ದಾಂಪತ್ಯದಲ್ಲಿ ಶಾರೀರಿಕ ಸಂಬಂಧ ಮುಖ್ಯವಾದರೂ, ಸಮಯವೂ ಮುಖ್ಯ. ಆಯುರ್ವೇದ, ಧರ್ಮಗ್ರಂಥಗಳು, ವಿಜ್ಞಾನ, ಜ್ಯೋತಿಷ್ಯ ಹಾಗೂ ತಂತ್ರಶಾಸ್ತ್ರಗಳು ಬೆಳಿಗ್ಗೆ 10  ರಿಂದ ಮಧ್ಯಾಹ್ನ3ರವರೆಗೆ ಸಂಬಂಧ ಬೆಳೆಸದಿರುವುದು ಉತ್ತಮ ಎನ್ನುತ್ತವೆ. ಇದು ಆರೋಗ್ಯ, ಆರ್ಥಿಕತೆ, ಮಾನಸಿಕ ಸ್ಥಿತಿ ಮೇಲೆ ದುಷ್ಪರಿಣಾಮ ಬೀರುತ್ತದೆ. ಬೆಳಗಿನ ಜಾವ ಮತ್ತು ರಾತ್ರಿ 9 ರಿಂದ 11 ಸೂಕ್ತ ಸಮಯ.

ಬ್ಯುಸಿ ಶೆಡ್ಯೂಲ್ ನಲ್ಲಿ ಜನರಿಗೆ ಮನೆ, ಕೆಲಸವನ್ನು ಬ್ಯಾಲೆನ್ಸ್ ಮಾಡೋದು ಕಷ್ಟವಾಗ್ತಿದೆ. ಈಗಿನ ಜನರು ತಮ್ಮ ರಿಲೇಶನ್ ಶಿಪ್ ಟೈಮಿಂಗ್ (Relationship Timing) ಬಗ್ಗೆಯೂ ಹೆಚ್ಚು ಗಂಭೀರವಾಗಿದ್ದಾರೆ. ಸಂಶೋಧನೆ ಹಾಗೂ ಧಾರ್ಮಿಕ ನಂಬಿಕೆಗಳು, ಸಂಬಂಧ, ವ್ಯಕ್ತಿಯ ಮಾನಸಿಕ, ಆರ್ಥಿಕ ಮತ್ತು ಸಾಮಾಜಿಕ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತೆ ಎಂಬುದನ್ನು ವಿವರಿಸಿವೆ. ಶಾರೀರಿಕ ಸಂಬಂಧ ಬೆಳೆಸುವುದು ದಾಂಪತ್ಯದಲ್ಲಿ ಬಹುಮುಖ್ಯ. ಇಬ್ಬರ ಮಧ್ಯೆ ಪ್ರೀತಿ, ಹೊಂದಾಣಿಕೆಯನ್ನು ಇದು ಹೆಚ್ಚಿಸುತ್ತದೆ. ಆದ್ರೆ ಯಾವ ಸಮಯದಲ್ಲಿ ಒಂದಾಗಬೇಕು ಎಂಬ ಸಂಗತಿ ದಂಪತಿಗೆ ಅರಿವಿರಬೇಕು. ದಿನದ ಕೆಲವೊಂದು ಸಮಯ ಸಂಬಂಧ ಬೆಳೆಸಲು ಸೂಕ್ತವಲ್ಲ. ಇದು ಮೂಢ ನಂಬಿಕೆ ಅಲ್ವೇ ಅಲ್ಲ. ವಿಜ್ಞಾನ ಕೂಡ ಕೆಲವೊಂದು ಸಮಯವನ್ನು ಸಂಬಂಧ ಬೆಳೆಸಲು ಸೂಕ್ತವಲ್ಲ ಎಂದಿದೆ. 

ದೈಹಿಕ ಸಂಬಂಧ ಬೆಳೆಸಲು ದಿನದ ಯಾವ ಸಮಯ ಅಶುಭ ? : ಆಯುರ್ವೇದ (Ayurveda)ದ ಪ್ರಕಾರ, ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗಿನ ಸಮಯ ಜೀರ್ಣಕ್ರಿಯೆ, ಮಾನಸಿಕ ಸ್ಪಷ್ಟತೆ ಮತ್ತು ದಕ್ಷತೆಗೆ ಉತ್ತಮವಾಗಿದೆ. ಈ ಅವಧಿಯಲ್ಲಿ ಒಬ್ಬ ವ್ಯಕ್ತಿ ಸಂಬಂಧ ಬೆಳೆಸಿದ್ರೆ ಅದು ದೇಹದ ಶಕ್ತಿ ವ್ಯವಸ್ಥೆಯನ್ನು ಅಸಮತೋಲನಗೊಳಿಸುತ್ತದೆ. ಈ ಸಮಯದಲ್ಲಿ ಸಂಬಂಧ ಬೆಳೆಸುವುದು ದೀರ್ಘಕಾಲದ ಆಯಾಸ, ಆರ್ಥಿಕ ಅಸ್ಥಿರತೆ ಮತ್ತು ಮಾನಸಿಕ ಗೊಂದಲಕ್ಕೆ ಕಾರಣವಾಗುತ್ತೆ ಎಂದು ಯೋಗ ಶಾಸ್ತ್ರ ಹೇಳುತ್ತದೆ.

ಪುರಾಣ, ಗ್ರಂಥಗಳು ಏನು ಹೇಳುತ್ವೆ? : ಪುರಾಣಗಳು ಮತ್ತು ಧಾರ್ಮಿಕ ಗ್ರಂಥಗಳಲ್ಲಿ, ದಿನದ ಕೆಲವು ನಿರ್ದಿಷ್ಟ ಸಮಯಗಳನ್ನು ತಾಮಸಿಕ ಕಾಲ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಸಂಬಂಧ ಬೆಳೆಸುವುದನ್ನು ನಿಷೇಧಿಸಲಾಗಿದೆ. ವಿಶೇಷವಾಗಿ ಸೂರ್ಯ ತನ್ನ ಉತ್ತುಂಗದಲ್ಲಿರುವ ಸಮಯ ಅಂದ್ರೆ ಮಧ್ಯಾಹ್ನ 12 ರಿಂದ 2 ರವರೆಗಿನ ಕಾಲವನ್ನು ಶಕ್ತಿಯ ಹಿಮ್ಮುಖ ಹರಿವು ಎಂದು ಹೇಳಲಾಗುತ್ತದೆ. ಈ ಅವಧಿಯಲ್ಲಿ ಸಂಬಂಧ ಬೆಳೆಸಿದ್ರೆ ಆಧ್ಯಾತ್ಮಿಕ ನಷ್ಟ ಉಂಟಾಗುವುದಲ್ಲದೆ, ಸಂಪತ್ತು ಮತ್ತು ಅದೃಷ್ಟದ ನಷ್ಟವಾಗುತ್ತದೆ ಎಂದು ನಂಬಲಾಗಿದೆ. 

ವಿಜ್ಞಾನಿಗಳು ಏನು ಹೇಳ್ತಾರೆ? :  ಸಂಬಂಧ ಬೆಳೆಸುವ ವೇಳೆ ದೇಹದಲ್ಲಿ ಡೋಪಮೈನ್, ಸಿರೊಟೋನಿನ್ ಮತ್ತು ಟೆಸ್ಟೋಸ್ಟೆರಾನ್ ನಂತಹ ಹಾರ್ಮೋನುಗಳು ಏರುಪೇರಾಗುತ್ತವೆ. ಇತ್ತೀಚಿನ ಸಂಶೋಧನೆಯ ಪ್ರಕಾರ, ದೇಹವು ಒತ್ತಡದಲ್ಲಿದ್ದಾಗ ಅಥವಾ ಆಹಾರವನ್ನು ಜೀರ್ಣಿಸಿಕೊಳ್ಳುತ್ತಿರುವಾಗ ಸಂಬಂಧ ಬೆಳೆಸಿದ್ರೆ ಅದು ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗಬಹುದು ಎನ್ನಲಾಗಿದೆ. ನರ ವೈಜ್ಞಾನಿಕ ಅಧ್ಯಯನ ದಿನದ ತಪ್ಪು ಸಮಯದಲ್ಲಿ ಸಂಬಂಧ ಬೆಳೆಸುವುದು ಮೆದುಳಿನ ಥೀಟಾ ಅಲೆಗಳನ್ನು ಅಡ್ಡಿಪಡಿಸುತ್ತದೆ. ಇದು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ಏಕಾಗ್ರತೆ ಮತ್ತು ಆರ್ಥಿಕ ನಿರ್ಧಾರಗಳ ಮೇಲೆ ನೇರ ಪರಿಣಾಮ ಬೀರುತ್ತದೆ.

ಜ್ಯೋತಿಷ್ಯ ಹೇಳೋದೇನು? : ಜ್ಯೋತಿಷ್ಯದಲ್ಲಿ, ಶುಕ್ರ ಮತ್ತು ಮಂಗಳ ಗ್ರಹಗಳನ್ನು ಲೈಂಗಿಕ ಶಕ್ತಿಯೊಂದಿಗೆ ಸಂಬಂಧ ಹೊಂದಿದೆ ಎಂದು ಪರಿಗಣಿಸಲಾಗುತ್ತದೆ. ದಿನದ ಅಶುಭ ಸಮಯದಲ್ಲಿ ಈ ಗ್ರಹಗಳ ಚಲನೆ ದುರ್ಬಲವಾಗಿದ್ದರೆ ಮತ್ತು ಆ ಸಮಯದಲ್ಲಿ ವ್ಯಕ್ತಿಯು ಸಂಬಂಧ ಬೆಳೆಸಿದ್ರೆ ಜಾತಕದ ಎರಡನೇ ಮತ್ತು ಎಂಟನೇ ಮನೆಗಳ ಮೇಲೆ ಪರಿಣಾಮ ಬೀರುತ್ತದೆ.

ತಂತ್ರ ವಿದ್ಯೆಯಲ್ಲೇನಿದೆ ? : ಶಾರೀರಿಕ ಸಂಬಂಧವನ್ನು ಕೇವಲ ದೈಹಿಕ ಚಟುವಟಿಕೆ ಎಂದು ಪರಿಗಣಿಸಲಾಗುವುದಿಲ್ಲ, ಬದಲಾಗಿ ಅದು ಶಕ್ತಿಯ ಹರಿವು ಎಂದು ನಂಬಲಾಗುತ್ತದೆ. ಈ ಕ್ರಿಯೆ ತಪ್ಪು ಸಮಯದಲ್ಲಾದ್ರೆ ಶಕ್ತಿಯು ವಿರುದ್ಧ ದಿಕ್ಕಿನಲ್ಲಿ ಚಲಿಸಿ ಬಡತನ, ಮಾನಸಿಕ ಖಿನ್ನತೆ ಮತ್ತು ಆರೋಗ್ಯ ಸಮಸ್ಯೆ ಕಾಡುತ್ತದೆ ಎಂದು ನಂಬಲಾಗುತ್ತದೆ. 

ಸಂಬಂಧ ಬೆಳೆಸಲು ಸರಿಯಾದ ಸಮಯ : ತಜ್ಞರ ಪ್ರಕಾರ ಸಂಬಂಧ ಬೆಳೆಸಲು ಬೆಳಗಿನ ಜಾವ 4 ರಿಂದ 6 ಗಂಟೆ ಮತ್ತು ರಾತ್ರಿ 9 ರಿಂದ 11 ಅತ್ಯುತ್ತಮ. ಈ ಸಮಯದಲ್ಲಿ ದೇಹ, ಮನಸ್ಸು ಮತ್ತು ಆತ್ಮದ ಶಕ್ತಿಯು ಸಮತೋಲನದಲ್ಲಿರುತ್ತದೆ.