ಯಾಕೆ ಹುಡುಗೀರೇ ಮೊದಲು ಲವ್ ಪ್ರಪೋಸ್ ಮಾಡಲ್ಲ ಗೊತ್ತಾ?
ನಾವು ಸಿನಿಮಾದಲ್ಲಿ ನೋಡಲಿ ಅಥವಾ ರಿಯಲ್ ಆಗಿ ನೋಡಿರೋದ್ರಲ್ಲೂ ಎಲ್ಲಾ ಕಡೆನೂ ಹುಡುಗರೇ ಮೊದಲಾಗಿ ಹುಡುಗಿಯರಿಗೆ ಪ್ರಪೋಸ್ ಮಾಡ್ತಾರೆ. ಹುಡುಗಿಯರೇ ಪ್ರಪೋಸ್ ಮಾಡಿದ್ದು ಕಡಿಮೆ, ಯಾಕೆ ಹೀಗೆ? ಇದ್ರ ಬಗ್ಗೆ ನಿಮಗೆ ಏನು ಅನಿಸುತ್ತೆ?
ಹೆಚ್ಚಿನ ಹುಡುಗರು ಪ್ರಪೋಸ್ (love propose) ಮಾಡುವುದನ್ನು ನೀವು ನೋಡಿರಬೇಕು. ಹುಡುಗಿಯರು ತಾವೇ ಹೋಗಿ ಪ್ರಪೋಸ್ ಮಾಡೋದು ಕಡಿಮೆ. ತಮಗೆ ಇಷ್ಟ ಇದ್ರೂ ಸಹ ಅದನ್ನ ಹೇಳದೇ ಸುಮ್ನೆ ಇರ್ತಾರೆ. ಯಾಕೆ ಹುಡುಗೀರು ಪ್ರಪೋಸ್ ಮಾಡೋಕೆ ಹಿಂಜರಿತಾರೆ ಗೊತ್ತಾ?
ಹಾರ್ಟ್ ಬ್ರೇಕ್ ಆಗೋ ಭಯ: ಒಂದು ವೇಳೆ ಆ ಹುಡುಗ ನನ್ನ ಪ್ರಪೋಸ್ ಒಪ್ಪಿಕೊಳ್ಳದೇ ಇದ್ರೆ ಎನ್ನುವ ಹಾರ್ಟ್ ಬ್ರೇಕ್ (heart break)ಆಗುವ ಭಯದಿಂದ ಹೆಚ್ಚಿನ ಹುಡುಗಿಯರು ಹುಡುಗರಿಗೆ ಪ್ರಪೋಸ್ ಮಾಡಲು ನಿರ್ಧರಿಸಲು ಸಾಧ್ಯವಾಗುವುದಿಲ್ಲ.
ಮೌಲ್ಯ ಕಡಿಮೆಯಾಗುತ್ತದೆ: ಇದು ನಿಜಾ… ಅನೇಕ ಹುಡುಗಿಯರು ಮೊದಲು ತಾವೇ ಹೋಗಿ ಹುಡುಗರಿಗೆ ಪ್ರಪೋಸ್ ಮಾಡಿದರೆ, ತಮ್ಮ ಮೌಲ್ಯ ಕಡಿಮೆಯಾಗುತ್ತದೆ ಎಂದು ಅವರು ಭಾವಿಸುತ್ತಾರೆ. ಅದಕ್ಕಾಗಿಯೇ ಅವರು ಪ್ರಪೋಸ್ ಮಾಡೋದಿಲ್ಲ.
ತಿರಸ್ಕಾರದ ಭಯ: ಪ್ರತಿ ಹುಡುಗಿಯ ಹೃದಯದಲ್ಲಿ ತಿರಸ್ಕಾರದ (fear of rejection) ಭಯವಿದೆ. ಈ ಕಾರಣದಿಂದಾಗಿ, ಹುಡುಗಿಯರು ಹುಡುಗರಿಗೆ ಪ್ರಪೋಸ್ ಮಾಡುವುದನ್ನು ತಪ್ಪಿಸುತ್ತಾರೆ. ನಿಮಗೂ ಕೂಡ ಹಾಗೇ ಅನಿಸಿದೆಯೇ?
ಬೋಲ್ಡ್ ಆಗಿರಲು ಬಯಸೋದಿಲ್ಲ: ಮೊದಲು ಪ್ರಪೋಸ್ ಮಾಡುವವರು ತಮ್ಮನ್ನು ತಾವು ಬೋಲ್ಡ್ ಎಂದು ಭಾವಿಸಲು ಪ್ರಾರಂಭಿಸುತ್ತಾರೆ. ಆದರೆ ಕೆಲವು ಹುಡುಗಿಯರು ತಾವು ಬೋಲ್ಡ್ ಆಗಿರೋದಕ್ಕೆ ಇಷ್ಟಪಡೋದಿಲ್ಲ, ಬದಲಾಗಿ ಸೈಲೆಂಟ್ ಆಗಿರೋದಕ್ಕೆ ಇಷ್ಟಪಡ್ತಾರೆ.
ಬದ್ಧತೆಯ ಭಯ: ಹುಡುಗಿಯರು ಮೊದಲು ಪ್ರಪೋಸ್ ಮಾಡದಿರಲು ಮತ್ತೊಂದು ಮುಖ್ಯ ಕಾರಣವೆಂದರೆ ಬದ್ಧತೆಗೆ (commitment) ಹೆದರುವುದು. ಕೆಲವು ಹುಡುಗಿಯರು ಕಮೀಟ್ ಮೆಂಟ್ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ಅದಕ್ಕಾಗಿ ಪ್ರಪೋಸ್ ಮಾಡೋಕೆ ಹೋಗಲ್ಲ.
ಖಿನ್ನತೆಗೆ ಒಳಗಾಗಲು ಬಯಸುವುದಿಲ್ಲ: ಅನೇಕ ಹುಡುಗಿಯರು ಹುಡುಗನಿಗೆ ಪ್ರಪೋಸ್ ಮಾಡಿದರೆ, ಒಂದು ವೇಳೆ ಅವರು ರಿಜೆಕ್ಟ್ ಮಾಡಿದ್ರೆ, ತಾನು ಡಿಪ್ರೆಶನ್ ಗೆ (depression) ಜಾರುತ್ತೇನೆ ಎಂದು ಅಂದುಕೊಳ್ಳುತ್ತಾರೆ. ಆದರೆ ಅದು ನಿಜ, ಆಗಿರಲ್ಲ.
ಕಾಲ ಬದಲಾಗುತ್ತಿದೆ: ಆದಾಗ್ಯೂ, ಈಗ ಸಮಯವು ನಿಧಾನವಾಗಿ ಬದಲಾಗುತ್ತಿದೆ. ಈಗ ಹುಡುಗಿಯರು ಹುಡುಗರಿಗೆ ಪ್ರಪೋಸ್ ಮಾಡಲು ಪ್ರಾರಂಭಿಸಿದ್ದಾರೆ. ಪ್ರಪೋಸ್ ಮಾಡುವ ಹುಡುಗಿಯರ ಸಂಖ್ಯೆ ಹುಡುಗರ ಸಂಖ್ಯೆಗಿಂತ ತುಂಬಾ ಕಡಿಮೆ. ಆದರೂ ಮೊದಲಿಗಿಂತ ಜಾಸ್ತಿ ಇದೆ.