Asianet Suvarna News Asianet Suvarna News

ಮೊಬೈಲ್ ಕೈಯಲ್ಲಿ ಇಲ್ಲದಾಗರೂ, ಕೆಲವು ಮಕ್ಕಳು ಮಾತೇ ಆಡೋಲ್ಲ! ಯಾಕೀ ಮೌನ?

ಮಕ್ಕಳ ಭವಿಷ್ಯಕ್ಕೆ ಪಾಲಕರ ನಡೆ ಬಹಳ ಮುಖ್ಯ. ಬರೀ ಹೊಡೆದು ಮಕ್ಕಳನ್ನು ಸರಿಮಾಡಲು ಸಾಧ್ಯವಿಲ್ಲ. ಮಕ್ಕಳ ಭವಿಷ್ಯ ಉಜ್ವಲವಾಗಬೇಕೆಂದ್ರೆ ಅವರ ಮೌನ ಮುರಿಯುವ ಕೆಲಸ ಮಾಡಬೇಕು.
ಪಾಲಕರು ಜವಾಬ್ದಾರಿಯಿಂದ ವರ್ತಿಸಬೇಕು.
 

Reasons Why Kid Avoid Talking
Author
First Published Dec 26, 2022, 2:23 PM IST

ಮಕ್ಕಳ ಆರೋಗ್ಯದ ಬಗ್ಗೆ ಹಾಗೆ ಮಕ್ಕಳ ಆಹಾರದ ಬಗ್ಗೆ ಮಾತ್ರ ಗಮನ ನೀಡಿದ್ರೆ ಸಾಲದು. ಮಕ್ಕಳ ಪಾಲನೆ ಬಗ್ಗೆಯೂ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಮಕ್ಕಳ ಭವಿಷ್ಯ ಚೆನ್ನಾಗಿರಬೇಕೆಂದ್ರೆ ಬಾಲ್ಯದಲ್ಲಿಯೇ ಮಕ್ಕಳ ನಡವಳಿಕೆ ಬಗ್ಗೆ ಹೆಚ್ಚಿನ ಮಹತ್ವ ನೀಡಬೇಕಾಗುತ್ತದೆ. ಮಕ್ಕಳಿಗೆ ಪಾಲಕರಾದವರು ಉತ್ತಮ ಅಭ್ಯಾಸಗಳನ್ನು ಕಲಿಸಬೇಕು. ಆಗ ಅವರು ಒಳ್ಳೆ ಅಭ್ಯಾಸಗಳನ್ನು ರೂಢಿಸಿಕೊಳ್ತಾರೆ. ಇದ್ರಿಂದ ನಿಮ್ಮ ಪಾಲಕ ಜವಾಬ್ದಾರಿ ಯಶಸ್ವಿಯಾದಂತಾಗುತ್ತದೆ. ಮಕ್ಕಳು ಪಾಲಕರಿಗೆ ಗೌರವ ನೀಡಬೇಕಾಗುತ್ತದೆ. ಮಕ್ಕಳು ನಿಮಗೆ ವಿಧೇಯರಾಗಲು, ಅವರೊಂದಿಗೆ ಮಾತನಾಡುವುದು ಅವಶ್ಯಕ. 

ಅನೇಕ ಪಾಲಕರು ಮಕ್ಕಳ (Children) ಜೊತೆ ಸರಿಯಾಗಿ ಮಾತನಾಡುವುದಿಲ್ಲ. ಅವರ ಸಮಸ್ಯೆಗಳನ್ನು ಚರ್ಚಿಸುವುದಿಲ್ಲ. ಇದ್ರಿಂದ ಮಕ್ಕಳ ಸಮಸ್ಯೆ ಏನು ಎಂಬುದು ಪಾಲಕರಿಗೆ ತಿಳಿಯೋದೇ ಇಲ್ಲ. ಪೋಷಕರು ಮಕ್ಕಳ ಜೊತೆ ಸಂಭಾಷಣೆ (Conversation) ನಡೆಸಿದಾಗ ಮಕ್ಕಳು ತಮ್ಮ ಮನಸ್ಸ (Mind) ನ್ನು ಮುಕ್ತವಾಗಿ ತೆರೆದಿಡುತ್ತಾರೆ. ಕೆಲವು ಮಕ್ಕಳು, ಪಾಲಕರು ಪ್ರಶ್ನೆ ಕೇಳದೆ ಶಾಲೆಯಲ್ಲಿ ನಡೆದ ಅಥವಾ ಬೇರೆ ಸ್ಥಳಗಳಲ್ಲಿ ನಡೆದ ಎಲ್ಲ ವಿಷ್ಯವನ್ನು ಹೇಳ್ತಾರೆ. ಆದ್ರೆ ಕೆಲ ಮಕ್ಕಳು ಪಾಲಕರು ಎಷ್ಟು ಪ್ರಯತ್ನಿಸಿದ್ರೂ ಮಾತನಾಡುವುದು ಕಡಿಮೆ. ಹೆತ್ತವರೊಂದಿಗೆ ಮಾತನಾಡದ ಮಕ್ಕಳು ಕ್ರಮೇಣ ಶಾಂತವಾಗುತ್ತಾರೆ. ಮಕ್ಕಳು ತಮ್ಮ ಪೋಷಕರೊಂದಿಗೆ ಸಂವಹನವನ್ನು ಏಕೆ ಕಡಿಮೆ ಮಾಡುತ್ತಾರೆ ಎನ್ನುವುದಕ್ಕೆ ಆಶ್ಚರ್ಯಕರ ಕಾರಣವಿದೆ. ನಾವಿಂದು ಮಕ್ಕಳು ತಮ್ಮ ತಂದೆ- ತಾಯಿ ಜೊತೆ ಯಾಕೆ ಕಡಿಮೆ ಮಾತನಾಡ್ತಾರೆ ಎಂಬುದನ್ನು ನಿಮಗೆ ಹೇಳ್ತೆವೆ.

ಸದಾ ಮಕ್ಕಳನ್ನು ತೆಗಳುವುದು: ಸಣ್ಣ ವಿಷಯಕ್ಕೂ ಮಕ್ಕಳನ್ನು ತೆಗಳುವ ಪಾಲಕರಿರುತ್ತಾರೆ. ಸಣ್ಣಪುಟ್ಟ ವಿಷ್ಯಕ್ಕೂ ಮಕ್ಕಳನ್ನು ಗದರಿಸುತ್ತ, ತೆಗಳುತ್ತ ಇರುತ್ತಾರೆ. ಪಾಲಕರ ಈ ಸ್ವಭಾವ ಮಕ್ಕಳ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ. ಪಾಲಕರ ಮುಂದೆ ಏನೇ ಹೇಳಿದ್ರು ಅದಕ್ಕೆ ಉತ್ತರ ಬೈಗುಳ ಎಂದು ಅವರು ಭಾವಿಸ್ತಾರೆ. ಇದೇ ಕಾರಣಕ್ಕೆ ತಮ್ಮ ಹೆತ್ತವರೊಂದಿಗೆ ಮಾತನಾಡಲು ಅಥವಾ ತಮ್ಮ ಭಾವನೆ ಹಂಚಿಕೊಳ್ಳಲು ಹೆದರುತ್ತಾರೆ. ನಿಮ್ಮ ಮಕ್ಕಳು ನಿಮ್ಮೊಂದಿಗೆ ಸ್ನೇಹಿತರಂತೆ ಇರಬೇಕು, ಅವರ ಪ್ರತಿಯೊಂದು ವಿಷ್ಯವನ್ನು ನಿಮ್ಮ ಬಳಿ ಹೇಳಿಕೊಳ್ಳಬೇಕು, ಮಗು ನಿಮಗೆ ವಿಧೇಯರಾಗಬೇಕೆಂದು ನೀವೂ ಬಯಸಿದ್ರೆ ಮಕ್ಕಳಿಗೆ ಬೆದರಿಸಲು ಹೋಗ್ಬೇಡಿ. ಬೈದು ಮಕ್ಕಳನ್ನು ಕಂಟ್ರೋಲ್ ಮಾಡಲು ಎಂದಿಗೂ ಸಾಧ್ಯವಿಲ್ಲ ಎಂಬ ಸತ್ಯವನ್ನು ನೀವು ತಿಳಿಯಿರಿ. ಮಕ್ಕಳ ಭವಿಷ್ಯ ಉಜ್ವಲವಾಗಿರಬೇಕು, ಯಾವುದೇ ಸಮಸ್ಯೆ ಇರಬಾರದು ಅಂದ್ರೆ ಮಕ್ಕಳ ಜೊತೆ ಪಾಲಕರು ಮೊದಲು ಮುಕ್ತವಾಗಿ ಮಾತನಾಡಿ. 

PARENTING TIPS : ಮಕ್ಕಳಿಗೆ ಖುಷಿಯಾಗ್ಬೇಕೆಂದ್ರೆ ಹೀಗೆ ಮಾಡಿ ಬರ್ತ್ ಡೇ ಪಾರ್ಟಿ

ಮಗುವಿಗೆ ಸಮಯ ನೀಡಿ : ಮಕ್ಕಳಿಗೆ ಸಮಯ ನೀಡುವುದು ಮುಖ್ಯ. ಪಾಲಕರು ಮಾತನಾಡಲು ಸಿಗ್ತಿಲ್ಲ ಎಂದಾಗ ಮಗು ಕ್ರಮೇಣ ನಿಮ್ಮೊಂದಿಗೆ ಮಾತನಾಡುವುದನ್ನು ನಿಲ್ಲಿಸುತ್ತದೆ. ಮಕ್ಕಳು ದಿನವಿಡೀ ಸುತ್ತಮುತ್ತ ಅನೇಕ ವಿಷ್ಯಗಳನ್ನು ನೋಡ್ತಾರೆ. ಅದನ್ನು ಪಾಲಕರಿಗೆ ಹೇಳಲು, ತಿಳಿದುಕೊಳ್ಳಲು ಬಯಸ್ತಾರೆ. ಆದ್ರೆ ಪಾಲಕರು ಸಿಕ್ಕಿಲ್ಲವೆಂದಾಗ ಅವರಿಗೆ ಬೇಸರವಾಗುತ್ತದೆ. ಪಾಲಕರು ನಮ್ಮ ಜೊತೆ ಬೆರೆಯೋದಿಲ್ಲ, ಎಲ್ಲ ತಂದೆ – ತಾಯಿಯಂತೆ ನಾವಲ್ಲ ಎಂಬ ಭಾವನೆಗೆ ಬರ್ತಾರೆ. ನಿಧಾನವಾಗಿ ತಮ್ಮ ಮನಸ್ಸನ್ನು ಕಟ್ಟಿಡುವ ಪ್ರಯತ್ನ ಶುರು ಮಾಡ್ತಾರೆ. ಮಕ್ಕಳಿಗಾಗಿ ಸಮಯ ಮೀಸಲಿಡಿ. ಅವರೊಂದಿಗೆ ಮಾತನಾಡಿ, ಅವರ ಸಮಸ್ಯೆಗಳನ್ನು ಆಲಿಸಿ.

ದಾಂಪತ್ಯದಲ್ಲಿ ಮೌನಕ್ಕಿಂತ ಮಾತು ಸಮಸ್ಯೆ ಬಗೆಹರಿಸುತ್ತೆ! ಹೇಗಿರಬೇಕು ಮಾತುಕತೆ? 

ಮಕ್ಕಳ ಆದ್ಯತೆ ಅರ್ಥ ಮಾಡಿಕೊಳ್ಳಿ : ಅನೇಕ ಪೋಷಕರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಮನೆ ಮತ್ತು ಮಕ್ಕಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಅವರು ಮಗುವಿನ ಇಚ್ಛೆಗೆ ಆದ್ಯತೆ ನೀಡೋದಿಲ್ಲ. ಮಕ್ಕಳ ಆದ್ಯತೆಗೂ ಪ್ರಾಮುಖ್ಯತೆ ನೀಡಬೇಕು. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಮಕ್ಕಳ ಜೊತೆಯೂ ಮಾತನಾಡಿ. ಅವರ ನಿರ್ಧಾರಗಳನ್ನು ಪರಿಗಣಿಸಿ. ಮಕ್ಕಳು ಕೆಲ ನಿರ್ಧಾರ ತೆಗೆದುಕೊಂಡಾಗ ಅದಕ್ಕೆ ಮನ್ನಣೆ ನೀಡಿ.

Follow Us:
Download App:
  • android
  • ios