ಅರೆರೆ..ಇದೇನ್ ವಿಚಿತ್ರ, ಜಾತಕ ನೋಡಿ ಅದ್ಧೂರಿಯಾಗಿ ಗಿಳಿ-ಗುಬ್ಬಚ್ಚಿ ಮದುವೇನೆ ಮಾಡ್ಸಿದ್ರು!

ಮಳೆ ಬರಲಿ ಅಂತ ಕತ್ತೆ, ಕಪ್ಪೆ, ನಾಯಿ ಮದುವೆ ಮಾಡಿರೋದನ್ನು ಕೇಳಿರ್ತೀರಾ, ನೋಡಿರ್ತೀರಾ. ಆದ್ರೆ ಇಲ್ಲೊಂದೆಡೆ ಅದೆಲ್ಲಕ್ಕಿಂತ ವಿಭಿನ್ನವಾಗಿ ಗಿಳಿ-ಗುಬ್ಬಚ್ಚಿ ಮದುವೆ ಮಾಡಿಸಲಾಗಿದೆ. ಅರೆ, ಇದೇನ್ ವಿಚಿತ್ರ ಅನ್ಬೇಡಿ. ಇಲ್ಲಿದೆ ಹೆಚ್ಚಿನ ಮಾಹಿತಿ.

Parrot Myna bird married in big fat ceremony after horoscopes match Vin

ಮಧ್ಯಪ್ರದೇಶ: ಶ್ವಾನಗಳ ಮದುವೆ, ಕಪ್ಪೆ ಮದುವೆ ಕೇಳಿರುತ್ತೀರಿ. ಆದರೆ ಮಧ್ಯಪ್ರದೇಶದಲ್ಲೊಂದು ಪರಿವಾರ ಪಕ್ಷಿಗಳ ಮದುವೆ ಮಾಡಿಸಿದೆ. ರಾಮಸ್ವರೂಪ್‌ ಎಂಬುವವರು ಗುಬ್ಬಚ್ಚಿಯನ್ನು ತಮ್ಮ ಮಗಳಂತೆ ನೋಡಿಕೊಂಡಿದ್ದಾರೆ. ಬಾದಲ್‌ ವಿಶ್ವಕರ್ಮ ಎಂಬುವವರು ಗಿಳಿಯನ್ನು ತಮ್ಮ ಪರಿವಾರದ ಭಾಗ ಎಂಬಂತೆ ಕಾಣುತ್ತಾರೆ. ಜಾತಕ ನೋಡುವುದು ಸೇರಿದಂತೆ ಸಾಮಾನ್ಯವಾಗಿ ಹಿಂದೂ ಸಂಪ್ರದಾಯದಂತೆ ಅರಿಶಿಣ ಶಾಸ್ತ್ರ, ಬ್ಯಾಂಡ್‌ ಬಾಜಾ ಬಾರಿಸಿ ಬಾರಾತ್‌ ಮಾಡಿ, ಕನ್ಯಾದಾನ ಮಾಡಿ ಅದ್ಧೂರಿಯಾಗಿ ಗಿಳಿ, ಗುಬ್ಬಚ್ಚಿ (Parrot-myna) ಮದುವೆ ಮಾಡಿಸಿದ್ದಾರೆ. ನರಸಿಂಗ್‌ಪುರ್ ಜಿಲ್ಲೆ, ಮಧ್ಯಪ್ರದೇಶದಲ್ಲಿ ಈ ಅಪರೂಪದ ಮದುವೆ ನಡೆದಿದೆ.

ಮದುವೆಗೂ ಮೊದಲೇ ಎರಡು ಹಕ್ಕಿಗಳ ಜಾತಕ (Horoscope)ವನ್ನು ತೋರಿಸಿ ಹೊಂದಾಣಿಕೆಯಾಗುತ್ತದೆಯೇ ಎಂಬುದನ್ನು ಕೇಳಲಾಯಿತು. ಬಳಿಕ ಶಾಸ್ತ್ರೋಕ್ತವಾಗಿ ಮದುವೆ (Marriage) ನಡೆಸಲಾಯಿತು. ಗಿಳಿ ಹಾಗೂ ಗುಬ್ಬಚ್ಚಿ ಎರಡೂ ಮನೆಯ ಮಂದಿ ಮದುವೆ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಮಾರಂಭದ ನಂತರ, ಮುದ್ದಿನ ಹಕ್ಕಿಗೆ ಸಾಂಪ್ರದಾಯಿಕವಾಗಿ ವಿದಾಯ ಕೋರಲಾಯಿತು. ಸಾಮಾನ್ಯವಾಗಿ ವಧುಗಳಿಗೆ (Bride) ನೀಡಲಾಗುವ ಸಾಂಪ್ರದಾಯಿಕ ವಿದಾಯ ಕಾರ್ಯಕ್ರಮ ಮಾಡಲಾಗುತ್ತದೆ. ಸದ್ಯ ಮೈನಾ ಈಗ ತನ್ನ ಗಿಣಿ ಸಂಗಾತಿಯೊಂದಿಗೆ ವಾಸಿಸುತ್ತಿದೆ. ಬಾದಲ್ ವಿಶ್ವಕರ್ಮ ಆಗಾಗ ರಾಮ್ ಸ್ವರೂಪ್ ಮನೆಗೆ ತೆರಳಿ ಗಿಳಿಯ ಯೋಗಕ್ಷೇಮ ವಿಚಾರಿಸುತ್ತಾರೆ.

ಯಪ್ಪಾ..ಫಸ್ಟ್‌ನೈಟ್‌ಗೆ ಬೆಡ್‌ರೂಮ್‌ನಲ್ಲಿ ದಂಪತಿ ಜೊತೆ ವಧು ತಾಯಿಯೂ ಇರ್ಬೇಕಂತೆ !

ಹುಡುಗರ ಸಹವಾಸಾನೇ ಬೇಡಾಂತ ಹಾಸಿಗೆಯನ್ನೇ ವರಿಸಿದ ಮಹಿಳೆ!
ಕಾಲ ಬದಲಾಗುತ್ತಿದೆ. ಜೊತೆಗೆ ಸಂಬಂಧದ ಕುರಿತಾಗಿರುವ ಜನರ ಮನೋಭಾವ ಸಹ ವಿಚಿತ್ರವಾಗಿ ಪರಿವರ್ತನೆಗೊಳ್ಳುತ್ತಿದೆ. ಹಿಂದೆಲ್ಲಾ ಒಬ್ಬ ಗಂಡು, ಒಬ್ಬ ಹೆಣ್ಣು ಮದುವೆಯಾಗುತ್ತಿದ್ದರು. ಪುರುಷ ಹಾಗೂ ಮಹಿಳೆ ಪರಸ್ಪರ ಮದುವೆಯಾಗಿ ಲೈಂಗಿಕ ಕ್ರಿಯೆ ಯಲ್ಲಿ ತೊಡಗಿಕೊಂಡು ಮಕ್ಕಳನ್ನು ಪಡೆದು ಕುಟುಂಬವನ್ನು ಬೆಳೆಸಬಹುದಾಗಿದೆ. ಇದು ಸಮಾಜದಿಂದಲೇ ಅಂಗೀಕೃತಗೊಂಡಿರುವ ಸಂಬಂಧ. ಆದರೆ ಈಗ ಕಾಲ ಬದಲಾಗಿದೆ. ಹೆಣ್ಣು ಗಂಡು ಮದುವೆಯಾಗುವುದು ಹಾಗಿರಲಿ, ಹೆಣ್ಣು ಹೆಣ್ಣನ್ನೇ ಮದುವೆಯಾಗುವುದು, ಗಂಡು ಗಂಡನ್ನೇ ಮದುವೆಯಾಗುವುದು ಅಚ್ಚರಿಯ ವಿಷಯವಾಗಿ ಉಳಿದಿಲ್ಲ. ಮಾತ್ರವಲ್ಲ ಇದು ಜನಸಾಮಾನ್ಯರ ನಡುವೆಯೀಗ ಅಚ್ಚರಿಯ ವಿಷಯವಾಗಿಯೂ ಉಳಿದಿಲ್ಲ. 

ಇದೆಲ್ಲವನ್ನೂ ಬಿಟ್ಟು ರೋಬೋಟ್, ಕಂಪ್ಯೂಟರೈಸ್ಡ್‌ ವರ್ಷನ್ ವ್ಯಕ್ತಿ, ಹೋಲೋಗ್ರಾಮ್ (ವ್ಯಕ್ತಿಯ ಕಾಲ್ಪನಿಕ ರೂಪ), ಡಾಲ್‌ನ್ನು ಮದುವೆಯಾದವರೂ ಇದ್ದಾರೆ. ಆದರೆ ಇಲ್ಲೊಬ್ಬಾಕೆ ಇದೆಲ್ಲಕ್ಕಿಂತ ವಿಚಿತ್ರವಾಗಿ ತನ್ನ ಹೊದಿಕೆಯನ್ನೇ ಮದುವೆಯಾಗಲು ನಿರ್ಧರಿಸಿದ್ದಾಳೆ. ಮದುವೆಗೆ ಹಾಸಿಗೆಗೆ ಸಂಬಂಧಿಸಿದ ಡ್ರೆಸ್‌ಕೋಡ್‌ನ್ನು ಸಹ ಇಡಲಾಗಿದೆ. ಜನರು ಪೈಜಾಮ, ಸ್ಲಿಪ್ಪರ್, ನೈಟ್‌ ಗೌನ್ ಹಾಕಿಕೊಂಡು ಬರುವಂತೆ ಸೂಚಿಸಲಾಗಿದೆ. 

Weird Wedding: ಇಲ್ಲಿ ವರನಲ್ಲ, ಅವನ ಸಹೋದರಿ ಜೊತೆ ವಧು ಸಪ್ತಪದಿ ತುಳಿಯುತ್ತಾಳೆ !

ಚಳಿ, ಮಳೆಯ ಸಂದರ್ಭದಲ್ಲಿ ಬೆಚ್ಚಗಿರಲು ಪ್ರತಿಯೊಬ್ಬರಿಗೂ ಹಾಸಿಗೆ (Bed)ಯಂತೂ ಬೇಕೇ ಬೇಕು. ದುಃಖದಲ್ಲಿದ್ದಾಗ, ಖಿನ್ನತೆಯ ಸಮಸ್ಯೆ ಕಾಡಿದಾಗ ಮುದುರಿ ಮಲಗಲು ಬೆಚ್ಚಗಿರುವ ಬೆಡ್‌ ನೆರವಾಗುತ್ತದೆ. ಒತ್ತಡದ (Pressure) ದಿನದ ಕೊನೆಯಲ್ಲಿ ಬೆಚ್ಚಗಿನ ನಿದ್ದೆ ನೀಡುತ್ತದೆ. ಹೀಗಾಗಿ ಹಾಸಿಗೆ ಹಲವರಿಗೆ ಆಪ್ತವಾಗಿದೆ. ಮಲಗುವ ಬೆಡ್‌ ಬದಲಾದರೂ ಕೆಲವರಿಗೆ ಸರಿಯಾಗಿ ನಿದ್ದೆ (Sleep) ಬರುವುದಿಲ್ಲ, ಇಷ್ಟವಾಗುವುದಿಲ್ಲ. ತಮ್ಮ ಬೆಡ್‌ ಮತ್ತೊಬ್ಬರಿಗೆ ಕೊಡಲು ಇಷ್ಟ ಸಹ ಆಗುವುದಿಲ್ಲ. ಹೀಗೆ ಬೆಡ್ ಜೊತೆ ಆಪ್ತತೆ ಹೊಂದಿರುವ ಮಹಿಳೆ (Woman)ಯೊಬ್ಬರು ಅದನ್ನೇ ಮದುವೆಯಾಗಿದ್ದಾರೆ.

Latest Videos
Follow Us:
Download App:
  • android
  • ios