ದಾಂಪತ್ಯದಲ್ಲಿ ಮೌನಕ್ಕಿಂತ ಮಾತು ಸಮಸ್ಯೆ ಬಗೆಹರಿಸುತ್ತೆ! ಹೇಗಿರಬೇಕು ಮಾತುಕತೆ?
ಸಂಗಾತಿಯನ್ನು ಅರಿತುಕೊಳ್ಳುವುದು ಸಂಬಂಧದ ಹಿತದೃಷ್ಟಿಯಿಂದ ಅಗತ್ಯ. ಪರಸ್ಪರ ಅರಿತಾಗಲೇ ಹೆಚ್ಚು ಹೊಂದಾಣಿಕೆ ಸಾಧ್ಯವಾಗುತ್ತದೆ. ಚಿಂತನೆಗೆ ಹಚ್ಚುವಂತಹ ಕೆಲವು ಪ್ರಶ್ನೆಗಳ ಮೂಲಕ ಸಂಗಾತಿಯನ್ನು ಅರಿತುಕೊಳ್ಳಬಹುದು.
ಸಂಗಾತಿ ದೊರೆತ ಸಂಭ್ರಮ ಕೆಲವರಲ್ಲಿ ಹೆಚ್ಚು ದಿನ ನಿಲ್ಲುವುದಿಲ್ಲ. ಏನಾದರೊಂದು ಅಸಮಾಧಾನ ಇಣುಕಲು ಆರಂಭಿಸಿ ಸಂಬಂಧದ ಅಸ್ತಿತ್ವವನ್ನೇ ಪ್ರಶ್ನಿಸಲು ತೊಡಗುತ್ತದೆ. ಅದನ್ನೇ ದೊಡ್ಡದು ಮಾಡಿಕೊಂಡು ಹೊರಟರೆ ಸಂಬಂಧಕ್ಕೆ ಅರ್ಥವೇ ಇಲ್ಲದಂತಾಗುತ್ತದೆ. ಅದರ ಬಗ್ಗೆ ಗಮನ ನೀಡದಿದ್ದರೆ ಅಸಮಾಧಾನಗಳ ಸರಮಾಲೆಯೇ ಸೃಷ್ಟಿಯಾಗಬಹುದು. ಸಂಬಂಧದಲ್ಲಿ ಈ ಸಮಸ್ಯೆಗೆ ಮೂಲ ಕಾರಣ ಸಂಗಾತಿಯನ್ನು ಅರ್ಥ ಮಾಡಿಕೊಳ್ಳದಿರುವುದು. ಅಷ್ಟಕ್ಕೂ, ಸಂಗಾತಿಯನ್ನು ಅರ್ಥ ಮಾಡಿಕೊಳ್ಳಲು ಸಮಯ ಬೇಕಾಗುತ್ತದೆ. ಹೆಣ್ಣು, ಗಂಡು ಇಬ್ಬರಿಗೂ ಇದು ಅನ್ವಯ. ಸಂಬಂಧದ ಉಳಿವು ಹೊಂದಾಣಿಕೆಯ ಮೇಲೆ ನಿರ್ಭರವಾಗಿದೆ ಎಂದು ನಿಸ್ಸಂಶಯವಾಗಿ ಹೇಳಬಹುದು. ಹೊಂದಾಣಿಕೆಯ ಭಾವ ಇಬ್ಬರಲ್ಲೂ ಇರಬೇಕಾದುದು ಅಗತ್ಯ. ಆಗಲೇ ಸಂಬಂಧದಲ್ಲಿ ಸಂತಸ ಮನೆಮಾಡುತ್ತದೆ. ವಿಚಾರಗಳು, ನಿಲುವುಗಳು ಪರಸ್ಪರ ಧ್ರುವದಷ್ಟು ವಿರುದ್ಧವಿದ್ದಾಗ ಭವಿಷ್ಯದಲ್ಲಿ ತೊಂದರೆ ತಪ್ಪಿದ್ದಲ್ಲ. ಅವುಗಳ ಬಗ್ಗೆ ಮೊದಲೇ ಅರಿತುಕೊಂಡರೆ ಆ ಸಂಕಷ್ಟವನ್ನು ತಪ್ಪಿಸಿಕೊಳ್ಳಲು ಸಾಧ್ಯ. ಹೀಗಾಗಿ, ಭಾವಿ ಸಂಗಾತಿ ಅಥವಾ ಈಗಾಗಲೇ ಸಂಗಾತಿ ಆಗಿರುವವರ ಮನಸ್ಥಿತಿ, ಅವರ ವಿಚಾರ-ಚಿಂತನೆಗಳನ್ನು ಅರ್ಥ ಮಾಡಿಕೊಂಡರೆ ಹೊಂದಾಣಿಕೆ ಸುಲಭವಾಗುತ್ತದೆ. ಕೆಲವು ಪ್ರಶ್ನೆಗಳ ಮೂಲಕ ಸಂಗಾತಿಯನ್ನು ಅರ್ಥ ಮಾಡಿಕೊಳ್ಳಲು ಯತ್ನಿಸುವುದು ಉತ್ತಮ ಮಾರ್ಗ. ಪ್ರೀತಿ, ರೋಮ್ಯಾನ್ಸ್, ಕುಟುಂಬ, ಧರ್ಮ, ರಾಜಕೀಯ ನಿಲುವು ಹೀಗೆ ಹಲವು ಆಯಾಮಗಳನ್ನು ಒಳಗೊಂಡ ಪ್ರಶ್ನಾವಳಿಗಳ ಮೂಲಕ ಸಂಗಾತಿಯನ್ನು ಅರ್ಥ ಮಾಡಿಕೊಳ್ಳಬಹುದು. ಹಲವು ಪ್ರಶ್ನೆಗಳು ಸ್ಯಾಂಪಲ್ ಗಾಗಿ.
• ಧೂಮಪಾನ (Smoking), ಮದ್ಯಪಾನ (Alcohol) ಸೇರಿದಂತೆ ಅನಾರೋಗ್ಯಕರ (Unhealthy) ಅಭ್ಯಾಸ ಹೊಂದಿದ್ದರೆ ಅಂಥವರ ಜತೆ ಇರಲು ಸಿದ್ಧವಾ?
• ಸಂಬಂಧದಲ್ಲಿ ದೈಹಿಕ ಆಪ್ತತೆ (Physical Intimacy) ಅಗತ್ಯವೇ?
• ಬದುಕಿನ (Life) ಯಾವ ಸಮಯವನ್ನು ಅಮೂಲ್ಯವೆಂದು ಭಾವಿಸುತ್ತೀರಿ? ಯಾಕೆ?
ಫಸ್ಟ್ ಡೇಟಿಂಗ್‌ನಲ್ಲಿ ಜನರು ತಮ್ಮ ಸಂಗಾತಿಯಿಂದ ಇದನ್ನು ಬಯಸುತ್ತಾರೆ!
• ಆಸೆ, ಗುರಿಗಳು ಸಂಗಾತಿಯ (Partner) ಕಾರಣದಿಂದ ಈಡೇರದೇ ಇದ್ದರೆ ಹೊಂದಾಣಿಕೆ (Compatibility) ಸಾಧ್ಯವೇ?
• ಸಂಗಾತಿಯ ಯಾವ ಸ್ವಭಾವ ಹೆಚ್ಚು ಕಿರಿಕಿರಿ (Annoy) ಎನಿಸುತ್ತದೆ?
• ಸಂಬಂಧದಲ್ಲಿ (Relation) ಅಸಮಾಧಾನ ಮೂಡುವ ಸನ್ನಿವೇಶದಲ್ಲಿ ಮೌಲ್ಯಗಳನ್ನು ಅನುಸರಿಸುವುದು ಮುಖ್ಯವೇ?
• ಸಾರ್ವಜನಿಕವಾಗಿ ಮುಜುಗರದ (Irritate) ವರ್ತನೆ ಯಾವುದು?
• ಸಂಬಂಧದಲ್ಲಿ ಪ್ರೀತಿ (Love) ಎಷ್ಟು ಮುಖ್ಯ?
• ತಾಳ್ಮೆಯನ್ನು ಪರೀಕ್ಷಿಸುವ ಅಂಶ ಯಾವುದು?
• ಯಾವ ಬಗೆಯ ಚಲನಚಿತ್ರಗಳು ಇಷ್ಟ? ಪದೇ ಪದೆ ವೀಕ್ಷಿಸಲು ಯಾವುದು ಇಷ್ಟ?
• ಏಕಾಂಗಿಯಾಗಿರುವ ಸನ್ನಿವೇಶ ಒದಗಿದರೆ ಮನೆಯನ್ನು ಸಂಭಾಳಿಸುವುದು ಹೇಗೆ?
• ಈ ದಿನದ ಸಂತೋಷಕ್ಕಾಗಿ (Happy) ಹಣ (Money) ವೆಚ್ಚ ಮಾಡುವುದು ಅಗತ್ಯವೇ ಅಥವಾ ಭವಿಷ್ಯಕ್ಕಾಗಿ (Future) ಹೂಡಿಕೆ ಮಾಡುವುದು ಮುಖ್ಯವೇ?
• ಪರಸ್ಪರ ಆಕರ್ಷಣೆ ಹೊಂದಿರುವ ಸಂಗಾತಿಗಳು ಕೇವಲ ಸ್ನೇಹಿತರಾಗಿರಲು ಸಾಧ್ಯವೇ?
• ಪತಿ/ಪತ್ನಿ ಅಥವಾ ಅವರ ಪಾಲಕರೊಂದಿಗೆ ಭಿನ್ನಾಭಿಪ್ರಾಯ (Difference) ಉಂಟಾದಾಗ ಪಕ್ಷಪಾತವಿಲ್ಲದೆ ವರ್ತಿಸಲು ಸಾಧ್ಯವೇ?
• ಭರವಸೆ ಈಡೇರಿಸದೆ ಇದ್ದಾಗ ಸಂಗಾತಿಗೆ ಗೌರವ ನೀಡುವುದಿಲ್ಲವೇ?
ಸಂಗಾತಿಯಲ್ಲಿ ಈ ಗುಣಗಳಿದ್ದರೆ, ನೀವು ಲಕ್ಕಿ ಎನ್ನೋದರಲ್ಲಿ ಅನುಮಾನವೇ ಇಲ್ಲ
ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳೋದು ಹೇಗೆ?
• ಪರಸ್ಪರ ಭಿನ್ನಾಭಿಪ್ರಾಯ ಏರ್ಪಟ್ಟಾಗ ಬಗೆಹರಿಸಿಕೊಳ್ಳಲು ಇರುವ ಉತ್ತಮ ಮಾರ್ಗ ಯಾವುದು?
• ಒಂದೇ ರೀತಿಯ ಮನಸ್ಥಿತಿ ಇರುವ ವ್ಯಕ್ತಿಯೊಂದಿಗೆ ಇರಲು ಇಷ್ಟವಾ ಅಥವಾ ಅಭಿಪ್ರಾಯ ಭೇದವಿದ್ದರೂ ಓಕೆನಾ?
• ಇಷ್ಟದ ಅಡುಗೆ ಯಾವುದು?
• ಮಾನಸಿಕ ಸಮಸ್ಯೆಗಳ (Mental Problems) ಬಗ್ಗೆ ಅರಿವಿದೆಯೇ? ಖಿನ್ನತೆ, ಆತಂಕ ಸೇರಿದಂತೆ ಮಾನಸಿಕ ಸ್ಥಿತಿಗತಿಯನ್ನು ಅರ್ಥ ಮಾಡಿಕೊಳ್ಳಬಹುದೇ?
• ರಾತ್ರಿ ಬೇಗ ನಿದ್ರೆ ಮಾಡ್ತೀರಾ? ತಡವಾಗಿ ಮಲಗ್ತೀರಾ? ಬೆಳಗ್ಗೆ ಬೇಗ ಏಳ್ತೀರಾ/ ತಡವಾಗಿ ಏಳ್ತೀರಾ?
• ಇಷ್ಟವಾಗುವ ಒಳಾಂಗಣ, ಹೊರಾಂಗಣ ಚಟುವಟಿಕೆಗಳು ಯಾವುವು?
• ಇಷ್ಟವಾಗೋ ಕೆಲಸ (Work) ಮಾಡೋಕೆ ಇಷ್ಟಪಡ್ತೀರಾ? ಇಷ್ಟವಿಲ್ಲದೇ ಇದ್ರೂ ಹೆಚ್ಚು ಸ್ಯಾಲರಿ ಬರೋ ಕೆಲಸ (Job) ಮಾಡೋಕೆ ಹೋಗ್ತೀರಾ?
• ವಾದ (Arguments), ವಾಗ್ವಾದ, ಭಿನ್ನಾಭಿಪ್ರಾಯಗಳು ಸಂಬಂಧದ ಭಾಗ ಹಾಗೂ ಅವು ಸಹಜ ಎನ್ನುತ್ತೀರಾ?
• ವಾದದಲ್ಲಿ ನೀವೇ ಗೆಲ್ಲಬೇಕೆಂಬ ಆಸೆಯಾ?
• ಸಮಯ, ಸ್ಪೇಸ್, ಸ್ವಾತಂತ್ರ್ಯ (Freedom) ಸಂಬಂಧದಲ್ಲಿ ಮುಖ್ಯವೇ?
• ಸ್ನೇಹಿತರು (Friends) ಎಷ್ಟು ಅಗತ್ಯ?