Relationship Problems : ಶಂಕ್ರಣ್ಣ–ಮೇಘನಾ ನೀವಾಗ್ಬಾರದೆಂದ್ರೆ ಇದನ್ನೋದಿ
ದಾಂಪತ್ಯ (Married Life)ದಲ್ಲಿ ಪ್ರೀತಿ,ಗೌರವ ಬಹಳ ಮುಖ್ಯ ನಿಜ. ಆದ್ರೆ ವಯಸ್ಸು (Age) ಕೂಡ ಈಗಿನ ಕಾಲದಲ್ಲಿ ಮಹತ್ವ ಪಡೆಯುತ್ತದೆ. ಪ್ರೀತಿ ಗುಂಗಿನಲ್ಲಿ ವಯಸ್ಸು ಹೆಚ್ಚಿರುವ ವ್ಯಕ್ತಿ ಜೊತೆ ದಾಂಪತ್ಯಕ್ಕೆ ಕಾಲಿಟ್ಟರೆ ಜೀವನ (Life) ಹಸನಾಗುವ ಬದಲು ಮುಳ್ಳಿನ ಹಾಸಿಗೆಯಾಗ್ಬಹುದು ಎಚ್ಚರ.
ಹಿಂದಿನ ಕಾಲದಲ್ಲಿ ಮದುವೆ (Marriage) ಗೆ ವಯಸ್ಸಿ (Age)ನ ಅಂತರವಿರಲಿಲ್ಲ. ಪತಿ –ಪತ್ನಿ ಮಧ್ಯೆ 10 – 15 ವರ್ಷಗಳ ಅಂತರವಿರ್ತಾಯಿತ್ತು. ಆಗ ಕಾಲ ಬೇರೆಯಿತ್ತು. ವಯಸ್ಸಿನ ಅಂತರ ಹೆಚ್ಚು ಪರಿಣಾಮ ಬೀರ್ತಿರಲಿಲ್ಲ. ಆದ್ರೀಗ ಇಡೀ ಜಗತ್ತು ಬದಲಾಗಿದೆ. ಜನರ ಭಾವನೆಗಳು ಬದಲಾಗಿವೆ. ಜನರ ಆಲೋಚನೆ ಹಾಗೂ ಅವರ ಜೀವನ ಶೈಲಿ ಕೂಡ ಬದಲಾಗಿದೆ. ಈಗಿನ ದಿನಗಳಲ್ಲಿ ವಯಸ್ಸಿನ ಅಂತರ ಬಹಳ ಮುಖ್ಯ. ಆದ್ರೆ ಯುವಜನತೆ, ವಯಸ್ಸು ಮುಖ್ಯವಲ್ಲ, ಪ್ರೀತಿ,ಹೊಂದಾಣಿಗೆ ಅಗತ್ಯ ಎಂಬ ಭಾವನೆಯಲ್ಲಿದ್ದಾರೆ.
ಇದೇ ಕಾರಣಕ್ಕೆ ವಯಸ್ಸಿನ ಅಂತರ ಹೆಚ್ಚಿದ್ದರೂ, 20 ವರ್ಷಗಳಷ್ಟು ಅಂತರವಿದ್ದರೂ ಮದುವೆಗೆ ಮುಂದಾಗ್ತಿದ್ದಾರೆ. ಆದ್ರೆ ಈ ಮದುವೆ ಬಹುದಿನ ನಿಲ್ಲುತ್ತಿಲ್ಲ. ಕೆಲವರು ವಿಚ್ಛೇದನ ಪಡೆದ್ರೆ ಮತ್ತೆ ಕೆಲವರ ಬದುಕು ದುರಂತ ಅಂತ್ಯ ಕಾಣ್ತಿದೆ. ಇದಕ್ಕೆ ಶಂಕ್ರಣ್ಣ (shankranna) ಮತ್ತು ಮೇಘನಾ (Meghna) ಜೋಡಿ ಉತ್ತಮ ನಿದರ್ಶನ. ವಯಸ್ಸಿಗಿಂತ ಪ್ರೀತಿ ಮುಖ್ಯವೆಂದು ದಾಂಪತ್ಯಕ್ಕೆ ಕಾಲಿಟ್ಟ ಶಂಕ್ರಣ ಈಗ ಸಾವಿನ ದಾರಿ ತುಳಿದಿದ್ದಾರೆ. ತಜ್ಞರ ಪ್ರಕಾರ, ಪತಿ –ಪತ್ನಿ ಮಧ್ಯೆ ವಯಸ್ಸಿನ ಅಂತರ ಹೆಚ್ಚಾಗ್ತಿದ್ದಂತೆ ಸಮಸ್ಯೆ ದುಪ್ಪಟ್ಟಾಗುತ್ತದೆಯಂತೆ. ಈ ದಂಪತಿ ಮಧ್ಯೆ ಏನೆಲ್ಲ ಸಮಸ್ಯೆ ಶುರುವಾಗುತ್ತದೆ ಎಂಬುದನ್ನು ನಾವಿಂದು ಹೇಳ್ತೇವೆ.
Suvarna FIR: ಅಷ್ಟಕ್ಕೂ ಶಂಕರಣ್ಣ ಸಾವಿಗೆ ಅಸಲಿ ಕಾರಣವೇನು? ಮದುವೆಯೇ ಆಪತ್ತು!
ವಯಸ್ಸಿನ ಅಂತರದಿಂದ ದಾಂಪತ್ಯದಲ್ಲಿ ಕಾಡುತ್ತೆ ಈ ಎಲ್ಲ ಸಮಸ್ಯೆ :
ಸದಾ ನಿಮ್ಮ ಮೇಲಿರುತ್ತೆ ಸಮಾಜದ ಕಣ್ಣು: `60 ವರ್ಷದ ವೃದ್ಧೆ ಪ್ರೀತಿಗೆ ಬಿದ್ದ 25ರ ಹುಡುಗ. 28ರ ಹುಡುಗಿಗೆ 70 ವರ್ಷದವನ ಮೇಲೆ ಪ್ರೀತಿ’ ಹೀಗೆ ನಾವು ಅನೇಕ ಸುದ್ದಿಗಳನ್ನು ಕೇಳ್ತಿರುತ್ತೇವೆ. ಇದು ಕೇವಲ ಸುದ್ದಿಯಾಗುವುದಿಲ್ಲ. ಗಂಭೀರ ಚರ್ಚೆಯಾಗ್ತಿರುತ್ತದೆ. ಬಾಲಿವುಡ್ ಸೇರಿದಂತೆ ಜನಸಾಮಾನ್ಯರ ಈ ಜೋಡಿ ಮೇಲೆ ಸಾರ್ವಜನಿಕರ ಕಣ್ಣಿರುತ್ತದೆ. ಅನೇಕರು ಇವರ ಬಗ್ಗೆ ಟೀಕೆ ಮಾಡ್ತಿರುತ್ತಾರೆ. ಮತ್ತೆ ಕೆಲವರು, ಆ ಜೋಡಿ ಮಾಡುವ ಪ್ರತಿಯೊಂದು ಕೆಲಸವನ್ನು ಗಮನಿಸಿ ಅದಕ್ಕೆ ಕಮೆಂಟ್ ಮಾಡ್ತಿರುತ್ತಾರೆ.
ಗೌರವ,ಪ್ರೀತಿ,ಹೊಂದಾಣಿಕೆ ಹೆಸರಿನಲ್ಲಿ ವಯಸ್ಸಿನ ಅಂತರ ಹೆಚ್ಚಿರುವ ಸಂಗಾತಿ ಆಯ್ಕೆ ಮಾಡಿಕೊಳ್ಳುವಾಗ ಸಮಾಜದ ಬಗ್ಗೆಯೂ ಗಮನ ನೀಡ್ಬೇಕು. ಸಮಾಜ ಹೇಳುವ ಮಾತುಗಳನ್ನು ಸಹಿಸುವ ಶಕ್ತಿಯಿದ್ದಲ್ಲಿ ಮಾತ್ರ ಮುಂದೆ ಹೆಜ್ಜೆಯಿಡಬೇಕು.
ಆಲೋಚನೆ – ಮಾನಸಿಕ ಭಾವನೆಯಲ್ಲಿ ಭಿನ್ನತೆ : ಒಂದೇ ವಯಸ್ಸಿನ ಅಥವಾ ಸ್ವಲ್ಪ ವಯಸ್ಸಿನ ಅಂತರವಿರುವ ಜೋಡಿ ಒಂದೇ ರೀತಿಯಲ್ಲಿ ಆಲೋಚನೆ ಮಾಡ್ತಾರೆ. ಇಬ್ಬರ ಮೈಡ್ ಸೆಟ್ ಬಹುತೇಕ ಒಂದೇ ರೀತಿಯಲ್ಲಿರುತ್ತದೆ. ಆದ್ರೆ ಒಬ್ಬರ ವಯಸ್ಸು ಅತಿ ಹೆಚ್ಚಾಗಿದ್ದರೆ ಆಲೋಚನೆಯಲ್ಲಿ ಭಿನ್ನಾಭಿಪ್ರಾಯ ಕಾಣಿಸಿಕೊಳ್ಳುತ್ತದೆ. ಇದ್ರಿಂದ ಇಬ್ಬರ ನಡುವೆ ಜಗಳ ಶುರುವಾಗುತ್ತದೆ.
ಶಂಕರಣ್ಣ ಸಾವಿನ ಕಾರಣ ಬಿಚ್ಚಿಟ್ಟ ತಾಯಿ.. ಮದುವೆ ಆದ ಮೇಲೆ ಏನಾಗಿತ್ತು?
ಮಕ್ಕಳನ್ನು ಪಡೆಯುವ ವಿಷ್ಯದಲ್ಲಿ ಗಲಾಟೆ : ವಯಸ್ಸು ಹೆಚ್ಚಾಗ್ತಿದ್ದಂತೆ ಮಕ್ಕಳನ್ನು ಪಡೆಯುವುದು ಕಷ್ಟವಾಗುತ್ತದೆ. ವಯಸ್ಸು ಹೆಚ್ಚಾಗಿದೆ ಎಂಬ ಕಾರಣಕ್ಕೆ ಒಬ್ಬ ಸಂಗಾತಿ ಬೇಗ ಮಕ್ಕಳನ್ನು ಪಡೆಯಲು ಬಯಸಿದ್ದು, ಇನ್ನೊಬ್ಬ ಸಂಗಾತಿ ಇದಕ್ಕೆ ಒಪ್ಪಗೆ ನೀಡದೆ ಹೋದಲ್ಲಿ ಇಬ್ಬರ ಮಧ್ಯೆ ಗಲಾಟೆ ಶುರುವಾಗುತ್ತದೆ.
ಸೆಕ್ಸ್ ಲೈಫ್ ನಲ್ಲಿ ಸಮಸ್ಯೆ : ಲೈಂಗಿಕ ಹೊಂದಾಣಿಗೆ ವಿಷ್ಯ ಬಂದಾಗಲೂ ಇಬ್ಬರ ಮಧ್ಯೆ ಸಮಸ್ಯೆ ಶುರುವಾಗುತ್ತದೆ. ವಯಸ್ಸು ಹೆಚ್ಚಾಗ್ತಿದ್ದಂತೆ ಫಲವತ್ತತೆ ಕಡಿಮೆಯಾಗುವ ಜೊತೆಗೆ ಲೈಂಗಿಕ ಆಸಕ್ತಿಯೂ ಕಡಿಮೆಯಾಗುತ್ತದೆ. ಇದು ಚಿಕ್ಕ ವಯಸ್ಸಿನ ಸಂಗಾತಿಗೆ ಸಮಸ್ಯೆ ತಂದೊಡ್ಡುತ್ತದೆ.
ಇಬ್ಬರ ಮಧ್ಯೆ ಆಸಕ್ತಿಯಲ್ಲಿ ವ್ಯತ್ಯಾಸ : 20 -25 ವರ್ಷ ಅಂತರವಿದ್ದರೆ ಅನೇಕ ಸಮಸ್ಯೆಗಳು ಎದುರಾಗುತ್ತದೆ. ಚಿಕ್ಕ ವಯಸ್ಸಿನ ಸಂಗಾತಿಗೆ ಜೀವನ ಎಂಜಾಯ್ ಮಾಡುವ ಆಸೆಯಿರುತ್ತದೆ. ಸಿನಿಮಾ,ಪ್ರವಾಸ, ಸುತ್ತಾಟ, ಶಾಪಿಂಗ್ ಸೇರಿದಂತೆ ಅನೇಕ ಖುಷಿಯನ್ನು ಅವರು ಬಯಸ್ತಾರೆ. ಆದ್ರೆ ವಯಸ್ಸು ಹೆಚ್ಚಾಗಿರುವವರಿಗೆ ಇದ್ರಲ್ಲಿ ಆಸಕ್ತಿ ಕಳೆದುಕೊಂಡಿರುತ್ತಾರೆ. ಇದು ಕೂಡ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಮೂಡಲು ಕಾರಣವಾಗುತ್ತದೆ.