Asianet Suvarna News

ಪ್ರೇಮ ಸುದೀರ್ಘ, ದಾಂಪತ್ಯ ಕ್ಷಣಿಕ, ಯಾಕ್ಹೀಗೆ?

ದಾಂಪತ್ಯದಲ್ಲಿ ಇಗೋ ಸಮಸ್ಯೆ, ವರ್ತನೆಗಳಲ್ಲಿ ಭಿನ್ನತೆ ಇತ್ಯಾದಿಗಳಿಂದಲೂ ವಿರಸ ಹೆಚ್ಚಬಹುದು. ಬೇರ್ಪಡುವುದೇ ಇದಕ್ಕೆ ಪರಿಹಾರ ಅಂದುಕೊಂಡಾಗ ಡಿವೋರ್ಸ್‌ ಸಹಜವಾಗುತ್ತೆ.

Reasons for why newly married couple got divorce
Author
Bengaluru, First Published Nov 27, 2019, 3:12 PM IST
  • Facebook
  • Twitter
  • Whatsapp

ಮೂರ್ನಾಲ್ಕು ವರ್ಷ ಹಿಂದಿನ ಮಾತು. ಪಕ್ಕದ್ಮನೆ ಹುಡುಗಿ ಯಾರೋ ಹುಡುಗನ ಜೊತೆ ಓಡಾಡ್ತಾ ಇದ್ಲು. ಕಾಲೇಜ್‌ ಮುಗೀತು, ಕೆಲಸಕ್ಕೆ ಸೇರಿದ್ಲು. ಅವರಿಬ್ಬರು ಜೋಡಿ ಹಕ್ಕಿಗಳ ಹಾಗೆ ಲಾಂಗ್‌ ಡ್ರೈವ್‌, ವೀಕೆಂಡ್‌ ಪಾರ್ಟಿ ಅಂತ ಸುತ್ತುತ್ತಾ ಇದ್ರು. ಇವರಿಬ್ಬರ ಮನೆಯವ್ರು ಇರೋದು ಬೇರೆ ಕಡೆ. ಹಾಗಾಗಿ ಕ್ರಮೇಣ ವೀಕೆಂಡ್‌ನಲ್ಲಿ ಇಬ್ಬರೂ ರೂಮ್‌ನಲ್ಲಿ ಜೊತೆಗಿರತೊಡಗಿದರು. ವೀಕ್‌ ಡೇಸ್‌ನಲ್ಲಿ ಆ ಹುಡುಗ ಅವನ ರೂಮ್‌ನಿಂದಲೇ ಆಫೀಸ್‌ಗೆ ಓಡಾಡ್ತಾ ಇದ್ದ. ಕೆಲವೊಮ್ಮೆ ರಜೆ ಹಾಕಿ ಇಬ್ಬರೂ ಹೊರಟರೆ ನಾಲ್ಕೈದು ದಿನ ಬಿಟ್ಟು ಬರುತ್ತಿದ್ದರು.

ಮೂಡಿ ಗೆಳತಿಯ ಜೋಡಿ ಬಾಳೋದ್ಹೇಗೆ?

ಇಂಥಾ ಟೈಮ್‌ನಲ್ಲೇ ಹುಡುಗನ ಮನೆಯಲ್ಲಿ ವಿಷ್ಯ ಗೊತ್ತಾಯ್ತು. ಹೇಗ್ಹೇಗೋ ಹುಡುಗಿ ಮನೆಯವರ ಸಂಪರ್ಕ ಸಾಧಿಸಿ ಅವರಿಬ್ಬರಿಗೂ ಮದುವೆ ಮಾಡುವ ಮಾತುಕತೆಗೆ ಶುರು ಹಚ್ಚಿದರು. ಇಷ್ಟುವರ್ಷ ಜೊತೆಗಿದ್ವಿ, ಇನ್ಮೇಲೆ ಒಟ್ಟಿಗೇ ಇರಬಹುದಲ್ಲಾ ಅನ್ನುವ ಆಸೆಯಲ್ಲಿ ಆ ಹುಡುಗ ಹುಡುಗಿ ಮದುವೆಗೆ ಒಪ್ಪಿದರು. ಗ್ರ್ಯಾಂಡ್‌ ಆಗಿ ಮದುವೆ, ರಿಸೆಪ್ಶನ್‌ ಎಲ್ಲಾ ಮುಗೀತು. ಹುಡುಗ ಹುಡುಗಿ ಹನಿಮೂನ್‌ಗೆ ಮಲೇಷ್ಯಾಗೆ ಹೋಗಿ ಬಂದಿದ್ದೂ ಆಯ್ತು.

ಇನ್ನೂ ಒಂದು ವರ್ಷ ಆಗಿಲ್ಲ, ಆಗದೇ ಬಂತು, ಅವರಿಬ್ಬರ ಡಿವೋರ್ಸ್‌ ಸುದ್ದಿ!

‘ಅರೆ, ಮೂರು ವರ್ಷ ಅಷ್ಟುಚೆನ್ನಾಗಿ ಓಡಾಡಿಕೊಂಡಿದ್ದವರು ಮದ್ವೆಯಾಗಿ ಒಂದೇ ವರ್ಷಕ್ಕೆ ಡಿವೋರ್ಸ್‌ ಆದ್ರಾ..’ ಅನ್ನೋದು ಈ ಹುಡುಗ ಹುಡುಗಿ ಆಪ್ತರಿಗೆ ಅಚ್ಚರಿಯ ವಿಷ್ಯ.

ಸಾನಿಯಾ, ಶುಭ್‌ ಮೊದಲ ಸಲ ಮೀಟ್‌ ಆಗಿದ್ದು ಆಫೀಸ್‌ಗೆ ಸಂಬಂಧಪಟ್ಟಮೀಟಿಂಗ್‌ನಲ್ಲಿ. ಒಂಥರಾ ಲವ್‌ ಅಟ್‌ ಫಸ್ಟ್‌ ಸೈಟ್‌ ಅಂತಾರಲ್ಲ, ಹಾಗಾಯ್ತು. ಸುಮ್‌ ಸುಮ್ನೇ ಕಾಲ್‌, ಮೆಸೇಜ್‌ ಹೆಚ್ಚಾಯ್ತು. ಆಫೀಸ್‌ ಮೀಟಿಂಗ್‌ನಲ್ಲಿ ಸಿಕ್ಕವರ ಪರ್ಸನರ್‌ ಭೇಟಿಗಳು ರಂಗೇರತೊಡಗಿದವು.

ಎಲ್ಲ ಕಡೆ ಆಗುವಂತೆ ವನ್‌ ಫೈನ್‌ ಡೇ ಇವರಿಬ್ಬರೂ ಸಪ್ತಪದಿ ತುಳಿದರು. ಹಳೇ ಸಿನಿಮಾ, ಕಥೆಗಳಲ್ಲಿ ಆಗೋ ಥರ ‘ಶುಭಂ’ ಅಂತ ಮುಗ್ದು ಹೋಗ್ಲಿಲ್ಲ. ಆಮೇಲೆ ಕಂಪ್ಲೀಟ್‌ ಸೀನ್‌ ಚೇಂಜ್‌ ಆಯ್ತು. ಸಣ್ಣದಾಗಿ ಶುರುವಾಗಿದ್ದ ಅಸಮಾಧಾನ ಹೆಚ್ಚಾಯ್ತು. ಇಬ್ಬರ ನಡುವೆ ಗ್ಯಾಪ್‌ ಹೆಚ್ಚುತ್ತಾ ಹೋಯ್ತು. ಕೆಲವೇ ತಿಂಗಳಲ್ಲಿ ಇಬ್ಬರ ಒಪ್ಪಿಗೆಯ ಮೇಲೆ ಡಿವೋರ್ಸ್‌ ಆಯ್ತು.

ಸಂಬಂಧದಲ್ಲಿ ಈ ವಿಷಯಗಳು ನಿಮ್ಮವನನ್ನು ಅಭದ್ರತೆಗೆ ದೂಡುತ್ತವೆ!

ಮೊನ್ನೆ ಜೆಸಿ ನಗರ ಸಿಗ್ನಲ್‌ನಲ್ಲಿ ಗಾಡಿ ನಿಲ್ಲಿಸಿ ಸಿಗ್ನಲ್‌ ಬಿಡೋದನ್ನೇ ಕಾಯ್ತಾ ಇದ್ದಾಗ ಪಕ್ಕದಲ್ಲಿ ಯಾರೋ ಹಾಯ್‌ ಅಂದಹಾಗಾಯ್ತು. ನೋಡಿದ್ರೆ ಶಿಶಿರ. ಹಳೇ ಫ್ರೆಂಡ್‌. ರೀಸೆಂಟಾಗಿ ಮದ್ವೆ ಆಗಿದ್ದ. ಫ್ರೆಂಡ್ಸ್‌ ಎಲ್ಲ ಮದ್ವೆಗೆ ಹೋಗಿ ರೇಗಿಸಿ, ಕಾಲೆಳೆದು ಬಂದಿದ್ದೂ ಆಗಿತ್ತು. ಆಮೇಲೆ ದಂಪತಿ ಮಲೇಶ್ಯಾಗೆ ಹೋಗಿದ್ದರು. ಇವ್ನು ಮರಳಿ ಇಲ್ಲಿಗೆ ಬಂದಿದ್ದು ಗೊತ್ತೇ ಇರಲಿಲ್ಲ. ‘ಹೇಗಿದ್ದಾಳೋ ವೈನಿ..’ ಅಂತ ಕೇಳಿದ್ರೆ ತಲೆ ತಗ್ಗಿಸಿದ. ‘ಅದೆಲ್ಲ ಬಿಟ್ಹಾಕು ಮಚ್ಚಾ, ನೀ ಹೇಗಿದ್ಯಾ..’ ಅಂತ ಹಾರಿಕೆಯ ಮಾತಾಡಿ ಸಿಗ್ನಲ್‌ ಬಿಟ್ಟಿದ್ದೇ ಅಕ್ಸಿಲೇಟರ್‌ ತಿರುವಿಯೇ ಬಿಟ್ಟ.

ಇದರಿಂದ ಕಲಿತ ನೀತಿ: ಮದ್ವೆಯಾದ ಜೋಡಿ ಒಟ್ಟಿಗಿದ್ದಾರೆ ಅಂತ ಕನ್‌ಫಮ್‌ರ್‍ ಆಗದೇ ಒಬ್ಬರ ಬಗ್ಗೆ ಇನ್ನೊಬ್ಬರಲ್ಲಿ ವಿಚಾರಿಸಬಾರದು.

ನಮ್‌ ಆ್ಯಂಜಲಿನಾ ಜೋಲಿಯನ್ನೇ ನೋಡಿ. ಅಷ್ಟುವರ್ಷ ಬ್ರಾಡ್‌ಪಿಟ್‌ ಜೊತೆಗೆ ರಿಲೇಶನ್‌ಶಿಪ್‌ನಲ್ಲಿದ್ದವಳು, ಮದ್ವೆಯಾದ ಎರಡೇ ವರ್ಷಕ್ಕೆ ಸಪರೇಟ್‌ ಆದ್ರು.

ಈ ಕಾಲದ ಹೊಸ ಟ್ರೆಂಡ್‌ನ ಹಾಗಿದೆ - ಸುದೀರ್ಘ ಪ್ರೇಮ ಹಾಗೂ ಕ್ಷಣಿಕ ದಾಂಪತ್ಯ. ಇದ್ಯಾಕೆ ಹೀಗಾಯ್ತು ಅಂತ ಬಹಳ ಜನ ಈ ಬಗ್ಗೆ ಅಧ್ಯಯನವನ್ನೂ ಮಾಡಿದ್ದಾರೆ. ಇನ್‌ಸ್ಟಾದ ರಂಗು ರಂಗಿನ ಕಲ್ಪನಾ ಜಗತ್ತಿನಲ್ಲಿರುವ ಈ ಕಾಲದ ಜೋಡಿಗೆ ಮದುವೆಯೆಂಬ ವಾಸ್ತವವನ್ನು ಹಿಂದಿನಂತೆ ಸಹಿಸಿಕೊಂಡಿರಲು ಸಾಧ್ಯವಿಲ್ಲ ಅನ್ನೋದು ಲೇಟೆಸ್ಟ್‌ ಅಧ್ಯಯನದ ಸಾರ. ಈ ಕೇಸ್‌ಗಳನ್ನು ಕೆದಕುತ್ತಾ ಹೋದರೆ, ಡಿವೋರ್ಸ್‌ಗೆ ಸಿಗೋ ಕಾರಣಗಳು ಹಲವು.

ಗಂಡ-ಹೆಂಡತಿ ಖುಷಿಯಾಗಿರುವುದು ಪ್ರತ್ಯೇಕ ಬಾತ್‌ರೂಂ ಹೊಂದುವುದರಲ್ಲಿದೆಯಂತೆ!

- ಫ್ಯಾಮಿಲಿ ಜವಾಬ್ದಾರಿಗಳು: ಹುಡುಗ ಒಬ್ಬನೇ ಇದ್ದಾಗ ಸಂಬಂಧ ಚೆನ್ನಾಗಿಯೇ ಇರುತ್ತೆ. ಆದರೆ ಹುಡುಗನ ಮನೆಯವರು, ಫ್ಯಾಮಿಲಿ ರೆಸ್ಪಾಸಿಬಿಲಿಟಿ ಇತ್ಯಾದಿ ಬಂದಾಗ ಕಿರಿಕಿರಿ ಶುರುವಾಗುತ್ತೆ. ಅಪ್ಪ ಅಮ್ಮ ಫ್ರೆಂಡ್ಸ್‌ ಅಷ್ಟೇ ಜಗತ್ತು ಅಂತ ತಿಳಿದ ಹುಡುಗಿ ಹೊಸ ಬದುಕಿಗೆ ಅಡ್ಜೆಸ್ಟ್‌ ಆಗೋದು ಕಷ್ಟಆಗುತ್ತೆ. ಹುಡುಗ ಆಗ ಹುಡುಗಿಯನ್ನು ಕನ್ವಿನ್ಸ್‌ ಮಾಡಬೇಕು. ಸಮಾಧಾನದಿಂದ ಅವಳಿಗೆ ತನ್ನ ಫ್ಯಾಮಿಲಿ ಗುಣಾವಗುಣ ತಿಳಿಸಬೇಕು. ಆಗ ಇಂಥ ಸಮಸ್ಯೆ ಕಡಿಮೆಯಾಗುತ್ತೆ ಅಂತಾರೆ ಆಪ್ತ ಸಲಹೆಗಾರರು.

- ಹಣಕಾಸಿನ ಸಮಸ್ಯೆ: ‘ಅವ್ನು ಸುಮ್ನೇ ಖರ್ಚು ಮಾಡ್ತಾನೆ’, ‘ಅವಳು ಸೇವಿಂಗ್ಸ್‌ ಮಾಡೋದೇ ಇಲ್ಲ..’ ಈ ಥರದ ದೂರುಗಳು ಸಾಮಾನ್ಯ. ಇಬ್ಬರೂ ಬೇರೆಯಿದ್ದಾಗ ಬರುವ ಹಣದಲ್ಲಿ ಲೈಫು ಚೆನ್ನಾಗಿಯೇ ಇರುತ್ತೆ. ಆದರೆ ಮನೆ ಮಾಡುತ್ತೇವೆ, ಫä್ಯಚರ್‌ ಪ್ಲಾನ್‌ಗಳ ವಿಚಾರಕ್ಕೆ ಬಂದರೆ ಎಷ್ಟುಹಣ ಇದ್ದರೂ ಸಾಲದು. ಅದರಲ್ಲೂ ಒಬ್ಬರು ಬೆಜವಾಬ್ದಾರಿಯಿಂದ ಇದ್ದರೆ ವಿರಸ ಹೆಚ್ಚುತ್ತದೆ.

ಇಗೋ ಸಮಸ್ಯೆ, ವರ್ತನೆಗಳಲ್ಲಿ ಭಿನ್ನತೆ ಇತ್ಯಾದಿಗಳಿಂದಲೂ ವಿರಸ ಹೆಚ್ಚಬಹುದು. ಬೇರ್ಪಡುವುದೇ ಇದಕ್ಕೆ ಪರಿಹಾರ ಅಂದುಕೊಂಡಾಗ ಡಿವೋರ್ಸ್‌ ಸಹಜವಾಗುತ್ತೆ.

Follow Us:
Download App:
  • android
  • ios