Asianet Suvarna News Asianet Suvarna News

ಪ್ರಿಯಾಂಕಾ ಚೋಪ್ರಾ ಬೆಳೆಸುವಾಗ ತಪ್ಪು ಮಾಡಿದೆ: ಅಮ್ಮ ಮಧು ಚೋಪ್ರಾ ವಿಷಾದ

ಬಾಲಿವುಡ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಬಾಲ್ಯದ ಬದುಕು ಕಲಸುಮೇಲೋಗರಾಗಿತ್ತು. ಒಂದಿಷ್ಟು ದಿನ ಅಲ್ಲಿ, ಒಂದಿಷ್ಟು ದಿನ ಇಲ್ಲಿ ಅಂತಾ ಕಳೆದಿದ್ದ ಅವರು ತಮ್ಮ ಬಾಲ್ಯದ ಬಗ್ಗೆ ಯಾವುದೇ ದೂರು ಹೇಳಿಲ್ಲ. ಆದ್ರೆ ಅವರ ತಾಯಿ ಕೆಲ ವಿಷ್ಯವನ್ನು ಬಿಚ್ಚಿಟ್ಟಿದ್ದಾರೆ. 
 

Priyanka Chopra Mother madhu chopra Regrets Mistakes Parenting Abandonment roo
Author
First Published Dec 7, 2023, 1:10 PM IST

ಮಕ್ಕಳು ಚಿಕ್ಕವರಿರುವಾಗ ಪಾಲಕರು ಬ್ಯುಸಿಯಾಗಿರ್ತಾರೆ. ಕೆಲವರು ವೃತ್ತಿ ಜೀವನಕ್ಕೆ ಹೆಚ್ಚು ಮಹತ್ವ ನೀಡುವ ಕಾರಣ ಮಕ್ಕಳಿಗೆ ಅಧಿಕ ಸಮಯ ನೀಡಲು ಸಾಧ್ಯವಾಗೋದಿಲ್ಲ. ಮಕ್ಕಳನ್ನು ಬೇರೆಯವರ ಮನೆಯಲ್ಲಿ ಇಲ್ಲವೆ ಹಾಸ್ಟೆಲ್ ನಲ್ಲಿ ಬಿಟ್ಟಿರುತ್ತಾರೆ. ಮಕ್ಕಳು ದೊಡ್ಡವರಾಗಿ ಅವರಿಗೆ ಮಕ್ಕಳಾದ್ಮೇಲೆ ಪಾಲಕರಿಗೆ ಜ್ಞಾನೋದಯವಾಗುತ್ತದೆ. ನಮ್ಮ ಮಕ್ಕಳ ಬಾಲ್ಯವನ್ನು ನಾವು ಸರಿಯಾಗಿ ನೋಡಿಲ್ಲ, ಅವರಿಗೆ ಅಗತ್ಯವಿರುವ ಸಮಯವನ್ನು ನೀಡಿಲ್ಲವೆಂದು ಪರಿತಪಿಸುತ್ತಾರೆ. ನಟಿ ಪ್ರಿಯಾಂಕಾ ಚೋಪ್ರಾ ತಾಯಿ ಮಧು ಚೋಪ್ರಾ ಕೂಡ ಈಗ ಇದೇ ವಿಷಾಧದಲ್ಲಿದ್ದಾರೆ.

ನಟಿ ಪ್ರಿಯಾಂಕಾ (Priyanka ) ಚೋಪ್ರಾ ಹಾಗೂ ಮಗ ಸಿದ್ಧಾರ್ಥನ ಪೋಷಣೆಯನ್ನು ನಾನು ಸರಿಯಾಗಿ ಮಾಡಿಲ್ಲ ಎನ್ನುವ ನೋವನ್ನು ಮಧು (Madhu )ಅನುಭವಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಮಧು ಚೋಪ್ರಾ, ಪ್ರಿಯಾಂಕಾ ಪೋಷಣೆಯಲ್ಲಿ ನಾನು ಕೆಲ ತಪ್ಪುಗಳನ್ನು ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ.

ಮದುಮಗಳಿಗೆ ಕೈತುಂಬ ಬಳೆ ಹಾಕೋದ್ಯಾಕೆ? ಅತಿ ಸೂಕ್ಷ್ಮ ವಿಚಾರವನ್ನು ಹಂಚಿಕೊಂಡ ಮಹಿಳೆಯರು!

ಪ್ರಿಯಾಂಕಾ ಏಳು ವರ್ಷದವಳಿದ್ದಾಗ ಅವರನ್ನು ಬೋರ್ಡಿಂಗ್ ಶಾಲೆಗೆ ಕಳುಹಿಸಲಾಗಿತ್ತು. ಪ್ರಿಯಾಂಕ 12 ವರ್ಷದಲ್ಲಿದ್ದಾಗ ಅಮೆರಿಕಕ್ಕೆ ಕಳುಹಿಸಲಾಯ್ತು. ಮಗ ಸಿದ್ಧಾರ್ಥ ಹೆಚ್ಚಿನ ಸಮಯವನ್ನು ಅಜ್ಜಿಯ ಮನೆಯಲ್ಲಿ ಕಳೆದಿದ್ದಾನೆ. ಪ್ರಿಯಾಂಕ ಮತ್ತು ಸಿದ್ಧಾರ್ಥ್ ನಮ್ಮನ್ನು ಸರಿಯಾಗಿ ನೋಡಿಕೊಂಡಿಲ್ಲವೆಂದು ಯಾವಾಗ್ಲೂ ಆರೋಪಿಸಿಲ್ಲ. ಆದ್ರೆ ನನಗೆ ಈ ಭಾವನೆ ಇದೆ ಎಂದು ಮಧು ಚೋಪ್ರಾ ಹೇಳಿದ್ದಾರೆ.

ಮಗಳನ್ನು ಅಮೆರಿಕಾಕ್ಕೆ ಕಳುಹಿಸಿದ ಬಗ್ಗೆ ಮಾತನಾಡಿದ ಮಧು ಚೋಪ್ರಾ, ಪ್ರಿಯಾಂಕ ಜೊತೆ ನನಗೆ ಹೆಚ್ಚು ಸಮಯ ಕಳೆಯಲು ಆಗ್ಲಿಲ್ಲ. ಪ್ರಿಯಾಂಕಾ, ಅವರ ತಂದೆಗೆ ತುಂಬಾ ಹತ್ತಿರವಾಗಿದ್ದರು ಎಂದು ಮಧು ಹೇಳಿದ್ದಾರೆ. ಪ್ರಿಯಾಂಕರನ್ನು ಅಮೆರಿಕಾಕ್ಕೆ ಕಳುಹಿಸಿದಾಗ ತುಂಬಾ ಬೇಸರವಾಗಿತ್ತು ಎನ್ನುವ ಮಧು ಚೋಪ್ರಾ, ನಾನು ಅವರನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದೆ. ಆಗಿನ ಸಮಯದಲ್ಲಿ ಮೊಬೈಲ್ ಇರಲಿಲ್ಲ. ನನ್ನ ತಂಗಿ ಫೋನ್ ಮಾಡಿದಾಗ ಮಾತ್ರ ಮಗಳ ಜೊತೆ ಮಾತನಾಡುವ ಅವಕಾಶ ಸಿಗ್ತಿತ್ತು ಎನ್ನುತ್ತಾರೆ ಪ್ರಿಯಾಂಕ. ನಟಿ ಪ್ರಿಯಾಂಕ ತಮ್ಮ ಚಿಕ್ಕಮ್ಮನ ಜೊತೆ ಅಮೆರಿಕಾದಲ್ಲಿದ್ದರು. ಪಾಲಕರು ಸೇನೆಯಲ್ಲಿದ್ದ ಕಾರಣ, ವಾರಕ್ಕೊಮ್ಮೆ ಅಥವಾ ಹತ್ತು ದಿನಕ್ಕೊಮ್ಮೆ ಮಾತ್ರ ಫೋನ್ ಮಾಡುವ ಅವಕಾಶವಿತ್ತು. ಮಗಳನ್ನು ಅಮೆರಿಕಾಕ್ಕೆ ಕಳಿಸಿದ್ದಕ್ಕಿಂತ ಮೊದಲು ಬೋರ್ಡಿಂಗ್ ಸ್ಕೂಲ್ ಗೆ ಕಳುಹಿಸಿದ್ದೆ. ಅದು ಮತ್ತಷ್ಟು ಕಠಿಣವಾಗಿತ್ತು ಎಂದು ಮಧು ಚೋಪ್ರಾ ಹೇಳಿದ್ದಾರೆ. 

ಪ್ರಿಯಾಂಕಾ ಕುಟುಂಬದ ಜೊತೆಗಿದ್ದ ಕಾರಣ ನಮಗೆ ಚಿಂತೆ ಇರಲಿಲ್ಲ. ಆದ್ರೆ ಅದು ಹದಿಹರೆಯದ ವಯಸ್ಸು. ಆ ಸಮಯದಲ್ಲಿ ತಂದೆ-  ತಾಯಿ ಮಕ್ಕಳನ್ನು ಅರ್ಥ ಮಾಡಿಕೊಂಡಷ್ಟು ಕುಟುಂಬಸ್ಥರಿಗೆ ಸಾಧ್ಯವಿಲ್ಲ. ಬೇರೆಯವರ ಮಕ್ಕಳನ್ನು ನೋಡಿಕೊಳ್ಳೋದು ಸುಲಭದ ಕೆಲಸವೂ ಅಲ್ಲ. ಈ ಸಮಯದಲ್ಲಿ ಹಾರ್ಮೋನ್ ಅನಿಯಂತ್ರಿತ ರೂಪದಲ್ಲಿ ಕೆಲಸ ಮಾಡ್ತಿರುತ್ತದೆ. ಈ ಸಮಯದಲ್ಲಿ ಜಾಗರೂಕರಾಗಿರಬೇಕು. ಪ್ರಿಯಾಂಕಾ 12ನೇ ವಯಸ್ಸಿನಲ್ಲಿ ಅಮೆರಿಕಾಕ್ಕೆ ಹೋದ್ರು. 15 ಅಥವಾ 16ನೇ ವಯಸ್ಸಿನಲ್ಲಿ ಹಿಂತಿರುಗಿದರು ಎನ್ನುತ್ತಾರೆ ಮಧು ಚೋಪ್ರಾ. 

ಪ್ರಿಯಾಂಕಾ ಭಾರತಕ್ಕೆ ಹಿಂತಿರುಗಿದ ತಕ್ಷಣ ಬೋರ್ಡ್ ಪರೀಕ್ಷೆಗೆ ತಯಾರಿ ಆರಂಭಿಸಿದ್ದರು. ಹಾಗಾಗಿ ನಾನು ಏಕೆ ಅವರಿಂದ ದೂರವಿದ್ದೆ ಎಂಬುದನ್ನು ಹೇಳುವ ಅವಕಾಶ ಸಿಗಲಿಲ್ಲ. ಪ್ರಿಯಾಂಕಾ ನನಗಿಂತ  ತಂದೆಗೆ ಹತ್ತಿರವಾಗಿದ್ದಋ ಎಂದು ಮಧು ಒಪ್ಪಿಕೊಂಡಿದ್ದಾರೆ.

ಹೆರಿಗೆಗೆ ಒಂದಿನ ಮೊದಲು ಪತಿ ಮೀಟಿಂಗ್, ಇಂಥ ಫ್ಯಾಮಿಲಿ ಸಿಕ್ಕಿದರೆ ಕಣ್ಮುಚ್ಚಿ ಮದ್ವೆಯಾಗಬಹುದು ನೋಡಿ!

ಪ್ರಿಯಾಂಕಾ ಸ್ವಭಾವದ ಬಗ್ಗೆ ಮಾತನಾಡಿದ ಮಧು, ಅವರು ತುಂಬಾ ಸ್ವೀಟ್ ಗರ್ಲ್. ಕುಟುಂಬದ ಮೊದಲ ಹುಡುಗಿ. ಹಾಗಾಗಿ ಎಲ್ಲರೂ ಆಕೆಯನ್ನು ಪ್ರೀತಿ ಮಾಡ್ತಿದ್ದರು. ಅವು ನಾಲ್ಕೈದು ವರ್ಷದಲ್ಲಿರುವಾಗ ತಂದೆಗೆ ಹೊಡೆದ್ರು. ನಾನು ಪ್ರಿಯಾಂಕಾಗೆ ಬಳಸ್ತಿದ್ದ ಪದ ಬಳಕೆ ಮಾಡಿದ್ರು. ಆಗ ನನಗೆ ನನ್ನ ಮೇಲೆ ಅನುಮಾನ ಬಂತು. ನಾನು ಮಗುವನ್ನು ಸರಿಯಾಗಿ ಬೆಳೆಸ್ತಿಲ್ಲವೆಂದು ತಂದೆ, ಕುಟುಂಬದ ಒಪ್ಪಿಗೆ ಪಡೆಯದೆ ಆಕೆಯನ್ನು ಬೋರ್ಡಿಂಗ್ ಸ್ಕೂಲಿಗೆ ಸೇರಿಸಿದೆ. ಈಗ್ಲೂ ಅದಕ್ಕೆ ನಾನು ವಿಷಾಧಿಸುತ್ತೇನೆ ಎಂದು ಮಧು ಹೇಳಿದ್ದಾರೆ. ಈ ಹಿಂದೆ ಪ್ರಿಯಾಂಕಾ, ಅಮೆರಿಕಾ ಸ್ಕೂಲ್ ನಲ್ಲಿ ಜನಾಂಗೀಯ ತಾರತಮ್ಯಕ್ಕೆ ಗುರಿಯಾಗಿದ್ದೆ ಎಂಬುದನ್ನು ಒಪ್ಪಿಕೊಂಡಿದ್ದರು. 
 

Latest Videos
Follow Us:
Download App:
  • android
  • ios