತ್ತು. ಅನೇಕ ಪೋಷಕರು ತಮ್ಮ ಕನಸುಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ತಮ್ಮ ಮಗುವಿನ ಮೇಲೆ ಹೇರುತ್ತಾರೆ. ಆದರೆ ನನ್ನ ಪೋಷಕರು ಹಾಗೆ ಮಾಡಲ್ಲಿಲ್ಲ ಎಂದು ಬಿಲ್‌ಗೇಟ್ಸ್‌ ಹೆಮ್ಮೆಯಿಂದ ಹೇಳುತ್ತಾರೆ.

Latest Videos
Follow Us:
Download App:
  • android
  • ios