Asianet Suvarna News Asianet Suvarna News

ಡಿವೋರ್ಸ್ ಬಳಿಕ ಅರಿವಾಯಿತು ತಪ್ಪು:ಆದೇಶ ರದ್ದುಗೊಳಿಸಲು ಮನವಿ ಮಾಡಿದ ಜೋಡಿಗೆ ಕೋರ್ಟ್ ಶಾಕ್!

ಪರಸ್ಪರ ಒಪ್ಪಿಗೆ ಮೇರೆಗೆ ಜೋಡಿ ವಿಚ್ಛೇದನ ಪಡೆದುಕೊಂಡಿದೆ. ಆದರೆ ಬೇರೆಯಾಗಿ ತಪ್ಪು ಮಾಡಿದ್ದೇವೆ ಎಂದು ಅರಿತ ಜೋಡಿ, ಆದೇಶ ರದ್ದುಗೊಳಿಸುವಂತೆ ಕೋರ್ಟ್‌ಗೆ ಮನವಿ ಮಾಡಿದೆ. ಆದರೆ ಕೋರ್ಟ್ ಜೋಡಿಗೆ ಶಾಕ್ ನೀಡಿದೆ.
 

Punjab haryana high court denied to cancel divorce order after couple realized their mistake ckm
Author
First Published Aug 8, 2024, 10:16 AM IST | Last Updated Aug 8, 2024, 10:16 AM IST

ಚಂಡೀಘಡ(ಆ.08) ವಿಚ್ಚೇದನ ಪ್ರಕರಣ ಕುರಿತು ಹಲವು ಆಘಾತಕಾರಿ ವರದಿಗಳಿವೆ. ಮನಸ್ತಾಪ, ಬಿರುಕು ಸೇರಿದಂತೆ ಹಲವು ಕಾರಣಗಳಿಂದ ಸಂಬಂಧ ಮುರಿದು ಬೀಳುತ್ತಿದೆ. ಜನಸಾಮಾನ್ಯರಿಂದ ಹಿಡಿದು ಸೆಲೆಬ್ರೆಟಿಗಳವರೆಗೂ ವಿಚ್ಚೇದನ ಸಾಮಾನ್ಯವಾಗಿದೆ. ಇದೀಗ ವಿಶೇಷ ಪ್ರಕರಣವೊಂದು ವರದಿಯಾಗಿದೆ. ಜೋಡಿಯೊಂದು ಪರಸ್ಪರ ಒಪ್ಪಿಗೆ ಮೇರೆ ಡಿವೋರ್ಸ್ ಪಡೆದುಕೊಂಡಿದೆ. ವಿಚಾರಣೆ, ಕೌನ್ಸಿಲಿಂಗ್ ಸೇರಿದಂತೆ ಎಲ್ಲಾ ಪ್ರಕ್ರಿಯೆ ಮುಗಿಸಿದ ಕೋರ್ಟ್ ಡಿವೋರ್ಸ್ ಆದೇಶ ನೀಡಿದೆ. ಆದರೆ ಬೇರೆಯಾದ ಬೆನ್ನಲ್ಲೇ ಈ ಜೋಡಿಗೆ ತಪ್ಪಿನ ಅರಿವಾಗಿದೆ. ತಕ್ಷಣವೇ ಕೋರ್ಟ್ ಮೆಟ್ಟಿಲೇರಿದ ಜೋಡಿ, ವಿಚ್ಛೇದನ ಆದೇಶ ರದ್ದುಗೊಳಿಸುವಂತೆ ಮನವಿ ಮಾಡಿದೆ. ಆದರೆ ಕೋರ್ಟ್ ಶಾಕ್ ನೀಡಿದೆ.ವಿಚ್ಛೇದನ ಆದೇಶ ರದ್ದುಗೊಳಿಸಲು ಸಾಧ್ಯವಿಲ್ಲ ಎಂದಿದೆ.

ಚಂಡೀಘಡ ನಿವಾಸಿ ದಯಾನಂದ್ ಶರ್ಮಾ ಹಾಗೂ ಈತನ ಪತ್ನಿ ಮದುವೆಯಾಗಿ ಕೆಲ ವರ್ಷಗಳಾಗಿವೆ. ದಂಪತಿಗೆ ಪುಟಾಣಿ ಮಗಳಿದ್ದಾಳೆ. ಕೆಲ ಮನಸ್ತಾಪಗಳ ಕಾರಣಗಳಿಂದ ಇಬ್ಬರು ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದಾರೆ. ಈ ಕುರಿತು ವಿಚ್ಚೇದನಕ್ಕಾಗಿ ಕೋರ್ಟ್‌ಗೆ  ಅರ್ಜಿ ಸಲ್ಲಿಸಿದ್ದಾರೆ. ಸುದೀರ್ಘ  ವಿಚಾರಣೆ, ಕೌನ್ಸಿಲಿಂಗ್ ಬಳಿಕ ಕೋರ್ಟ್ ಡಿವೋರ್ಸ್ ಆದೇಶ ನೀಡಿದೆ. ಈ ವೇಲೆ ಅಪ್ರಾಪ್ತ ಮಗಳನ್ನು ತಾಯಿಯ ವಶಕ್ಕೆ ಕೋರ್ಟ್ ಒಪ್ಪಿಸಿದೆ. 

ದಢೂತಿ ದೇಹದಿಂದ ರಾತ್ರಿ ಮಂಚದಲ್ಲಿ ಜೊತೆಯಾಗಲು ಗಂಡನಿಂದ ಶುಲ್ಕ ಕೇಳಿದ ಪತ್ನಿ, ಮುಂದೇನಾಯ್ತು?

ಇಬ್ಬರು ಬೇರೆಯಾದ ಬಳಿಕ ಪುಟ್ಟ ಮಗು ಮಾನಸಿಕವಾಗಿ ಜರ್ಝರಿತಗೊಂಡಿದೆ. ಮಗುವಿನ ಆರೋಗ್ಯ ಕ್ಷೀಣಿಸಿದೆ. ಮಗು ತಾಯಿ ಜೊತೆಗಿದ್ದರೂ ಮೌನಕ್ಕೆ ಜಾರಿದೆ. ಮಾನಸಿಕಾಗಿ ಕುಗ್ಗಿ ಹೋದ ಮಗುವಿನಿಂದ ವಿಚ್ಚೇದನದಿಂದ ಬೇರೆ ಬೇರೆಯಾ ದಯಾನಂದ್ ಶರ್ಮಾ ಹಾಗೂ ಮಾಜಿ ಪತ್ನಿ ಆತಂಕಗೊಂಡಿದ್ದಾರೆ. ಈ ವೇಳೆ ಪತಿ ಹಾಗೂ ಪತ್ನಿಗೆ ತಮ್ಮ ತಪ್ಪಿನ ಅರಿವಾಗಿದೆ. ಮಗಳಿಗಾಗಿ ಇಬ್ಬರು ಒಂದಾಗಿ ಬದುಕಲು ನಿರ್ಧರಿಸಿದ್ದಾರೆ.

ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ ಮೆಟ್ಟಿಲೇರಿದ ಈ ಜೋಡಿ ಡಿವೋರ್ಸ್ ಆದೇಶ ರದ್ದುಗೊಳಿಸುವಂತೆ ಮನವಿ ಮಾಡಿದೆ. ಆದರೆ ಕೋರ್ಟ್ ನಿರಾಕರಿಸಿದೆ. ಹಿಂದೂ ಮದುವೆ ಕಾಯ್ದೆ ಸೆಕ್ಷನ್ 13 ಬಿ ಅಡಿಯಲ್ಲಿ ಡಿವೋರ್ಸ್ ನೀಡಲಾಗಿದೆ. ಇದೀಗ ಈ ಆದೇಶ ರದ್ದುಗೊಳಿಸಲು ಸಾಧ್ಯವಿಲ್ಲ. ಆದರೆ ದಂಪತಿಗೆ ಸೆಕ್ಷನ್ 15ರ ಅಡಿ ಮರು ಮದುವೆಯಾಗಲು ಅವಕಾಶವಿದೆ ಎಂದು ತೀರ್ಪು ನೀಡಿದೆ.

ಇದೇ ವೇಳೆ, ಮಹತ್ವದ ಎಚ್ಚರಿಕೆಯೊಂದನ್ನು ನೀಡಿದೆ. ಕುಟುಂಬವಾಗಿ ಜೀವನ ಆರಂಭಿಸುವ ದಂಪತಿಗಳು ಹಲವು ವಿಚಾರ ಗಮನದಲ್ಲಿಡಬೇಕು. ಕ್ಷುಲ್ಲಕ ಕಾರಣಕ್ಕೆ ವಿಚ್ಚೇದನ ಪಡೆಯುವದರಿಂದ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಹೀಗಾಗಿ ಹಲವು ಬಾರಿ ಯೋಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಕಿವಿ ಮಾತು ಹೇಳಿದೆ.

ಸೀರೆ ಕೊಡಿಸದ ಗಂಡನ ಪೊಲೀಸ್ ಠಾಣೆಗೆ ಮೆಟ್ಟಿಲೇರಿಸಿದ ಪತ್ನಿ, ಸಂಧಾನ ಮತ್ತಷ್ಟು ರೋಚಕ!
 

Latest Videos
Follow Us:
Download App:
  • android
  • ios