- Home
- Entertainment
- ನನ್ನ ಮಗ ಹೊಟ್ಟೆಯಲ್ಲಿದ್ದಾಗ, ಗಂಡ ಬೇರೊಬ್ಬಳ ಜೊತೆ ಮಲಗಿದ್ದ.. ಮಾದಕ ನಟಿಯ ಜೀವನವನ್ನೇ ಮಸಣ ಮಾಡಿತ್ತು ಮದುವೆ!
ನನ್ನ ಮಗ ಹೊಟ್ಟೆಯಲ್ಲಿದ್ದಾಗ, ಗಂಡ ಬೇರೊಬ್ಬಳ ಜೊತೆ ಮಲಗಿದ್ದ.. ಮಾದಕ ನಟಿಯ ಜೀವನವನ್ನೇ ಮಸಣ ಮಾಡಿತ್ತು ಮದುವೆ!
ಬಾಲಿವುಡ್ ನಟಿ ಜೀನತ್ ಅಮನ್ ಅವರ ವೈಯಕ್ತಿಕ ಜೀವನವು ಏರಿಳಿತಗಳಿಂದ ಕೂಡಿದೆ. ಮಜರ್ ಖಾನ್ ಅವರೊಂದಿಗಿನ ವಿವಾಹವನ್ನು ತಮ್ಮ ಜೀವನದ ದೊಡ್ಡ ತಪ್ಪು ಎಂದು ಸ್ವತಃ ನಟಿ ಹೇಳಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿರುವ ಜೀನತ್, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ.

ಬಾಲಿವುಡ್ ತಾರೆಯರ ವೈಯಕ್ತಿಕ ಜೀವನದ ಜೊತೆಗೆ ಅವರ ವೃತ್ತಿಪರ ಜೀವನದ ಬಗ್ಗೆಯೂ ಅಭಿಮಾನಿಗಳು ತೀವ್ರ ಆಸಕ್ತಿ ಹೊಂದಿರುತ್ತಾರೆ. ಸಾವಿರಾರು ಪುರುಷರನ್ನು ರಾತ್ರಿಯಿಡೀ ಎಚ್ಚರವಾಗಿರಿಸಿದ್ದ ಮಾದಕ ನಟಿಯ ಜೀವನ ಇನ್ನೂ ಕೂಡ ಚರ್ಚೆಯಲ್ಲಿದೆ. ಸಿನಿಮಾದಲ್ಲಿ ಆಕೆಯ ಮಾದಕತೆಯ ಕಾರಣಕ್ಕಾಗಿ ನೋಡುತ್ತಿದ್ದ ಜನ ಆಕೆಯ ನಿಜ ಜೀವನದಲ್ಲಿ ಆದ ಕಷ್ಟಗಳನ್ನು ನೆನೆದು ಮರುಕಪಟ್ಟಿದ್ದಾರೆ.
ಅವರು ಬೇರೆ ಯಾರೂ ಅಲ್ಲ 'ದಮ್ ಮಾರೋ ದಮ್' ಹುಡುಗಿ ಜೀನತ್ ಅಮನ್. ದಮ್ ಮಾರೋ ದಮ್ ಹಾಡು ಈಗ ಕೇಳಿದ್ರೂ ನೆನಪಾಗೋದು ಜೀನತ್ ಅಮಾನ್ ಲುಕ್. ಸಿನಿಮಾ ರಂಗದಲ್ಲಿ ಇದೊಂದು ಹಾಡಿನ ಮೂಲಕವೇ ಸಂಚಲನ ಮೂಡಿಸಿದ್ದಾಕೆ. ಆದರೆ ಅವರ ವೈಯಕ್ತಿಕ ಜೀವನವು ಏರಿಳಿತಗಳಿಂದ ತುಂಬಿತ್ತು. ವಿಶೇಷವಾಗಿ ಮಜರ್ ಖಾನ್ ಅವರೊಂದಿಗಿನ ವಿವಾಹದ ನಂತರ, ಅವರ ಜೀವನವು ಸಮಸ್ಯೆಗಳಿಂದ ತುಂಬಿತ್ತು. ಈ ವಿವಾಹವು ಅವರ ಜೀವನದ ದೊಡ್ಡ ತಪ್ಪು ಎಂದೇ ಸ್ವತಃ ನಟಿ ಹೇಳಿದ್ದರು.
ಜೀನತ್ ಅಮನ್ ತಮ್ಮ ವೃತ್ತಿಜೀವನದಲ್ಲಿ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ತಮ್ಮ ಪ್ರತಿಯೊಂದು ಪಾತ್ರದ ಮೂಲಕವೂ ಸಂಚಲನ ಮೂಡಿಸಿದ್ದಾರೆ. ನಟಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ. ತಮ್ಮ ಮದುವೆಯ ಬಗ್ಗೆಯೂ ಹಲವು ಬಾರಿ ಮಾತನಾಡಿದ್ದಾರೆ. ತಮ್ಮ ಜೀವನದಲ್ಲಿ ಮಾಡಿದ ದೊಡ್ಡ ತಪ್ಪು ಎಂದರೆ ಮದುವೆ. ಮದುವೆಯಾದ ಕೆಲವೇ ತಿಂಗಳಲ್ಲಿ ನಾನು ಮಾಡಿದ್ದು ತಪ್ಪು ಎನ್ನುವುದು ನನಗೆ ಅರಿವಾಗಿತ್ತು ಎಂದಿದ್ದರು.
ಜೀನತ್ ಅಮನ್ ಮದುವೆಯನ್ನು ದೊಡ್ಡ ತಪ್ಪು ಎಂದು ಪರಿಗಣಿಸುತ್ತಾರೆ. ಅವರು 1985 ರಲ್ಲಿ ಮಜರ್ ಖಾನ್ ಅವರನ್ನು ವಿವಾಹವಾದರು. ಅವರು ತಮ್ಮ ತಾಯಿಯ ಸಲಹೆಗೆ ವಿರುದ್ಧವಾಗಿ ತಮ್ಮ ಜೀವನದ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದರು.
ಜೀನತ್ ಅಮನ್ ಶೀಘ್ರದಲ್ಲೇ 'ದಿ ರಾಯಲ್ಸ್' ಚಿತ್ರದ ಮೂಲಕ ಬೆಳ್ಳಿತೆರೆಗೆ ಮರಳಲಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ, ಅವರು ಇಂದಿನ ಯುವಕರಿಗೂ ಪ್ರೀತಿಪಾತ್ರದ ನಟಿ ಆಗಿದ್ದಾರೆ. ನಟಿ ಆಗಾಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಜೀನತ್ 1985 ರಲ್ಲಿ ಸಿಂಗಾಪುರದಲ್ಲಿ ಮಜರ್ ಖಾನ್ ಅವರನ್ನು ರಹಸ್ಯವಾಗಿ ವಿವಾಹವಾಗಿದ್ದರು.
12 ವರ್ಷಗಳ ಕಾಲ ಸಂಬಂಧದಲ್ಲಿದ್ದ ಜೀನತ್ ಅಮನ್, ನಾನು ಗರ್ಭಿಣಿಯಾಗಿದ್ದ ಸಮಯದಲ್ಲಿ ಪತಿ ಬೇರೊಬ್ಬ ಮಹಿಳೆಯ ಜೊತೆ ಸೆಕ್ಸ್ ಮಾಡುತ್ತಿದ್ದ ಎಂದು ಮ್ಯಾಗಝೀನ್ ಒಂದರ ಸಂದರ್ಶನದಲ್ಲಿ ಮುಕ್ತವಾಗಿ ತಿಳಿಸಿದ್ದರು. ಇದರ ಬಗ್ಗೆ ಹಲವಾರು ಬಾರಿ ಜೀನತ್‌ಗೆ ಪ್ರಶ್ನೆ ಮಾಡಿದಾಗಲೂ ಈ ವಿಚಾರ ನಿಜ ಎಂದೇ ಹೇಳಿದ್ದರು.
ತನ್ನ ಗಂಡನಿಗೆ ವಿವಾಹೇತರ ಸಂಬಂಧವಿದೆ ಎಂದು ತಿಳಿದು ಜೀನತ್ ಆಘಾತಕ್ಕೆ ಒಳಗಾಗಿದ್ದರು. ಮಗ ಹುಟ್ಟಿದ ಬಳಿಕ ಆಕೆ ರಿಲೇಷನ್‌ಷಿಪ್‌ನಿಂದ ಹೊರಬೇಕು ಎಂದು ನಿರ್ಧಾರ ಮಾಡಿದ್ದಳು. ಆದರೆ, ಈ ಹಂತದಲ್ಲಿ ಮಜರ್ ಅನಾರೋಗ್ಯಕ್ಕೆ ಬಿದ್ದಿದ್ದ. ಆದ್ದರಿಂದ ಆಕೆ 12 ವರ್ಷಗಳ ಕಾಲ ಆ ಸಂಬಂಧದಲ್ಲಿಯೇ ಇದ್ದು ತನ್ನ ಪತಿಗಾಗಿ ಹೋರಾಡಬೇಕಾಯಿತು.
ಜೀನತ್ ಅಮನ್ ತಮ್ಮ ವೃತ್ತಿಜೀವನದಲ್ಲಿ ಅನೇಕ ಹಿಟ್ ಮತ್ತು ಬ್ಲಾಕ್‌ಬಸ್ಟರ್‌ಗಳನ್ನು ನೀಡಿದ್ದಾರೆ. 1978 ರಲ್ಲಿ, ಅವರು ಶಶಿ ಕಪೂರ್ ಅವರೊಂದಿಗಿನ ರೋಮ್ಯಾನ್ಸ್ ದೃಶ್ಯಗಳು ಜನರನ್ನು ಬೆಚ್ಚಿಬೀಳಿಸಿದವು. ಅವರು ರಾಜೇಶ್ ಖನ್ನಾ ಮತ್ತು ದೇವ್ ಆನಂದ್ ಅವರೊಂದಿಗೆ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.