10 ದಿನ ತವರು ಮನೆಗೆ ಹೋದ ಪತ್ನಿಗೆ ಗಂಡ ಸರ್ಪ್ರೈಸ್ ನೀಡಿದ್ದಾನೆ. 11ನೇ ದಿನ ಅತ್ತೆ ಮನೆಗೆ ಹೋದ ಗಂಡ ನನ್ನ ಪತ್ನಿಯನ್ನು ವಾಪಸ್ ಕೊಡಿ ಎಂದು ಭಾರಿ ಸದ್ದು ಮಾಡಿದ ವಿಡಿಯೋ ವೈರಲ್ ಆಗಿದೆ. ಏನಿದು ಘಟನೆ?

ಪತ್ನಿ ತವರು ಮನೆಗೆ ಹೋಗುತ್ತಿದ್ದಂತೆ ಪತಿಯರ ಪಾರ್ಟಿ, ಮೀಟಿಂಗ್ ಪ್ಲಾನ್ ಭರ್ಜರಿಯಾಗಿ ನಡೆಯುತ್ತೆ. ಇಲ್ಲೊಂದು ಘಟನೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಪತ್ನಿ ತವರು ಮನೆಗೆ ಹೋಗಿದ್ದಾಳೆ. 10 ದಿನ ಸಹಿಸಿಕೊಂಡ ಗಂಡ 11ನೇ ದಿನ ನೇರವಾಗಿ ಅತ್ತೆ ಮನೆಗೆ ತೆರಳಿದ್ದಾನೆ. ಈ ವೇಳೆ ಕೇಕ್ ಹಿಡಿದು ಹೊರಟ ಗಂಡ ನನ್ನ ಪತ್ನಿಯನ್ನು ವಾಪಸ್ ಕೊಡಿ ಎಂದಿದ್ದಾನೆ. ಗಂಡ ಹಾಗೂ ಆತ ತಂದಿದ್ದ ಕೇಕ್ ನೋಡಿ ಪತ್ನಿಗೆ ಮಾತ್ರವಲ್ಲ, ಅತ್ತೆ ಮಾವನಿಗೂ ಅಚ್ಚರಿಯಾಗಿದೆ. ಈ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುಜ್ಕೋ ಮೇರಿ ಬಿವಿ ವಾಪಸ್ ದೋ ಕೇಕ್

11ನೇ ದಿನ ಗಂಡ ಕೇಕ್ ಹಿಡಿದು ಪತ್ನಿಯನ್ನು ಕರೆತರಲು ಹೊರಟಿದ್ದಾನೆ. ಈ ಕೇಕ್‌ ಮೇಲೆ ಮುಜ್ಕೋ ಮೇರಿ ಬಿವಿ ವಾಪಸ್ ದೋ ( ನನಗೆ ನನ್ನ ಪತ್ನಿಯನ್ನು ವಾಪಸ್ ಕೊಡಿ) ಎಂದು ಬರೆಯಲಾಗಿದೆ. ಅತ್ತೆ ಮನೆಗೆ ಆಗಮಿಸಿದ ಗಂಡನ ನೋಡಿ ಪತ್ನಿಗೆ ಅಚ್ಚರಿಯಾಗಿದೆ. 15 ದಿನ ತವರು ಮನೆಗೆ ಹೋಗಿ ಬರುತ್ತೇನೆ. 15ದ ಬಳಿಕ ಕರೆ ಮಾಡಿದಾಗ ಬನ್ನಿ ಎಂದು ಪತ್ನಿ ಹೇಳಿದ್ದಳು. ಆದರೆ ಗಂಡನ ಬರಲು ಹೇಳೇ ಇರಲಿಲ್ಲ. ಅದಕ್ಕೂ ಮುನ್ನವೇ ಗಂಡ ಪ್ರತ್ಯಕ್ಷನಾಗಿದ್ದು ನೋಡಿ ಪತ್ನಿಗೆ ಅಚ್ಚರಿಯಾಗಿದೆ.

ವಿಶೇಷ ಅಂದರೆ ಗಂಡ ಕೇಕ್ ಹಿಡಿದು ಅತ್ತೆ ಮನೆಗೆ ಎಂಟ್ರಿಕೊಟ್ಟಿದ್ದಾನೆ. ಬಳಿಕ ನನ್ನ ಪತ್ನಿಯನ್ನು ವಾಪಸ್ ಕೊಡಿ ಎಂದು ಅತ್ತೆ ಹಾಗು ಮಾವನ ಬಳಿ ಹೇಳಿದ್ದಾನೆ. ಈ ಮಾತುಗಳನ್ನು ಕೇಳಿದ ಪತ್ನಿಗೆ ಮತ್ತೆ ಅಚ್ಚರಿಯಾಗಿದೆ. ತಂದಿದ್ದ ಕೇಕ್ ತೆಗೆದು ಟೇಬಲ್ ಮೇಲಿಟ್ಟಿದ್ದಾನೆ. ಈ ಕೇಕ್ ನೋಡಿದ ಇಡೀ ಕುಟುಂಬಕ್ಕೆ ನಗು ತಡೆಯಲು ಸಾಧ್ಯವಾಗಲಿಲ್ಲ. ಅತ್ತೆ ಹಾಗೂ ಮಾವ ಇಬ್ಬರು ಮಗಳನ್ನು ಕೈಹಿಡಿದು ಮತ್ತೆ ಅಳಿಯನ ಕೈಗೆ ಇಟ್ಟಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

View post on Instagram

ಗಂಡನ ನಡೆಗೆ ಭಾರಿ ಮೆಚ್ಚುಗೆ

ಪತ್ನಿಯನ್ನು ಬಿಟ್ಟಿರಲು ಆಗದೆ ಪುರುಷನ ಮದುವೆಯಾಗಿ. ಈ ಪ್ರೀತಿ ಹೀಗೆ ಇರಲಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಪತ್ನಿಯನ್ನು ಕರೆತರುವಾಗಲು ಆಕೆ ತವರು ಮನೆಯಿಂದ ಖುಷಿ ಖುಷಿಯಾಗಿ ಗಂಡನ ಮನೆಗೆ ಬರುವಂತೆ ಮಾಡಿದ ಈತನಿಗೆ ಸಲಾಂ ಎಂದು ಹಲವರು ಹೇಳಿದ್ದಾರೆ. ಈ ರೀತಿಯ ಸಣ್ಣ ಪ್ರಯತ್ನಗಳು ಕುಟುಂಬದ ಖುಷಿ ಜೊತೆಗೆ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಪ್ರತಿ ಹೆಣ್ಣಿನ ಪೋಷಕರಿಗೆ ಈ ರೀತಿಯ ಅಳಿಯ ಸಿಗಲಿ ಎಂದು ಆಶಿಸಿದ್ದಾರೆ.