Asianet Suvarna News Asianet Suvarna News

Real Story: ಏನೆಲ್ಲ ಕಾರಣಕ್ಕೆ ದೂರವಾಗ್ತಾರೆ ದಂಪತಿ

ದಾಂಪತ್ಯ ಅತ್ಯಂತ ಸೂಕ್ಷ್ಮವಾದ ಸಂಬಂಧವಾಗಿದೆ. ಅದನ್ನು ನಿಭಾಯಿಸುವುದು ಬಹಳ ಕಷ್ಟ. ಅನೇಕ ಬಾರಿ ಭವಿಷ್ಯದ ಬಗ್ಗೆ ಆಲೋಚನೆ ಮಾಡಿ ಜನರು ಸಂಬಂಧ ಕಡಿದುಕೊಳ್ತಾರೆ. ಮತ್ತೆ ಕೆಲವರು ಮಕ್ಕಳ ಕಾರಣಕ್ಕೆ ವಿಚ್ಛೇದನ ಪಡೆಯುತ್ತಾರೆ.
 

People Share Why They Moved On From Their Spouse
Author
First Published Oct 31, 2022, 5:35 PM IST

ಯಾವುದೇ ಸಂಬಂಧ ಪರ್ಫೆಕ್ಟ್ ಆಗಲು ಸಾಧ್ಯವಿಲ್ಲ. ಪ್ರೀತಿ ಸಂಬಂಧದಲ್ಲಿ ಜಗಳಗಳು ಮಾಮೂಲಿ. ಸಮಸ್ಯೆಗಳು ಬಂದಾಗ ಅದನ್ನು ಧೈರ್ಯವಾಗಿ ಎದುರಿಸಿ ಅನೇಕರು ಸಂಸಾರ ಮುಂದುವರೆಸುತ್ತಾರೆ. ಆದ್ರೆ ಕೆಲವರ ಮಧ್ಯೆ ಹೊಂದಾಣಿಕೆ ಸಾಧ್ಯವೇ ಆಗೋದಿಲ್ಲ. ಹಾಗಾಗಿ ಅವರು ಈ ಸಂಬಂಧ ಬಿಟ್ಟು ಮುಂದಿನ ದಾರಿ ನೋಡಿಕೊಳ್ತಾರೆ. ಒಂದು ಸಂಬಂಧ ಬಿಟ್ಟು ಮುಂದೆ ಸಾಗುವುದು ಸುಲಭದ ಕೆಲಸವಲ್ಲ. 

ಸಂಗಾತಿ ಜೊತೆ ಕಳೆದ ಸಮಯ (Time) ಆಗಾಗ ನೆನಪಾಗಿ ನೋವು ನೀಡುತ್ತಿರುತ್ತದೆ. ಕೆಲವರು ಹೊಸ ಸಂಬಂಧ ಹಾಗೂ ಹಳೆ ಸಂಬಂಧದಲ್ಲಿ ಹೋಲಿಕೆ ಮಾಡಲು ಶುರು ಮಾಡ್ತಾರೆ. ಮತ್ತೆ ಕೆಲವರು ಮುಂದಿಟ್ಟ ಹೆಜ್ಜೆಗೆ ಪಶ್ಚಾತ್ತಾಪ ಪಡುತ್ತಾರೆ. ಪ್ರತಿಯೊಂದು ಸಂಬಂಧವೂ ಜೀವನ (Life) ದಲ್ಲಿ ಹೊಸ ಅನುಭವ ನೀಡುತ್ತದೆ. ಹೊಸ ವಿಷ್ಯವನ್ನು ಕಲಿಸುತ್ತದೆ. ಸಂಬಂಧವನ್ನು ಕಡಿದುಕೊಂಡು ಹೊಸ ದಾರಿಯಲ್ಲಿ ಸಾಗಲು ಅನೇಕ ಕಾರಣವಿರುತ್ತದೆ. ಇಂದು ಕೆಲವರು ರಿಲೇಶನ್ಶಿಪ್ ಕಡಿದುಕೊಂಡ ಕಾರಣವೇನು ಎಂಬುದನ್ನು ಹಂಚಿಕೊಂಡಿದ್ದಾರೆ. 

ವೃತ್ತಿಗಾಗಿ ಸಂಗಾತಿ ತೊರೆದೆ : 35 ವರ್ಷದ ಮಹಿಳೆ ತನ್ನ ಅನುಭವವನ್ನು ಹೇಳಿಕೊಂಡಿದ್ದಾಳೆ. ಸಂಬಂಧದಲ್ಲಿ ನಾನು ಪ್ರಾಮಾಣಿಕವಾಗಿದ್ದೆ. ಸಂಗಾತಿಗೆ ನನ್ನೆಲ್ಲ ಸಮಯ ನೀಡ್ತಿದ್ದೆ. ಆದ್ರೆ ನನ್ನ ವೃತ್ತಿ ಜೀವನ ಸಂಪೂರ್ಣ ಹಳ್ಳ ಹಿಡಿದಿತ್ತು. ವೃತ್ತಿ ಜೀವನ ಸುಧಾರಿಸುವ ಪ್ರಯತ್ನ ನಡೆದಿತ್ತು. ಇದಕ್ಕೆ ನನ್ನ ಸಂಗಾತಿಯಿಂದ ಸ್ವಲ್ಪವೂ ಸಹಕಾರ ಸಿಗಲಿಲ್ಲ. ನನಗೆ ವೃತ್ತಿ ಜೀವನ ಮಹತ್ವದ್ದಾಗಿತ್ತು. ಹಾಗಾಗಿ ನಾನು ಸಂಬಂಧವನ್ನು ಅಲ್ಲಿಗೆ ಮುಗಿಸಿ ವೃತ್ತಿ ಮೇಲೆ ಹೆಚ್ಚು ಗಮನ ನೀಡಿದೆ. ಆರಂಭದಲ್ಲಿ ನನಗೆ ಬೇಸರವಾಗಿತ್ತು. ಆದ್ರೆ ಈಗ ತುಂಬಾ ಖುಷಿಯಾಗಿದ್ದೇನೆ ಎನ್ನುತ್ತಾಳೆ ಮಹಿಳೆ. 

ದಾರಿ ಬೇರೆ ಮಾಡಿದ ಹಗರಣ (Scam) : ನಮ್ಮ ಸಮಾಜದಲ್ಲಿ ವ್ಯಕ್ತಿಯ ಮೇಲೆ ಯಾವುದೇ ಅಪವಾದ ಬಂದ್ರೂ ಅವರನ್ನು ಮಾತ್ರವಲ್ಲ ಅವರ ಕುಟುಂಬವನ್ನು  ನೋಡುವ ದೃಷ್ಟಿ ಬದಲಾಗುತ್ತದೆ. ಪತಿಯ ಮೇಲೆ ಬಂದ ಹಗರಣ ನನ್ನ ಜೀವನ ಬದಲಿಸಿದೆ ಎನ್ನುತ್ತಾಳೆ ಈ ಮಹಿಳೆ. ಪತಿಯ ಹಗರಣವನ್ನು ಪಕ್ಕದ ಮನೆ ಮಹಿಳೆ ಪತ್ತೆ ಮಾಡಿದ್ದಳಂತೆ. ನಂತ್ರ ವದಂತಿಗಳು ಶುರುವಾದವಂತೆ. ಪತಿ ಜೊತೆ ಮಹಿಳೆಯನ್ನು ಕೂಡ ಎಲ್ಲರೂ ಕೆಟ್ಟದಾಗಿ ನೋಡ್ತಿದ್ದರಂತೆ. ಇದ್ರಿಂದ ಬೇಸರಗೊಂಡ ನಾನು ಮುಂದಿನ ತಿಂಗಳೇ ನನ್ನ ಪತಿಯಿಂದ ದೂರವಾದೆ ಎನ್ನುತ್ತಾಳೆ ಮಹಿಳೆ. 

ಒಪ್ಪಿಗೆ ಮೇಲಾಯ್ತು ಬ್ರೇಕ್ ಅಪ್ : ನಾನು ಮತ್ತು ನನ್ನ ಪತ್ನಿ ಪರಸ್ಪರ ಒಪ್ಪಿಗೆ ಮೇರೆಗೆ ಬ್ರೇಕ್ ಅಪ್ ಮಾಡಿಕೊಂಡ್ವಿ ಎನ್ನುತ್ತಾರೆ 35 ವರ್ಷದ ವ್ಯಕ್ತಿ. ಪರಸ್ಪರ ಅಗತ್ಯತೆಗಳನ್ನು ಪೂರೈಸಲು ನಮಗೆ ಸಮಯವಿರಲಿಲ್ಲ. ಅನೇಕ ಬಾರಿ ಇಬ್ಬರ ಮಧ್ಯೆ ಅಳು, ಗಲಾಟೆ ನಡೆಯುತ್ತಿತ್ತು. ಹಾಗಾಗಿ ನಾವಿಬ್ಬರೂ ಪರಸ್ಪರ ಒಪ್ಪಿ ಬೇರ್ಪಟ್ಟೆವು ಎನ್ನುತ್ತಾನೆ ಈತ. ಈ ಬ್ರೇಕ್ ಅಪ್ ನಿಂದ ಆತನ ಜೀವನ ಬದಲಾಯ್ತಂತೆ.

ಲೈಂಗಿಕ ಕ್ರಿಯೆಯ ನಂತರ ವಿಪರೀತ ತಲೆನೋವು, ಇದಕ್ಕೇನು ಕಾರಣ ?

ಮಕ್ಕಳಿಗಾಗಿ ಸಂಬಂಧ ಕಡಿದುಕೊಂಡ ಮಹಿಳೆ : ಮದುವೆ ನಂತ್ರ ಮಹಿಳೆ ಸಾಕಷ್ಟು ಅವಮಾನ ಎದುರಿಸಿದ್ದಳಂತೆ. ಮಕ್ಕಳಿಗೆ ಇದ್ರಿಂದ ಸಮಸ್ಯೆಯಾಗ್ತಿತ್ತಂತೆ. ಮಕ್ಕಳ ಭವಿಷ್ಯದ ಬಗ್ಗೆ ಆಲೋಚನೆ ಮಾಡಿದ ಮಹಿಳೆ ಸಂಬಂಧದಿಂದ ಹೊರ ಬಂದಳಂತೆ. ನನ್ನ ಭವಿಷ್ಯಕ್ಕೆ ಮಕ್ಕಳು ಸಹಾಯ ಮಾಡಿದ್ರು. ಮಕ್ಕಳಿಗಾಗಿ ನಾನು ಕೆಲಸ ಮಾಡಲು ಶುರು ಮಾಡಿದೆ. ಈಗ ಮುಕ್ತ ಹಾಗೂ ಸ್ವಾತಂತ್ರ್ಯ ಜೀವನ ನಡೆಸುತ್ತಿದ್ದೇನೆ ಎನ್ನುತ್ತಾಳೆ ಮಹಿಳೆ. 

LOVE GURU: ಮದ್ವೆಯಾಗಿ ವರ್ಷಗಳೇ ಕಳೆದರೂ ಪ್ರೀತಿ ಹೊಸದರಂತಿರಲು ಇಲ್ಲಿದೆ ಲವ್ ಮೆಡಿಸಿನ್

ಮನಸ್ಸು ಬೆರೆಯಲಿಲ್ಲ, ಬೇರೆಯಾದ್ವಿ : 38 ವರ್ಷದ ವ್ಯಕ್ತಿಗೆ 20ನೇ ವಯಸ್ಸಿನಲ್ಲಿಯೇ ಮದುವೆಯಾಗಿತ್ತು. ಇಬ್ಬರೂ ಇನ್ನೂ ಚಿಕ್ಕಮಕ್ಕಳಂತೆ ಆಡ್ತಿದ್ದರಂತೆ. ವಯಸ್ಸು ಹೆಚ್ಚಾಗ್ತಾ ಹೋದಂತೆ ಇಬ್ಬರ ಆಲೋಚನೆ, ಆಸೆ, ಭವಿಷ್ಯದ ಬಗ್ಗೆ ಚಿಂತನೆ ಬೇರೆಯಾಗಿತ್ತಂತೆ. ಭವಿಷ್ಯದ ಬಗ್ಗೆ ಆಲೋಚನೆ ಮಾಡಿದ ಇಬ್ಬರೂ ಬೇರೆಯಾಗುವ ನಿರ್ಧಾರ ತೆಗೆದುಕೊಂಡರಂತೆ. 
 

Follow Us:
Download App:
  • android
  • ios