ಮಹಿಳೆಯರು ಹೀಗೆಲ್ಲಾ ಮಾಡೋದು ಗಂಡಸರಿಗೆ ಇಷ್ಟಾನೇ ಆಗಲ್ವಂತೆ !
ಹೆಂಗಸರ ಎಷ್ಟೋ ಗುಣಗಳು ಗಂಡಸರಿಗೆ ಇಷ್ಟವಾಗೋಲ್ಲ. ನನ್ನ ಹೆಂಡ್ತಿ ಮಾತ್ರ ಯಾಕಪ್ಪಾ ಹೀಗೆ ಎಂದು ಅಂದುಕೊಳ್ಳುತ್ತಾರೆ. ಆದ್ರೆ ವಾಸ್ತವದಲ್ಲಿ ಬಹುತೇಕ ಮಹಿಳೆಯರ ಗುಣ ಒಂದೇ ರೀತಿ ಇರುತ್ತದೆ. ಆದ್ರೆ ಮಹಿಳೆಯರು ನಿರ್ಧಿಷ್ಟವಾಗಿ ಕೆಲವೊಂದು ವಿಚಾರ ಮಾಡೋದು, ಮಾತನಾಡೋದು ಗಂಡಸರಿಗೆ ಸುತಾರಂ ಇಷ್ಟವಾಗೋದಿಲ್ವಂತೆ.
ಪುರುಷರು ಯಾವಾಗಲೂ ತಮ್ಮ ಭಾವನೆಗಳನ್ನು ಅತಿಯಾಗಿ ವ್ಯಕ್ತಪಡಿಸುವುದಿಲ್ಲ. ಆದರೆ ಪುರುಷರು ತಮ್ಮ ಪತ್ನಿಯೊಂದಿಗೆ ಮಾತನಾಡಲು ಬಯಸದ ಕೆಲವೊಂದು ವಿಷಯಳಿವೆ. ಪುರುಷರು ನಿಜವಾಗಿಯೂ ತಮ್ಮ ಸಂಗಾತಿ ಮಾಡುವುದನ್ನು ಅಥವಾ ಮಾತನಾಡುವುದನ್ನು ನಿಲ್ಲಿಸಬೇಕೆಂದು ಬಯಸುವ ಕೆಲವು ನಡವಳಿಕೆಗಳಿವೆ. ಇವುಗಳನ್ನು ಪರಿಶೀಲಿಸದಿದ್ದಲ್ಲಿ ಇವು ಸಂಬಂಧದ ಮೇಲೆ ಹೆಚ್ಚಿನ ಪರಿಣಾಮ ಬೀರಬಹುದು. ಪುರುಷರು ತಮ್ಮ ಪಾಲುದಾರರು ಮಾಡುವುದನ್ನು ನಿಲ್ಲಿಸಬೇಕೆಂದು ಬಯಸುವ ಕೆಲವು ವಿಷಯಗಳ ಬಗ್ಗೆ ಇಲ್ಲಿ ಹೇಳಲಾಗಿದೆ.
ಸಂಭಾಷಣೆಯನ್ನು ಅನಗತ್ಯವಾಗಿ ವಿಸ್ತರಿಸುವುದು: ಮಹಿಳೆಯರು (Woman) ಕೆಲವೊಮ್ಮೆ ಸಂಭಾಷಣೆಯನ್ನು ಅನಗತ್ಯವಾಗಿ ವಿಸ್ತರಿಸುತ್ತಾರೆ. ಇದು ಪುರುಷರು (Men) ಸಂಪೂರ್ಣವಾಗಿ ಇಷ್ಟಪಡದ ವಿಷಯವಾಗಿದೆ. ಜಗಳ ಅಥವಾ ವಾದ ಮಾಡುತ್ತಿರುವಾಗ, ವಿಷಯವನ್ನು ಅನಗತ್ಯವಾಗಿ ವಿಸ್ತರಿಸುವ ಬದಲು ಪರಿಹಾರವನ್ನು ಕಂಡುಕೊಳ್ಳುವುದು ಅವಶ್ಯಕ. ಮಹಿಳೆಯರು ಅದನ್ನು ಮಾಡಲು ಸಿದ್ಧರಾಗದೇ ಇದ್ದಾಗ ಬಹುತೇಕ ಸಂದರ್ಭಗಳಲ್ಲಿ ಪುರುಷರು ತಾಳ್ಮೆ (Patience) ಕಳೆದುಕೊಳ್ಳುತ್ತಾರೆ, ರೇಗಾಡುತ್ತಾರೆ. ಇನ್ನೂ ಕೆಲವೊಮ್ಮೆ ಸಂಬಂಧದಿಂ ಹೊರ ಬರುವ ನಿರ್ಧಾರ (Decision)ವನ್ನು ಸಹ ತೆಗೆದುಕೊಳ್ಳುತ್ತಾರೆ.
ಹುಡುಗಿ ದೃಷ್ಟಿಯಲ್ಲಿ ಒಳ್ಳೆಯವರಾಗಬೇಕೆಂದು ಹೋಗಿ ಈ ತಪ್ಪು ಮಾಡ್ಬೇಡಿ
ಏಕಾಂಗಿಯಾಗಿ ಬಿಡದಿರುವುದು: ಎಲ್ಲಾ ಮಹಿಳೆಯರು ಯಾವಾಗಲೂ ತಮ್ಮ ಪಾಲುದಾರರೊಂದಿಗೆ ಮಾತನಾಡಲು ಮತ್ತು ಸಂಭಾಷಣೆ ಮಾಡಲು ಬಯಸುತ್ತಾರೆ. ಆದರೆ ಪುರುಷರು (Men) ಸಾಮಾನ್ಯವಾಗಿ ಏನನ್ನಾದರೂ ಕುರಿತು ಆಳವಾಗಿ ಆಲೋಚಿಸುತ್ತಿರುವಾಗ ಸುಮ್ಮನಿರುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಆದರೆ ಮಹಿಳೆಯರು ಸಹ ಅವರನ್ನು ಕೆಣಕಲು ಒಲವು ತೋರುತ್ತಾರೆ ಮತ್ತು ಏನಾದರೂ ತಪ್ಪಾಗಿದೆ ಎಂದು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ ಪುರುಷರು ಸ್ವಲ್ಪ ಸಮಯದವರೆಗೆ ಶಾಂತವಾಗಿರಲು (Cool) ಮತ್ತು ಏಕಾಂಗಿಯಾಗಿರಲು ಇಷ್ಟಪಡುತ್ತಾರೆ. ಆದರೆ ಮಹಿಳೆಯರು ಇಂಥಾ ಸಮಯವನ್ನು ಪುರುಷರಿಗೇ ನೀಡುವುದೇ ಇಲ್ಲ.
ಅವಾಸ್ತವಿಕ ನಿರೀಕ್ಷೆಗಳನ್ನು ಹೊಂದಿರುವುದು: ರೊಮ್ಯಾಂಟಿಕ್ ಚಲನಚಿತ್ರಗಳನ್ನು (Romantic movies) ನೋಡಿದ ನಂತರ ಮಹಿಳೆಯರು ತಮ್ಮ ಪಾಲುದಾರರಿಂದ ಅವಾಸ್ತವಿಕ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದರಲ್ಲಿ ಆಶ್ಚರ್ಯವೇನಿಲ್ಲ. ಆದರೆ ಚಲನಚಿತ್ರಗಳ ಪಾತ್ರಗಳು ವಾಸ್ತವವಲ್ಲ. ಅದು ಸಂಪೂರ್ಣವಾಗಿ ಕಲ್ಪನೆಯ ಲೋಕವಾಗಿದೆ. ಇದನ್ನು ಯಾರು ಸಹ ಯಾರಿಂದಲೂ ನಿರೀಕ್ಷಿಸಲು ಹೋಗಬಾರದು. ಇದು ಸಂಗಾತಿಗೆ ಹೊರೆಯಾಗಿ ಪರಣಮಿಸುವುದರಲ್ಲಿ ಸಂಶಯವಿಲ್ಲ.
Honeymoon ಮುಗಿದ್ಮೇಲೆ ಹೆಂಡ್ತಿ ವಿಚಿತ್ರವಾಗಿ ಆಡ್ತಾಳಂತೆ, ಡಿವೋರ್ಸ್ ಕೊಡ್ಲಾ ಕೇಳ್ತಿದ್ದಾನೆ ಇವನು!
ಹವ್ಯಾಸಗಳನ್ನು ಇಷ್ಟಪಡುವಂತೆ ನಟಿಸುವುದು: ತಮ್ಮ ಪಾಲುದಾರರು ತಮ್ಮ ಹವ್ಯಾಸ (Habit)ಗಳನ್ನು ಇಷ್ಟಪಡುವ ಬದಲು ಇಷ್ಟಪಡುವಂತೆ ನಟಿಸಿದಾಗ ಪುರುಷರು ಅದನ್ನು ದ್ವೇಷಿಸುತ್ತಾರೆ. ಮಹಿಳೆಯರು ತಮ್ಮ ಪಾಲುದಾರರೊಂದಿಗೆ ಸಮನಾಗಿರಲು ಮತ್ತು ಅವರೊಂದಿಗೆ ಸಾಕಷ್ಟು ಸಮಯವನ್ನು ಕಳೆಯಲು ಈ ರೀತಿ ಅವರ ಹವ್ಯಾಸವನ್ನು ಪ್ರೀತಿಸುವಂತೆ ನಟಿಸಬಹುದು. ಆದರೆ ಇದಕ್ಕಿಂತ ನಿರಾಸಕ್ತಿ ತೋರುವುದು ಪುರುಷರಿಗೆ ಇಷ್ಟವಾಗುತ್ತದೆ. ಆದರೆ ಇದರ ಬದಲು ನಟಿಸುವುದು ಇಷ್ಟವಾಗುವುದಿಲ್ಲ.
ತಯಾರಾಗಲು 10 ನಿಮಿಷಗಳ ಬದಲಿಗೆ ಒಂದು ಗಂಟೆ ತೆಗೆದುಕೊಳ್ಳುವುದು: ಪುರುಷರಿಗೆ ಹೋಲಿಸಿದರೆ ಮಹಿಳೆಯರು ತಯಾರಾಗಲು (Getting ready) ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಇದು 99 ಶೇಕಡಾ ಪುರುಷರನ್ನು ಹೆಚ್ಚು ಸಿಟ್ಟಿಗೇಳುವಂತೆ ಮಾಡುತ್ತದೆ. ಮಹಿಳೆಯರು ತಯಾರಾಗಲು 10 ನಿಮಿಷಗಳು ಬೇಕು ಆದರೆ ತಮ್ಮ ಕೂದಲು, ಮೇಕ್ಅಪ್, ಉಡುಗೆ-ಫಿಟ್ಟಿಂಗ್ ಇತ್ಯಾದಿಗಳನ್ನು ಒಳಗೊಂಡಂತೆ ಎಲ್ಲವನ್ನೂ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಮಹಿಳೆಯರು ಹೀಗೆ ಮಾಡುವುರಿಂದ ಪುರುಷರು ಅಸಹನೆ ಪಡುತ್ತಾರೆ. ಸರಿಯಾದ ಸಮಯಕ್ಕೆ ಸ್ಥಳಕ್ಕೆ ತಲುಪಲಾಗದೆ ಹೆಂಡತಿಯ (Wife) ವರ್ತನೆ ಹೀಗೇಕೆ ಎಂದು ಚಿಂತಿಸುತ್ತಾರೆ.
ದೈಹಿಕ ಸಂಪರ್ಕ ಮಾಡುವಾಗಲ್ಲೆಲ್ಲಾ ಅಲರ್ಜಿ, ಅರೆ ಇದೆಂಥಾ ವಿಚಿತ್ರ ಕಾಯಿಲೆ