Parenting Tips: ಪೋಷಕರು ಮಕ್ಕಳ ಮುಂದೆ ಅಳೋದು ತಪ್ಪಾ?

ಅಳುವುದು ಒಂದು ಸಾಮಾನ್ಯ ಸಂಗತಿ. ಅದನ್ನು ಅತಿಶಯೋಕ್ತಿಯಾಗಿ ನೋಡುವ ಅಗತ್ಯವಿಲ್ಲ. ಪುರುಷ ಹಾಗೂ ಮಹಿಳೆ ಇಬ್ಬರಿಗೂ ಅಳುವ ಹಕ್ಕಿದೆ. ಮಕ್ಕಳ ಮುಂದೆ ನಿಮ್ಮ ದುಃಖ ತೋಡಿಕೊಂಡ್ರೆ ನಷ್ಟಕ್ಕಿಂತ ಲಾಭವೇ ಹೆಚ್ಚು ಎನ್ನುತ್ತಾರೆ ತಜ್ಞರು.

Why Parents Should Not Shy Away From Crying In Front Of The Child

ಮಕ್ಕಳ ಮುಂದೆ ಪರ್ಫೆಕ್ಟ್ ಆಗಲು ಎಲ್ಲಾ ಪಾಲಕರು ಬಯಸ್ತಾರೆ. ಯಾವುದೇ ನೋವಿರಲಿ, ಯಾವುದೇ ದುಃಖವಿರಲಿ, ಯಾವುದೇ ಸಮಸ್ಯೆಯಿರಲಿ ಮಕ್ಕಳ ಮುಂದೆ ಹೇಳೋದಿಲ್ಲ. ಮಕ್ಕಳ ಮುಂದೆ ಪಾಲಕರು ಅಪ್ಪಿತಪ್ಪಿಯೂ ಅಳೋದಿಲ್ಲ. ಮಕ್ಕಳ ಮುಂದೆ ಕಣ್ಣೀರು ಹಾಕಿದ್ರೆ ಅದು ತಮ್ಮ ಇಮೇಜ್ ಹಾಳು ಮಾಡುತ್ತದೆ ಎನ್ನುವ ಭಾವನೆ ಪಾಲಕರದ್ದು. ಪಾಲಕರು (Parents) ಮಕ್ಕಳಿಗೆ ಸೂಪರ್ ಮಾಡೆಲ್ (Model) ಆಗಿರ್ತಾರೆ. ಬಹುತೇಕ ವಿಷ್ಯಗಳನ್ನು ಮಕ್ಕಳು (Children), ಪಾಲಕರನ್ನು ನೋಡಿ ಕಲಿಯುತ್ತಿರುತ್ತಾರೆ. ಈ ಸಂಗತಿ ತಿಳಿದಿರುವ ಪಾಲಕರು, ಮಕ್ಕಳ ಮುಂದೆ ಅಳೋದಿಲ್ಲ. ಮಕ್ಕಳ ಮುಂದೆ ಸೂಪರ್ ಹೀರೋ ಆಗಿರಬೇಕೆಂದು ಬಯಸ್ತಾರೆ. ಆದರೆ ತಜ್ಞರ ಪ್ರಕಾರ ಇದು ತಪ್ಪು.

ಪಾಲಕರು ಮಕ್ಕಳ ಮುಂದೆ ಸದಾ ಆದರ್ಶ ವ್ಯಕ್ತಿಯಾಗಿ ಇರಬೇಕಾಗಿಲ್ಲ. ತನ್ನ ಎಲ್ಲ ಭಾವನೆಗಳ ಮೇಲೆ ಸಂಪೂರ್ಣ ನಿಯಂತ್ರಣ ಹೇರಬೇಕಾಗಿಲ್ಲ. ಮಕ್ಕಳ ಮುಂದೆ ಪಾಲಕರು ಅಳೋದ್ರಿಂದಲೂ ಲಾಭವಿದೆ. ನಾವಿಂದು ಮಕ್ಕಳ ಮುಂದೆ ಪಾಲಕರು ಏಕೆ ಅಳ್ಬೇಕು ಎನ್ನುವ ಬಗ್ಗೆ ಹೇಳ್ತೇವೆ. ಮಕ್ಕಳ ಮುಂದೆ ನೀವು ಯಾವಾಗ್ಲೂ ಗಟ್ಟಿಯಾಗಿರಬೇಕಾಗಿಲ್ಲ. ನೀವು ಅಸಮಾಧಾನಗೊಂಡ್ರೆ, ದುಃಖ (Sadness) ಬಂದ್ರೆ ಅದನ್ನು ತಡೆಯಲು ಹೋಗ್ಬೇಡ. ಮಕ್ಕಳ ಮುಂದೆ ಅಳು ತಡೆಯಬೇಡಿ. ಕಣ್ಣೀರು ಹರಿಯಲು ಬಿಡಿ. ಇದು ನಿಮ್ಮ ಇಮೇಜ್ ಅನ್ನು ಹಾಳು ಮಾಡುವುದಿಲ್ಲ. ಬದಲಾಗಿ ಮಗುವಿಗೆ ಅನೇಕ ವಿಷಯಗಳನ್ನು ಸುಲಭವಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. 

ಏನೇ ಆದರೂ Friendship ಬಿಡೋದಿಲ್ಲ ಅಂತಾರೆ ಈ ರಾಶಿಯವರು!!

ಮಕ್ಕಳ ಮುಂದೆ ಅಳುವುದ್ರಿಂದ ಆಗುವ ಲಾಭ :

ಮಕ್ಕಳಿಗೆ ನೀವು ಅರ್ಥವಾಗ್ತೀರಿ : ನೀವು ತುಂಬಾ ಅಸಮಾಧಾನಗೊಂಡಿದ್ದು, ಅಳುವನ್ನು ತಡೆಯಲು ಸಾಧ್ಯವಿಲ್ಲ ಎಂದಾಗ ಅದನ್ನು ಅದುಮಿಡಬೇಡಿ. ಮಕ್ಕಳ ಮುಂದೆ ದೊಡ್ಡದಾಗಿ ಅಳಬಹುದು. ನನ್ನಂತೆ ನನ್ನ ಪಾಲಕರಿಗೂ ಸಮಸ್ಯೆ ಬರುತ್ತದೆ, ಅಳು ಬರುತ್ತದೆ ಎಂಬುದು ಮಕ್ಕಳಿಗೆ ತಿಳಿಯುತ್ತದೆ. ನಿಮ್ಮ ಭಾವನೆಗಳನ್ನು ಮಕ್ಕಳ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಅನೇಕ ಬಾರಿ ನೀವು ಏನು ಹೇಳದೆ ಮಕ್ಕಳು ನಿಮ್ಮನ್ನು ಅರ್ಥಮಾಡಿಕೊಂಡಿರುತ್ತಾರೆ. 

ಅಳೋದು ದೌರ್ಬಲ್ಯವಲ್ಲ : ಅಳುವುದು ದೌರ್ಬಲ್ಯದ ಸಂಕೇತ ಎಂದು ಪಾಲಕರು ಸಾಮಾನ್ಯವಾಗಿ ಮಗುವಿಗೆ ಕಲಿಸುತ್ತಾರೆ. ಆದರೆ ಇದು ತಪ್ಪು. ಅಳೋದು ಸಾಮಾನ್ಯ. ಎಲ್ಲರಿಗೂ ಅಳು ಬರುತ್ತದೆ. ಇದು ದೌರ್ಬಲ್ಯವಲ್ಲ ಎಂಬುದು ಮಕ್ಕಳಿಗೆ ತಿಳಿಯಬೇಕೆಂದ್ರೆ ನೀವು ಅವರ ಮುಂದೆ ಅಳಬೇಕು. ಅಳು ಭಾವನೆಗಳನ್ನು ಹೊರಹಾಕುವ ಒಂದು ಮಾರ್ಗ ಎಂಬುದನ್ನು ನೀವು ಮಗುವಿಗೆ ಅರ್ಥಮಾಡಿಸಬೇಕು. ನಗೋದಿರಲಿ ಇಲ್ಲ ಅಳೋದಿರಲಿ ಭಾವನೆ ವ್ಯಕ್ತಪಡಿಸಲು ವಿಭಿನ್ನ ಮಾರ್ಗವಿದೆ ಎಂಬುದು ಅವರಿಗೆ ತಿಳಿಯುತ್ತದೆ.

ನಿಮ್ಮ ಬೆಂಬಲಕ್ಕೆ ಬರ್ತಾರೆ ಮಕ್ಕಳು : ನಿಮಗೆ ಅಳಲು ಬಂದ್ರೆ ಅದನ್ನು ಮಕ್ಕಳ ಮುಂದೆ ಮರೆಮಾಚಬೇಡಿ. ಅವರ ಮುಂದೆ ಅಳಿ.  ನೀವು ಅಳುವುದನ್ನು ನೋಡಿ ಅವರು ನಿಮ್ಮನ್ನು ಸಮಾಧಾನ ಮಾಡಲು ಬರಬಹುದು. ಇಲ್ಲವೆ ಅವರು ಭಯಪಡಬಹುದು. ಮಕ್ಕಳು ಭಯಪಟ್ಟಾಗ ಅಥವಾ ಅವರೂ ನಿಮ್ಮ ಜೊತೆ ಅತ್ತಾಗ ಅವರನ್ನು ಹಿಡಿದುಕೊಂಡು ನೀವು ಅಳಿ. ಆಗ ಅವರು ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ತಾರೆ.

Relationship Tips: ವಿವಾಹಿತ ಪುರುಷ ಪ್ರೊಪೋಸ್ ಮಾಡ್ತಿದ್ದಾನಾ? ಹೇಗೆ “ನೋ’ ಅನ್ನೋದು?

ಅಳಲು ನಾಚಿಕೆ ಬೇಡ : ಭಾವನೆಗಳನ್ನು ಹೊರಹಾಕಿದಾಗ ಮನಸ್ಸು ಶಾಂತವಾಗುತ್ತದೆ. ಒತ್ತಡ ಕಡಿಮೆಯಾಗುತ್ತದೆ. ಅಳುವುದು ನಾಚಿಕೆಯ ವಿಷ್ಯವಲ್ಲ. ಮಕ್ಕಳ ಮುಂದೆ ಅಳಲು ಎಂದಿಗೂ ನಾಚಿಕೊಳ್ಳಬೇಡಿ. ಅವರು ನಿಮ್ಮದೇ ಮಕ್ಕಳು. ನಿಮ್ಮಿಬ್ಬರ ಸಂಬಂಧಕ್ಕಿಂತ ಗಟ್ಟಿಯಾದ ಸಂಬಂಧ ಬೇರೊಂದಿಲ್ಲ ಎಂಬುದನ್ನು ಮೊದಲು ಅರಿತುಕೊಳ್ಳಿ.

ಮಕ್ಕಳ ಭವಿಷ್ಯಕ್ಕೆ ಇದು ನೆರವಾಗುತ್ತೆ : ದುಃಖದಲ್ಲಿದ್ದಾಗ ಪಾಲಕರು ಅತ್ತಲ್ಲಿ ಮಕ್ಕಳಿಗೆ ಕಷ್ಟ ಎಲ್ಲರಿಗೂ ಬರುವಂತಹದ್ದು ಎಂಬುದು ಅರ್ಥವಾಗುತ್ತದೆ. ಕಷ್ಟವನ್ನು ಹೇಗೆ ಹೊರ ಹಾಕಬಹುದು ಎಂಬುದು ಅವರಿಗೆ ತಿಳಿಯುತ್ತದೆ. ಅವರು ದೊಡ್ಡವರಾದ್ಮೇಲೆ ಅಳು ಬಂದಾಗ ಅದನ್ನು ಮುಚ್ಚಿಡುವ ಪ್ರಯತ್ನಕ್ಕೆ ಹೋಗುವುದಿಲ್ಲ. ಇದು ಅವರ ಆರೋಗ್ಯಕ್ಕೂ ಒಳ್ಳೆಯದು. 

Latest Videos
Follow Us:
Download App:
  • android
  • ios