Asianet Suvarna News Asianet Suvarna News

Parenting Tips : ಒಂದೇ ಮಗು ಅಂತ ಸಿಕ್ಕಾಪಟ್ಟೆ ಮುದ್ದು ಮಾಡೋ ಪೋಷಕರಿಗೆ ಕಿವಿ ಮಾತು!

ನೀನೊಬ್ನೆ ನಮಗೆ, ಎಲ್ಲ ಜವಾಬ್ದಾರಿ ನಿನ್ನ ಮೇಲಿದೆ. ಓದಿ ಒಳ್ಳೆ ವ್ಯಕ್ತಿಯಾಗೋ ಜೊತೆಗೆ ಎಲ್ಲ ಒಳ್ಳೆ ಹವ್ಯಾಸ ಕಲಿಯಬೇಕು.. ಹೀಗೆ ಒಂದಾ ಎರಡಾ.. ಮಗು ಒಂದೇ ಎನ್ನುವ ಕಾರಣಕ್ಕೆ ಎಲ್ಲ ಹೊಣೆ ಆತನ ಮೇಲೆ ಹೊರಿಸುವ ಪಾಲಕರು ಇದನ್ನೊಮ್ಮೆ ಓದಿ.
 

Single Child Parenting Tips
Author
First Published Feb 23, 2023, 12:17 PM IST

ಎಲ್ಲ ತಂದೆ ತಾಯಿಯರೂ ತಮ್ಮ ಮಗ ಅಥವಾ ಮಗಳು ಒಳ್ಳೆಯ ವ್ಯಕ್ತಿಯಾಗಬೇಕು, ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಎನ್ನುವ ಇಚ್ಛೆ ಇದ್ದೇ ಇರುತ್ತೆ. ಮೊದಲೆಲ್ಲ ಅವಿಭಕ್ತ ಕುಟುಂಬಗಳೇ ಹೆಚ್ಚಿಗೆ ಇರುತ್ತಿದ್ದರಿಂದ ಹತ್ತಾರು ಮಕ್ಕಳು ಒಟ್ಟಿಗೆ ಆಟ ಪಾಠಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ಆದರೆ ಈಗ ಎಲ್ಲೂ ಅವಿಭಕ್ತ ಕುಟುಂಬಗಳೇ ಇರುವುದಿಲ್ಲ. ಹೆಚ್ಚಿನ ತಂದೆ ತಾಯಿಗಳಿಗೆ ಒಬ್ಬ ಮಗಳು ಅಥವಾ ಮಗ ಇರುತ್ತಾರೆ. ಮಕ್ಕಳು ಒಬ್ಬರೇ ಆದಾಗ ಅವರ ಮೇಲೆ ಪಾಲಕರು ಹೆಚ್ಚಿನ ಗಮನ ಕೊಡುತ್ತಾರೆ. ತಮ್ಮ ಶಕ್ತಿಮೀರಿ ದುಡಿದು ತಮ್ಮ ಮಗುವಿಗೆ ಒಳ್ಳೆಯ ಶಿಕ್ಷಣ ಕೊಡಿಸುತ್ತಾರೆ. ಮಕ್ಕಳ ಮೇಲಿನ ನಿರೀಕ್ಷೆಗಳು ಹೆಚ್ಚುತ್ತಲೇ ಹೋಗುತ್ತವೆ. ಹೀಗೆ ಪಾಲಕರು ಮಕ್ಕಳ ಮೇಲೆ ತೋರಿಸುವ ಹೆಚ್ಚಿನ ಕಾಳಜಿ, ನಿರೀಕ್ಷೆಗಳೇ ಮಕ್ಕಳ ಜೀವನಕ್ಕೆ ಮುಳ್ಳಾಗಬಹುದು.

ಕೆಲವೊಮ್ಮೆ ಮನೆ (House) ಯಲ್ಲಿ ಒಂದೇ ಮಗು (Child) ಆದಾಗ ಅವಶ್ಯಕತೆಗಿಂತಲೂ ಹೆಚ್ಚು ಪ್ರೀತಿ, ಆರೈಕೆ, ಚಿಂತೆಯನ್ನು ಹೆತ್ತವರು ಆ ಮಗುವಿನ ಮೇಲೆ ತೋರಿಸುತ್ತಾರೆ. ಇದು ಕೆಲವೊಮ್ಮೆ ಮಕ್ಕಳಿಗೆ ಉಸಿರುಗಟ್ಟಿಸುತ್ತೆ. ಮಿತಿಮೀರಿದ ಪ್ರೀತಿ (Love ) ಮಕ್ಕಳು ದಾರಿತಪ್ಪುವುದಕ್ಕೂ ಕಾರಣವಾಗಬಹುದು. ಮಗುವಿನಲ್ಲಿ ತನಗೆ ಅದು ಬೇಕೇ ಬೇಕು ಎನ್ನುವ ಹಠದ ಮನೋಭಾವ ಬೆಳೆಯಬಹುದು. ಪಾಲಕರು ಮಾಡುವ ಚಿಕ್ಕ ಪುಟ್ಟ ತಪ್ಪುಗಳೇ ಮಕ್ಕಳು ಹಾದಿತಪ್ಪುವಂತೆ ಮಾಡಬಹುದು. ಹಾಗಾಗಿ ಮನೆಯಲ್ಲಿ ಒಂದೇ ಮಗುವನ್ನು ಬೆಳೆಸುವಾಗ ಪಾಲಕರು ಜಾಗರೂಕರಾಗಿರಬೇಕು.

Parenting Tips: ಪೋಷಕರು ಮಕ್ಕಳ ಮುಂದೆ ಅಳೋದು ತಪ್ಪಾ?

ಒಂದೇ ಮಗುವನ್ನು ಬೆಳೆಸುವಲ್ಲಿ ಪಾಲಕರು ಮಾಡುವ ಸಾಮಾನ್ಯ ತಪ್ಪುಗಳು : 

ಅವಶ್ಯಕತೆಗಿಂತಲೂ ಹೆಚ್ಚಿಗೆ ಏನೂ ಮಾಡಬೇಡಿ : ಸಿಂಗಲ್ ಚೈಲ್ಡ್ ಪೇರೆಂಟ್ಸ್ ತಮ್ಮ ಎಲ್ಲ ಭಾವನೆಗಳನ್ನು ಅಗತ್ಯಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಏಕೆಂದರೆ ಅವರಿಗೆ ಆ ಮಗುವೇ ಪ್ರಪಂಚವಾಗಿರುತ್ತದೆ. ತಮ್ಮ ಮಗುವಿನ ಸುರಕ್ಷತೆ, ಅಭ್ಯಾಸ, ಭವಿಷ್ಯವನ್ನು ಮನದಲ್ಲಿಟ್ಟುಕೊಂಡು ಪಾಲಕರು ಹೆಚ್ಚು ಚಿಂತಿಸತೊಡಗುತ್ತಾರೆ. ಇದರಿಂದ ಪೋಷಕರು ಅಸಮಾಧಾನಗೊಳ್ಳುವುದಲ್ಲದೇ ಮಕ್ಕಳಲ್ಲೂ ಆತಂಕ ಹೆಚ್ಚುತ್ತದೆ. ಅಂತಹ ಸಮಯದಲ್ಲಿ ಮಗು ಪಾಲಕರ ಚಿಂತೆಯನ್ನು ಕಡಿಮೆ ಮಾಡಲು ನಾನು ಏನು ಮಾಡಬೇಕೆಂದು ಉಪಾಯ ಹುಡುಕಲು ಪ್ರಾರಂಭಿಸುತ್ತೆ. ಇದರಿಂದ ಮಗುವಿನ ಮೇಲೆ ಒತ್ತಡ ಹೆಚ್ಚುತ್ತಾ ಹೋಗುತ್ತದೆ.

ಮಹತ್ತರ ಆಕಾಂಕ್ಷೆ : ಮನೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದ್ದಾಗ ಪಾಲಕರ ಗಮನ ಕೂಡ ಎಲ್ಲರಲ್ಲಿ ಹಂಚಿಹೋಗುತ್ತದೆ. ಅದೇ ಒಂದು ಮಗು ಒಂಟಿಯಾದಾಗ ಎಲ್ಲ ಜವಾಬ್ದಾರಿ, ತಂದೆ ತಾಯಿಯರ ಅಪೇಕ್ಷೆಗಳೆಲ್ಲವೂ ಪುಟ್ಟ ಮಗುವಿನ ಹೆಗಲೇರುತ್ತದೆ. ಇಂತಹ ಒತ್ತಡಗಳು ಮಗುವಿನ ಹೆಗಲೇರಿದಾಗ ಮಗು ಪೋಷಕರ ಯಾವ ಆಸೆಗಳನ್ನೂ ಈಡೇರಿಸಲಾಗದೇ, ಹೆತ್ತವರನ್ನು ಖುಷಿಪಡಿಸಲಾಗದೇ ಹತಾಷವಾಗುತ್ತೆ.

ಮಗುವಿನ ತಪ್ಪನ್ನು ನಿರ್ಲಕ್ಷಿಸಬೇಡಿ : ಹೆತ್ತವರು ತಮಗೆ ಇರುವುದು ಒಂದೇ ಮಗುವೆಂದು ಬಹಳ ಮುದ್ದಿನಿಂದ ಬೆಳೆಸುತ್ತಾರೆ. ಮಕ್ಕಳು ಮಾಡಿದ ತಪ್ಪನ್ನು ತಿದ್ದದೇ ಮಗುವನ್ನು ಮುದ್ದಿಸುತ್ತಾರೆ. ಇದರಿಂದ ಮಕ್ಕಳಿಗೆ ತಮ್ಮ ತಪ್ಪಿನ ಅರಿವಾಗುವುದಿಲ್ಲ. ನಂತರದ ದಿನಗಳಲ್ಲಿ ಅವರು ಯಾವ ನಿಯಮವನ್ನೂ ಪಾಲಿಸದೇ ತಮ್ಮದೇ ನೀತಿಗಳನ್ನು ಅನುಸರಿಸಲು ಆರಂಭಿಸುತ್ತಾರೆ. ಆದ್ದರಿಂದ ಪೋಷಕರು ಮಕ್ಕಳಿಗೆ ಕಟ್ಟುನಿಟ್ಟಾದ ಜೀವನಶೈಲಿಯನ್ನು ಕಲಿಸಬೇಕು. ಇದರಿಂದ ಮಗುವಿಗೆ ಯಾವುದು ತಪ್ಪು ಯಾವುದು ಸರಿ ಎಂಬ ಪ್ರಜ್ಞೆ ಸಹಜವಾಗಿಯೇ ಮೂಡುತ್ತದೆ.

Parenting Tips: ಮಕ್ಕಳನ್ನು ಈ ರೀತಿ ಬೆಳೆಸಿದ್ರೆ ಪೋಷಕರು ಯಾವಾಗ್ಲೂ ಟೆನ್ಶನ್‌ ಫ್ರೀ ಆಗಿರ್ಬೋದು

ಉತ್ತಮ ನಡವಳಿಕೆ ಕಲಿಸಿ : ಹೆತ್ತವರ ಅತಿಯಾದ ಮುದ್ದು ಮಕ್ಕಳ ನ್ನು ಹಾಳುಮಾಡಬಾರದು. ಮಕ್ಕಳನ್ನು ಎಷ್ಟೇ ಪ್ರೀತಿಯಿಂದ ಬೆಳೆಸಿದರೂ ಅವರಿಗೆ ಶಿಷ್ಟಾಚಾರ ಕಲಿಸಬೇಕು. ನಮ್ಮ ಸಂಸ್ಕೃತಿ, ಆಚಾರ-ವಿಚಾರ, ದೊಡ್ಡವರಿಗೆ ಗೌರವ, ಮರ್ಯಾದೆಯನ್ನು ಕೊಡುವುದು, ಎಲ್ಲರನ್ನೂ ಪ್ರೀತಿಸುವುದು, ತನ್ನ ತಪ್ಪಿದ್ದಾಗ ಕ್ಷಮೆ ಕೇಳುವುದು, ಯಾರಿಗೂ ಕೆಟ್ಟದ್ದನ್ನು ಮಾಡದೇ ಇರುವುದನ್ನು ಮಕ್ಕಳಿಗೆ ಹೇಳಿಕೊಡಬೇಕು. ಕುಟುಂಬ, ಸ್ನೇಹಿತರು ಬಂಧು ಬಳಗದ ಪ್ರೀತಿ ಸಂಬಂಧಗಳ ಮೌಲ್ಯವನ್ನು ಮಕ್ಕಳಿಗೆ ಕಲಿಸುವುದು ಅತ್ಯಂತ ಮುಖ್ಯವಾಗಿದೆ.
 

Follow Us:
Download App:
  • android
  • ios