Asianet Suvarna News Asianet Suvarna News

ಮಾತು ಮಾತಿಗೆ ಮಕ್ಕಳ ಮೇಲೆ ಸಿಟ್ಟು ಬರುತ್ತಾ ? ಕಂಟ್ರೋಲ್ ಮಾಡದಿದ್ರೆ ಕಷ್ಟ

ಮಕ್ಕಳನ್ನು ನೋಡಿಕೊಳ್ಳೋದು ಅಂದ್ರೆ ದೊಡ್ಡ ಟಾಸ್ಕ್‌. ಅವ್ರ ಹಠಮಾರಿತನಕ್ಕೆ, ರಂಪಾಟಕ್ಕೆ ಸಿಟ್ಟಂತೂ ಬಂದೇ ಬರುತ್ತೆ. ಹೀಗಾಗಿಯೇ ತಾಯಂದಿರುವ ಯಾವಾಗ್ಲೂ ಆಂಗ್ರಿ ಮಾಮ್ ಅಂತಾನೇ ಕರೆಸಿಕೊಳ್ತಾರೆ. ಆದ್ರೆ ತಾಯಂದಿರಲ್ಲಿ ಕಾಣಿಸ್ಕೊಳ್ಳೋ ವಿಪರೀತ ಸಿಟ್ಟಿಗೆ ಕಾರಣವೇನು ? ಇದನ್ನು ಕಡಿಮೆ ಮಾಡ್ಕೊಳ್ಳೋಕೆ ಏನ್ ಮಾಡ್ಬೋದು ?

What Is Mom Rage And Why Is It Important To Keep It Under Control Vin
Author
First Published Oct 27, 2022, 10:33 AM IST

ಮಕ್ಕಳು ಸ್ವಭಾತಹಃ ಹಠಮಾರಿ ಸ್ವಭಾವವನ್ನು ಹೊಂದಿರುತ್ತಾರೆ. ದಿನಪೂರ್ತಿ ಅದು ಬೇಕು, ಇದು ಬೇಕೆಂದು ಕೇಳುತ್ತಾ ರಚ್ಚೆ ಹಿಡಿದು ಕುಳಿತು ಬಿಡುತ್ತಾರೆ. ದಿನಪೂರ್ತಿ ಮಕ್ಕಳನ್ನು ನೋಡಿಕೊಳ್ಳುವ ತಾಯಂದಿರಿಗೆ ಇದು ತರುವ ವಿಷಯವೇ. ಮಕ್ಕಳ ಹಠಮಾರಿತನದಿಂದ ಪರ್ಸನಲ್ ಕೆಲಸಗಳಿಗೂ ಸಮಯ ಸಾಲದೆ ಮಕ್ಕಳ ಮೇಲೆ ರೇಗಾಡುತ್ತಾರೆ. ಕೆಲವೊಮ್ಮೆ ಸಿಕ್ಕಾಪಟ್ಟೆ ಗದರಿಸಿ ಏಟನ್ನು ಸಹ ಕೊಟ್ಟು ಬಿಡುತ್ತಾರೆ. ಮಕ್ಕಳನ್ನು ನೋಡಿಕೊಳ್ಳುವ ಪ್ರತಿಯೊಬ್ಬ ತಾಯಂದಿರಿಗೂ ಈ ಸಿಟ್ಟು ಇದ್ದೇ ಇರುತ್ತದೆ. ಮಕ್ಕಳನ್ನು ಸಮರ್ಥವಾಗಿ ನಿಭಾಯಿಸಲು ಈ ಸಿಟ್ಟು ಸಹಜವಾಗಿದ್ದರೂ ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದಲ್ಲ. ಮಕ್ಕಳ ಮೇಲಿನ ಇಂಥಾ ಸಿಟ್ಟನ್ನು ನಿಯಂತ್ರಣಕ್ಕೆ ತರಬೇಕಾದುದು ತುಂಬಾ ಮುಖ್ಯ. 

ಸಿಟ್ಟನ್ನು ನಿಯಂತ್ರಣಕ್ಕೆ ತರುವುದು ಏಕೆ ಮುಖ್ಯ?
ಅಮ್ಮನ ಕೋಪವು (Mothers angry) ಮಗುವಿನ ಮೇಲೆ ಸಂಪೂರ್ಣವಾಗಿ ಪರಿಣಾಮ ಬೀರಬಹುದು. ಇದು ಅವರ ನಡವಳಿಕೆ, ಮನಸ್ಥಿತಿ ಮತ್ತು ದೈನಂದಿನ ವಿಷಯಗಳನ್ನು ನಿಭಾಯಿಸುವ ರೀತಿಯನ್ನು ಬದಲಾಯಿಸುತ್ತದೆ. ಅವರ ಬದಲಾದ ನಡವಳಿಕೆಯ ಪರಿಣಾಮವಾಗಿ, ತಾಯಿಯ ಕೋಪವು ಇತರರೊಂದಿಗೆ ತಾಯಿ ಹೊಂದಿರುವ ಸಂಬಂಧದ (Relationship) ಮೇಲೆ ಪರಿಣಾಮ ಬೀರಬಹುದು. ಇದು ಪಾಲುದಾರರೊಂದಿಗಿನ ಸಂಬಂಧದ ಮೇಲೆ ಒತ್ತಡವನ್ನು ಉಂಟುಮಾಡಬಹುದು. ಇದು ಕುಟುಂಬದ ವಾತಾವರಣಕ್ಕೆ ಭಂಗ ತರಬಹುದು. ಮಾತ್ರವಲ್ಲ ಮಗು ಮತ್ತು ತಾಯಿಯ ಸಂಬಂಧದ ಮೇಲೂ ಇದು ಪರಿಣಾಮ ಬೀರುವ ಸಾಧ್ಯತೆಯಿದೆ. ಇದಲ್ಲದೆ, ತಾಯಿಯ ಕೋಪವು ಒಂದು-ಬಾರಿ ಘಟನೆಯಲ್ಲ ಅಥವಾ ಕೆಲವೇ ದಿನಗಳಲ್ಲಿ ಮಸುಕಾಗುವುದಿಲ್ಲ. ಇದು ನಿರಂತರ ನಡವಳಿಕೆ (Behaviour) ಮತ್ತು ಅದನ್ನು ಸರಿಯಾಗಿ ವ್ಯವಹರಿಸದಿದ್ದರೆ ದೀರ್ಘಕಾಲದ ವರೆಗೆ ಬದಲಾಗುತ್ತದೆ.

Relationship Tips: ಕೋಪ ಮಾಡ್ಕೊಳ್ಳೋ ಪತಿನಾ ಹೀಗೆ ಸಂಭಾಳ್ಸಿ

ತಾಯಿಯ ಸಿಟ್ಟಿನ ಹಿಂದೆ ಮಕ್ಕಳ ಹಠಮಾರಿತನ ಮಾತ್ರವಲ್ಲದೆ ಇತರ ಕಾರಣಗಳೂ ಇರಬಹುದು. ಕೆಲವೊಮ್ಮೆ ಪಾಲುದಾರರ ಬೆಂಬಲದ ಕೊರತೆ, ದುಃಖ, ಆರ್ಥಿಕ ಅಸ್ಥಿರತೆ, ವೈವಾಹಿಕ ಭಿನ್ನಾಭಿಪ್ರಾಯ, ನಿದ್ರಾಹೀನತೆ, ಹಾರ್ಮೋನ್ ಏರುಪೇರುಗಳು. ದೈಹಿಕ ಒತ್ತಡಗಳು ಸಹ ತಾಯಿಯ ಕೋಪಕ್ಕೆ ಕಾರಣವಾಗುತ್ತವೆ. ಆದ್ದರಿಂದ, ತಾಯಿಯ ಕೋಪವನ್ನು ನಿಯಂತ್ರಣಕ್ಕೆ ತರಲು ನಾವು ಅದರ ಬಗ್ಗೆ ಇತರರೊಂದಿಗೆ ಮಾತನಾಡಬೇಕು, ಸಿಟ್ಟಿಗೆ ಪರಿಹಾರವನ್ನು ಕಂಡುಕೊಳ್ಳಬೇಕು.

ಯಾವುದೇ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿ: ಎಂಥಾ ಸಂದರ್ಭದಲ್ಲೂ ಸಿಟ್ಟು ಬಾರದೇ ಇರಬೇಕಾದರೆ ಪರಿಸ್ಥಿತಿಯನ್ನು (Situation) ಸಮರ್ಥವಾಗಿ ನಿಭಾಯಿಸಲು ಕಲಿತುಕೊಳ್ಳಬೇಕು. ಸಮಸ್ಯೆ ಕಠಿಣವಾಗಿದ್ದರೂ ತಕ್ಷಣಕ್ಕೆ ಏನು ಮಾಡಬೇಕೆಂದು ನಿರ್ಧಾರ (Decision) ತೆಗೆದುಕೊಳ್ಳುವ ಬದಲು ಶಾಂತಚಿತ್ತವಾಗಿ ಮುಂದೇನೆಂದು ಯೋಚಿಸಬೇಕು. 

ವೈಯುಕ್ತಿಕ ಕೆಲಸಗಳಿಗೆ ಸಮಯ ಮೀಸಲಿಡಿ: ಪೋಷಕತ್ವವು (Parenting) ಊಹಿಸಲಾಗದಷ್ಟು ಕಠಿಣವಾಗಿದೆ. ಹೀಗಾಗಿಯೇ ಮನೆಯಲ್ಲಿ ಚಿಕ್ಕ ಮಕ್ಕಳಿರುವಾಗ ನಿಮಗಾಗಿ ಸಮಯವನ್ನು ಮೀಸಲಿಡಲು ಸಾಧ್ಯವಾಗುವುದಿಲ್ಲ. ಇದು ಒತ್ತಡ, ಖಿನ್ನತೆ (Anxiety), ಕೋಪವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲಿನ ಈ ಒತ್ತಡ ಕೋಪಕ್ಕೆ ಕಾರಂವಾಗುತ್ತದೆ.  ಹೀಗಾಗಿ ಒತ್ತಡದ ದಿನಚರಿಯಲ್ಲಿಯೂ ವೈಯುಕ್ತಿಕ ಕೆಲಸಗಳಿಗೆ ಸಮಯ ಮೀಸಲಿಡುವುದನ್ನು ಮರೆಯದಿರಿ.

ಸಣ್ಣಪುಟ್ಟ ವಿಚಾರಕ್ಕೂ ಸಿಟ್ಟು ಬರುತ್ತಾ ? ಮನಸ್ಸನ್ನು ಹೀಗೆ ಶಾಂತಗೊಳಿಸಿ

ಉತ್ತಮ ನಿದ್ದೆ, ಆಹಾರ ಸೇವನೆ: ಸಾಕಷ್ಟು ನಿದ್ದೆ (Sleep) ಆಗದಿದ್ದರೆ, ಸರಿಯಾಗಿ ಊಟ (Dinner) ಮಾಡದಿದ್ದರೆ ಮನಸ್ಸಿಗೆ ಕಿರಿಕಿರಿಯಾಗುತ್ತದೆ. ಯಾವುದೇ ಚಟುವಟಿಕೆಯಲ್ಲಿ ಉತ್ಸಾಹದಿಂದ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಈ ಸಂದರ್ಭದಲ್ಲಿ ಸಿಟ್ಟು ಬರುವುದು ಸಹಜವಾಗಿದೆ. ನಿಮ್ಮ ಮನಸ್ಸನ್ನು ಶಾಂತಗೊಳಿಸಲು, ಸಾಕಷ್ಟು ನಿದ್ದೆ, ಪೌಷ್ಟಿಕ ಆಹಾರ ಸೇವನೆ, ವ್ಯಾಯಾಮ (Exercise), ಹವ್ಯಾಸಗಳನ್ನು ಪ್ರಯತ್ನಿಸುವುದು, ಚಿತ್ರಕಲೆ, ಹಾಡುಗಾರಿಕೆಯಂತಹ ಚಟುವಟಿಕೆಗಳನ್ನು ಮಾಡುವಂತಹ ಕೆಲವು ಸರಳವಾದ ವಿಷಯಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು

Follow Us:
Download App:
  • android
  • ios