Asianet Suvarna News Asianet Suvarna News

ಈ ಸ್ಕೂಲ್‌ನಲ್ಲಿ ಹುಡುಗ-ಹುಡುಗೀರಿಗೆ ಲವ್ವಾಗೋದೆ ಇಲ್ಲ! ಅಲ್ಲಿರೋ ರೂಲ್ಸ್ ಎಂಥದ್ದು ಗೊತ್ತಾ ?

ಹಿಂದಿನ ಕಾಲದಲ್ಲೆಲ್ಲಾ ಕೆಲವೊಬ್ಬರು ಮಕ್ಕಳನ್ನು ಕಾಲೇಜಿಗೆ ಸೇರಿಸುತ್ತಿರಲ್ಲಿಲ್ಲ. ಯಾಕಂದ್ರೆ ಕಾಲೇಜು ಮೆಟ್ಟಿಲು ಹತ್ತಿದ್ರೆ ಮಕ್ಳು ಲವ್ವು, ಮದ್ವೆ ಅಂತ ಹಾಳಾಗ್ತಾರೆ ಅನ್ನೋ ಭಯವಿತ್ತು. ಆದ್ರೆ ಕಾಲ ಬದಲಾದ್ರೂ ಜನರ ಭಯ ಮಾತ್ರ ಹೋಗಿಲ್ಲ. ಇಲ್ಲೊಂದೆಡೆ ಯುಕೆಯ ಶಾಲೆಯಲ್ಲಿ ಹುಡುಗ-ಹುಡುಗೀರು ಪರಸ್ಪರ ಶೇಕ್ ಹ್ಯಾಂಡ್ ಕೊಡೋ ಹಾಗಿಲ್ಲ. ಹಗ್ ಕೂಡಾ ಮಾಡ್ಬಾರ್ದು.

School bans pupils from all forms of physical contact, even hugs and handshakes Vin
Author
First Published Jan 13, 2023, 10:11 AM IST

ಪ್ರೀತಿಯೆಂಬುದು ಒಂದು ಸುಂದರವಾದ ಭಾವನೆ. ಒಬ್ಬ ವ್ಯಕ್ತಿಯ ಮೇಲೆ ಸ್ನೇಹವಾಗಿ, ಪ್ರೀತಿ ಮೂಡಿ ದಾಂಪತ್ಯ ಜೀವನ ನಡೆಸುತ್ತಾರೆ. ಆದರೆ ಇವತ್ತಿನ ಕಾಲದಲ್ಲಿ ಎಲ್ಲಾ ಪ್ರೀತಿಯೂ ಹ್ಯಾಪಿ ಎಂಡಿಂಗ್ ಆಗಿರುವುದಿಲ್ಲ. ಪ್ರೀತಿ ಮದುವೆಯಲ್ಲೇ ಮುಕ್ತಾಯವಾಗಲಿ ಎಂದು ಎಲ್ಲರೂ ಬಯಸುವುದೂ ಇಲ್ಲ. ಹಾಗೇ ಸುಮ್ನೆ ಪ್ರೀತಿ ಮಾಡೋರು, ಟೈ ಪಾಸ್‌ಗೆ ಲವ್ ಮಾಡೋರ ಸಂಖ್ಯೆ ಈಗ ಹೆಚ್ಚಾಗಿದೆ. ಹೀಗಾಗಿಯೇ ಕಾಲೇಜು, ಪಾರ್ಕ್‌ಗಳಲ್ಲಿ ದಂಡು, ದಂಡು ಪ್ರೇಮಿಗಳು ಸಿಗುತ್ತಾರೆ. ಆದರೆ ಇದರಲ್ಲಿ ಹೆಚ್ಚಿನವರು ಮದುವೆಯಾಗುವ ಉದ್ದೇಶವನ್ನು ಹೊಂದಿರುವುದಿಲ್ಲ. ಬದಲಿಗೆ ಸಾಧ್ಯವಾದಷ್ಟು ದಿನ ಸುತ್ತಾಡಿ, ಸಂಬಂಧ ಬೆಳೆಸಿಕೊಂಡು ದೂರವಾಗಿ ಬಿಡುತ್ತಾರೆ. 

ವಿಚಿತ್ರವಾದ ರೂಲ್ಸ್ ಜಾರಿ ಮಾಡಿದ ಯುಕೆ ಸ್ಕೂಲ್‌
ಇವತ್ತಿನ ಕಾಲದಲ್ಲಿ ಸಂಬಂಧಗಳು (Relationship) ಶುರುವಾಗೋದು ಬೇಗ. ಜೊತೆಗೆ ಕೊನೆಯಾಗೋದು ಸಹ ಬೇಗನೇ. ಪ್ರೀತಿ (Love)ಯೆಂಬ ವಿಷಯಕ್ಕೆ ಬಂದಾಗ ಮಾನಸಿಕ (Mental) ಸಂಬಂಧಕ್ಕಿಂತ ದೈಹಿಕ (Physical) ಸಂಬಂಧಕ್ಕೇ ಹೆಚ್ಚು ಮಹತ್ವ ನೀಡುತ್ತಾರೆ. ಶಾಲೆ-ಕಾಲೇಜುಗಳಲ್ಲಿಯೂ ಹೆಚ್ಚು ಯುವಕ-ಯುವತಿಯರು ಸಂಬಂಧ ಇಟ್ಟುಕೊಳ್ಳುತ್ತಾರೆ. ಹೀಗಾಗಿಯೇ ಖಿನ್ನತೆ, ಆತ್ಮಹತ್ಯೆ (Suicide), ಬೆದರಿಕೆ ಮೊದಲಾದ ಸಮಸ್ಯೆಗಳು ಕಾಲೇಜು ಮಕ್ಕಳಲ್ಲಿ ಸಾಮಾನ್ಯವಾಗಿದೆ. ಹೀಗಾಗಿ ಹಳ್ಳಿಗಳಲ್ಲಿ ಇವತ್ತಿಗೂ ಅದೆಷ್ಟೋ ಮಂದಿ ಮಕ್ಕಳನ್ನು ಕಾಲೇಜಿಗೆ ಸೇರಿಸಲು ಹಿಂಜರಿಯುತ್ತಾರೆ. ಹೀಗಿರುವಾಗ ಇಂಗ್ಲೆಂಡ್‌ನ ಸ್ಕೂಲ್‌ವೊಂದು ಶಾಲಾ ಮಕ್ಕಳಿಗಾಗಿ ವಿಚಿತ್ರವಾದ ಹೊಸ ರೂಲ್ಸ್ ಜಾರಿ ಮಾಡಿದೆ.

ಗಂಡ ಬೇಡ, ಅವ್ನೇ ಸಾಕು..ಹನಿಮೂನ್ ವೇಳೆ ಪ್ರಿಯಕರನ ಜೊತೆ ಓಡಿ ಹೋದ ಹೆಂಡ್ತಿ!

ಹುಡುಗ-ಹುಡುಗೀರು ಹಗ್‌, ಶೇಕ್‌ ಹ್ಯಾಂಡ್ ಮಾಡೋ ಹಾಗಿಲ್ಲ
ಸಂಬಂಧಗಳನ್ನು ತಡೆಗಟ್ಟಲು ಶಾಲೆಯು ವಿದ್ಯಾರ್ಥಿಗಳನ್ನು ಎಲ್ಲಾ ರೀತಿಯ ದೈಹಿಕ ಸಂಪರ್ಕದಿಂದ ನಿಷೇಧಿಸುತ್ತದೆ. ಹುಡುಗ-ಹುಡುಗಿಯರು ಅಪ್ಪುಗೆಗಳು ಮತ್ತು ಹ್ಯಾಂಡ್‌ಶೇಕ್‌ಗಳು ಸಹ ಮಾಡುವಂತಿಲ್ಲ. ಚೆಲ್ಮ್ಸ್‌ಫೋರ್ಡ್‌ನಲ್ಲಿರುವ ಹೈಲ್ಯಾಂಡ್ಸ್ ಶಾಲೆಯ ವಿದ್ಯಾರ್ಥಿಗಳು ಒಬ್ಬರನ್ನೊಬ್ಬರು ತಬ್ಬಿಕೊಳ್ಳಲು, ಕೈ ಹಿಡಿಯಲು ಅಥವಾ ಕೈಕುಲುಕಲು ಸಹ ಅನುಮತಿಸುವುದಿಲ್ಲ. ಡೈಲಿ ಮೇಲ್ ವರದಿಯ ಪ್ರಕಾರ, ವಿದ್ಯಾರ್ಥಿಗಳ ನಡುವಿನ ಎಲ್ಲಾ ರೀತಿಯ ದೈಹಿಕ ಸಂಪರ್ಕಗಳನ್ನು ಭೇದಿಸುವುದಾಗಿ ಪೋಷಕರಿಗೆ ತಿಳಿಸುವ ಪತ್ರವನ್ನು ಆಡಳಿತವು ಕಳುಹಿಸಿದ ನಂತರ ಈ ರೀತಿಯ ಕ್ರಮವನ್ನು ಜಾರಿಗೊಳಿಸಲಾಗಿದೆ.

ಪೋಷಕರಿಗೆ ಕಳುಹಿಸಿದ ಪತ್ರದಲ್ಲಿ ಈ ರೀತಿ ಹೇಳಲಾಗಿದೆ. 'ಇದು ನಿಮ್ಮ ಮಗುವನ್ನು ಸುರಕ್ಷಿತವಾಗಿರಿಸಲು ತೆಗೆದುಕೊಳ್ಳುತ್ತಿರುವ ಕ್ರಮವಾಗಿದೆ. ನಿಮ್ಮ ಮಗು ಬೇರೆಯವರನ್ನು ಸ್ಪರ್ಶಿಸುತ್ತಿದ್ದರೆ, ಅವರು ಒಪ್ಪಿಗೆ ಇರಲಿ ಅಥವಾ ಇಲ್ಲದಿರಲಿ, ಏನು ಬೇಕಾದರೂ ಆಗಬಹುದು. ಇದು ಗಾಯಕ್ಕೆ ಕಾರಣವಾಗಬಹುದು, ಯಾರಾದರೂ ತುಂಬಾ ಅನಾನುಕೂಲತೆಯನ್ನು ಅನುಭವಿಸಬಹುದು ಅಥವಾ ಯಾರನ್ನಾದರೂ ಅನುಚಿತವಾಗಿ ಸ್ಪರ್ಶಿಸಬಹುದು'. ಹೀಗಾಗಿ ಈ ನಿಯಮ ನಿಮ್ಮ ಮಗುವನ್ನು ಸುರಕ್ಷಿತಗೊಳಿಸುವ ಪ್ರಯತ್ನವಾಗಿದೆ ಎನ್ನಲಾಗಿದೆ.

ರಾತ್ರಿ 8 ಗಂಟೆಗೆ ಮಾರುಕಟ್ಟೆ ಮುಚ್ಚೋ ದೇಶದಲ್ಲಿ ಮಕ್ಕಳ ಜನನ ಕಡಿಮೆಯಂತೆ!

ಹೊಸ ನಿಯಮಗಳು ಕ್ಯಾಂಪಸ್‌ನಲ್ಲಿ ಮೊಬೈಲ್ ಫೋನ್‌ಗಳ ಬಳಕೆಯನ್ನು ನಿರ್ಬಂಧಿಸುತ್ತವೆ. ವಿದ್ಯಾರ್ಥಿಯೊಬ್ಬ ಫೋನ್ ಬಳಸಿ ಸಿಕ್ಕಿಬಿದ್ದರೆ, ಅದನ್ನು ಒಂದು ದಿನದ ಮಟ್ಟಿಗೆ ಸುರಕ್ಷಿತವಾಗಿ ಲಾಕ್ ಮಾಡಲಾಗುತ್ತದೆ. ಕೆಲ ಪೋಷಕರು ಶಾಲೆಯ ಹೊಸ ನಿಯಮಕ್ಕೆ (Rules) ಮೆಚ್ಚುಗೆ ಸೂಚಿಸಿದರೆ, ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದರು. ಒಬ್ಬ ಪೋಷಕರು (Parents), 'ನನಗೆ ಇಂಥಾ ನಿಯಮ ಜಾರಿಗೆ ತಂದಿದ್ದಾರೆ ಎಂಬುದನ್ನು ನಂಬಲಾಗಲಿಲ್ಲ. ಅನುಚಿತ ಸ್ಪರ್ಶ, ಹೊಡೆಯುವುದು ಮತ್ತು ಗುದ್ದುವುದರ ವಿರುದ್ಧ ಖಂಡಿತವಾಗಿ ವ್ಯವಹರಿಸಬೇಕು ಎಂದು ನಾನು ಒಪ್ಪುತ್ತೇನೆ. ಆದರೆ ಅವರು ಆರೋಗ್ಯಕರ ಸಂಬಂಧವನ್ನು ಹೇಗೆ ಹೊಂದಬೇಕೆಂದು ವಿದ್ಯಾರ್ಥಿಗಳಿಗೆ ಕಲಿಸುತ್ತಿಲ್ಲ'  ಎಂದು ಪೋಷಕರು ಹೇಳಿದರು. ಅದೇನೆ ಇರ್ಲಿ, ಶಾಲೆಯಲ್ಲಿ ಜಾರಿ ಮಾಡಿರುವ ಈ ರೂಲ್ಸ್ ಹಲವು ಟೀಕೆಗೆ ಗುರಿಯಾಗಿರೋದಂತೂ ನಿಜ. 

Follow Us:
Download App:
  • android
  • ios