ಪೋರ್ನ್ ವಿಡಿಯೋ ಹೆಚ್ಚು ನೋಡಿದ್ರೆ ಏನಾಗುತ್ತೆ? ಸದ್ಗುರು ಹೇಳ್ತಾರೆ ಕೇಳಿ
ಪೋರ್ನ್ ವಿಡಿಯೋ ಹೆಚ್ಚು ನೋಡಿದರೆ ಅದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ ಸದ್ಗುರು ಜಗ್ಗಿ ವಾಸುದೇವ್.
ಚಿಕ್ಕವರಿರುವಾಗ ಹುಡುಗರು ಹುಡುಗಿಯರನ್ನು ಅಥವಾ ಹುಡುಗಿಯರು ಹುಡುಗರನ್ನು ನೋಡಿದರೆ ಅಲ್ಲಿ ಯಾವುದೇ ಭಾವನೆ ಉಂಟಾಗುವುದಿಲ್ಲ. ಆದರೆ 14-15 ವರ್ಷ ವಯಸ್ಸಾಗುತ್ತಿದ್ದಂತೆಯೇ ಹಾರ್ಮೋನ್ (harmon) ಬದಲಾವಣೆಯಿಂದ ಆಕರ್ಷಣೆ ತಂತಾನೇ ಶುರುವಾಗುತ್ತದೆ. ಇಡೀ ವಿಶ್ವವೇ ಬೇರೆಯ ರೀತಿ ಕಾಣಿಸತೊಡಗುತ್ತದೆ. ಹುಚ್ಚು ಕೋಳಿ ಮನಸ್ಸು ಅದು 16ರ ವಯಸ್ಸು ಎಂಬ ಹಾಡಿಲ್ಲವೆ? ಇದು ಅದೇ ರೀತಿ. ವಯಸ್ಸಿಗೆ ಬಂದಾಗ ಮನಸ್ಸು ಹುಚ್ಚು ಹುಚ್ಚಾಗಿ ಕಾಣಿಸಲು ಶುರು ಮಾಡುತ್ತದೆ. ದಾರಿ ತಪ್ಪುವುದು ಕೂಡ ಇದೇ ಸಮಯದಲ್ಲಿ. ಇಂಥ ಸಮಯದಲ್ಲಿ ಮನಸ್ಸು ಹೇಗೆ ವರ್ತಿಸುತ್ತದೆ? ಏನನ್ನು ನೋಡಲು ಈ ಹುಚ್ಚು ಮನಸ್ಸು ಬಯಸುತ್ತದೆ? ಮಿತಿ ಮೀರಿದರೆ ಅಪಾಯ ಹೇಗೆ ತಂತಾನೇ ಸುತ್ತುವರಿಯುತ್ತದೆ ಎಂಬ ಬಗ್ಗೆ ಸದ್ಗುರು ಜಗ್ಗಿ ವಾಸುದೇವ್ ಅವರು ಮಾತನಾಡಿದ್ದಾರೆ. ಅವರು ಹೇಳಿದ್ದೇನು?
ಕೆಲವು ಹೆಂಗಸರು ತನ್ನ ಪತಿಗೆ ಅತಿಯಾದ ಲೈಂಗಿಕಾಸಕ್ತಿ (Sexuality), ಇದರಿಂದ ನನಗೆ ಜೀವನವೇ ಸಾಕಾಗಿದೆ ಎಂದರೆ, ಇನ್ನು ಕೆಲವು ಹೆಂಗಸರು ತಮ್ಮ ಪತಿಗೆ ಸೆಕ್ಸ್ನಲ್ಲಿ ಆಸಕ್ತಿಯೇ ಇಲ್ಲ, ಮಂಚಕ್ಕೆ ಬಂದಾಗ ನಿದ್ದೆ ಹೋಗುತ್ತಾರೆ, ಇಂಥ ಪತಿಯ ಜೊತೆ ಹೇಗೆ ಬದುಕುವುದು ಎಂದು ದೂರುತ್ತಾರೆ. ಅಸಲಿಗೆ ಇದು ಯಾರ ತಪ್ಪೂ ಅಲ್ಲ. ಏಕೆಂದರೆ ಯಾರನ್ನೂ ಯಾವುದೇ ಕಾರಣಕ್ಕೂ ಅವರ ಇಷ್ಟದಂತೆ ಸಂಪೂರ್ಣವಾಗಿ ತೃಪ್ತಿ ಪಡಿಸುವುದು ಯಾರಿಂದಲೂ ಸಾಧ್ಯವಾಗದ ಮಾತು. 100 % ಎನ್ನುವುದು ಇಲ್ಲಿ ಸಾಧ್ಯವೇ ಇಲ್ಲ. ಸೆಕ್ಸ್ ಎನ್ನುವುದು ಕೂಡ ಕಡ್ಡಾಯ ಎನ್ನುವ ಮನೋಭಾವ ಇದ್ದ ಸಂದರ್ಭದಲ್ಲಿ, ದಂಪತಿ ನಡುವೆ ಸಾಮರಸ್ಯ ಇಲ್ಲದಿದ್ದರೆ ಅದು ಕಡ್ಡಾಯವಾಗಿ ಉಳಿಯುತ್ತದೆಯೇ ವಿನಾ ಸಮಾಧಾನ ಎನ್ನುವುದು ಇರುವುದಿಲ್ಲ ಎಂದಿದ್ದಾರೆ. ನಿಜ ಜೀವನದಲ್ಲಿ ಸೆಕ್ಸ್ ಎನ್ನುವುದು ಪೋರ್ನ್ ವಿಡಿಯೋದಲ್ಲಿ ನೋಡಿದಂತೆ ಎನ್ನುವ ಕಲ್ಪನೆಯಿಂದ ಹೊರಕ್ಕೆ ಬರಬೇಕು ಎಂದರು ಸದ್ಗುರು.
Women Health : ಮುಟ್ಟು ನಿಂತ್ಮೆಲೂ ಹೆಣ್ಣಿಗೆ ಲೈಂಗಿಕಾಸಕ್ತಿ ಇರೋದು ಮಾತ್ರವಲ್ಲ, ಹೆಚ್ಚಾಗುತ್ತೆ!
ಹದಿಹರೆಯಕ್ಕೆ ಬಂದಾಗ ಯುವಕರು ಯಾರನ್ನೋ ನೋಡಿದರೆ, ಆಕೆ ನನಗಾಗಿಯೇ ಧರೆಗಿಳಿದು ಬಂದವಳು ಎನ್ನಿಸಲು ಶುರುವಾಗುತ್ತದೆ. ಆಕೆಯನ್ನು ಒಲಿಸಿಕೊಳ್ಳುವುದು ಹೇಗೆ ಎನ್ನುವ ಯೋಚನೆ ಬಂದಾಗ ಮನಸ್ಸಿನಲ್ಲಿ ಲೈಂಗಿಕಾಸಕ್ತಿ ತಂತಾನೇ ಮೂಡುತ್ತದೆ. ಆಗ ಮನಸ್ಸಿಗೆ ಬರುವುದೇ ಪೋರ್ನ್ ವಿಡಿಯೋ ನೋಡುವ ಬಯಕೆ. ಈಗ ಸುಲಭದಲ್ಲಿ ಎಲ್ಲವೂ ನೋಡಲು ಸಿಗುವ ಕಾರಣ, ಪೋರ್ನ್ ವಿಡಿಯೋ ನೋಡುತ್ತಾನೆ. ಆ ಕ್ಷಣದಲ್ಲಿ ಆತನ ಮನಸ್ಸಿನಲ್ಲಿ ಮೂಡುವುದು ಎಲ್ಲಾ ಹುಡುಗಿಯರೂ ಇದನ್ನೇ ಬಯಸುತ್ತಾರೆ ಎನ್ನುವ ತಪ್ಪು ಕಲ್ಪನೆ. ಆ ಕಲ್ಪನೆಯೊಳಗೇ ಆತ ಮುಳುಗಿ ಹೋಗುತ್ತಾನೆ. ಯಾವುದೋ ಹೆಣ್ಣಿನ ದೇಹಕ್ಕೆ ಆತನ ಮನಸ್ಸು ಬಯಸುತ್ತದೆ. ಅದರ ಪರಿಧಿಯಿಂದ ಹೊರಕ್ಕೆ ಬರುವುದು ಆತನಿಗೆ ಕಷ್ಟವಾಗುತ್ತಾ ಹೋಗುತ್ತದೆ. ನೀನು ಮಾಡುತ್ತಿರುವುದು ಸರಿಯಲ್ಲ ಎಂದು ಯಾರು ಏನೇ ಹೇಳಿದರೂ ಅದರಿಂದ ಹೊರಕ್ಕೆ ಮನಸ್ಸು ಬರಲಾರದೇ ತೊಳಲಾಡುತ್ತದೆ ಆ ಜೀವ.
ಸೆಕ್ಸ್ ಎನ್ನುವುದು ಎರಡು ದೇಹಗಳ ಮಧ್ಯೆ ನಡೆಯುವ ಪ್ರಕ್ರಿಯೆಯಾದರೂ, ಪೋರ್ನ್ ವಿಡಿಯೋ ನೋಡುವ ಯುವಕನ ತಲೆಯೊಳಕ್ಕೆ ಅದು ಹೊಕ್ಕಿಬಿಟ್ಟು ಅದು ಪೆಡಂಭೂತವಾಗಿ ಬೆಳೆಯಲು ಶುರುವಾಗುತ್ತದೆ. ಇಂಥ ಸಮಯದಲ್ಲಿ ಯಾರದ್ದೇ ಸಲಹೆ-ಸೂಚನೆಗಳು ಅವರ ತಲೆಗೆ ಹೋಗುವುದಿಲ್ಲ ಎಂದಿದ್ದಾರೆ ಸದ್ಗುರು. ಇದೇ ಸಂದರ್ಭದಲ್ಲಿ ಸೆಕ್ಸ್ ಕುರಿತು ಹೇಳಿರುವ ಸದ್ಗುರು ಅವರು, ಕೆಲವರಿಗೆ ಸೆಕ್ಸ್ ಎನ್ನುವುದು ಕೇವಲ ಸಂತೋಷ, ತೃಪ್ತಿ ಮಾತ್ರ. ಕೆಲವರಿಗೆ ಸಂಬಂಧವನ್ನು ಉಳಿಸಿಕೊಂಡು ಹೋಗುವ ದಾರಿ, ಒಂದು ವೇಳೆ ಸೆಕ್ಸ್ ಇಲ್ಲವೆಂದರೆ ತಮ್ಮ ಸಂಬಂಧ ಬಹುಕಾಲ ಉಳಿಯುವುದಿಲ್ಲ ಎಂಬ ಭಾವನೆ ಬರುತ್ತದೆ. ಆದರೆ ಇದು ಸರಿಯಲ್ಲ. ಸುಂದರ ಸಂಬಂಧವೆಂದರೆ ಅದು ಕೇವಲ ಲೈಂಗಿಕ ಸಂಬಂಧವಲ್ಲ. ಆದರೆ ಹೆಚ್ಚಿನವರು ಗಂಡು-ಹೆಣ್ಣಿನ ಸಂಬಂಧ ಎಂದಾಕ್ಷಣ ಅದು ಸೆಕ್ಸ್ ರೂಪದಲ್ಲಿಯೇ ಇರಬೇಕು ಎಂದುಕೊಳ್ಳುತ್ತಾರೆ. ಆದರೆ ಅವುಗಳಿಗಿಂತಲೂ ಮಿಗಿಲಾದ ಸಂಬಂಧವಿದೆ. ಅದು ಗುರು-ಶಿಷ್ಯರ ಸಂಬಂಧವಾಗಿರಬಹುದು ಅಥವಾ ಸ್ನೇಹಿತರ ಸಂಬಂಧವೇ ಆಗಿರಬಹುದು. ಪ್ರಾಣಿ-ಮನುಷ್ಯದ ಸಂಬಂಧವೇ ಆಗಿರಬಹುದು. ಆದ್ದರಿಂದ ಉತ್ತಮ ಸಂಬಂಧ ಎಂದ ಮಾತ್ರಕ್ಕೆ ದೈಹಿಕ ಸಂಬಂಧ ಎನ್ನುವ ಪರಿಕಲ್ಪನೆಯಿಂದ ಹೊರಕ್ಕೆ ಬರಬೇಕು ಎನ್ನುತ್ತಾರೆ ಸದ್ಗುರು ಜಗ್ಗಿ ವಾಸುದೇವ. (Sadguru)
ಪುರುಷರ ಗರ್ಭ ನಿರೋಧಕ ಮಾತ್ರೆ ಹೆಚ್ಚು ಪರಿಣಾಮಕಾರಿ, ಆದ್ರೆ ಇದರ ಸೇವನೆಗೆ ಹಿಂದೇಟು ಹಾಕೋದ್ಯಾಕೆ?
ಆದರೆ ಇಂದಿನ ದಿನಗಳಲ್ಲಿ ಸಂಬಂಧ ಎನ್ನುವುದು ದೈಹಿಕ ಸಂಬಂಧಕ್ಕೆ ಸೀಮಿತವಾಗಿಬಿಟ್ಟಿದೆ. ಆದರೆ ಇವೆಲ್ಲವುಗಳಿಂದ ಹೊರಬರಬೇಕಾದರೆ ಯೋಗ ಸಹಕಾರಿಯಾಗಿದೆ. ಕೆಲವೊಂದು ಯೋಗಾಸನಗಳಿಂದ ಇಂಥ ಲೈಂಗಿಕಾಸಕ್ತಿಯಿಂದ ಬಿಡುಗಡೆ ಹೊಂದಬಹುದಾಗಿದೆ ಎನ್ನುತ್ತಾರೆ ಸದ್ಗುರು.