ಮಕ್ಕಳನ್ನು ಬೆಳೆಸುವುದು ಸುಲಭವಲ್ಲ. ಆದರೆ, ನಿಯಮಿತವಾಗಿ ಕೆಲಸಗಳನ್ನು ಮಾಡುವುದು ಅಭ್ಯಾಸಗಳಾಗಿ ಬದಲಾಗುತ್ತದೆ. ಹಾಗಾಗಿ ಪೋಷಕರು ಮಕ್ಕಳಲ್ಲಿ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ.

ಮಗು ದೊಡ್ಡವರನ್ನು ಅನುಕರಣೆ ಮಾಡುತ್ತವೆ. ಅಂದರೆ ಮಗುವು ಏನನ್ನು ನೋಡುತ್ತದೆ ಮತ್ತು ಗಮನಿಸುತ್ತದೆ, ಅವರು ಅದನ್ನು ಅಭ್ಯಾಸ ಮಾಡಲು ಬದ್ಧರಾಗಿರುತ್ತಾರೆ. ಹಾಗಾಗಿ ಮಕ್ಕಳಿಗೆ ಆರೋಗ್ಯಕರ ಅಭ್ಯಾಸಗಳನ್ನು ಕಲಿಸುವುದು ಅವರ ಮುಂದಿನ ಜೀವನಕ್ಕಾಗಿ ಕೌಶಲ್ಯಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಮಗುವಿಗೆ ಆರೋಗ್ಯಕರ ಮತ್ತು ಉತ್ತಮ ನಾಳೆಗಾಗಿ ಅಭ್ಯಾಸ ಮಾಡಿಸುವ ಕೆಲ ಚಟುವಟಿಕೆಗಳು ಇಲ್ಲಿವೆ. 

1. ಆರೋಗ್ಯಕರ ಮತ್ತು ಚೆನ್ನಾಗಿ ತಿನ್ನುವುದು(Eating Healthy Food): ಉತ್ತಮ ಆರೋಗ್ಯಕರ ಆಹಾರ ಪದ್ಧತಿಯು ಅತ್ಯಂತ ಮಹತ್ವದ್ದಾಗಿದೆ. ಮಗುವಿಗೆ ಆಹಾರವನ್ನು ಆಕರ್ಷಕವಾಗಿ ಕಾಣುವಂತೆ ಮಾಡುವುದು ಮುಖ್ಯ. ನಿಮಗೆ ಇದು ಕಷ್ಟವಾದರೂ ಮಕ್ಕಳಿಗಾಗಿ ಮಾಡುವುದು ಅನಿವಾರ್ಯ. ಮಗುವಿಗೆ ಜಂಕ್(Junk) ಮತ್ತು ಸಕ್ಕರೆಯ(Sugar) ಆಹಾರವನ್ನು ನೀಡುವುದನ್ನು ತಡೆಯಿರಿ. ಅನಾರೋಗ್ಯಕರ ಆಹಾರವನ್ನು ಸೇವಿಸುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅವರಿಗೆ ಅರಿವು ಮೂಡಿಸಿ ಮತ್ತು ಸರಿಯಾದ ಆಹಾರದ ಆಯ್ಕೆಗಳ ಬಗ್ಗೆ ಸಹಾಯ ಮಾಡಿ.

2. ಹೊರಾಂಗಣ ಚಟುವಟಿಕೆಗಳು(Outdoor Activities): ಮಕ್ಕಳು ಚಟುವಟಿಕೆಯಿಂದಿರುವುದು ಬಹಳ ಮುಖ್ಯ. ಅದರಲ್ಲೂ ಮಗು ದೈಹಿಕವಾಗಿ ಸಕ್ರಿಯವಾಗಿರುವುದು(Physical Activity) ಬಹಳ ಮುಖ್ಯ. ಓಡುವುದು(Running), ಸೈಕ್ಲಿಂಗ್ ಮಾಡುವುದು(Cycling), ಸ್ನೇಹಿತರೊಂದಿಗೆ ಉದ್ಯಾನವನದಲ್ಲಿ ಆಟವಾಡುವುದು ಮುಂತಾದ ಹೊರಾಂಗಣ ಚಟುವಟಿಕೆಗಳಲ್ಲಿ ಹೆಚ್ಚು ಸಮಯವನ್ನು ಕಳೆಯಲು ಪ್ರೇರೇಪಿಸಿ. ದೈಹಿಕ ಚಟುವಟಿಕೆಗಳು ಮಗುವಿಗೆ ಚೈತನ್ಯವನ್ನು ನೀಡುತ್ತದೆ ಹಾಗೂ ಅವರನ್ನು ಸಂತೋಷದಿAದ ಇನ್ನಷ್ಟು ಪ್ರೇರೇಪಿಸುವಂತೆ ಮಾಡುತ್ತದೆ.

ಮಾತು ಮಾತಿಗೆ ಮಕ್ಕಳ ಮೇಲೆ ಸಿಟ್ಟು ಬರುತ್ತಾ ? ಕಂಟ್ರೋಲ್ ಮಾಡದಿದ್ರೆ ಕಷ್ಟ

3. ಸಮಯಕ್ಕೆ ನಿದ್ರಿಸುವುದು(Sleeping In Time): ಮಗು ದಿನದಲ್ಲಿ ಹೆಚ್ಚು ಆಟವಾಡಿ ಸುಸ್ತಾಗಿರುತ್ತಾರೆ. ಅವರ ದೇಹದಲ್ಲಿನ ಶಕ್ತಿಯ ಮಟ್ಟವನ್ನು ಮರಳಿ ಪಡೆಯಲು ಮತ್ತು ಮರುಪೂರಣಗೊಳಿಸಲು ಸಾಕಷ್ಟು ನಿದ್ರೆ ಮತ್ತು ವಿಶ್ರಾಂತಿ ಮುಖ್ಯವಾಗಿದೆ. ಉತ್ತಮ ನಿದ್ರೆ ಮಗುವಿಗೆ ದಿನಕ್ಕೆ ನವ ಚೈತನ್ಯ ಮತ್ತು ತಾಜಾತನವನ್ನು(Freshness) ನೀಡುತ್ತದೆ. ಹಾಗಾಗಿ ಮಗುವಿಗೆ ಮಲಗುವ ದಿನಚರಿಯನ್ನು ಹೊಂದಿಸಿ ಮತ್ತು ಅದನ್ನು ಅನುಸರಿಸಿ.

4. ಊಟದ ಮೊದಲು ಮತ್ತು ನಂತರ ಕೈ ತೊಳೆಯುವುದು(Hand Wash): ಇದೊಂದು ಉತ್ತಮ ಅಭ್ಯಾಸವಾಗಿದೆ. ಮಗು ಏನೇನೋ ಮುಟ್ಟಿರುತ್ತವೆ, ಆಟವಾಡಿರುತ್ತವೆ. ಕೈಗಳಲ್ಲಿ ಸೂಕ್ಷö್ಮಜೀವಿಗಳು ಇರುವ ಬಗ್ಗೆ ಅವರಿಗೆ ಮನವರಿಕೆ ಮಾಡಿಸಿ. ಸಾಬೂನು(Soap) ಬಳಸಲು ಮತ್ತು ಕೈ, ಕಾಲುಗಳನ್ನು ಸರಿಯಾದ ರೀತಿಯಲ್ಲಿ ತೊಳೆಯದಲು ಕಲಿಸಿ.

5. ಬೆಳಗಿನ ಉಪಾಹಾರ ದಿನದ ಪ್ರಮುಖ ಊಟ(Breakfast): ಮಗುವಿಗೆ ಬೆಳಗಿನ ಉಪಹಾರವನ್ನು ಎಂದಿಗೂ ಸ್ಕಿಪ್ ಮಾಡಿಸಬೇಡಿ. ಏಕೆಂದರೆ ಸರಿಯಾದ ಉಪಹಾರವು ದಿನಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ. ಬೆಳಗ್ಗೆ ದೇಹಕ್ಕೆ ಇಂಧನ ತುಂಬುವ ಉಪಹಾರವು ರಕ್ತದಲ್ಲಿನ ಸಕ್ಕರೆ(Blood Sugar) ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದರಿಂದ ದಿನಂಪ್ರತಿ ಮಕ್ಕಳು ಚಟುವಟಿಕೆಯಿಂದ ಶಕ್ತಿಯುತವಾಗಿರುತ್ತದೆ.

6. ಓದುವ ಹವ್ಯಾಸ ರೂಢಿಸಿ(Reading Habits): ಮಕ್ಕಳನ್ನು ಓದುವ ಹವ್ಯಾಸ ಬೆಳೆಸುವುದು ಉತ್ತಮ ಅಭ್ಯಾಸ. ಇದು ಮಗುವಿನ ಭಾಷೆಯನ್ನು ಉತ್ತಮವಾಗಿ ಗ್ರಹಿಸಲು, ಕಾಲ್ಪನಿಕ ಮತ್ತು ಸೃಜನಶೀಲರಾಗಲು ಸಹಾಯ ಮಾಡುತ್ತದೆ. 

7. ಸ್ನಾನ(Bath): ಕೆಲ ಮಕ್ಕಳಿಗೆ ನೀರು ಎಂದರೆ ಬಹಳ ಇಷ್ಟವಿದ್ದರೆ ಇನ್ನು ಕೆಲವರು ನೀರಿನಿಂದ ದೂರ ಉಳಿಯುತ್ತಾರೆ. ವೈಯಕ್ತಿಕ ನೈರ್ಮಲ್ಯದ ಅಭ್ಯಾಸವನ್ನು ರೂಢಿಸಿ. ದೈನಂದಿನ ಆಧಾರದ ಮೇಲೆ ಸ್ನಾನ ಮಾಡಲು ತಿಳಿಸಿಕೊಡಿ.

ಮಕ್ಕಳು ಅನಗತ್ಯವಾಗಿ ಸಾರಿ ಕೇಳ್ತಿರ್ತೀರಾ ? ಅಭ್ಯಾಸ ತಪ್ಪಿಸೋಕೆ ಹೀಗ್ ಮಾಡಿ

8. ಕುಟುಂಬದೊAದಿಗೆ ಸಮಯ ಕಳೆಯುವುದು(Family Time pass): ಬಾಂಧವ್ಯವನ್ನು ಕಲಿಯುವುದಕ್ಕೆ ಕುಟುಂಬದೊAದಿಗೆ ಬೆರೆಯುವುದು ಅಥವಾ ಸಮಯ ಕಳೆಯುವುದನ್ನು ಮಕ್ಕಳಿಗೆ ತಿಳಿಸಿಕೊಡಬೇಕು. ಇದರಿಂದ ಮಕ್ಕಳು ಗುಣಮಟ್ಟದ ಕುಟುಂಬದ ಸಮಯವನ್ನು ಒಟ್ಟಿಗೆ ಕಳೆಯುವುದರ ಪ್ರಾಮುಖ್ಯತೆಯನ್ನು ಸಹ ಕಲಿಯುತ್ತಾರೆ. ಒಟ್ಟಿಗೆ ಬಾಂಧವ್ಯ ಹೊಂದಲು ಭೋಜನವು ಸೂಕ್ತ ಸಮಯವಾಗಿದೆ. 

9. ಏರೇಟೆಡ್ ಅಥವಾ ಕಾರ್ಬೊನೇಟೆಡ್ ಪಾನೀಯಗಳು(Aerated or Carbonated Drinks): 
ಮಕ್ಕಳು ಗಾಳಿ ತುಂಬಿದ ಅಥವಾ ಕಾರ್ಬೊನೇಟೆಡ್ ಪಾನೀಯಗಳಿಗೆ ಸುಲಭವಾಗಿ ಆಕರ್ಷಿತರಾಗುತ್ತಾರೆ. ಹೆಚ್ಚಿನ ಮಟ್ಟದ ಸಕ್ಕರೆ ಮತ್ತು ಕೆಫೀನ್(Caffeine) ಮಗುವಿನ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಚಿಕ್ಕ ಮಕ್ಕಳುಗೆ ಇಂತಹ ಪಾನೀಯಗಳ ಬದಲಿಗೆ ತಾಜಾ ಹಣ್ಣಿನ ರಸಗಳು(Fresh Fruit Juice), ಮಿಲ್ಕ್ಶೇಕ್‌ಗಳು(Milkshakes) ಅಥವಾ ಸ್ಮೂಥಿಗಳನ್ನು(Smoothies) ಕುಡಿಯುವುದನ್ನು ಕಲಿಸಿ. ಮಕ್ಕಳಿಗೆ ಆರೋಗ್ಯಕರ ಆಹಾರ ಪದ್ಧತಿಯನ್ನು ರೂಢಿಸುವುದು ಪೋಷಕರ ಪ್ರಮುಖ ಜವಾಬ್ದಾರಿಯಾಗಿದೆ.

10. ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು(Brushing): ನಿಮ್ಮ ಮಗುವಿಗೆ ದಿನಕ್ಕೆ ಎರಡು ಬಾರಿ ಹಲ್ಲುಜ್ಜುವ ಅಭ್ಯಾಸವನ್ನು ಕಡ್ಡಾಯವಾಗಿ ಅನುಸರಿಸಿ. ಉತ್ತಮ ಮೌಖಿಕ ನೈರ್ಮಲ್ಯವನ್ನು(Oral Health) ಕಾಯ್ದುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಹಲ್ಲುಗಳು ಕುಳಿಗಳಿಗೆ ಗುರಿಯಾಗುತ್ತವೆ. ಮಕ್ಕಳು ಸಾಮಾನ್ಯವಾಗಿ ಹಲ್ಲುಜ್ಜುವುದನ್ನು ಇಷ್ಟಪಡುವುದಿಲ್ಲ. ಆದರೆ ಮಕ್ಕಳಿಗೆ ಹಲ್ಲುಜ್ಜುವ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರೆ, ಅವರಿಗೆ ಈ ಅಭ್ಯಾಸವನ್ನು ಸುಲಭವಾಗಿ ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ.

11. ತಮ್ಮ ಕೋಣೆಯನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವುದು(Room Clean): ಮಕ್ಕಳು ಗಲೀಜು ಮತ್ತು ಕಸವನ್ನು ಇಷ್ಟಪಡುತ್ತಾರೆ. ಆದರೆ ಪೋಷಕರಾಗಿ ನಿಮ್ಮ ಮಗುವಿಗೆ ಸ್ವಚ್ಛತೆಯ ಮಹತ್ವವನ್ನು ಕಲಿಸುವುದು ಬಹಳ ಮುಖ್ಯ. ನಿಮ್ಮ ಮಗುವಿಗೆ ಅವರ ಆಟಿಕೆಗಳು ಮತ್ತು ಇತರೆ ವಸ್ತುಗಳನ್ನು ಅವುಗಳ ಸ್ಥಳದಲ್ಲಿ ಇರಿಸಲು ತರಬೇತಿ ನೀಡಿ ಮತ್ತು ಮೊದಲಿನಿಂದಲೂ ಸಂಘಟಿತರಾಗಲು ಕಲಿಯಲು ಅವರಿಗೆ ಸಹಾಯ ಮಾಡಿ.

Parenting Tips: ಮಕ್ಕಳನ್ನು ಶಿಕ್ಷಿಸುವ ಮೊದಲು ಪೋಷಕರು ಮಾಡಬೇಕಾದ ಕೆಲಸಗಳಿವು

12.ಟಿವಿ ನೋಡುವುದನ್ನು ನಿರ್ಬಂಧಿಸಿ(Restricting Screen Time): ಮಕ್ಕಳು ಟಿವಿ ಮುಂದೆ ಕುಳಿತು ತಮ್ಮ ನೆಚ್ಚಿನ ಕಾರ್ಟೂನ್(Cartoon) ಅಥವಾ ಚಲನಚಿತ್ರವನ್ನು ನೋಡುವುದು ಒಳ್ಳೆಯದು. ಆದರೆ ನಿಮ್ಮ ಮಗು ಟಿವಿ ಮುಂದೆ ಕಳೆಯುವ ಸಮಯವನ್ನು(Time Spend) ಗಮನಿಸುವುದು ಅಷ್ಟೇ ಮುಖ್ಯ. ಹೆಚ್ಚು ಟಿವಿ, ಫೋನ್ ನೋಡುವುದು ಮಗುವಿನ ದೃಷ್ಟಿಯ(Eye Sight) ಮೇಲೆ ಪರಿಣಾಮ ಬೀರುತ್ತವೆ. ಸೋಮಾರಿ ಮತ್ತು ಪ್ರಕ್ಷುಬ್ಧತೆ ಬೆಳೆಯುತ್ತದೆ. ಹಾಗಾಗಿ ಕೆಲವೊಮ್ಮೆ ವೇಳಾಪಟ್ಟಿಯೊಂದಿಗೆ ನೋಡಲು ಅವಕಾಶ ಮಾಡಿಕೊಡಿ.

13 ಹಣದ ಪ್ರಾಮುಖ್ಯತೆ ಕಲಿಸಿ(Value Of Money): ಮಗುವಿಗೆ ಹಣದ ಮೌಲ್ಯ ಮತ್ತು ಪ್ರಾಮುಖ್ಯತೆ ಕಲಿಸಬೇಕು. ಅವರಿಗೆ ಪಿಗ್ಗಿ ಬ್ಯಾಂಕ್(Piggy Bank) ಮತ್ತು ಸಾಪ್ತಾಹಿಕ ಅಥವಾ ಮಾಸಿಕ ಭತ್ಯೆ ನೀಡುವ ಮೂಲಕ ಪ್ರಾರಂಭಿಸಿ. ಅವರಿಗೆ ಹೇಗೆ ಪರಿಣಾಮಕಾರಿಯಾಗಿ ಖರ್ಚು ಮಾಡಬಹುದು ಮತ್ತು ಹಣವನ್ನು ಉಳಿಸಬಹುದು ಎಂದು ಕಲಿಸಿ. ಉತ್ತಮ ಆಲೋಚನೆಯಲ್ಲಿ ನಿಮ್ಮ ಮಗುವಿಗೆ ಹಣದ ಪ್ರಾಮುಖ್ಯತೆಯ ಬಗ್ಗೆ ಆರಂಭಿಕ ಹಂತದಲ್ಲಿ ಕಲಿಸಿ.

14. ಇತರರನ್ನು ಗೌರವಿಸುವುದು(Respect Others): ಋಣಾತ್ಮಕ ಅಥವಾ ಕಟುವಾದ ಪದಗಳನ್ನು ಬಳಸುವುದು ಒಂದಕ್ಕಿAತ ಹೆಚ್ಚು ರೀತಿಯಲ್ಲಿ ಯಾರ ಮೇಲಾದರೂ ಪರಿಣಾಮ ಬೀರಬಹುದು. ನಿಮ್ಮ ಮಗುವಿಗೆ ಹಿರಿಯರು(Elders) ಹಾಗೂ ಅದೇ ವಯಸ್ಸಿನ ಮಕ್ಕಳು ಮತ್ತು ಕಿರಿಯ ಮಕ್ಕಳ ಬಗ್ಗೆ ಗೌರವಯುತವಾಗಿರಲು ಕಲಿಸಿ. ದ್ವೇಷಪೂರಿತ ಮತ್ತು ಹಗೆತನದ ಮಾತುಗಳು ಸಂಬAಧಗಳನ್ನು ಹಾಳುಮಾಡಬಹುದು ಎಂದು ಮಗುವಿಗೆ ತಿಳಿಸಿ.