ಗಂಡ ತೋರಿಸುವ ಪ್ರೀತಿ ಉಸಿರುಗಟ್ಟಿಸುತ್ತಿದ್ಯಾ, ಇಗ್ನೋರ್ ಮಾಡೋದು ಒಳ್ಳೇದಲ್ಲ!

ದಾಂಪತ್ಯದಲ್ಲಿ ಸಣ್ಣಪುಟ್ಟ ಸಮಸ್ಯೆ ಸಾಮಾನ್ಯ. ಕೆಲವೊಂದು ಗಂಭೀರವಾಗಿರುತ್ತದೆ. ಅದಕ್ಕೆ ಸಂಗಾತಿ ಸ್ವಭಾವ ಕಾರಣವಾಗಿರುತ್ತದೆ. ಇದನ್ನು ನಿರ್ಲಕ್ಷ್ಯ ಮಾಡಿದ್ರೆ ಅಪಾಯವುಂಟಾಗುತ್ತದೆ. ಆದ್ರೂ ಅನೇಕರು ಇದೇ ಸಂಬಂಧದಲ್ಲಿ ಮುಂದುವರೆಯುತ್ತಾರೆ. ಅದಕ್ಕೆ ಕಾರಣ ಇಲ್ಲಿದೆ. 
 

Reason Why People Ignore Red Flags In Relationships roo

ಸಂಬಂಧದ ಆರಂಭ ಯಾವಾಗ್ಲೂ ಸ್ವರ್ಗದಲ್ಲಿರುವ ಅನುಭವ ನೀಡುತ್ತದೆ. ಮದುವೆಯಾದ ಹೊಸದರಲ್ಲಿ, ಹನಿಮೂನ್ ಸಮಯದಲ್ಲಿ ಸಂಗಾತಿಗಳು ಬಹಳ ಖುಷಿಯಲ್ಲಿರುತ್ತಾರೆ. ಇದಕ್ಕೆ ಕಾರಣ ಸಂಗಾತಿಗಳ ಉತ್ತಮ ನಡವಳಿಕೆ. ಆರಂಭದಲ್ಲಿ ಎಲ್ಲರೂ ತಮ್ಮ ಅತ್ಯುತ್ತಮತೆಯನ್ನು ಪ್ರದರ್ಶಿಸಲು ನೋಡ್ತಾರೆ. ಅಲ್ಲಿ ಅವರ ಮೂಲ ಸ್ವಭಾವದ ಪ್ರದರ್ಶನವಾಗೋದಿಲ್ಲ. ಫಸ್ಟ್ ಇಂಪ್ರೆಶನ್ ಈಸ್ ಎ ಬೆಸ್ಟ್ ಇಂಪ್ರೆಶನ್ ಎನ್ನುವ ಮಾತಿದೆ. ಇದನ್ನು ಬುದ್ಧಿವಂತಿಕೆ ಎಂದು ತಜ್ಞರು ಕರೆಯುತ್ತಾರೆ. ಸಂಗಾತಿ ಮೇಲೆ ನೀವು ಮೊದಲ ಬಾರಿಯೇ ಒಳ್ಳೆ ಅಭಿಪ್ರಾಯ ಮೂಡಿಸಿದ್ರೆ ನಿಮ್ಮ ಕೆಟ್ಟ ಭಾವನೆಗಳನ್ನು ಅವರು ನಿರ್ಲಕ್ಷ್ಯ ಮಾಡ್ತಾ ಬರ್ತಾರೆ. ನಾವಿಂದು ಸಂಬಂಧದಲ್ಲಿ ರೆಡ್ ಫ್ಲಾಗ್ ನಿರ್ಲಕ್ಷ್ಯ ಮಾಡಲು ಕಾರಣವೇನು ಎಂಬುದನ್ನು ನಿಮಗೆ ಹೇಳ್ತೇವೆ.

ರೆಡ್ ಫ್ಲಾಗ್ (Red Flag) ಅಂದರೇನು? : ರೆಡ್ ಫ್ಲಾಗ್ ಹೀಗೆ ಇರುತ್ತದೆ ಎನ್ನಲು ಸಾಧ್ಯವಿಲ್ಲ. ಇದು ಒಂದು ಸಂಬಂಧದಿಂದ ಇನ್ನೊಂದು ಸಂಬಂಧಕ್ಕೆ ಹಾಗೂ ಒಂದು ವ್ಯಕ್ತಿಯಿಂದ ಇನ್ನೊಂದು ವ್ಯಕ್ತಿಗೆ ಭಿನ್ನವಾಗಿರುತ್ತದೆ. ಸಂವಹನ ಸಮಸ್ಯೆ,ಮಾತನಾಡುವ ಸಮಸ್ಯೆಯಂತಹ ಸಣ್ಣ ಸಮಸ್ಯೆ ಅಥವಾ ದುರುಪಯೋಗ ಮತ್ತು ಹಿಂಸಾಚಾರ (Violence) ಕ್ಕೆ ಕಾರಣವಾಗುವ ಕೋಪದಂತ ದೊಡ್ಡ ಸಮಸ್ಯೆಯೂ ಈ ರೆಡ್ ಫ್ಲಾಗ್ ನಲ್ಲಿ ಸೇರುತ್ತದೆ. 

ರೆಡ್ ಫ್ಲಾಗ್ ನಲ್ಲಿ ಬರುವ ಅಂಶಗಳು : 
ಗೌರವ (Respect) ದ ಕೊರತೆ : ನಿಮ್ಮ ಇಷ್ಟ – ಕಷ್ಟಕ್ಕೆ ಸ್ಪಂದಿಸದಿರುವ, ಸಾರ್ವಜನಿಕ ಪ್ರದೇಶದಲ್ಲಿ ನಿಮಗೆ ಅಗೌರವ ತೋರುವ, ನಿಮ್ಮನ್ನು ಗೇಲಿ ಮಾಡುವ, ನಿಮ್ಮ ಭಾವನೆಗಳನ್ನು ಗೌರವಿಸದೆ ನಿಮಗೆ ನೋವುಂಟು ಮಾಡುವುದು ರೆಡ್ ಫ್ಲಾಗ್ ನಲ್ಲಿ ಸೇರಿದೆ.

ಯಾಕೆ ಹುಡುಗೀರೇ ಮೊದಲು ಲವ್ ಪ್ರಪೋಸ್ ಮಾಡಲ್ಲ ಗೊತ್ತಾ?

ಪೊಸೆಸಿವ್‌ನೆಸ್ ಮತ್ತು ಅಭದ್ರತೆ (Possessiveness and Feeling of Insecurity): ನಿಮ್ಮ ಸಂಗಾತಿ ನಿಮ್ಮ ಮೇಲೆ ಅತಿಯಾದ ಪ್ರೀತಿ ತೋರಿಸುತ್ತಿದ್ದು ಅದು ನಿಮ್ಮ ಉಸಿರುಗಟ್ಟಿಸುತ್ತಿದ್ದರೆ ಅದನ್ನು ಕೂಡ ರೆಡ್ ಫ್ಲಾಗ್ ನಲ್ಲಿ ಸೇರಿಸಬೇಕು. ಬೇರೆಯವರ ಜೊತೆ ನಿಮಗೆ ಮಾತನಾಡಲು ಕೊಡದಿರುವುದು, ನಿಮ್ಮ ಫೋನ್ ಪರಿಶೀಲಿಸುವುದು, ನಿಮ್ಮನ್ನು ಅನುಮಾನದಿಂದ ನೋಡುವುದು ಇದರಲ್ಲಿ ಸೇರಿದೆ.

ಅಪ್ರಾಮಾಣಿಕತೆ ಮತ್ತು ಸುಳ್ಳು (Dishonest and Lie) : ಪ್ರತಿಯೊಬ್ಬರೂ ತಮಗೆ ನಿಷ್ಠರಾಗಿರುವ ಸಂಗಾತಿಯನ್ನು ಬಯಸುತ್ತಾರೆ. ಆದ್ದರಿಂದ ಪಾಲುದಾರರು ತಮ್ಮ ಇರುವಿಕೆಯ ಬಗ್ಗೆ ಅಥವಾ ಸಣ್ಣಪುಟ್ಟ ವಿಷಯಗಳ ಬಗ್ಗೆ ನಿರಂತರವಾಗಿ ಸುಳ್ಳು ಹೇಳಿದಾಗ ಅದು ಬಹಳಷ್ಟು ಒತ್ತಡವನ್ನು ಉಂಟುಮಾಡಬಹುದು. ಇದು ಸಂಬಂಧದಲ್ಲಿ ಅಪನಂಬಿಕೆಯನ್ನೂ ಉಂಟುಮಾಡುತ್ತದೆ. 

ರೆಡ್ ಫ್ಲಾಗ್ ನಿರ್ಲಕ್ಷ್ಯ ಮಾಡೋದು ಏಕೆ? : ಇಲ್ಲಿ ನಾವು ನಮ್ಮವರನ್ನು ಹೇಗೆ ನೋಡ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಸಕಾರಾತ್ಮಕ ದೃಷ್ಟಿಯಿಂದ ಸಂಗಾತಿಯನ್ನು ನೋಡಿದಾಗ ಅವರ ನಕಾರಾತ್ಮಕತೆ ನಮಗೆ ಕಾಣಿಸೋದಿಲ್ಲ. ಅವರ ಸ್ವಭಾವ ಹಾನಿಕಾರಕವಾಗಿದ್ದರೂ ನಾವದನ್ನು ನಿರ್ಲಕ್ಷ್ಯ ಮಾಡಲು ಶುರು ಮಾಡ್ತೇವೆ. ಆದ್ರೆ ಇದೇ ನಿರ್ಲಕ್ಷ್ಯ ಮುಂದೆ ತೊಂದರೆಯನ್ನುಂಟು ಮಾಡುತ್ತದೆ. ಜನರು ಈ ಕೆಳಗಿನ ಕಾರಣಗಳಿಗೆ ರೆಡ್ ಫ್ಲಾಗ್ ನಿರ್ಲಕ್ಷ್ಯ ಮಾಡ್ತಾರೆ. 

ಆಶಾವಾದ (Optimism): ಜನರು ಮುಂದೆ ನಮ್ಮ ಸಂಬಂಧ ಚೆನ್ನಾಗಾಗುತ್ತದೆ ಎನ್ನುವ ಆಶಾವಾದದಲ್ಲಿ ಬದುಕುತ್ತಾರೆ. ರೆಡ್ ಫ್ಲಾಗ್ ಸ್ವಭಾವ ಸರಿ ಹೋಗುತ್ತದೆ ಎನ್ನುವ ಆಸೆಯಲ್ಲೇ ಅವರು ಜೀವನ ಕಳೆಯುತ್ತಾರೆ.

ಸಂವೇದನಾಶೀಲತೆ (Sensitivity): ರೆಡ್ ಫ್ಲಾಗ್ ನಿರ್ಲಕ್ಷ್ಯ ಮಾಡುವ ಜನರು ಸಂವೇದನಾಶೀಲರಾಗಿರುತ್ತಾರೆ. ಅವರಿಗೆ ಬೇರೆಯಾಗಲು ಭಯ ಕಾಡುತ್ತದೆ. ಸಂಗಾತಿ ದುಷ್ಟರಾಗಿದ್ದರೂ ಅವರಿಗೆ ಅಂಟಿಕೊಳ್ಳುವ ಸ್ವಭಾವ ಹೊಂದಿರುತ್ತಾರೆ.

ಒಂಟಿತನದ ಭಯ (Fear of Loneliness): ಒಂಟಿತನವು ಅನೇಕ ಜನರಿಗೆ ಒಂದು ದೊಡ್ಡ ಭಯವಾಗಿದೆ. ರೆಡ್ ಫ್ಲಾಗ್ ಬಗ್ಗೆ ಮಾತನಾಡಿ ಬೇರೆಯಾದ್ರೆ ಮತ್ತೆ ಏಕಾಂಗಿಯಾಗಬೇಕು ಎಂದು ಅನೇಕ ಜನರು ನಂಬುತ್ತಾರೆ. ಆದ್ದರಿಂದ ಆ ಭಾವನೆಯನ್ನು ತಪ್ಪಿಸಲು, ಜನರು ಈ ನಕಾರಾತ್ಮಕ ಅಂಶಗಳನ್ನು ನಿರ್ಲಕ್ಷಿಸುತ್ತಾರೆ. 

ಆಫೀಸಲ್ಲಿ ಮೀಟಿಂಗ್‌ನಲ್ಲಿದ್ದಾಗಲೇ ನಿಮಿರುವಿಕೆ, ಇಂಥ ಸಮಸ್ಯೆಗೇನು ಪರಿಹಾರ?

ಸ್ವಾಭಿಮಾನ (Self Respect): ಕಡಿಮೆ ಸ್ವಾಭಿಮಾನದ ಜನರು ಇದನ್ನು ನಿರ್ಲಕ್ಷ್ಯ ಮಾಡುತ್ತಾರೆ. ಹಿಂದಿನ ದಿನಗಳಿಗೆ ಹೋಲಿಸಿ, ಇದು ಅದಕ್ಕಿಂತ ಉತ್ತಮವಾಗಿದೆ ಎಂದು ಭಾವಿಸಿ, ಇದೇ ಸಂಬಂಧದಲ್ಲಿ ಮುಂದುವರೆಯಲು ಬಯಸುತ್ತಾರೆ.

ಅರಿವು (Awareness): ಕೆಲವರಿಗೆ ಒಳ್ಳೆಯದು ಮತ್ತು ಕೆಟ್ಟದರ ನಡುವಿನ ವ್ಯತ್ಯಾಸ ತಿಳಿದಿರುವುದಿಲ್ಲ. ಹಾಗಾಗಿ ಅವರು ರೆಡ್ ಫ್ಲಾಗನ್ನು ನಿರ್ಲಕ್ಷ್ಯ ಮಾಡ್ತಾರೆ. 
 

Latest Videos
Follow Us:
Download App:
  • android
  • ios