ಸ್ನೇಹ ಪರಿಶುದ್ಧವಾಗಿರ್ಬೇಕು! ವಿಷಜಂತುಗಳಿಂದ ದೂರವಿದ್ದು, ಹಗುರವಾಗಿರಿ!
ಕೆಲ ಸ್ನೇಹಿತರಿರುತ್ತಾರೆ. ಅವರು ಒಮ್ಮೊಮ್ಮೆ ಸ್ವೀಟ್ ಆಗಿ ಕಾಣಿಸಿದರೆ ಮತ್ತೊಮ್ಮೆ “ದೂರವಿದ್ದುಬಿಡಬೇಕು’ ಎನ್ನುವಷ್ಟರ ಮಟ್ಟಿಗೆ ಭಾವನಾತ್ಮಕವಾಗಿ ಕಾಟ ಕೊಡುತ್ತಾರೆ. ಹಿಂದಿನಿಂದ ನಿಮ್ಮ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡಿ ನಿಮ್ಮೆದುರು ಭಾರೀ ಚೆನ್ನಾಗಿರುತ್ತಾರೆ. ಇಂಥವರ ಬಗ್ಗೆ ಎಚ್ಚರಿಕೆ ಅಗತ್ಯ.
ಚೆನ್ನಾಗಿ ಕಾಣುವವರೆಲ್ಲ, ಚೆನ್ನಾಗಿ ಮಾತನಾಡುವವರೆಲ್ಲರೂ ಒಳ್ಳೆಯವರು ಎಂದು ಭಾವಿಸುತ್ತೇವೆ. ಆದರೆ, ಎಲ್ಲರೂ ಹಾಗಿರುವುದಿಲ್ಲ. ಸ್ನೇಹ ಭಾವ ತೋರುವವರೆಲ್ಲರೂ ಖಂಡಿತವಾಗಿ ನಿಮ್ಮ ಬಗ್ಗೆ ಕಾಳಜಿ, ಪ್ರೀತಿ ಹೊಂದಿರುವುದಿಲ್ಲ. ಕೆಲವರಿಗೆ ಯಾವೊಂದು ಮೌಲ್ಯವೂ ಇರುವುದಿಲ್ಲ. ಅವರಲ್ಲಿ ನಿಮ್ಮ ಬಗ್ಗೆ ನಿಜವಾಗಿಯೂ ಸ್ನೇಹದ ಭಾವನೆ, ಆತ್ಮೀಯತೆ ಇರುವುದಿಲ್ಲ. ಕೇವಲ ತಮ್ಮ ಸ್ವಾರ್ಥ ಅಥವಾ ಅಗತ್ಯಗಳಿಗಾಗಿ ನಿಮ್ಮ ಜತೆ ಇರಬಹುದು. ಹೀಗಾಗಿ, ಇಂದು ಸ್ನೇಹ ಭಾವದಿಂದ ವರ್ತಿಸಿದರೆ ನಾಳೆ ನಿಮ್ಮನ್ನು ವಿನಾಕಾರಣ ದ್ವೇಷಿಸಲು ಅಥವಾ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಲು ಆರಂಭಿಸಬಹುದು. ಹೀಗಾಗಿ, ನಿಮ್ಮ ಸ್ನೇಹ ಎಂತಹ ಜನರೊಂದಿಗೆ ಏರ್ಪಟ್ಟಿದೆ ಎನ್ನುವುದನ್ನು ಅಗತ್ಯವಾಗಿ ಗಮನಿಸಬೇಕು. ಬರೀ ಚೆನ್ನಾಗಿ ಮಾತನಾಡಿದರೆ, ಕಂಪನಿ ನೀಡಿದರೆ, ಸಾಂತ್ವನದ ಮಾತುಗಳನ್ನಾಡಿದರೆ ಅವರ ಮನಸ್ಸನ್ನು ಅರಿತುಕೊಳ್ಳಲು ಸಾಧ್ಯವಾಗುವುದಿಲ್ಲ. ನೀವು ವ್ಯವಹರಿಸುತ್ತಿರುವುದು ಫೇಕ್ ವ್ಯಕ್ತಿ ಜತೆಗೆ ಎನ್ನುವುದನ್ನು ಕೆಲವು ಲಕ್ಷಣಗಳ ಮೂಲಕ ಅರಿತುಕೊಳ್ಳಬಹುದು. ಅವರ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಕೆಲವು ಗುಣಗಳು ಎದ್ದು ಗೋಚರಿಸುತ್ತವೆ.
• ಹವಾಮಾನದಷ್ಟೇ ಬೇಗ ಬದಲಾಗಬಲ್ಲರು (Change)
ಕೆಲವರು ಈಗ ಚೆನ್ನಾಗಿದ್ದರೆ ಇನ್ನು ಕೆಲವು ಸಮಯದಲ್ಲೇ ವಿಚಿತ್ರವಾದ ರೀತಿಯಲ್ಲಿ ನಿಮ್ಮನ್ನು ಆಟವಾಡಿಸಲು (Play) ಶುರು ಮಾಡುತ್ತಾರೆ. ನಿಮ್ಮ ಭಾವನೆಗಳನ್ನು (Feelings) ಹರ್ಟ್ (Hurt) ಮಾಡಬಹುದು. ಅವರಲ್ಲಿ ಅಂತರ್ಗತವಾದ ದೃಢವಾದ ಮೌಲ್ಯಗಳೇ (Values) ಇರುವುದಿಲ್ಲ. ಊಸರವಳ್ಳಿಯಂತೆ ಯಾರ ಜತೆಗಿದ್ದರೂ ಅವರಂತೆಯೇ ವರ್ತಿಸಬಹುದು. ನಿಮ್ಮಿಂದ ಏನಾದರೂ ಪಡೆದುಕೊಳ್ಳಲು ಅತ್ಯಂತ ಪ್ರೀತಿಯಿಂದ ವರ್ತಿಸಬಹುದು. ಆದರೆ, ನಿಮ್ಮ ಕಷ್ಟದ (Difficult) ಸಮಯದಲ್ಲಿ ಅವರು ಖಂಡಿತವಾಗಿ ಲಭ್ಯವಾಗುವುದಿಲ್ಲ.
ಪ್ರೀತಿಯಲ್ಲಿ ಬಿದ್ದ ಹುಡುಗರು ಹೀಗೆಲ್ಲಾ ಮಾಡ್ತಾರಂತೆ
• ಗಾಸಿಪ್ (Gossip) ನಿರತರು
ಸ್ನೇಹಿತರ (Friends) ಬಗ್ಗೆ ಮತ್ತೊಬ್ಬರಲ್ಲಿ ಮಾತನಾಡುವುದು ಉತ್ತಮ ಗುಣವಲ್ಲ. ಏನಾದರೂ ಹೇಳುವುದಿದ್ದರೆ ನೇರವಾಗಿ ಅವರ ಬಳಿ ಮಾತನಾಡುವುದು ಒಳ್ಳೆಯ ಸಂಗತಿ. ಆದರೆ, ಅವರು ನಿಮ್ಮ ಬಳಿ ತಮ್ಮ ಸ್ನೇಹಿತರ ಬಗ್ಗೆ ಕಮೆಂಟ್ (Comment) ಮಾಡುತ್ತಿದ್ದರೆ ಎಚ್ಚೆತ್ತುಕೊಳ್ಳಿ. ಅವರು ನಿಮ್ಮ ಬಗ್ಗೆಯೂ ಹಾಗೆಯೇ ಇನ್ನೊಬ್ಬರ ಬಳಿ ಮಾತನಾಡುತ್ತಾರೆ. ಫೇಕ್ (Fake) ಸ್ನೇಹಿತರು ಡಬಲ್ ಗೇಮ್ ಆಡುವುದರಲ್ಲಿ ನಿಷ್ಣಾತರಾಗಿರುತ್ತಾರೆ. ಅವರಲ್ಲಿರುವ ಅಭದ್ರತಾ (Insecure) ಭಾವನೆಯಿಂದ ಮತ್ತೊಬ್ಬರನ್ನು ಕುಗ್ಗಿಸಿ ನೋಡುವ ಪರಿಪಾಠ ಬೆಳೆದಿರಬಹುದು. ಏನೇ ಆದರೂ ಅದು ಹಾನಿಕರ.
• ಗುಟ್ಟು (Secrets) ಬಟಾಬಯಲು
ಸ್ನೇಹಿತರ ನಡುವೆ ಗುಟ್ಟುಗಳಿರುತ್ತವೆ. ಅವುಗಳನ್ನು ಉಳಿಸಿಕೊಳ್ಳಬೇಕು. ಆಗಲೇ ಸ್ನೇಹಕ್ಕೆ ಬೆಲೆ. ಆದರೆ, ಫೇಕ್ ಸ್ನೇಹಿತರು ನಿಮ್ಮ ಗುಟ್ಟುಗಳನ್ನು ಬಟಾಬಯಲು ಮಾಡುತ್ತಾರೆ. ಇತರರ ಗುಟ್ಟುಗಳ ಬಗ್ಗೆ ಅವರು ತೀರಾ ಔದಾರ್ಯದಿಂದ ವರ್ತಿಸುತ್ತಾರೆ, ಅದೊಂದು ವಿಚಾರವೇ ಅಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಎಲ್ಲರ ಬಳಿ ಹೇಳುತ್ತ ಸಾಗುತ್ತಾರೆ. ಬೇರೊಬ್ಬರ ಗುಟ್ಟುಗಳನ್ನು ನಿಮ್ಮ ಬಳಿ ಹೇಳುವ ಸ್ನೇಹಿತರ ಬಗ್ಗೆ ಎಚ್ಚರಿಕೆ ಇರಲಿ.
• ಕತೆ ಹೆಣೆಯುವುದರಲ್ಲಿ ಎಕ್ಸ್ ಪರ್ಟ್ (Expert)
ತಮ್ಮ ಅನುಭವಕ್ಕೆ ಉತ್ಪ್ರೇಕ್ಷೆ ಬೆರೆಸಿ, ಇನ್ನೊಬ್ಬರ ಅನುಭವಗಳನ್ನೂ ತಮ್ಮದಾಗಿಸಿ ಕತೆ ಹೇಳುವುದರಲ್ಲಿ ಕೆಲವರಲ್ಲಿ ಚಾಣಾಕ್ಷತೆ ಇರುತ್ತದೆ. ಉದ್ದುದ್ದ ಕತೆಗಳನ್ನು (Stories) ಹೇಳುತ್ತಾರೆ. ನಾಲ್ಕು ಜನರೆದುರು ಇವರ ಕತೆಗಳು ಮತ್ತಷ್ಟು ರೋಮಾಂಚಕವಾಗಿರುತ್ತವೆ. ಮೆಚ್ಚುಗೆ ಗಳಿಸಲು, ಕೇಂದ್ರಬಿಂದುವಾಗುವ ಪ್ರಯತ್ನ ನಡೆಸುತ್ತಾರೆ.
ಗಂಡ-ಹೆಂಡ್ತಿ ಹೀಗೆ ಮನೆ ಕೆಲ್ಸ ಶೇರ್ ಮಾಡ್ಕೊಂಡ್ರೆ, ದಾಂಪತ್ಯ ಜೀವನ ಹ್ಯಾಪಿಯಾಗಿರುತ್ತೆ
• ಹೇಳುವುದಕ್ಕೂ ಮಾಡುವುದಕ್ಕೂ ಹೋಲಿಕೆ ಇಲ್ಲ
ಸುಳ್ಳೇ ಸುಳ್ಳು ಮಾತನಾಡುತ್ತ, ನಿಮ್ಮನ್ನು ರಂಜಿಸಲು ಏನಾದರೂ ಕತೆಗಳನ್ನು ಹೇಳುತ್ತ ನಗುತ್ತಿರುವವರು ತಾವು ಹೇಳುವುದಕ್ಕೂ ಮಾಡುವುದಕ್ಕೂ ಭಾರೀ ವ್ಯತ್ಯಾಸ (Difference) ಹೊಂದಿರುತ್ತಾರೆ. ಜೀವನದ ಬಗ್ಗೆ ದೊಡ್ಡ ದೊಡ್ಡ ಮಾತುಗಳಾಡಬಹುದು. ಆದರೆ, ತಾವು ಸ್ವತಃ ಏನನ್ನೂ ಸಾಧಿಸಿ ತೋರುವುದಿಲ್ಲ.