ಇವತ್ತಿನ ದಿನಗಳಲ್ಲಿ ವ್ಯಕ್ತಿಯ ಐಕ್ಯೂ- ಬುದ್ಧಿಮತ್ತೆ ಸೂಚಕ- ಇಂಟಲಿಜೆನ್ಸ್‌ ಕೋಶಿಯೆಂಟ್‌ಗೆ ತುಂಬ ಬೆಲೆ ಕೊಡಲಾಗುತ್ತದೆ. ಅದನ್ನು ಪರೀಕ್ಷಿಸುವ ನಾನಾ ವಿಧಾನಗಳೂ ಪರೀಕ್ಷೆಗಳೂ ಇವೆ. ವ್ಯಕ್ತಿಯನ್ನು ಸಂದರ್ಶಿಸಿ ಉದ್ಯೋಗಕ್ಕೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಅಭ್ಯರ್ಥಿಯ ಐಕ್ಯೂವನ್ನು ಅಳೆಯುವ ಪ್ರಶ್ನೆಗಳನ್ನೂ ಕೇಳಲಾಗುತ್ತೆ. ಸಹಜಾವಗಿಯೇ, ನಿಮ್ಮ ಮಗು ಬುದ್ಧವಂತನಾಗಿ ಬೆಳೆಯಬೇಕು ಎಂಬ ಆಸೆ ನಿಮಗೂ ಇರುತ್ತೆ ಅಲ್ಬಾ? ಐಕ್ಯೂ ಚೆನ್ನಾಗಿದ್ದರೆ ಆತ/ ಆಕೆ ಒಳ್ಳೆಯ ಜೀವನ ನಡೆಸಬಹುದು ಅಂದುಕೊಂಡಿರುತ್ತೀರಿ, ಆದರೆ ಮಗುವಿನ ಐಕ್ಯೂ ಹೆಚ್ಚಿಸಬೇಕಾದರೆ ಏನು ಮಾಡಬೇಕು ಅನ್ನೋದು ಗೊತ್ತಿದೆಯಾ? ಇಲ್ಲಿವೆ ನೋಡಿ ಸರಳವಾದ ಐದು ಕೆಲಸಗಳು:

ಇನ್‌ಸ್ಟ್ರುಮೆಂಟ್‌ ನುಡಿಸಲು ಕಲಿಸಿ

ಮಗು ಯಾವುದಾದರೊಂದು ಸಂಗೀತ ವಾದ್ಯವನ್ನು ನುಡಿಸಲು ಕಲಿತಾದ ಅದು ಹೆಚ್ಚು ಚುರುಕಾಗುವುದು, ಅದರ ಗಣಿತದ ಶಕ್ತಿ ಹೆಚ್ಚುವುದು ಅಧ್ಯಯನಗಳಿಂದ ಕಂಡುಕೊಳ್ಳಲಾಗಿದೆ. ಇದನ್ನು ಎಂಆರ್‌ಐ ಸ್ಕ್ಯಾ‌ನ್‌ ಪರೀಕ್ಷೆಗಳ ಮೂಲಕವೂ ಕಂಡುಕೊಳ್ಳಲಾಗಿದೆ. ಗಿಟಾರ್‌, ಸಿತಾರ್‌, ಕೀಬೋರ್ಡ್‌, ತಬಲಾ, ವೀಣೆ, ಕೊಳಲು ಹೀಗೆ ಯಾವುದೇ ಇನ್‌ಸ್ಟ್ರುಮೆಂಟ್‌ ಆದರೂ ಓಕೆ. ಕಲಿಯುವುದು ಮುಖ್ಯ.

ಆಟದಲ್ಲಿ ತೊಡಗಿಸಿ

ಯಾವುದಾದರೊಂದು ಆಟದಲ್ಲಿ ಮಗು ತೊಡಗಿಕೊಳ್ಳುವುದು ಮುಖ್ಯ. ಅದರಲ್ಲಿ ಎಕ್ಸ್‌ಪರ್ಟ್‌ ಆಗಬೇಕೆಂದೇನಿಲ್ಲ. ಕ್ರಿಕೆಟ್‌, ಬ್ಯಾಡ್ಮಿಂಟನ್‌, ಫುಟ್ಬಾಲ್‌, ಹೀಗೆ ಯಾವುದಾದರೂ ಸರಿ. ಆಟದಲ್ಲಿ ತೊಡಗಿದಾಗ ಮಗುವಿನ ದೇಹದಲ್ಲಿ ಬಿಡುಗಡೆಯಾಗುವ ಎಂಡಾರ್ಫಿನ್‌ ಹಾರ್ಮೋನುಗಳು ಮೆದುಳನ್ನು ಚುರುಕಾಗಿಡುತ್ತವೆ. ಆಡುತ್ತಾ ಹೋದಂತೆ ದೈಹಿಕ ದೃಢತೆಯೊಂದಿಗೆ ಮಾನಸಿಕ ಚುರುಕುತನವೂ ಹೆಚ್ಚುತ್ತದೆ.

ಮಗುವಿನ ಜೊತೆ ಇಂಗ್ಲಿಷ್‌ನಲ್ಲೇ ಹೆಚ್ಚು ಮಾತಾಡ್ತೀರಾ? ಹಾಗಾದ್ರೆ ಇದನ್ನು ಓದಿ!

ಗಣಿತದಲ್ಲಿ ಆಸಕ್ತಿ

ಮಗುವಿನಲ್ಲಿ ಗಣಿತದ ಬಗ್ಗೆ ಆಸಕ್ತಿ ಮೂಡಿಸಿ. ಪ್ರತಿದಿನವೂ ಅರ್ಧ ಗಂಟೆ ಲೆಕ್ಕ ಕೊಟ್ಟು ಬಿಡಿಸಲು ತೊಡಗಿಸಿ. ಅದು ಸರಳವಾದ ಲೆಕ್ಕವಾದರೂ ಚಿಂತೆಯಿಲ್ಲ. ಗಣಿತ ಮೆದುಳನ್ನು ಸಕ್ರಿಯವಾಗಿಡುತ್ತದೆ. ಅಬಾಕಸ್‌, ಯೋಗ ಗಣಿತ ಮುಂತಾದವನ್ನೆಲ್ಲ ಕಲಿಸುವುದೂ ಕೂಡ ಒಳ್ಳೆಯದೇ.

ಆಳವಾದ ಉಸಿರಾಟ

ಆಳವಾದ ಉಸಿರಾಟವೂ ಒಂದು ಬಗೆಯ ಪ್ರಾಣಾಯಾಮವೇ. ಇದು ಮೆದುಳಿನ ನರಗಳನ್ನು ಚುರುಕಾಗಿಸುತ್ತದೆ. ಚಿಂತನಾ ಶಕ್ತಿಯನ್ನು ಉದ್ದೀಪಿಸುತ್ತದೆ. ದಿನಕ್ಕೊಮ್ಮೆ ಅರ್ಧ ಗಂಟೆ ನಿಮ್ಮ ಮಗುವಿನೊಂದಿಗೆ ಆಳವಾದ ಉಸಿರಾಟದಲ್ಲಿ ನೀವೂ ತೊಡಗಿ. ಹಾರ್ವರ್ಡ್‌ ವಿಶ್ವವಿದ್ಯಾನಿಲಯದ ತಜ್ಞರು ಇತ್ತೀಚೆಗೆ ಅಧ್ಯಯನದಿಂದ ಕಂಡುಕೊಂಡಿದ್ದೆಂದರೆ, ಎಂಟು ತಿಂಗಳ ಕಾಲದ ದೀರ್ಘ ಉಸಿರಾದ ಪ್ರಕ್ರಿಯೆಯಲ್ಲಿ ತೊಡಗಿಕೊಂಡವರ ಮೆದುಳು ಸೂಕ್ಷ್ಮವಾಗಿ ಹಿಗ್ಗಿದುದು ಗೊತ್ತಾಗಿದೆ.

ಪೋಷಕರನ್ನು ಕಳೆದುಕೊಂಡರೆ ಬದುಕು ಬರಡಾಗುತ್ತದೆ, ಬದಲಾಗುತ್ತದೆ

ಮೆದುಳಿನ ಗೇಮ್‌ಗಳು

ಇಂದಿನ ಮಕ್ಕಳು ನಿಮ್ಮಿಂದ ಮೊಬೈಲ್‌ ಕಸಿದುಕೊಂಡು ಅದರಲ್ಲಿ ಆಟದಲ್ಲಿ ತೊಡಗಿಕೊಳ್ಳುವುದು ಸಹಜ. ಅದು ಪೂರ್ತಿ ತಪ್ಪೇನೂ ಅಲ್ಲ. ಹೆಚ್ಚು ಹೊತ್ತು ಮೊಬೈಲ್‌ನಲ್ಲಿ ಮುಳುಗುವುದ ತಪ್ಪೇ. ಆದರೆ ಮಗುವಿನ ಬೆಳವಣಿಗೆಗೆ ಪೂರಕವಾದ, ಆರೋಗ್ಯಕರವಾದ ಕೆಲವು ಗೇಮ್‌ಗಳನ್ನು ನೀವೇ ಡೌನ್‌ಲೋಡ್‌ ಮಾಡಿ, ಅದನ್ನು ನಿಗದಿತ ಸಮಯದಲ್ಲಿ ಆಡಲು ಪ್ರೋತ್ಸಾಹಿಸಿ. ಆ ಆಟಗಳು ಮೆದುಳಿನ ಕಾರ‍್ಯವೈಖರಿಯನ್ನು ಚುರುಕಾಗಿಸುವಂತೆ ಇರಲಿ.

ಪ್ರವಾಸ ಕರೆದುಕೊಂಡು ಹೋಗಿ

ಮಗುವನ್ನು ಸುತ್ತಾಡಿಸುವುದು, ಹೊರಗೆ ಕರೆದುಕೊಂಡು ಹೋಗುವುದು ಮಗುವಿಗೂ, ನಿಮಗೂ ಫನ್‌, ಜೊತೆಗೆ ಕಲಿಕೆಯ ಅವಕಾಶ ಕೂಡ. ಹೊಸ ಸಂಗತಿಗಳನ್ನು ಮಗು ಬೇಗ ಬೇಗನೆ ತಿಳಿದಷ್ಟೂ ಅದರ ಐಕ್ಯೂ ಬೆಳೆಯುತ್ತಾ ಹೋಗುತ್ತದೆ. ಪೋಸ್ಟ್‌ ಆಫೀಸ್‌, ಬ್ಯಾಂಕ್‌, ಪೊಲೀಸ್‌ ಸ್ಟೇಶನ್‌ ಮುಂತಾದೆಡೆ ಕರೆದುಕೊಂಡು ಹೋಗಿ ಅಲ್ಲಿನ ಕೆಲಸದ ರೀತಿಯನ್ನು ಅರ್ಥ ಮಾಡಿಸಿ.

ಶೇರೆಂಟಿಂಗ್: ಮಕ್ಕಳ ವಿಷಯದಲ್ಲಿ ಈ ತಪ್ಪು ಮಾಡಲೇಬೇಡಿ!

ವೃತ್ತಿಗಳನ್ನು ಅರ್ಥ ಮಾಡಿಸಿ

ಮಗು ಇಂದಿನ ಜಗತ್ತಿನಲ್ಲಿ ಒಂದಲ್ಲ ಒಂದು ವೃತ್ತಿಯನ್ನು ಕಲಿಯುವುದು ಅನಿವಾರ್ಯ ಅಲ್ಲವೇ. ಯಾವುದೋ ಒಂದು ಕೆಲಸದಲ್ಲಿ ಮಾತ್ರವೇ ತೊಡಗಿಸಿಕೊಳ್ಳುವುದಲ್ಲ, ಹತ್ತು ಹಲವಾರು ವೃತ್ತಿಗಳ ಬಗ್ಗೆ ತಿಳಿದಿದ್ದಾಗ ತನಗೆ ಇಷ್ಟವಾದುದನ್ನು ಆರಿಸಿಕೊಳ್ಳಲೂ ಆಗುತ್ತದೆ; ಇತರ ವೃತ್ತಿಗಳ ಬಗ್ಗೆ ಅರಿವಿದ್ದರೆ ಆ ಕಡೆಗೂ ಬೆಳೆಯುವ ಸಾಧ್ಯತೆಗಳಿವೆ. ತನ್ನ ತಂದೆ ತಾಯಿಯ ಕೆಲಸ ಏನೆಂದು ಮಗು ಮೊದಲು ಅರ್ಥ ಮಾಡಿಕೊಳ್ಳಲಿ.

ಹಣಕಾಸಿನ ಅರಿವು

ಮುಗುವಿಗೆ ಸಣ್ಣ ಪ್ರಾಯದಲ್ಲೇ ಹಣಕಾಸಿನ ವಹಿವಾಟು ಗೊತ್ತಾಗುವುದು ಮುಖ್ಯ. ಮನೆಗೆ ದಿನಸಿ ಸಾಮಗ್ರಿ ಕೊಳ್ಳುವಾಗ ಮಗುವನ್ನೂ ಕರೆದೊಯ್ದು ಸರಳವಾದ ಹಣಕಾಸಿನ ಲೆಕ್ಕಾಚಾರ ಆತ/ಆಕೆಯಿಂದಲೇ ಮಾಡಿಸಿ ಹಣ ಎಣಿಸಿ ಕೊಡಲು ಕಲಿಸಿ.

ಮೊಮ್ಮಕ್ಕಳನ್ನು ನೋಡಿಕೊಳ್ಳೋ ಅಜ್ಜ- ಅಜ್ಜಿಯರ ಆಯಸ್ಸು ಹೆಚ್ಚಾಗುತ್ತದೆ!