ಪುರುಷರ ಗರ್ಭ ನಿರೋಧಕ ಮಾತ್ರೆ ಹೆಚ್ಚು ಪರಿಣಾಮಕಾರಿ, ಆದ್ರೆ ಇದರ ಸೇವನೆಗೆ ಹಿಂದೇಟು ಹಾಕೋದ್ಯಾಕೆ?

ಗಂಡಸರಿಗೂ ಗರ್ಭ ನಿರೋಧಕ ಮಾತ್ರೆಗಳಿವೆ ಅನ್ನೋದು ಹೆಚ್ಚಿನವರಿಗೆ ಗೊತ್ತಿಲ್ಲ. ಒಂದಿಷ್ಟು ಜನರಿಗೆ ಗೊತ್ತಿದ್ದರೂ ತಗೊಳ್ಳೋದಕ್ಕೆ ಹಿಂದೇಟು ಹಾಕ್ತಾರೆ, ಯಾಕೆ ಗೊತ್ತಾ?

Side effects of male contraceptive pills men adament to use it bni

ನಮ್ಮಲ್ಲಿ ಕೆಲವು ಗಂಡಸರಿದ್ದಾರೆ. ಅವರಿಗೆ ಜವಾಬ್ದಾರಿ ತಗೊಳ್ಳೋದು ಅಂದರೆ ತಲೆನೋವು. ಸಣ್ಣ ಪುಟ್ಟ ವಿಚಾರಗಳಲ್ಲಾದರೆ ಓಕೆ. ಆದರೆ ಮಕ್ಕಳ ವಿಚಾರ, ಗರ್ಭ ನಿರೋಧಕ ವಿಚಾರಗಳಲ್ಲಿ ಅವರು ದೂರ ಓಡೋದೇ ಹೆಚ್ಚು. ಪರಿಣಾಮ ಎಲ್ಲ ಜವಾಬ್ದಾರಿಯೂ ಹೆಣ್ಮಕ್ಕಳ ಮೇಲೇ ಬಿದ್ದು ಕೆಲವೇ ವರ್ಷಗಳಲ್ಲಿ ಅವರಿಗೆ ಜೀವನದಲ್ಲೇ ಜಿಗುಪ್ಸೆ ಬರೋದಕ್ಕೆ ಶುರುವಾಗುತ್ತೆ. ಯಂತ್ರಗಳ ಹಾಗೆಯೋ, ಗಾಣದೆತ್ತಿನ ಹಾಗೆಯೋ ಅವರು ದುಡಿಯುತ್ತಲೇ ಇರುತ್ತಾರೆ. ಮದುವೆಯಾಗುವ ಹೊತ್ತಿಗೆ ಸೌಮ್ಯವಾಗಿದ್ದ ಹುಡುಗಿ ಮದುವೆಯಾದ ಕೆಲವು ವರ್ಷಗಳಿಗೆ ಕಠೋರವಾಗಿ ವರ್ತಿಸೋದಕ್ಕೆ ಕಾರಣ ಗಂಡನ ಬೇಜವಾಬ್ದಾರಿ ವರ್ತನೆ ಅಂತ ಕೆಲವು ಅಧ್ಯಯನಗಳಿಂದ ಸಾಬೀತಾಗಿದೆ. ಇಷ್ಟೆಲ್ಲ ಪೀಠಿಕೆ ಹಾಕಲೂ ಕಾರಣವಿದೆ. ಅದು ಗರ್ಭ ನಿರೋಧಕ ಮಾತ್ರೆಗಳದು.

ಅನಗತ್ಯ ಗರ್ಭಧಾರಣೆಯನ್ನು ತಡೆಯಲು ಮಹಿಳೆಯರು ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುವುದು ಎಲ್ಲರಿಗೂ ಗೊತ್ತೇ ಇದೆ. ಮಹಿಳೆಯರಿಗೆ ಹೇಗೆ ಗರ್ಭನಿರೋಧಕ ಮಾತ್ರೆಗಳಿವೆಯೋ ಹಾಗೆಯೇ ಪುರುಷರಿಗೂ ಗರ್ಭನಿರೋಧಕ ಮಾತ್ರೆಗಳಿವೆ ಅನ್ನೋ ಸಂಗತಿಯೇ ಹಲವರಿಗೆ ಗೊತ್ತಿಲ್ಲ. ಈ ಮಾತ್ರೆಗಳು ಅಂಡೋತ್ಪತ್ತಿಯನ್ನು ತಡೆಯುವ ಸ್ತ್ರೀ ಗರ್ಭನಿರೋಧಕ ಮಾತ್ರೆಗಳಂತೆಯೇ ವೀರ್ಯದ ಉತ್ಪಾದನೆ ಅಥವಾ ಬಿಡುಗಡೆಯನ್ನು ಪ್ರತಿಬಂಧಿಸುವ ಮೂಲಕ ಅನಗತ್ಯ ಗರ್ಭಧಾರಣೆಯನ್ನು ತಡೆಯುವ ಗುರಿಯನ್ನು ಹೊಂದಿವೆ. ಪುರುಷ ಗರ್ಭ ನಿರೋಧಕಗಳಲ್ಲಿ ಹಲವಾರು ಬಗೆಯ ಟ್ಯಾಬ್ಲೆಟ್ಸ್ ಲಭ್ಯವಿವೆ. ಆದರೆ ಇವುಗಳಲ್ಲಿ ಹೆಚ್ಚು ಪರಿಣಾಮಕಾರಿ ಅಂತ ಡಾಕ್ಟರ್ ಹೇಳೋದು ಹಾರ್ಮೋನ್ ಆಧಾರಿತ ಮಾತ್ರೆ, ಇದು ಟೆಸ್ಟೋಸ್ಟೆರಾನ್ ಉತ್ಪಾದನೆಯನ್ನು ಪ್ರತಿಬಂಧಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ, ಇದು ವೀರ್ಯ ಉತ್ಪಾದನೆಯನ್ನು ನಿಲ್ಲಿಸುತ್ತದೆ. ಪುರುಷ ಗರ್ಭನಿರೋಧಕ ಮಾತ್ರೆಗಳ ವಿಚಾರದಲ್ಲಿ ಪರಿಣಾಮಕಾರಿತ್ವವು ಪರಿಗಣಿಸಬೇಕಾದ ಮತ್ತೊಂದು ಪ್ರಮುಖ ಅಂಶವಾಗಿದೆ. ಹಾರ್ಮೋನ್-ಆಧಾರಿತ ಪುರುಷ ಗರ್ಭನಿರೋಧಕ ಮಾತ್ರೆಗಳ ಕ್ಲಿನಿಕಲ್ ಪ್ರಯೋಗಗಳು ಉತ್ತಮ ಫಲಿತಾಂಶಗಳನ್ನು ತೋರಿಸಿವೆ. ಗರ್ಭಧಾರಣೆಯನ್ನು ತಡೆಗಟ್ಟುವಲ್ಲಿ 96% ಪರಿಣಾಮಕಾರಿ ಎಂದು ಈ ಸಂಶೋಧನೆಗಳು ಸಾಬೀತು ಮಾಡಿವೆ.

Personality Tips: ಸ್ಮಾರ್ಟ್ ಜನರಿಗೆ ಕೆಲವೇ ಸ್ನೇಹಿತರು ಅದ್ಯಾಕೆ ಹಾಗೆ?

ಇಷ್ಟಾದರೂ ಈ ಮಾತ್ರೆಗಳ ಸೇವನೆಯ ಪ್ರಮಾಣದಲ್ಲಿ ಗಣನೀಯ ಇಳಿಕೆ ಇದೆ. ಇದಕ್ಕೆ ಮೇಲೆ ಹೇಳಿದಂತೆ ಗಂಡಸರ ಬೇಜವಾಬ್ದಾರಿತನವೇ ಕಾರಣವಾ ಅಂದರೆ ಅದಕ್ಕೂ ಮೀರಿದ ಕಾರಣಗಳಿವೆ ಅನ್ನಬಹುದು. ಅದು ಸೈಡ್‌ ಎಫೆಕ್ಟ್‌.

ಪುರುಷ ಗರ್ಭನಿರೋಧಕ ಮಾತ್ರೆಗಳಲ್ಲಿ ಅಡ್ಡ ಪರಿಣಾಮಗಳ (side effects) ಅಪಾಯವಾಗಿದೆ. ಯಾವುದೇ ಔಷಧಿಗಳಂತೆ ಇದರಲ್ಲೂ ಪ್ರತಿಕೂಲ ಪ್ರತಿಕ್ರಿಯೆಗಳ ಅಪಾಯವಿದೆ ಎಂದು ಡಾಕ್ಟರ್ಸ್ ಹೇಳುತ್ತಾರೆ. ಕಾಮಾಸಕ್ತಿಯಲ್ಲಿ ವ್ಯತ್ಯಯ, ಮನಸ್ಥಿತಿ ಬದಲಾವಣೆಗಳು, ಮೊಡವೆಗಳು, ತೂಕ ಹೆಚ್ಚಾಗುವುದು ಮತ್ತು ಸ್ನಾಯು ಬಳಲಿಕೆ ಇತ್ಯಾದಿ. ಆದರೆ ಪ್ರತಿಯೊಬ್ಬರೂ ಅಡ್ಡಪರಿಣಾಮಗಳನ್ನು ಅನುಭವಿಸುವುದಿಲ್ಲ ಮತ್ತು ಅಡ್ಡಪರಿಣಾಮಗಳ ತೀವ್ರತೆಯು ವ್ಯಕ್ತಿಗಳಿಂದ ವ್ಯಕ್ತಿಗೆ ಬದಲಾಗುತ್ತದೆ ಎಂಬುದೂ ನಿಜ. ಇನ್ನೊಂದು ಮುಖ್ಯವಾದ ಅಂಶ ಅಂದರೆ ಪುರುಷ ಗರ್ಭನಿರೋಧಕ ಮಾತ್ರೆಗಳನ್ನು(contraceptive pills)  ನಿಲ್ಲಿಸಿದ ನಂತರ ಫಲವತ್ತತೆ ಸಾಮಾನ್ಯ ಸ್ಥಿತಿಗೆ ಮರಳಲು ಹಲವಾರು ತಿಂಗಳುಗಳು ಅಥವಾ ವರ್ಷಗಳು ತೆಗೆದುಕೊಳ್ಳಬಹುದು ಎಂದು ಕೆಲವು ಅಧ್ಯಯನಗಳು ತೋರಿಸಿವೆ.

ಹೀಗಾಗಿ ಉಳಿದೆಲ್ಲ ವಿಚಾರಗಳಲ್ಲಿ ಗಂಡಸರ ಬೇಜವಾಬ್ದಾರಿ ಬಗ್ಗೆ ಕಮೆಂಟ್ ಮಾಡಬಹುದಾದರೂ ಈ ವಿಷಯದಲ್ಲಿ ಅಲ್ಲ. ಇಷ್ಟೆಲ್ಲ ಸೈಡ್ ಎಫೆಕ್ಟ್ ಇರೋ ಗರ್ಭನಿರೋಧಕಗಳ ಸೇವನೆಯಿಂದ ಕಾಂಡೋಮ್(Condom) ಬಳಕೆ ನಿರುಪದ್ರವಕಾರಿ ಅಂತಾರೆ ಡಾಕ್ಟರ್. ಹಾಗಂತ ಹೆಣ್ಮಕ್ಕಳು ಗರ್ಭ ನಿರೋಧಕ ಮಾತ್ರೆ ತಗೊಂಡ್ರೆ ಯಾವ ಸೈಡ್‌ ಎಫೆಕ್ಟ್ಸ್‌ ಇರಲ್ಲ ಅಂತಲ್ಲ. ಅಧಿಕ ರಕ್ತಸ್ರಾವ, ಸ್ತನಗಳಲ್ಲಿ ನೋವು(Pain), ತಲೆನೋವು, ಮೈಗ್ರೇನ್, ತೂಕ ಹೆಚ್ಚಾಗೋದು, ಮೂಡ್ ಸ್ವಿಂಗ್ಸ್(Mood swing) ಇತ್ಯಾದಿ ಸಮಸ್ಯೆಗಳು ಹೆಣ್ಮಕ್ಕಳಿಗೂ ಆಗುತ್ತವೆ. ಆದರೆ ಗಂಡಸರ ಗರ್ಭನಿರೋಧಕಕ್ಕೆ ಹೋಲಿಸಿದರೆ ಹೆಂಗಸರು ಬಳಸೋ ಗರ್ಭ ನಿರೋಧಕಗಳಲ್ಲಿ ಸೈಡ್ ಎಫೆಕ್ಟ್ಸ್ ಕಡಿಮೆ ಎನ್ನಲಾಗಿದೆ.

ಗಂಡ-ಹೆಂಡ್ತಿ ಹೀಗೆ ಮನೆ ಕೆಲ್ಸ ಶೇರ್‌ ಮಾಡ್ಕೊಂಡ್ರೆ, ದಾಂಪತ್ಯ ಜೀವನ ಹ್ಯಾಪಿಯಾಗಿರುತ್ತೆ

Latest Videos
Follow Us:
Download App:
  • android
  • ios