ಕೂಲ್ ಸ್ವಭಾವದವರು ನೀವಾಗಿದ್ದರೆ, ಈ ತಪ್ಪು ಯಾವತ್ತೂ ಮಾಡೋಲ್ಲ!

ಆಂತರಿಕ ಶಾಂತಿ ನಮ್ಮಲ್ಲಿದೆಯೇ ಇಲ್ಲವೇ ಎನ್ನುವ ಗೊಂದಲವಿದೆಯೇ? ಅಥವಾ ಶಾಂತವಾದ ಮನಸ್ಥಿತಿ ಹೊಂದಲು ಏನು ಮಾಡಬೇಕು ಎನ್ನುವ ಪ್ರಶ್ನೆಗಳು ಉದ್ಭವಿಸಿವೆಯೇ? ಆಂತರಿಕವಾಗಿ ಶಾಂತವಾಗಿರುವ ಜನ ಕೆಲವು  ನಿರ್ದಿಷ್ಟ ಕೆಲಸಗಳಿಂದ ದೂರವಿರುತ್ತಾರೆ. 

If you do these things you have peaceful mind sum

ಜೀವನದಲ್ಲಿ ನಿಜವಾಗಿಯೂ ಬೇಕಿರುವುದು ಏನು ಎನ್ನುವ ಪ್ರಶ್ನೆ ಕಾಡಿದಾಗ ಶಾಂತವಾಗಿ ಯೋಚನೆ ಮಾಡಿದರೆ ದೊರಕುವ ಉತ್ತರ “ನೆಮ್ಮದಿ ಹಾಗೂ ಶಾಂತಿ’. ಶಾಂತವಾದ ಮನಸ್ಥಿತಿ ನಮಗೆ ಎಲ್ಲಿಂದಲೋ ದೊರಕುವುದಿಲ್ಲ. ಅದೊಂದು ನಿರ್ಧಾರ. ಜೀವನದ ತಿರುವುಗಳು ಹೇಗೆಯೇ ಇರಲಿ, ಶಾಂತಿಯನ್ನು ಕಳೆದುಕೊಳ್ಳುವುದಿಲ್ಲ, ಶಾಂತವಾದ ಧೋರಣೆಯಿಂದಲೇ ಎಲ್ಲವನ್ನೂ ಸ್ವೀಕರಿಸುವ ನಿರ್ಧಾರ. ಆಳವಾದ ಶಾಂತಿಗಾಗಿ ಧರ್ಮ ಮತ್ತು ಧಾರ್ಮಿಕ ಪದ್ಧತಿಗಳು ಹಲವು ವಿಧಾನಗಳನ್ನು ಹೇಳುತ್ತವೆ. ಆದರೆ, ಅವುಗಳನ್ನು ಅನುಸರಿಸಿಯೂ ಕೆಲವೊಮ್ಮೆ ಮನಸ್ಸಿಗೆ ನೆಮ್ಮದಿ ಇಲ್ಲದ ಸ್ಥಿತಿ ಉಂಟಾಗಬಹುದು. ಅವುಗಳಿಲ್ಲದೆಯೂ ಸಂತೃಪ್ತ ಮನಸ್ಥಿತಿ ಇರಬಹುದು. ಆದರೆ, ಇದು ಖಂಡಿತವಾಗಿ ಸುಲಭವಲ್ಲ. ಏಕೆಂದರೆ, ನಮ್ಮ ಮಿದುಳಿನಲ್ಲಿ ನಿರಂತರವಾಗಿ ಹಲವು ವಿಚಾರಗಳು ಓಡುತ್ತಿರುತ್ತವೆ. ಅವುಗಳಿಂದ ಕೆಲವೊಮ್ಮೆ ಗೊಂದಲ ಉಂಟಾಗಬಹುದು, ಅನ್ ರೆಸ್ಟ್ ಭಾವನೆ ಕಾಡಬಹುದು. ಅಶಾಂತಿಯಿಂದ ತೊಳಲಾಟವಾಗಬಹುದು. ಇಂತಹ ಸಮಯದಲ್ಲಿ ನಮ್ಮಲ್ಲಿ ಶಾಂತಿ ಮರೀಚಿಕೆಯಾಗುತ್ತದೆ. ಆಗ ವ್ಯಕ್ತಿತ್ವದಲ್ಲಿ ಹಲವಾರು ಕೊರತೆಗಳು ಸೃಷ್ಟಿಯಾಗುತ್ತವೆ. ಶಾಂತವಾದ ಮನಸ್ಥಿತಿ ಇರುವಾಗ ಯಾರೂ ಸಹ ಕೆಲವು ಕೆಲಸಗಳನ್ನು ಮಾಡಲು ಹೋಗುವುದಿಲ್ಲ. ಅವುಗಳನ್ನು ನೀವು ಮಾಡುತ್ತಿಲ್ಲವೆಂದಾದರೆ ನಿಮ್ಮಲ್ಲಿ ಆಂತರಿಕವಾಗಿ ಶಾಂತಿಯಿದೆ ಎಂದು ಅರ್ಥೈಸಿಕೊಳ್ಳಬಹುದು.

•    ಇತರರೊಂದಿಗೆ ಹೋಲಿಕೆ (Compare) ಮಾಡಿಕೊಳ್ಳಲ್ಲ
ನಿಮ್ಮಲ್ಲಿ ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳದ ಗುಣವಿದೆ ಎಂದಾದರೆ ನಿಮ್ಮಷ್ಟು ಸುಖಿಗಳು (Happy) ಬೇರ್ಯಾರೂ ಇಲ್ಲ. ಹೋಲಿಕೆ ಮಾಡಿಕೊಳ್ಳುವ ಸ್ವಭಾವ (Behavior) ನಮ್ಮ ಶಾಂತಿಯನ್ನು (Peace) ಕದಡುತ್ತದೆ. ಇತರರ ಸೌಂದರ್ಯ, ಶ್ರೀಮಂತಿಕೆ (Money), ವೃತ್ತಿ (Profession), ಸಂಬಂಧಗಳನ್ನು ನೋಡಿ ಹೋಲಿಕೆ ಮಾಡಿಕೊಳ್ಳುವುದರಿಂದ ಮನಸ್ಸಿನ (Inner) ಶಾಂತಿ ಮಾಯವಾಗುತ್ತದೆ. ನಾವು ಹೇಗಿದ್ದೇವೆಯೋ ಹಾಗೆಯೇ ಕಂಫರ್ಟ್ (Comfort)  ಆಗಿರುವುದು ಮುಖ್ಯ. ಹೀಗಾಗಿ, ಕಷ್ಟಪಟ್ಟಾದರೂ ಈ ಗುಣವನ್ನು ಬೆಳೆಸಿಕೊಳ್ಳುವುದು ಅಗತ್ಯ. 

Relationship Tips: ಭಾವನೆಗಳ ಸಮತೋಲನಕ್ಕೆ ಸರಳ ಸೂತ್ರ

•    ಬದಲಾಯಿಸಲು (Change) ಸಾಧ್ಯವಾಗದಿರುವುದನ್ನು ಒಪ್ಪಿಕೊಳ್ತಿರಾ?
ಜೀವನದಲ್ಲಿ ಎಲ್ಲವೂ ಅಂದುಕೊಂಡಂತೆ ಆಗುವುದಿಲ್ಲ. ಕೆಲವು ಸನ್ನಿವೇಶಗಳು ನಮ್ಮ ನಿಯಂತ್ರಣಕ್ಕೆ ಸಿಗುವುದಿಲ್ಲ. ಕೆಲವನ್ನು ಬದಲಾಯಿಸಲು ಯಾರಿಗೂ ಸಾಧ್ಯವಿಲ್ಲ. ಅಂಥವುಗಳನ್ನು ನೀವು ಸುಲಭವಾಗಿ ಒಪ್ಪಿಕೊಂಡರೆ (Accept) ಮಾತ್ರ ಶಾಂತಿ ದೊರೆಯುತ್ತದೆ. ಬದಲಿಗೆ, ಬದಲಿಸುತ್ತೇನೆಂಬ ಹಠಮಾರಿ (Aggressive) ಧೋರಣೆ ತಾಳಿದರೆ ಶಾಂತಿ ಇಲ್ಲವಾಗುತ್ತದೆ. ಬದಲಾಯಿಸಲು ಸಾಧ್ಯವಿಲ್ಲದ, ಹಿಂದೆ ಆಗಿಹೋಗಿದ ಘಟನೆಗಳ ಬಗ್ಗೆ ಈಗ ಪಶ್ಚಾತ್ತಾಪದಿಂದ ಕುಗ್ಗುವ ಅಗತ್ಯವೂ ಇಲ್ಲ. ಭವಿಷ್ಯ ಮತ್ತು ಭೂತದ ಸಂಗತಿಗಳ ಬಗ್ಗೆ ಯೋಚಿಸುವುದರಿಂದ ಏನೂ ಪ್ರಯೋಜನವಿಲ್ಲ ಎನ್ನುವುದನ್ನು ತಿಳಿದಿದ್ದೀರಿ ಎಂದಾದರೆ ಶಾಂತವಾದ ಮನಸ್ಥಿತಿ (Mentality) ಹೊಂದಿದ್ದೀರಿ ಎಂದರ್ಥ.

•    ಒಳ್ಳೆಯದರ ಬಗ್ಗೆ ಬಲವಾದ ನಂಬಿಕೆ (Faith)
ಆಶಾವಾದಿಗಳು (Optimists) ಸಾಮಾನ್ಯವಾಗಿ ಶಾಂತವಾಗಿರುತ್ತಾರೆ. ನಿರಾಶಾವಾದಿಗಳಿಗೆ ಶಾಂತಿ ಮರೀಚಿಕೆ. ಆಶಾವಾದಿಗಳು ಕೆಟ್ಟ ಸಮಯದಲ್ಲೂ ಒಳ್ಳೆಯ ದಿನಗಳು (Good Days) ಬರುತ್ತವೆ ಎನ್ನುವುದನ್ನು ದೃಢವಾಗಿ ನಂಬುತ್ತಾರೆ. ಕೈ ಮೀರಿದ ಸನ್ನಿವೇಶಗಳು “ಆಗುವುದೆಲ್ಲವೂ ಒಳ್ಳೆಯದಕ್ಕೆ’ ಎನ್ನುವ ವಿಶ್ವಾಸ (Trust) ಹೊಂದಿರುತ್ತಾರೆ. ನಂಬಿಕೆ ಎನ್ನುವುದು ಬಲವಾದ ಆಯುಧದಂತೆ. ಅಚಲವಾದ ವಿಶ್ವಾಸದಿಂದ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು ಎನ್ನುವುದು ವೈಜ್ಞಾನಿಕವಾಗಿ ದೃಢಪಟ್ಟಿರುವ ಸಂಗತಿ. 

Health Tips: ಎಲ್ಲದರ ಬಗೆಗೂ ಆತಂಕವೇ? ಸಿಡಿಯುವ ನರಗಳನ್ನ ಶಾಂತಗೊಳಿಸೋಕೆ ಹೀಗ್ಮಾಡಿ

•    ಕ್ಷಮಿಸುವ (Forgive) ಗುಣ
ನಿಮಗೆ ಕೆಟ್ಟದ್ದನ್ನು ಬಯಸಿದವರನ್ನೂ ಕ್ಷಮಿಸುವ ಗುಣ ಹೊಂದಿದ್ದರೆ ಖಂಡಿತವಾಗಿ ಶಾಂತಿ ನಿಮ್ಮಲ್ಲಿದೆ. ದ್ವೇಷ (Grudge) ಮತ್ತು ಪ್ರತೀಕಾರದ ಭಾವನೆಯಿಂದ ಯಾವುದೇ ಪ್ರಯೋಜನವಿಲ್ಲ ಎನ್ನುವುದು ನಿಮ್ಮ ಭಾವನೆಯಾಗಿದ್ದರೆ ನಿಮ್ಮದು ಪ್ರಬುದ್ಧ ಮನಸ್ಥಿತಿ. ಕ್ಷಮಿಸುವ ಗುಣವಿರುವವರು ಬಳಸಿ ಬಿಸಾಕುವ ವಸ್ತುವಿನಂತೆ ಅಲ್ಲವೇ ಅಲ್ಲ. ಕ್ಷಮಾ ಗುಣ ಬಹು ದೊಡ್ಡದು, ಅದು ನಿಮ್ಮಲ್ಲಿದ್ದರೆ ನೆಮ್ಮದಿ ಖಂಡಿತ. ನಿಮಗೆ ಸಮಸ್ಯೆ ಒಡ್ಡಿದ ವ್ಯಕ್ತಿಗಳಿಂದ ದೂರವಾಗಿ, ಅವರ ಬಗ್ಗೆ ಯಾವುದೇ ದ್ವೇಷದ ಭಾವನೆ ಹೊಂದಿರದೆ ಇರುವುದು ನಿಜವಾಗಿಯೂ ದೊಡ್ಡ ಸಾಮರ್ಥ್ಯ (Capacity). 
 

Latest Videos
Follow Us:
Download App:
  • android
  • ios