ಮಕ್ಕಳು ಜೊತೆಗೆ ಟಾಯ್ಸ್ ಇಟ್ಕೊಂಡು ಮಲಗ್ತಾರಾ ? ಇಷ್ಟೆಲ್ಲಾ ತೊಂದ್ರೆಯಾಗುತ್ತೆ ನೋಡಿ
ಪುಟ್ಟ ಮಕ್ಕಳು ಆಟಿಕೆಯನ್ನು ಎಷ್ಟು ಇಷ್ಟ ಪಡ್ತಾರೆ ಎಲ್ರಿಗೂ ಗೊತ್ತೇ ಇದೆ. ಊಟ ಮಾಡುವಾಗ, ಮಲಗುವಾಗ ಯಾವಾಗ್ಲೂ ಟಾಯ್ಸ್ ಜೊತೆಗೆ ಬೇಕೇ ಬೇಕು ಅಂತ ಹಠ ಹಿಡೀತಾರೆ. ಹೀಗಾಗಿಯೇ ಪೋಷಕರು ಸಹ ಮಕ್ಕಳು ಮಲಗುವಾಗ ಜೊತೆಗೆ ಟಾಯ್ಸ್ ಇಟ್ಟುಕೊಳ್ಳಲು ಅನುಮತಿ ಕೊಡ್ತಾರೆ. ಆದ್ರೆ ಹೀಗೆ ಮಾಡೋದ್ರಿಂದ ಮಕ್ಕಳ ಆರೋಗ್ಯಕ್ಕೆಷ್ಟು ತೊಂದ್ರೆಯಿದೆ ಗೊತ್ತಾ ?.
ಪುಟ್ಟ ಮಕ್ಕಳಿಗೆ ಆಟಿಕೆ (Toys)ಗಳೆಂದರೆ ತುಂಬಾ ಇಷ್ಟ. ವಿವಿಧ ಬಗೆಯ ಆಟಿಕೆಗಳನ್ನು ನೋಡಿದರೆ ಸಾಕು ಮಕ್ಕಳ (Children) ಮನಸ್ಸು ಅರಳುತ್ತೆದೆ. ಹೀಗಾಗಿ ಮಕ್ಕಳು ಪ್ಲೇ ಏರಿಯಾದಲ್ಲಿ ಮಾತ್ರವಲ್ಲದೆ ಮಲಗುವ ಕೋಣೆಯಲ್ಲಿ, ಹಾಸಿಗೆಯ (Bed) ಮೇಲೂ ಆಟಿಕೆಗಳನ್ನು ತರುತ್ತಾರೆ. ಕೆಲವು ಮಕ್ಕಳು ತಮ್ಮ ಕೈಯಲ್ಲಿ ಆಟಿಕೆಗಳನ್ನು ಹಿಡಿದುಕೊಂಡು ಅಥವಾ ಟಾಯ್‌ನ್ನು ತಬ್ಬಿಕೊಂಡು ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಮಕ್ಕಳು ಈ ರೀತಿ ಮಲಗುವುದು ಎಷ್ಟು ಸುರಕ್ಷಿತ (Safe). ಇದರಿಂದ ಯಾವುದೇ ಅನಾನುಕೂಲತೆಗಳಿವೆಯೇ ಎಂಬ ಬಗ್ಗೆ ಪೋಷಕರಿಗೆ (Parents) ತಿಳಿದಿಲ್ಲ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಶಿಶುಗಳು ಟಾಯ್ಸ್ ಜೊತೆ ಮಲಗಬಹುದೇ?
ಮಗುವಿಗೆ 6 ತಿಂಗಳವರೆಗೆ ಆಟಿಕೆಗಳೊಂದಿಗೆ, ಗೊಂಬೆಗಳೊಂದಿಗೆ ಮಲಗಲು (Sleep)ಬಿಡಬೇಡಿ. ಅವರಿಗೆ ಯಾವುದೇ ರೀತಿಯ ಮೃದುವಾದ ಆಟಿಕೆಗಳು ಅಥವಾ ಗೊಂಬೆಗಳನ್ನು ನೀಡಬೇಡಿ. ಮಗುವಿನ ತೊಟ್ಟಿಲು ಅಥವಾ ಹಾಸಿಗೆಯನ್ನು ತುಂಬಾ ಸ್ವಚ್ಛವಾಗಿಡಿ. ಮೈ ಮೇಲೆ ಸ್ಕ್ರಾಚ್ ಉಂಟುಮಾಡುವ ಯಾವುದೇ ವಸ್ತುವನ್ನು ಅವರ ಹತ್ತಿರ ಇಡಬೇಡಿ. ಮಗುವಿಗೆ 6 ತಿಂಗಳು ಆದ ನಂತರ ನೀವು ಅವರನ್ನು ಮೃದುವಾದ ಆಟಿಕೆಯೊಂದಿಗೆ ಮಲಗಿಸಬಹುದು. ನಿಮ್ಮ ಮಗುವಿಗೆ ನೀವು ಮೃದುವಾದ ಆಟಿಕೆಯನ್ನು ಬಳಸುತ್ತಿದ್ದರೆ, ಅದನ್ನು ಸ್ವಲ್ಪ ಸಮಯದವರೆಗೆ ನಿಮ್ಮ ಬಳಿಯೇ ಇರಿಸಿಕೊಳ್ಳಿ. ಇದರಿಂದ ಅದು ನಿಮ್ಮಂತೆಯೇ ಸುವಾಸನೆ ಬೀರುತ್ತದೆ. ಮಕ್ಕಳು ತಮ್ಮ ತಾಯಿಯನ್ನು ಆಕೆಯ ಪರಿಮಳದಿಂದ ಮಾತ್ರ ಗುರುತಿಸುತ್ತಾರೆ. ನಿಮ್ಮ ಪರಿಮಳವನ್ನು ಪಡೆದ ನಂತರ, ಮಗು ಆ ಆಟಿಕೆಯೊಂದಿಗೆ ತುಂಬಾ ಆರಾಮವಾಗಿ ಮಲಗುತ್ತದೆ.
ಅಮ್ಮ-ಮಕ್ಕಳ ಬಾಂಡಿಂಗ್ ಗಟ್ಟಿಯಾಗಿಸಲು ಕಾಂಗರೂ ಕೇರ್!
ದೊಡ್ಡ ಆಟಿಕೆಗಳನ್ನು ಖರೀದಿಸಬೇಡಿ: ಮಕ್ಕಳಷ್ಟೇ ಎತ್ತರವಿರುವ, ದೊಡ್ಡದಿರುವ ಆಟಿಕೆಗಳನ್ನು ಖರೀದಿಸಬೇಡಿ. ಮಕ್ಕಳು ಸುಲಭವಾಗಿ ಹಿಡಿದಿಡಬಹುದಾದ ಸಣ್ಣ ಮೃದು ಆಟಿಕೆಗಳನ್ನು ಇಷ್ಟಪಡುತ್ತಾರೆ. ಅವುಗಳೊಂದಿಗೆ ಆಟವಾಡಲು ಖುಷಿಪಡುತ್ತಾರೆ. ಸಣ್ಣ ಆಟಿಕೆಗಳನ್ನು ಸುಲಭವಾಗಿ ಒಯ್ಯಲು ಸಹ ಸಾಧ್ಯವಾಗುತ್ತದೆ. ಆದ್ದರಿಂದ ನೀವು ನಿಮ್ಮ ಮಗುವಿನೊಂದಿಗೆ ಹೊರಗೆ ಹೋಗುವಾಗ, ಅವನ ನೆಚ್ಚಿನ ಆಟಿಕೆ ಅಥವಾ ಅವನಿಗೆ ಆಸಕ್ತಿಯಿರುವ ಆಟಿಕೆಯನ್ನು ಇಟ್ಟುಕೊಳ್ಳುವುದು ಒಳ್ಳೆಯದು.
ಸ್ಟಫ್ಡ್ ಆಟಿಕೆಗಳನ್ನು ಖರೀದಿಸಬೇಡಿ: ನಿಮ್ಮ ಮಗುವಿಗೆ ಅಲರ್ಜಿ ಇದ್ದರೆ ಹತ್ತಿ ಅಥವಾ ಬಟ್ಟೆ ತುಂಬಿದ ಆಟಿಕೆಗಳನ್ನು ಬಳಸದಂತೆ ಅನೇಕ ವೈದ್ಯರು ಶಿಫಾರಸು ಮಾಡುತ್ತಾರೆ. ಧೂಳು (Dust) ಅವರಿಗೆ ಸುಲಭವಾಗಿ ಅಂಟಿಕೊಳ್ಳುತ್ತದೆ. ಇದರಿಂದ ಆರೋಗ್ಯ ಸಮಸ್ಯೆಗಳು ಸಹ ಕಾಣಿಸಿಕೊಳ್ಳಬಹುದು. ಹೀಗಾಗಿ ನಿಮ್ಮ ಮಗುವಿಗೆ ಉತ್ತಮ ಗುಣಮಟ್ಟದ ಆಟಿಕೆಗಳನ್ನು ಮಾತ್ರ ಖರೀದಿಸಿ.
ಔಷಧಿ ತಿನ್ನೋಕೆ ಮಕ್ಕಳು ಅಳ್ತಾರಾ? ಇಲ್ಲಿದೆ ಸಿಂಪಲ್ ಟ್ರಿಕ್
ಡೇಂಜರಸ್ ಆಟಿಕೆಗಳಿಂದ ದೂರವಿರಿ: ಮಾರುಕಟ್ಟೆಯಲ್ಲಿ ಎಲ್ಲಾ ರೀತಿಯ ಆಟಿಕೆಗಳು ಲಭ್ಯವಿರುತ್ತವೆ. ಅವುಗಳಲ್ಲಿ ಹೆಚ್ಚಿನವು ಅಗತ್ಯವಿರುವ ಸುರಕ್ಷತೆ ಮತ್ತು ಗುಣಮಟ್ಟದ (Quality) ಮಾನದಂಡಗಳನ್ನು ಪೂರೈಸುವುದಿಲ್ಲ. ಕೆಲವು ಆಟಿಕೆಗಳು ಸಣ್ಣ ಬೀನ್ಸ್, ಸಾಸಿವೆ ಬೀಜಗಳು, ಸ್ಪಂಜಿನ ತುಂಡುಗಳು ಅಥವಾ ಥರ್ಮಾಕೋಲ್ ಚೆಂಡುಗಳಿಂದ ತುಂಬಿರುತ್ತವೆ. ಆದರೆ ಅದು ಮಕ್ಕಳ ಪಾಲಿಗೆ ತುಂಬಾ ಅಪಾಯಕಾರಿಯಾಗಿದೆ. ಆಟಿಕೆ ಸಡಿಲಗೊಂಡು ಪುಟ್ಟ ವಸ್ತುಗಳು ಹೊರಬಂದರೆ ಮಕ್ಕಳು ಅದನ್ನು ಬಾಯಿಗೆ ಹಾಕಿಕೊಳ್ಳುವ ಅಪಾಯವಾಗಿದೆ. ಇದು ಉಸಿರುಗಟ್ಟುವಿಕೆಗೆ ಕಾರಣವಾಗಬಹುದು.
ಗುಣಮಟ್ಟದ ಮೇಲೆ ಗಮನವಿರಲಿ: ಕೆಲವು ಆಟಿಕೆಗಳನ್ನು ನಿಮ್ಮ ಮಗುವಿಗೆ ಸೂಕ್ತವಲ್ಲದ ವಸ್ತುಗಳಿಂದ ತಯಾರಿಸಬಹುದು. ರಸ್ತೆಬದಿಯ ಅಂಗಡಿಗಳಲ್ಲಿ ಮಾರಾಟವಾಗುವ ಆಟಿಕೆಗಳು ಅಗ್ಗ (Cheap)ವಾಗಿರಬಹುದು. ಆದರೆ ಸುರಕ್ಷಿತವಲ್ಲ. ಕೆಲವು ದೋಷಗಳಿಗಾಗಿ ಅಥವಾ ಗುಣಮಟ್ಟದ ಮಾನದಂಡಗಳನ್ನು ಪೂರೈಸದ ಕಾರಣ ತಯಾರಕರಿಂದ ತಿರಸ್ಕರಿಸಲ್ಪಟ್ಟಿರಬಹುದು. ಆದ್ದರಿಂದ, ನೀವು ಯಾವುದನ್ನು ಆರಿಸಿಕೊಂಡರೂ, ಎಚ್ಚರಿಕೆಯಿಂದ ಆರಿಸಿ. ಯಾಕೆಂದರೆ ಇದು ನಿಮ್ಮ ಮಗುವಿನ ಸುರಕ್ಷತೆಯ ಪ್ರಶ್ನೆಯಾಗಿದೆ