Asianet Suvarna News Asianet Suvarna News

ದಢೂತಿ ದೇಹದಿಂದ ರಾತ್ರಿ ಮಂಚದಲ್ಲಿ ಜೊತೆಯಾಗಲು ಗಂಡನಿಂದ ಶುಲ್ಕ ಕೇಳಿದ ಪತ್ನಿ, ಮುಂದೇನಾಯ್ತು?

ಮದುವೆಯಾಗಿ ಇಬ್ಬರು ಮಕ್ಕಳಾಗಿದೆ. ಆದರೆ ಗಂಡ ತುಂಬಾ ದಪ್ಪಗಿದ್ದಾನೆ ಎಂದು ಪತ್ನಿ ರಾತ್ರಿ  ವೇಳೆ ಸೆಕ್ಸ್‌ಗೆ ಫೀಸ್ ಕೇಳಿದ ಘಟನೆ ನಡೆದಿದೆ. ಇದರ ಪರಿಣಾಮ ಏನಾಗಿದೆ ಗೊತ್ತಾ?

Taiwan Wife ask fee for physical relationship with husband couple separated after divorce ckm
Author
First Published Aug 6, 2024, 10:12 PM IST | Last Updated Aug 6, 2024, 10:12 PM IST

ತೈವಾನ್(ಆ.06) ಮದುವೆಯಾದ ಮೊದಲ ರಾತ್ರಿ ಹೇಗೋ ಕಳೆದಿದೆ. ಹೀಗೆ ಸಂಸಾರವೂ ಸಾಗಿದೆ. ಮೂರು ವರ್ಷದಲ್ಲಿ 2 ಮಕ್ಕಳೂ ಆಗಿದೆ. ಆದರೆ ಮೂರನೇ ವರ್ಷದಿಂದ ಪತ್ನಿ ಒಂದೊಂದೆ ಕಂಡೀಷನ್ ಹಾಕಿದ್ದಾಳೆ. ಮೂರನೇ ವರ್ಷದಲ್ಲಿ ತಿಂಗಳಿಗೆ ಒಂದು ಬಾರಿ ಮಾತ್ರ ಸೆಕ್ಸ್ ಎಂದು ಕಂಡೀಷನ್ ಹಾಕಿದ್ದಾಳೆ. ಗಂಡ ಒಪ್ಪಿಕೊಂಡಿದ್ದಾನೆ. ಆದರೆ ಕೆಲ ದಿನಗಳಲ್ಲೇ ಕಂಡೀಷನ್ ಬದಲಾಗಿದೆ, ತಿಂಗಳಿಗೊಮ್ಮೆ ಸೇರಲೂ ಶುಲ್ಕ ನೀಡಬೇಡು ಎಂದು ಷರತ್ತು ಹಾಕಿದ್ದಾಳೆ. ಪತಿ ದಢೂತಿ ಅನ್ನೋ ಕಾರಣಕ್ಕೆ ರಾತ್ರಿ ಜೊತೆ ಸೇರಲು ಶುಲ್ಕ ಕೇಳಿದ್ದಾಳೆ. ಪತ್ನಿಯ ಕಂಡೀಷನ್‌ಗೆ ಬೇಸತ್ತ ಪತಿ, ಡಿವೋರ್ಸ್ ಪಡೆದುಕೊಂಡ ಘಟನೆ ತೈವಾನ್‌ನಲ್ಲಿ ನಡೆದಿದೆ.

ಒಂದು ರಾತ್ರಿ ಜೊತೆ ಸೇರಲು 15 ಅಮೆರಿಕನ್ ಡಾಲರ್ ಹಣ ಕೇಳಿದ್ದಾಳೆ. ಭಾರತೀಯ ರೂಪಾಯಿಗಳಲ್ಲಿ ಸರಿಸುಮಾರು 1259 ರೂಪಾಯಿ. ಇದು ಪತಿ ನೀಡಿದ ದೂರಿನಲ್ಲಿ ಉಲ್ಲೇಖವಾಗಿದೆ. ಮೊದಲು ಸೆಕ್ಸ್‌ಗೆ ನಿರಾಕರಿಸುತ್ತಿದ್ದಳು. ಆಕೆಯ ಷರತ್ತಿಗೆ ಒಪ್ಪಿ ಸೇರಲು ಹೋದರೆ ಶುಲ್ಕ ವಿಧಿಸುತ್ತಿದ್ದಳು ಎಂದು ಪತಿ ಆರೋಪಿಸಿದ್ದಾನೆ. 

ನನ್ನ ಕಾರಿನಲ್ಲಿ ಕೂರುವ ಯೋಗ್ಯತೆ ನಿನಗಿಲ್ಲ: ನಡು ರಸ್ತೆಯಲ್ಲಿ ಪತ್ನಿ ಇಳಿಸಿ ಹೊರಟ ಗಂಡ!

ಇದೊಂದು ವಿಚಿತ್ರ ಘಟನೆ. 2014ರಲ್ಲಿ ಇವರ ಮದುವೆಯಾಗಿದೆ. ಬಳಿಕ ಇಬ್ಬರು ಮಕ್ಕಳು ಆಗಿದೆ. 2017ರಲ್ಲಿ ತಿಂಗಳಿಗೊಮ್ಮೆ ಸೇರಬೇಕು ಅನ್ನೋ ಷರತ್ತು ವಿಧಿಸಿದ್ದಾಳೆ. 2019ರ ವೇಳೆ ಸಂಭೋಗ ಸಂಪೂರ್ಣ ನಿರಾಕರಿಸಿದ್ದಾಳೆ. 2021ರಲ್ಲಿ ಪತಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾಳೆ. ಈ ವೇಳೆ ಇನ್ನುಮುಂದೆ ಹೀಗೆ ಮಾಡುವುದಿಲ್ಲ ಎಂದು ಗಂಡನ ಕಾಲಿಗೆರಗಿ ಅತ್ತಿದ್ದಾಳೆ. ಹೀಗಾಗಿ ಅರ್ಜಿ ವಾಪಸ್ ಪಡೆದ ಪತಿಗೆ ಆಘಾತವಾಗಿದೆ.

ಅರ್ಜಿ ವಾಪಸ್ ಪಡೆದ ಬೆನ್ನಲ್ಲೇ ಪತ್ನಿಯ ವರಸೆ ಬದಲಾಗಿದೆ. ರಾತ್ರಿ ಜೊತೆ ಸೇರಲು ಶುಲ್ಕ ಕೇಳಲು ಆರಂಭಿಸಿದ್ದಾಳೆ. ತಮಾಷೆಯಾಗಿ ಕೇಳಿದ್ದಾಳೆ ಎಂದು ಮುಂದುವರಿದರೆ ಪತ್ನಿ ಕೆಂಡಾಮಂಡಲವಾಗಿದ್ದಾಳೆ. 15 ಅಮೆರಿಕನ್ ಡಾಲರ್ ನೀಡಿದರೆ ಮಾತ್ರ ಜೊತೆ ಸೇರಲು ಅವಕಾಶ ಎಂದಿದ್ದಾಳೆ.ಹಾಗಂತ ಪ್ರತಿ ದಿನ ಫೀಸ್ ನೀಡಿ ಜೊತೆ ಸೇರುವ ಅವಕಾಶವಿಲ್ಲ ಎಂದು ಮತ್ತೊಂದು ಷರತ್ತು ವಿಧಿಸಿದ್ದಾಳೆ.

 

ಹೀಗಾಗಿ ಎರಡನೇ ಬಾರಿ ಪತಿ ಡಿವೋರ್ಸ್ ಅರ್ಜಿ ಹಾಕಿದ್ದಾನೆ. ಈ ವೇಳೆ ಪತ್ನಿ ವಿಚ್ಚೇಧನ ನೀಡಲು ನಿರಾಕರಿಸಿದ್ದಾಳೆ. ಹೀಗಾಗಿ ವಿಚಾರಣೆ ಆರಂಭಗೊಂಡಿದೆ. ಈ ವೇಳೆ ಪತಿ ಆರೋಪಿಸಿದ ವಿಚಾರಗಳಿಗೆ ಹಲವು ದಾಖಲೆಗಳನ್ನು ಒದಗಿಸಿದ್ದಾನೆ. ವಿಚಾರಣೆ ನಡೆಸಿದ ಕೋರ್ಟ್ ಪತಿಗೆ ಡಿವೋರ್ಸ್ ಮಂಜೂರು ಮಾಡಿದೆ.

ಹಾರ ಬದಲಿಸುವ ಮುನ್ನ ಗೆಳೆಯ ಕಿವಿಯಲ್ಲಿ ಉದುರಿಸಿದ 2 ಶಬ್ದಕ್ಕೆ ಪ್ರಜ್ಞೆ ತಪ್ಪಿ ಬಿದ್ದ ವರ!
 

Latest Videos
Follow Us:
Download App:
  • android
  • ios