Asianet Suvarna News Asianet Suvarna News

ಮಕ್ಕಳ ಜಗಳ ನೀವಂದುಕೊಂಡಷ್ಟು ಸರಳ ಇರೋದಿಲ್ಲ!

ಒಂದು ಮಗು ಸಾಕು ಅಂತಿದ್ದವರು ಆ ಮಗು ಬೆಳೆಯುತ್ತಲೇ ಇನ್ನೊಂದ ಪಾಪು ಇದ್ರೆ ಚೆನ್ನಾಗಿತ್ತು. ಹೆತ್ತವರಾಗಿ ನಾಚೆಷ್ಟು ದಿನ ಅವನರೊಂದಿಗಿರಲು ಸಾಧ್ಯ. ಜೊತೆಗೊಬ್ಬ ತಂಗಿಯೋ, ತಮ್ಮನೋ ಇದ್ದರೆ ಈ ಮಗುವಿಗೂ ಆಧಾರ ಆಗಿತ್ತು ಅನ್ನೋ ಸೆಂಟಿಮೆಂಟು ಶುರುವಾಗುತ್ತೆ. ಈ ವಿಚಾರಕ್ಕೆ ಹಿರಿಯರು, ಅಕ್ಕಪಕ್ಕದವರ ಬೆಂಬಲವೂ ಸಿಗುತ್ತೆ. ಅಲ್ಲಿಗೆ ಇನ್ನೊಂದು ಮಗು ಹುಟ್ಟಿಸೋರೇ ಹೆಚ್ಚಿನವರು.  ಅಲ್ಲಿಯವರೆಗೆ ಸರಿ, ಆಮೇಲೆ ಇಲ್ಲಿಗೇ ತಮ್ಮ ಕರ್ತವ್ಯ ಮುಹಿಯಿತು ಅನ್ನೋ ಹಾಗೆ ತಮ್ಮ ಕೆಲಸದ ಒತ್ತಡದಲ್ಲಿ ಬೇಯುತ್ತಾ, ಮಕ್ಕಳು ಕಿರಿಕಿರಿ ಮಾಡಿದರೆ ರೇಗುತ್ತಾ ಇರೋದು ಸಾಮಾನ್ಯ. ಆದರೆ ನಿಮ್ಮ ಉಡಾಫೆ ಮಕ್ಕಳ ಮೇಲೆ ನೆಗೆಟಿವ್ ಪರಿಣಾಮಗಳನ್ನೂ ಬೀರಬಹುದು. ಮಕ್ಕಳು ಬೆಳೆದು ವಯಸ್ಕರಾದಾಗ ಅವರ ವೈಯಕ್ತಿಕ ಬದುಕಿನ ಮೇಲೂ ಪರಿಣಾಮ ಬೀರಬಹುದು.

Parents negative behavior on second child worsens their mental health
Author
Bangalore, First Published Dec 25, 2019, 10:42 AM IST

ನೋಡು, ಅಕ್ಕ ಎಷ್ಟು ಜಾಣೆ!

ಮಕ್ಕಳನ್ನು ಹೋಲಿಸುವ ಕೆಟ್ಟ ಚಟ ನಮಗೆ ಅನುವಂಶಿಕವಾಗಿಯೇ ಬಂದಿದ್ದಿರಬೇಕು. ನಮಗರಿವಿಲ್ಲದೇ ನಾವು ಮಕ್ಕಳನ್ನು ಹೋಲಿಸಿ ಬಿಡುತ್ತೇವೆ. ಇದು ಕ್ಷಣದ ತೀರಾ ಕ್ಷುಲ್ಲಕ ವಿಷಯ. ಆದರೆ ಬೆಳೆಯುವ ಮಗುವಿನಲ್ಲಿ ಕೀಳರಿಮೆ, ಹಠ ಇತ್ಯಾದಿ ಗುಣಗಳನ್ನು ಬೆಳೆಸಬಹುದು. ಇದೇ ವಿಷಯಕ್ಕೆ ಅಕ್ಕರೆಯ ಜೊತೆಗಾರರಾಗಬೇಕಾದ ಸಹೋದರರು ಬದ್ಧ ವೈರಿಗಳಾಗಿ ಬದಲಾಗಬಹುದು. ಅಕ್ಕ ಬುದ್ಧಿವಂತೆ, ತಮ್ಮ ತುಸು ಸಾಮಾನ್ಯ ಅಂತಿದ್ದರೆ, ಶಾಲೆಯಿಂದ ಹಿಡಿದು ಮನೆ, ಪರಿಸರದಲ್ಲೆಲ್ಲ ಅವನನ್ನು ಅಕ್ಕನ ಜೊತೆಗೆ ಹೋಲಿಸಿ ಟೀಕಿಸುವವರೇ
ಇರುತ್ತಾರೆ.

ಮಗುವಿಗೆ ಗುಡ್ ಟಚ್, ಬ್ಯಾಡ್ ಟಚ್ ಪಾಠ ಮಾಡುವುದು ಹೇಗೆ ಗೊತ್ತಾ?

ಇದು ಆ ಮಗುವಿನ ಆತ್ಮವಿಶ್ವಾಸವನ್ನೆಲ್ಲ ಕಳೆದು ಜೀವನದಲ್ಲಿ ಮುಂದೆಯೇ ಬರದ ಹಾಗೆ ಮಾಡಬಹುದು.

ಮನೆಯೆಂಬ ರಣರಂಗದಲ್ಲಿ ಹೆತ್ತವರು ಯಾರ ಕಡೆ?

ಮಕ್ಕಳು ಮನೆಯಲ್ಲಿರುವಾಗ ಜಗಳ ಸಾಮಾನ್ಯ. ಆಗ ಹೆತ್ತವರು ಯಾರೋ ಒಬ್ಬರ ಕಡೆ ನಿಂತು ಬಿಡುತ್ತಾರೆ. ಆಗ ಸೂಕ್ಷ್ಮ ಮನಸ್ಸಿನ ಇನ್ನೊಂದು ಮಗುವಿಗೆ ಎಂಥಾ ಆಘಾತ ಆಗಬಹುದು, ಅದರಲ್ಲಿ ಎಂಥಾ ತಬ್ಬಲಿತನ ಬೆಳೆಯಬಹುದು. ಹೆತ್ತವರು ಪರವಾಗಿ ನಿಲ್ಲುವ ಮಗುವಿನಲ್ಲಿ ಎಂಥಾ ಆ್ಯಟಿಟ್ಯೂಡ್ ಬೆಳೆಯಬಹುದು, ಸಾವಧಾನವಾಗಿ ಯೋಚಿಸಿ.

ನಾನೇ ವಿನ್ ಆಗ್ಬೇಕು

ಮಕ್ಕಳಲ್ಲಿ ಜಗಳವಾದಾಗ ಒಬ್ಬರು ವಿನ್ ಆಗೋದು ಮಾಮೂಲಿ. ಆ ಗೆಲುವಿನ ರುಚಿಗೆ ಮಗು ಯಾವ ಪರಿ ಯಾಮಾರಿಬಿಡುತ್ತೆ ಅಂದರೆ ಪ್ರತೀ ಸಲ ತಾನೇ ವಿನ್ ಆಗ್ಬೇಕು. ತಮ್ಮ ಅಥವಾ ಅಕ್ಕ ತನ್ನೆದುರು ಸೋಲ್ಬೇಕು ಅನ್ನೋದನ್ನೇ ರೂಢಿಸಿಕೊಂಡು ಬಿಡುತ್ತದೆ. ಮುಂದೆ ಬದುಕಿನಲ್ಲಿ ಬರುವ ಸೋಲುಗಳು ಇವರನ್ನು ಎದೆಗುಂದಿಸಿ ಬಿಡಬಹುದು.

ನಿಮ್ಮ ಮಗುವಿನ ಐಕ್ಯೂ ಹೆಚ್ಚಿಸುವುದು ಹೇಗೆ?

ಅಪ್ಪ ಅಮ್ಮನ ಸಂಬಂಧದ ಪರಿಣಾಮ

ಮನೆಯಲ್ಲಿ ಅಮ್ಮನನ್ನು ಹೀಯಾಳಿಸುವವರೇ ಹೆಚ್ಚು. ಅಪ್ಪನಿಗೆ ಅಹಂ. ಅದನ್ನು ಎಲ್ಲರೂ ಪೋಷಿಸುವವರೇ. ಅವನಿಗೇ ಹೆಚ್ಚಿನ ಸ್ಥಾನ. ಅಮ್ಮಎಲ್ಲದರಲ್ಲೂ ಅಡ್ಜೆಸ್ಟ್ ಮಾಡಿಕೊಂಡು ಮಕ್ಕಳನ್ನೂ ಸಂಭಾಳಿಸಬೇಕು. ಹಾಗಿರುವಾಗ ಮಕ್ಕಳಿಗೂ ಅಮ್ಮನ ಬಗ್ಗೆ ಅಸಡ್ಡೆ. ಅವಳ ವ್ಯಕ್ತಿತ್ವಕ್ಕೆ ಗೌರವ ನೀಡಬೇಕು ಅನ್ನೋದು ಗೊತ್ತಾಗಲ್ಲ. ಮಕ್ಕಳಿಬ್ಬರಲ್ಲಿ ಒಬ್ಬರಿಗೆ ಅಮ್ಮನ ಗುಣ  ಬಂದಿರುತ್ತದೆ. ಇನ್ನೊಬ್ಬನ ಸ್ವಭಾವ ಅಪ್ಪನಂತಿರುತ್ತದೆ. ಅಮ್ಮನ ಸ್ವಭಾವದ ಮಗು ದುರ್ಬಲತೆ ಹೆಚ್ಚಿಸಿಕೊಳ್ಳುತ್ತಾ ಹೋದರೆ, ಮತ್ತೊಂದು ಇಗೋ ಹೆಚ್ಚಿಸುತ್ತಾ ಹೋಗಬಹುದು. ಇವೆರಡೂ ಹಾನಿಕರವೇ

ಮಕ್ಕಳು ಜವಾಬ್ದಾರಿಯುತವಾಗಿ ಬೆಳೆಯಲಿ

ಇಬ್ಬರು ಮಕ್ಕಳಿರುವಾಗ ಚಿಕ್ಕ ಮಗು ಹೆಚ್ಚಾಗಿ ಬೇಜವಾಬ್ದಾರಿಯಿಂದಲೇ ಬೆಳೆಯುತ್ತದೆ. ಕೆಲವೆಡೆ ಉಲ್ಟಾ ಆಗೋದೂ ಇದೆ. ಎರಡನೇ ಮಗುವಾದ ಕಾರಣ ಅಪ್ಪ ಅಮ್ಮನಿಗೆ ಮೊದಲ ಮಗುವಿನ ಬಗೆಗಿದ್ದ ಕುತೂಹಲ ಇರಲ್ಲ. ಹಾಗಾಗಿ ಅತಿ ಆರೈಕೆ ಸಿಗದೇ ಆ ಮಗು ಸ್ವತಂತ್ರವಾಗಿ, ಜವಾಬ್ದಾರಿಯುತವಾಗಿ ಬೆಳೆಯುವ ಉದಾಹರಣೆಯೂ ಇದೆ. ಎರಡೂ ಮಕ್ಕಳೂ ಅವರವರ ವಯಸ್ಸಿಗೆ ತಕ್ಕ ಹಾಗೆ ಜವಾಬ್ದಾರಿ ವಹಿಸಿಕೊಳ್ಳುವುದು, ಅದನ್ನು ನಿಭಾಯಿಸುವುದನ್ನು ಕಲಿಸಿ.

ಮಗುವಿನ ಲಾಲನೆ ಪಾಲನೆಯಲ್ಲಿ ಅಪ್ಪಯಾಕೆ ಅಮ್ಮನಂತಾಗಬಾರದು?

ಅವರ ಕೆಲಸ ಅವರೇ ಮಾಡಿಕೊಂಡರೆ ಬೆಸ್ಟ್

ಮಕ್ಕಳಿಗೆ ಚಿಕ್ಕಂದಿನಿಂದಲೇ ಅವರವರ ಕೆಲಸ ಅವರವರೇ ಮಾಡಿಕೊಳ್ಳುವುದು ಕಲಿಸಿ. ಇದರಿಂದ ಪೋಷಕರಿಗೂ ಮಕ್ಕಳ ನಿರ್ವಹಣೆ ಸುಲಭವಾಗುತ್ತೆ. ಜೊತೆಗೆ ಮಕ್ಕಳೂ ಸ್ವತಂತ್ರವಾಗಿ
ಬೆಳೆಯುತ್ತಾರೆ. ಇದು ಅವರ ಭವಿಷ್ಯಕ್ಕೂ ಉತ್ತಮ.

ಮಕ್ಕಳು ಅಮ್ಮನ ಹಾಗೂ ಅಲ್ಲ, ಅಪ್ಪನ ಹಾಗೂ ಅಲ್ಲ!

ಮಕ್ಕಳನ್ನು ಅಮ್ಮನಿಗೆ ಅಪ್ಪನಿಗೆ ಹೋಲಿಸೋ ಕ್ರಮ ನಮ್ಮಲ್ಲಿ ಹೆಚ್ಚು. ಆದರೆ ಮಗು ಅವರಿಬ್ಬರ ಸ್ವಭಾವ ರೂಢಿಸಿಕೊಂಡರೂ ಅವರಿಗಿಂತ ಭಿನ್ನವಾಗಿರುತ್ತದೆ. ಹೆತ್ತವರ ಜೊತೆಗೆ ಮಕ್ಕಳನ್ನು ತುಲನೆ ಮಾಡೋದು ತಪ್ಪು. ಇದು ಮಗುವಿನ ಸ್ವಭಾವದ ಮೇಲೂ ಪರಿಣಾಮ ಬೀರುತ್ತೆ. ಯಾರಂತೆಯೂ ಆಗದೇ, ಮಗು ಸ್ವತಂತ್ರ ವ್ಯಕ್ತಿಯಾಗಿ ಬೆಳೆಯಲಿ.

ಆತ್ಮವಿಶ್ವಾಸ ಬೆಳೆಸಿ

ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸೋದು ಬಹಳ ಮುಖ್ಯ. ಬೇರೇನೂ ಗಿಫ್ಟ್ ಮತ್ತೊಂದು ಕೊಡಿಸದಿದ್ದರೂ ಪರವಾಗಿಲ್ಲ. ಅದರೊಳಗೆ ಆತ್ಮವಿಶ್ವಾಸದ ಬೀಜ ಬಿತ್ತಿ ಅದಕ್ಕೆ ನೀರೆರೆಯುತ್ತಾ ಬಂದರೆ ಸಾಕು, ಬದುಕಿನ ಯಾವ ಸವಾಲನ್ನೂ ಅದು ಸಮರ್ಥವಾಗಿ ಎದುರಿಸುತ್ತದೆ. 

Follow Us:
Download App:
  • android
  • ios