Asianet Suvarna News Asianet Suvarna News

ಮದ್ವೆಯಾಗಲು ಭಾರತೀಯ ವರ ಬೇಕಾಗಿದ್ದಾನೆ, ಮಾಲ್‌ನಲ್ಲಿ ಪೋಸ್ಟರ್ ಹಿಡಿದು ಪೋಸ್ ನೀಡಿದ ರಷ್ಯನ್ ಬೆಡಗಿ!

ಯುವಕ-ಯುವತಿಯರು ಮದುವೆಯಾಗಲು ಹುಡುಗ ಬೇಕಾಗಿದ್ದೇವೆ ಹುಡುಗಿ ಬೇಕಾಗಿದ್ದಾಳೆ ಎಂದು ಮ್ಯಾಟ್ರಿಮೋನಿಯಲ್ಲಿ ಪೋಸ್ಟ್ ಮಾಡುವುದು ಸಾಮಾನ್ಯವಾಗಿದೆ. ಆದರೆ ಇಲ್ಲೊಬ್ಬಳು ರಷ್ಯನ್ ಬೆಡಗಿ, ಭಾರತೀಯ ವರ ಬೇಕಾಗಿದ್ದಾನೆ ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾಳೆ.

Russian Girl Poses At Mall Seeking Indian Groom, Men Comment Marry Me On her Instagram Post Vin
Author
First Published Jun 2, 2024, 2:52 PM IST

ಯುವಕ-ಯುವತಿಯರು ಮದುವೆಯಾಗಲು ಹುಡುಗ ಬೇಕಾಗಿದ್ದೇವೆ ಹುಡುಗಿ ಬೇಕಾಗಿದ್ದಾಳೆ ಎಂದು ಮ್ಯಾಟ್ರಿಮೋನಿಯಲ್ಲಿ ಪೋಸ್ಟ್ ಮಾಡುವುದು ಸಾಮಾನ್ಯವಾಗಿದೆ. ತಮ್ಮ ಬಗ್ಗೆ ತಿಳಿಸಿ, ತಮಗೆ ಎಂಥಾ ವರ ಬೇಕಾಗಿದ್ದಾನೆ ಎಂಬ ಮಾಹಿತಿಯನ್ನು ಸಹ ನೀಡುತ್ತಾರೆ. ಕೆಲವೊಬ್ಬರು ತಮ್ಮ ಸೋಷಿಯಲ್ ಮೀಡಿಯಾದಲ್ಲಿಯೂ ಈ ಬಗ್ಗೆ ಪೋಸ್ಟ್ ಮಾಡುತ್ತಾರೆ.

ಆದರೆ ಇಲ್ಲೊಬ್ಬಳು ರಷ್ಯನ್ ಬೆಡಗಿ, 'ಭಾರತೀಯ ಗಂಡನನ್ನು ಹುಡುಕುತ್ತಿದ್ದೇನೆ' ಎಂಬ ಪೋಸ್ಟರ್‌ನ್ನು ಹಿಡಿದಿಕೊಂಡಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾಳೆ. ಪುರುಷ ಮನುಷ್ಯಾಕೃತಿಯ ಪಕ್ಕದಲ್ಲಿ ಈ ಪೋಸ್ಟರ್ ಹಿಡಿದು ಯುವತಿ ಪೋಸ್ ನೀಡಿದ್ದಾಳೆ. ರಷ್ಯನ್ ಬೆಡಗಿ ದಿನಾರಾ ರವಿಕೆಯಿಲ್ಲದ ಕೆಂಪು ಸೀರೆಯನ್ನು ಧರಿಸಿ ಸುಂದರವಾಗಿ ಕಾಣಿಸಿಕೊಂಡರು.

ವಿಚ್ಛೇದನವಾಗಿ ಖಿನ್ನತೆಗೆ ಜಾರಿದ್ದ 56 ವರ್ಷದ ಮಹಿಳೆಗೆ 36 ವರ್ಷದ ವ್ಯಕ್ತಿಯೊಂದಿಗೆ ಮದುವೆ!

ಮಾಸ್ಕೋದ ದಿನಾರಾ ಎಂಬ ರಷ್ಯಾದ ಪ್ರಭಾವಿಯೊಬ್ಬರು ಇತ್ತೀಚೆಗೆ ಭಾರತೀಯ ಮಾಲ್‌ನಲ್ಲಿ ಭಾರತೀಯ ವರನನ್ನು ಹುಡುಕುತ್ತಿರುವುದು ತಿಳಿದುಬಂದಿದೆ. ದಿನಾರಾ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ ಅನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಆಕೆ ಎರಡು ಪುರುಷ ಗೊಂಬೆಗಳ ಮಧ್ಯೆ ನಿಂತಿದ್ದಾಳೆ. ಭಾರತೀಯ ಯುವಕನನ್ನು ಮದುವೆಯಾಗುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾಳೆ. ತನ್ನ ಇನ್‌ಸ್ಟಾಗ್ರಾಂ ಫಾಲೋವರ್ಸ್‌ ವರನನ್ನು ಹುಡುಕಲು ಸಹಾಯ ಮಾಡುವಂತೆ ಆಕೆ ಕೇಳಿಕೊಂಡಿದ್ದಾರೆ. 

ಸೋಷಿಯಲ್ ಮೀಡಿಯಾದಲ್ಲಿ ಈ ವೀಡಿಯೋ ವೈರಲ್ ಆಗಿದೆ. ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ರೀಲ್ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ ಮತ್ತು ಇದುವರೆಗೆ 6.4 ಮಿಲಿಯನ್ ವೀಕ್ಷಣೆಗಳೊಂದಿಗೆ ಸುಮಾರು 70,000 ಲೈಕ್‌ಗಳನ್ನು ಪಡೆದುಕೊಂಡಿದೆ. ಹಲವಾರು ಬಳಕೆದಾರರು ಅರೆ ನಾನು ಸಿದ್ಧನಾಗಿದ್ದೇನೆ, ನನಗೆ ಆಸಕ್ತಿಯಿದೆ, ನಾವು ಕ್ಯೂನಲ್ಲಿ ನಿಲ್ಲುತ್ತೇವೆ, ನಾನು ಸಿಂಗಲ್ ಆಗಿದ್ದೇನೆ ಮೊದಲಾದ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

ಫೇಸ್‌ಬುಕ್ ಮೂಲಕ ಪ್ರೀತಿಯಾಗಿ ಮದುವೆ, 2 ವಾರ ಫಸ್ಟ್ ನೈಟ್ ಮುಂದೂಡಿದ ಪತ್ನಿಗೆ ಡಿವೋರ್ಸ್!

Latest Videos
Follow Us:
Download App:
  • android
  • ios