Honeymoon ಮುಗಿದ್ಮೇಲೆ ಹೆಂಡ್ತಿ ವಿಚಿತ್ರವಾಗಿ ಆಡ್ತಾಳಂತೆ, ಡಿವೋರ್ಸ್ ಕೊಡ್ಲಾ ಕೇಳ್ತಿದ್ದಾನೆ ಇವನು!

ಮದುವೆಯಾದ್ಮೇಲೆ ಜನರು ಬದಲಾಗ್ತಾರೆ. ಆದ್ರೆ ಅತಿ ಬದಲಾವಣೆ ಬದುಕನ್ನು ಹೈರಾಣ ಮಾಡುತ್ತೆ. ಪ್ರೀತಿಸುವಾಗ ಚೆನ್ನಾಗಿದ್ದ ಹುಡುಗಿ, ಮದುವೆಯಾದ್ಮೇಲೆ ಎಲ್ಲ ವಿಷ್ಯಕ್ಕೂ ಮೂಗು ತೂರಿಸಿದ್ರೆ ಜೀವನ ಕಷ್ಟವಾಗುತ್ತೆ. 
 

Wife Changed After Honeymoon

ಇಬ್ಬರ ಮಧ್ಯೆ ಯಾವುದೇ ಮುಚ್ಚುಮರೆಯಿಲ್ಲ, ಇಬ್ಬರು ಅತಿಯಾಗಿ ಪ್ರೀತಿಸ್ತಿದ್ದೇವೆ, ಅವರನ್ನು ಬಿಟ್ಟು ನಾನಿಲ್ಲ.. ನನ್ನ ಬಿಟ್ಟು ಅವರಿಲ್ಲ ಎನ್ನುವ ಜೋಡಿಗೆ ಕೂಡ ವೈಯಕ್ತಿಕ ಸ್ಪೇಸ್ ಅವಶ್ಯಕ. ಅನೇಕ ಬಾರಿ ಈ ತೆರೆದ ಪುಸ್ತಕ ಸಮಸ್ಯೆ ತರಬಹುದು. ಹಾಗಾಗಿ ದಂಪತಿ ಮಧ್ಯೆಯೂ ಸಣ್ಣಪುಟ್ಟ ಗುಟ್ಟು ಇರಬೇಕು. ಪತಿ ಅಥವಾ ಪತ್ನಿ ಮಾಡುವ ಪ್ರತಿಯೊಂದು ಕೆಲಸವನ್ನೂ ಪ್ರಶ್ನಿಸಿದಾಗ ಅಥವಾ ಅದಕ್ಕೆ ಅಡ್ಡಿಯಾದಾಗ ದಾಂಪತ್ಯ ಕಹಿಯಾಗಲು ಶುರುವಾಗುತ್ತದೆ. ಎಲ್ಲವನ್ನೂ ಹೇಳಿ ಮಾಡುವುದು ಉಸಿರುಗಟ್ಟಿಸಿದ ಅನುಭವ ನೀಡುತ್ತದೆ. ಸಂಬಂಧದಿಂದ ದೂರ ಓಡಲು ಮನಸ್ಸು ಬಯಸುತ್ತದೆ. ಪತಿ – ಪತ್ನಿ ಮಧ್ಯೆ ಗೌರವ, ಪ್ರೀತಿ ಜೊತೆ ನಂಬಿಕೆ ಕೂಡ ಮುಖ್ಯವಾಗುತ್ತದೆ. ಕುಂತಲ್ಲಿ, ನಿಂತಲ್ಲಿ ಪ್ರಶ್ನೆ ಮಾಡುವ, ಅನುಮಾನದ ಸಂಗಾತಿ ಸಿಕ್ಕಿದ್ರೆ ಬಾಳು ನರಕ. ಈ ವ್ಯಕ್ತಿಗೂ ಈಗ ಜೀವನ ಬೇಡವಾಗಿದೆ. ಪತ್ನಿ ಕಾಟಕ್ಕೆ ಪತಿ ಬೇಸತ್ತಿದ್ದಾನೆ.

ಆತನಿಗೆ ಮದುವೆ (Marriage) ಯಾಗಿ ತುಂಬಾ ವರ್ಷ ಕಳೆದಿಲ್ಲ. ಆದರೆ ನಾಲ್ಕು ವರ್ಷಗಳ ಕಾಲ ಪ್ರೀತಿಸಿ, ಪ್ರೀತಿ (Love) ಸಿದಾಕೆಯನ್ನೇ ಕೈಹಿಡಿದಿದ್ದಾನೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತಂತೆ. ಅರಿತು ನಡೆಯುವ ಪತ್ನಿ ಸಿಕ್ಕರೆ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತಿತ್ತು ನನ್ನ ಲೈಫ್ ಎನ್ನುತ್ತಾನೆ ಆತ. ಆದ್ರೆ ಹನಿಮೂನ್ ಎಲ್ಲವನ್ನೂ ಬದಲಿಸ್ತಂತೆ. ಹನಿಮೂನ್ (Honeymoon) ಗೆ ಹೋಗಿ ಬಂದ್ಮೇಲೆ ಪತ್ನಿ ಸಂಪೂರ್ಣವಾಗಿ ಬದಲಾಗಿದ್ದಾಳಂತೆ. 

FEMALE MASTURBATION : ಮಹಿಳೆಯರು ತಿಳಿದುಕೊಳ್ಳಲೇಬೇಕಾದ ಸೂಕ್ಷ್ಮ ವಿಷಯಗಳಿವು

ಹನಿಮೂನ್ ಮುಗಿಸಿ ಮನೆಗೆ ಬಂದ ಪತ್ನಿ, ಸದಾ ಪತಿ ಮೇಲೆ ಹಿಡಿದ ಸಾಧಿಸಲು ಪ್ರಯತ್ನಿಸ್ತಿದ್ದಾಳಂತೆ. ಆಕೆ ಎದುರಿಗಿಲ್ಲದೆ ಹೋದ್ರೆ ಪತಿ ಯಾರ ಜೊತೆಯೂ ಮಾತನಾಡುವಂತಿಲ್ಲವಂತೆ. ಅಷ್ಟೇ ಅಲ್ಲ ದಾರಿಯಲ್ಲಿ ಯಾವುದೇ ಪರಿಚಿತ ಹುಡುಗಿ ಕಂಡ್ರೂ ಬಾಯಿ ಬಿಡಬಾರದು. ಮಾಲ್ ನಲ್ಲಿ ಸಹೋದ್ಯೋಗಿ (Colleague) ಕಂಡು ಮಾತನಾಡಿದ್ರೆ ಕಥೆ ಮುಗೀತು. ಮನೆಗೆ ಬಂದು ವಾಟ್ಸ್ ಅಪ್ (What's App) ಚಾಟ್ ಚೆಕ್ ಮಾಡ್ತಾಳಂತೆ ಪತ್ನಿ. ಪತಿಯ ಸಾಮಾಜಿಕ ಜಾಲತಾಣದ ಪಾಸ್ವರ್ಡ್ ಬದಲಿಸಿದ್ದು ಆಕೆಯಂತೆ. 

ಆಗಾಗ ನಿಮ್ಮ ಲೇಡಿ ಬಾಸ್ ಏನು ಮಾಡ್ತಾಳೆ ಎಂದು ವಿಚಾರಿಸುತ್ತಿರುತ್ತಾಳಂತೆ. ಮದುವೆಗೆ ಮುನ್ನವೂ ನಾನು ಅದೇ ಕಚೇರಿಯಲ್ಲಿ ಕೆಲಸ ಮಾಡಿದ್ದೆ. ಈಗ್ಲೂ ಅಲ್ಲೇ ಮಾಡ್ತಿದ್ದೇನೆ. ನಾನು ಮತ್ತು ಬಾಸ್ ಮಧ್ಯೆ ಏನು ಸಂಬಂಧವಿಲ್ಲ ಎಂಬುದು ಆಕೆಗೆ ತಿಳಿದಿದೆ. ಆದ್ರೂ ಆಕೆ ಹೀಗೆ ಮಾಡ್ತಾಳೆ ಎನ್ನುತ್ತಾನೆ ಪತಿ. ಇಡೀ ದಿನ ಪತ್ನಿ ಕಾಟ ಸಾಕಾಗಿದೆ. ಏನು ಮಾಡಿದ್ರೂ ಆಕೆ ಅನುಮತಿ ಪಡೆಯಬೇಕಿದೆ. ಕುಳಿತರೂ, ನಿಂತ್ರೂ ಅನುಮಾನಿಸುವ ಪತ್ನಿ, ಸಹೋದರಿಯರ ಜೊತೆ ಕೂಡ ಮಾತನಾಡಲು ಬಿಡೋದಿಲ್ಲ ಎನ್ನುತ್ತಾನೆ ಪತಿ. ಮುಂದೇನು ಮಾಡ್ಬೇಕು ತಿಳಿತಿಲ್ಲ. ವಿಚ್ಛೇದನ ಪಡೆಯೋದಾ ಎಂದು ಕೇಳಿದ್ದಾನೆ.

ತಜ್ಞರ ಸಲಹೆ : ಮದುವೆಯಾದ್ಮೇಲೆ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಬರೋದು ಸಹಜ. ಅಷ್ಟಕ್ಕೆ ವಿಚ್ಛೇದನ (Divorce) ಪಡೆಯುವ ನಿರ್ಧಾರಕ್ಕೆ ಬರೋದು ತಪ್ಪು ಎನ್ನುತ್ತಾರೆ ತಜ್ಞರು. ನಾಲ್ಕು ವರ್ಷ ಪ್ರೀತಿಸಿ ಮದುವೆಯಾಗಿದ್ದೀರಿ. ಮದುವೆಯಾದ್ಮೇಲೆ ಪತ್ನಿ ಬದಲಾಗಿದ್ದಾರೆ ಎಂದ್ರೆ ಅದಕ್ಕೆ ಕಾರಣ ಏನು ಎಂಬುದನ್ನು ನೀವು ಮೊದಲು ಪತ್ತೆ ಮಾಡಿ ಎನ್ನುತ್ತಾರೆ ತಜ್ಞರು. 

ಸಂಬಂಧದಲ್ಲಿ ಸಮಸ್ಯೆಗೆ ಇವೆಲ್ಲಾ ಕಾರಣಗಳಿರಬಹುದು!

ಪತ್ನಿ ಎದುರಿದ್ದಾಗ ನೀವು ಬೇರೆ ಮಹಿಳೆಯರ ಜೊತೆ ಕೆಟ್ಟದಾಗಿ ನಡೆದುಕೊಂಡಿರಬಹುದು ಅಥವಾ ಬೇರೆ ಯಾವುದೋ ಘಟನೆ ನಡೆದಿರಬಹುದು. ಇದು ಪತ್ನಿ ಮನಸ್ಸಿನ ಮೇಲೆ ಪರಿಣಾಮ ಬೀರಿರುವ ಸಾಧ್ಯತೆಯಿದೆ. ಒಂದ್ವೇಳೆ ಅಂಥ ಯಾವುದೂ ಘಟನೆ ನಡೆದಿಲ್ಲ ಎಂದಾದ್ರೆ ನೀವು ಪತ್ನಿಗೆ ಭರವಸೆ ನೀಡಿ. ನಿಮ್ಮ ಮೊದಲ ಆದ್ಯತೆ ಸದಾ ನಿಮ್ಮ ಮೇಲಿರುತ್ತದೆ. ಸಹೋದ್ಯೋಗಿ ಜೊತೆ ಹೊರಗೆ ಹೋಗೋದಾದ್ರೆ ನಿನಗೆ ಹೇಳಿ ಹೋಗ್ತೇನೆ ಎಂದು ಆಕೆಗೆ ಭರವಸೆ ನೀಡಿ. ಅದ್ರಂತೆ ನಡೆದುಕೊಳ್ಳಿ ಎನ್ನುತ್ತಾರೆ ತಜ್ಞರು. ಪತ್ನಿ ಜೊತೆ ಹೆಚ್ಚು ಸಮಯ ಕಳೆಯಿರಿ. ನೀವು ಆಕೆಗೆ ಕಡಿಮೆ ಸಮಯ ನೀಡಿದ್ದು ಕೂಡ ಒಂದು ಕಾರಣವಾಗಿರಬಹುದು ಎನ್ನುತ್ತಾರೆ ತಜ್ಞರು.    
 

Latest Videos
Follow Us:
Download App:
  • android
  • ios