Asianet Suvarna News Asianet Suvarna News

ವಧುವಿನ ಕೈಬಳೆಗೂ ಮೊದಲ ರಾತ್ರಿಗೂ ಇರುವ ಸಂಬಂಧ ಬಿಚ್ಚಿಟ್ಟ ಬೆಂಗಳೂರು ಮಹಿಳೆಯರು!

ಭಾರತೀಯ ಮದುವೆ ಸಂಪ್ರದಾಯದಲ್ಲಿ ಮದುಮಗಳಿಗೆ ಕೈತುಂಬಾ ಬಳೆಗಳನ್ನು ಯಾಕೆ ಹಾಕುತ್ತಾರೆ ಎಂಬ ಸೂಕ್ಮ ಮಾಹಿತಿಯನ್ನು ಬೆಂಗಳೂರು ಮಹಿಳೆಯರು ಬಿಚ್ಚಿಟ್ಟಿದ್ದಾರೆ.

Bengaluru women reveals secret of Indian bride wear full hands Bangles at marriage sat
Author
First Published Dec 6, 2023, 7:37 PM IST

ಬೆಂಗಳೂರು (ಡಿ.06): ಸಾಮಾನ್ಯವಾಗಿ ಮದುವೆ ಎಂದಾಕ್ಷಣ ಮಹಿಳೆಯರಿಗೆ ಎಲ್ಲಿಲ್ಲದ ಸಡಗರ ಇರುತ್ತದೆ. ಮದುವೆಯಾಗುವ ವಧುವಿನ ಜೊತೆಗೆ ಇಡೀ ಗಂಡು-ಹೆಣ್ಣಿನ ಎರಡೂ ಕುಟುಂಬಗಳು ಸಂತಸದಲ್ಲಿ ತೇಲಾಡುತ್ತಿರುತ್ತವೆ. ಇನ್ನು ವಧುವಿಗೆ ಕೆಲವು ಶಾಸ್ತ್ರಗಳನ್ನು ಮಾಡಲಾಗುತ್ತದೆ. ಅದರಲ್ಲಿ ಕೈತುಂಬಾ ಬಳೆಗಳನ್ನು ಹಾಕುವುದು ಕೂಡ ಒಂದು ಶಾಸ್ತ್ರವಾಗಿದೆ. ಆದರೆ, ಬಳೆ ಹಾಕುವ ಶಾಸ್ತ್ರದ ಬಗ್ಗೆ ಮಹಿಳೆಯರು ಮಾತನಾಡಿದ್ದು, ಇದನ್ನು ನೀವು ಒಪ್ಪುತ್ತೀರಾ ಅಥವಾ ಮಹಿಳೆಯರಿಗೆ ನಾಲ್ಕು ಸಲಹೆ ಕೊಡ್ತೀರಾ ಈ ಸ್ಟೋರಿ ಓದಿ...

ಮಹಿಳೆಯ ಜೀವನದಲ್ಲಿ ಹುಟ್ಟಿನಿಂದ ಸಾವಿನವರೆಗೂ ಎಲ್ಲ ಕ್ಷಣಗಳನ್ನು ಅತ್ಯಂತ ಹೆಚ್ಚಾಗಿ ನೆನಪಿನಲ್ಲಿ ಉಳಿಯುವಂತೆ ಮಾಡಿಕೊಳ್ಳುತ್ತಾರೆ. ಇದಕ್ಕೆ ಪೂರಕ ಎಂಬಂತೆ ನಮ್ಮ ದೇಶದ ಬಹುತೇಕ ಹಬ್ಬಗಳು ಕೂಡ ಮಹಿಳೆಯರಿಗೇ ಮೀಸಲಾಗಿವೆ ಎನ್ನುವಂತಿವೆ. ಒಂದು ಮಗು ಹುಟ್ಟಿದಾಕ್ಷಣ ಸುಮಾರು 14 ವರ್ಷದವರೆಗೆ ಗಂಡು-ಹೆಣ್ಣು ಬೇಧವಿಲ್ಲದಂತೆ ಬೆಳೆಯುತ್ತದೆ. ಆದರೆ, ಹುಡುಗಿ ಋತುಮತಿಯಾದ ನಂತರ ಹೆಣ್ಣಿನ ಜೀವನವನ್ನು ಆರಂಭಿಸುತ್ತಾಳೆ. ಆಗ ಒಂದು ಶಾಸ್ತ್ರವನ್ನು ಮಾಡಿದ ನಂತರ ಇಡೀ ಜೀವನದಲ್ಲಿ ಆಗುವ ಪ್ರತಿ ಘಟನೆಗಳಲ್ಲಿ ಶಾಸ್ತ್ರ ಸಂಪ್ರದಾಯಗಳೇ ತುಂಬಿರುತ್ತವೆ. ಇದನ್ನು ಮಹಿಳಾ ಪೂರಕ ಎಂದು ತಿಳಿದುಕೊಂಡರೂ ಅದರ ಹಿಂದೆ ಬೇರೆಯದೇ ಉದ್ದೇಶಗಳಿರುತ್ತವೆ. ಅದೆಲ್ಲಾ ಹೋಗಲಿ ಬಿಡಿ ಈಗ ಮದುವೆ ಬಳೆ ಶಾಸ್ತ್ರದ ಬಗ್ಗೆ ನೋಡೋಣ...

ಸಿನಿಮಾಗೆ ಬಂದು 7 ವರ್ಷದಲ್ಲೇ ಬಿಲೇನಿಯರ್ ಒಡತಿಯಾದ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ!

ಮದುವೆ ದೇಶದ ವಿವಿಧ ಪದ್ದತಿಗಳಿಗೆ ಅನುಗುಣವಾಗಿ ಮೊದಲು ಹೆಣ್ಣು ನೋಡುವ ಶಾಸ್ತ್ರ, ಹೂವು ಮುಡಿಸುವ ಶಾಸ್ತ್ರ, ವೀಳ್ಯೆದೆಲೆ ಶಾಸ್ತ್ರ, ಚಪ್ಪರ ಶಾಸ್ತ್ರ, ಬಳೆ ಶಾಸ್ತ್ರ, ಮೆಹಂದಿ ಶಾಸ್ತ್ರ, ಅರಿಶಿಣ ಶಾಸ್ತ್ರ, ತಾಳಿ ಕಟ್ಟುವುದು, ಅರತಕ್ಷತೆ, ಅರುಂಧತಿ ನಕ್ಷತ್ರ ತೋರಿಸುವುದು, ಮನೆಯ ಪ್ರವೇಶದ ವೇಳೆ ಹೊಸ್ತಿಲ ಮೇಲೆ ಮೊಳೆ ಹೊಡೆಯುವುದು, ಅಕ್ಕಿ ತುಂಬಿದ ಸೇರನ್ನು ಒದೆಯುವುದು ಹೀಗೆ ಹತ್ತಾರು ವಿಭಿನ್ನ ಶಾಸ್ತ್ರಗಳಿರುತ್ತವೆ. ಅದರಲ್ಲಿ ಬಳೆ ಶಾಸ್ತ್ರವೂ ಒಂದು ಮುಖ್ಯ ಶಾಸ್ತ್ರವಾಗಿದೆ. ಈ ವೇಳೆ ಮನೆಯಲ್ಲಿರುವ ಎಲ್ಲರೂ ಸ್ವಲ್ಪ ಬಳೆಗಳನ್ನು ಹಾಕಿಕೊಂಡರೆ, ಮದುಮಗಳಿಗೆ (ವಧು) ಮಾತ್ರ ಕೈತುಂಬಾ ಬಳೆಗಳನ್ನು ಹಾಕಿರುತ್ತಾರೆ. ಅದರಲಲ್ಲಿಯೂ ಉತ್ತರ ಭಾರತದಲ್ಲಿ ಮುಂಗೈನಿಂದ ಮೊಣಕೈವರೆಗೂ ಬಳೆಗಳನ್ನು ಹಾಕಿರುತ್ತಾರೆ. ಆದರೆ, ಬಳೆಗಳನ್ನು ಯಾಕೆ ಹಾಕ್ತಾರೆ ಎನ್ನುವ ಮಾಹಿತಿ ಈ ಮಹಿಳೆಯರು ಕೊಡ್ತಾರೆ ನೋಡಿ..

ಇಬ್ಬರು ಮಹಿಳೆಯರು ಮಾತನಾಡುವ ವಿಡಿಯೋದಲ್ಲಿ ಬಳೆ ಬಗ್ಗೆ ಮಾತನಾಡಿದ್ದಾರೆ. 
ಮಹಿಳೆ-1: ಉತ್ತರ ಭಾರತೀಯ ಮಹಿಳೆಯರು ಮದುವೆಯಾದ ಹೊಸದರಲ್ಲಿ ಮದುಮಗಳು ಕೈತುಂಬಾ ಬಳೆ ಹಾಕೊಂಡಿರ್ತಾರೆ ಯಾಕೆ ಗೊತ್ತಾ.? 
ಮಹಿಳೆ 2: ಮದುವೆ ಆಗಿದೆ ಎಂದು ತೋರಿಸಿಕೊಳ್ಳೋದಕ್ಕಾ? ಅಥವಾ ಶಾಸ್ತ್ರಕ್ಕೆ ಹಾಕಿಕೊಂಡಿರ್ತಾರೆ ಅಲ್ವಾ ಎಂದು ಮತ್ತೊಬ್ಬ ಮಹಿಳೆ ಕೇಳುತ್ತಾಳೆ.
ಮಹಿಳೆ 1: ಆದ್ರೆ ಆ ಶಾಸ್ತ್ರ ಏನಕ್ಕೆ ಮಾಡಿದ್ರು ಅಂತಾ ಗೊತ್ತಾ.?
ಮಹಿಳೆ 2: ಬಳೆ ಎಷ್ಟು ಮುರಿಯುತ್ತೆ ಅಂತಾನಾ...
ಮಹಿಳೆ 1: ಅವರು 10 ರಿಂದ 16 ದಿನ ಬಳೆ ಹಾಕಿಕೊಳ್ಳಬೇಕಂತೆ. ಮಧುಮಗಳು ಹನಿಮೂನ್‌ಗೂ ಕೈತುಂಬ ಬಳೆಗಳನ್ನು ಹಾಕಿಕೊಂಡು ಬರುತ್ತಾರೆ. ಯಾಕಂದರೆ ಗಂಡ ಎಷ್ಟು ಸ್ಟ್ರಾಂಗ್ ಅಂತ ಬಳೆಗಳಿಂದ ಗೊತ್ತಾಗುತ್ತದೆ. ಹನಿಮೂನ್‌ ಮುಗಿಸಿಕೊಂಡು ವಾಪಸ್ ಬಂದ ನಂತರ ಮಧುವಣಗಿತ್ತಿಯ ಕೈಯಲ್ಲಿರುವ ಬಳೆ ಎಷ್ಟು ಮುರಿದು ಹೋಗಿದೆ ಅಂತ ಮನೆಯಲ್ಲಿನ ಹಿರಿಯರು ಲೆಕ್ಕ ಹಾಕುತ್ತಾರೆ. ಅವರ ನಡುವೆ ಮೊದಲ ರಾತ್ರಿಯ ಶಾಸ್ತ್ರ ಆಗಿದೆಯಾ ಇಲ್ಲವೇ ಎಂಬುದನ್ನು ಇದರಿಂದಲೇ ಗುರುತಿಸುತ್ತಾರೆ ಎಂದು ಮಾತನಾಡಿಕೊಂಡಿದ್ದಾರೆ. 

ರಶ್ಮಿಕಾ ಮಂದಣ್ಣನನ್ನೇ ಮೀರಿಸುವಂತೆ ಬಟ್ಟೆ ಬಿಚ್ಚಿದ ತೃಪ್ತಿ, ನಗ್ನ ಸೀನ್ಸ್‌ಗೂ ಸೈ ಎಂದ ನಟಿ!

ಈ ಇಬ್ಬರು ಮಹಿಳೆಯರು ಸ್ಪಷ್ಟವಾಗಿ ಅಚ್ಚ ಕನ್ನಡದಲ್ಲಿ ಮಾತನಾಡಿದ್ದಾರೆ. ಜೊತೆಗೆ, ಆಗಾಗ್ಗೆ ಇಂಗ್ಲೀಷ್ ಪದಗಳನ್ನೂ ಬಳಸಿದ್ದಾರೆ. ಆದರೆ, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು, ನೆಟ್ಟಿಗರು ಈ ಮಹಿಳೆಯರ ಮೇಲೆ ಹರಿಹಾಯ್ದಿದ್ದಾರೆ. ಇನ್ನು ಮನೆಯಲ್ಲಿ ಮಾತನಾಡುವುದು ಬಿಟ್ಟು ವಿಡಿಯೋ ಮಾಡಿ ಹರಿಬಿಟ್ಟಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Follow Us:
Download App:
  • android
  • ios