ಮಿಲನಕ್ಕೂ ಮುನ್ನ ಸಂಗಾತಿಯನ್ನುಮೂಡ್‌ಗೆ ತರಲು ಪುರುಷರು ಮಾಡಬೇಕಾಗಿದ್ದು ಇದು!

ರಿಲೇಶನ್‌ಶಿಪ್‌ನಲ್ಲಿ ಲೈಂಗಿಕ ಸಂಬಂಧವೂ ಉತ್ತಮವಾಗಿರುತ್ತದೆ. ಒಂದು ವೇಳೆ ರಾತ್ರಿ ಅಂದ್ರೆ ಹಾಸಿಗೆಯಲ್ಲಿ ಮಿಲನದ ವೇಳೆ ಮಹಿಳೆ ಆಕರ್ಷಿತರಾಗದೇ ನಿರಾಸಕ್ತಿ ತೋರಿಸುತ್ತಿದ್ರೆ ಕಾರಣ ಏನು?

how to attract in female partner in bed these things a man should do mrq

ಇಂದು ಮಹಾನಗರಗಳಲ್ಲಿ ಲಿವ್ ಇನ್ ರಿಲೇಶನ್‌ಶಿಪ್ ಅನ್ನೋದು ದೊಡ್ಡಮಟ್ಟದ ಟ್ರೆಂಡ್ ಆಗಿದೆ. ಇಲ್ಲಿ ಗಂಡು-ಹೆಣ್ಣು ಮದುವೆಗೂ ಮೊದಲೇ ಜೊತೆಯಾಗಿ ಗಂಡ-ಹೆಂಡತಿ ರೀತಿಯಂತೆ ಜೀವನ ನಡೆಸಲು ಆರಂಭಿಸುತ್ತಾರೆ. ಆದ್ರೆ ಈ ಲಿವ್ ಇನ್ ಸಂಬಂಧಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಿನ್ನಾಭಿಪ್ರಾಯಗಳಿವೆ. ಮದುವೆಗೂ ಮುಂಚಿನ ಈ ಸಂಬಂಧದ ಬಗ್ಗೆಆಗಾಗ್ಗೆ ಚರ್ಚೆಗೂ ಬರುತ್ತಿರುತ್ತದೆ. ಈ ಸಂಬಂಧದಲ್ಲಿ ಮದುವೆಗೂ ಮೊದಲೇ ನಮ್ಮಲ್ಲಿನ ಒಳಿತು ಹಾಗೂ ಕೆಡುಕಗಳ ಬಗ್ಗೆ ಪರಸ್ಪರ ಪರಿಚಯವಾಗುತ್ತದೆ. ಇದರಿಂದ ಮದುವೆಯಾಗಬೇಕಾ? ಈತ ಅಥವಾ ಆಕೆಯ ಜೀವನ ಭವಿಷ್ಯದಲ್ಲಿ ಹೇಗಿರುತ್ತೆ ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯವಾಗುತ್ತದೆ ಎಂಬುವುದು ಯುವ ಜನತೆಯ ಅಭಿಪ್ರಾಯ. ಆದ್ರೆ ಇದಕ್ಕೆ ಹಿರಿಯ ನಾಗರೀಕರು ಯಾರೂ ಮದುವೆ ಆಗಿಲ್ಲವೇ? ಜೀವನ ನಡೆಸಿಲ್ಲವೇ ಎಂದು ಹೇಳುತ್ತಾರೆ. 

ಲಿವ್ ಇನ್ ಅಥವಾ ಮದುವೆ ನಂತರ ಜೋಡಿ ನಡುವೆ ಎಲ್ಲಾ ಸಮಾನವಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಒಂದು ವೇಳೆ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರೆ ಮನೆಯ ಎಲ್ಲಾ ಕೆಲಸಗಳ ಸಮಾನವಾಗಿ ಹಂಚಿಕೆಯಾಗಬೇಕು. ಇಬ್ಬರು ಜೀವನವನ್ನು ಅರ್ಥೈಸಿಕೊಂಡು ಜವಾಬ್ದಾರಿ ಹಂಚಿಕೊಂಡಾಗ ಜೀವನದ ಎಲ್ಲಾ ಮಜಲುಗಳು ಸುಗಮವಾಗಿರುತ್ತವೆ. ಹಾಗಾದ್ರೆ ಮಾತ್ರ ಸಂಬಂಧದಲ್ಲಿ ಯಾವುದೇ ವ್ಯತ್ಯಾಸಗಳು ಉಂಟಾಗುವುದಿಲ್ಲ ಎಂದುಮ ಹೇಳಲಾಗುತ್ತದೆ.

ಈ ರಿಲೇಶನ್‌ಶಿಪ್‌ನಲ್ಲಿ ಲೈಂಗಿಕ ಸಂಬಂಧವೂ ಉತ್ತಮವಾಗಿರುತ್ತದೆ. ಒಂದು ವೇಳೆ ರಾತ್ರಿ ಅಂದ್ರೆ ಹಾಸಿಗೆಯಲ್ಲಿ ಮಿಲನದ ವೇಳೆ ಮಹಿಳೆ ಆಕರ್ಷಿತರಾಗದೇ ನಿರಾಸಕ್ತಿ ತೋರಿಸುತ್ತಿದ್ರೆ ಅದಕ್ಕೆ ಪುರುಷನ ನಡುವಳಿಕೆಯೂ ಕಾರಣವಾಗಿರುತ್ತದೆ ಎಂದು ಲೈಂಗಿಕ ತಜ್ಞರು ಹೇಳುತ್ತಾರೆ. ಇಡೀ ದಿನ ಪುರುಷ ಸಂಗಾತಿಯ ವರ್ತನೆ ಹೇಗಿರುತ್ತೆ ಎಂಬ ಅಂಶಗಳು ಲೈಂಗಿಕ ಸಂಪರ್ಕದ ಮೇಲೆ ಪರಿಣಾಮ ಬೀರುತ್ತವೆ. ಅದಕ್ಕಾಗಿ ರಾತ್ರಿ ಸಂಗಾತಿಯನ್ನು ಆಕರ್ಷಿಸಲು ಪುರುಷ ಅದಕ್ಕೂ ಮೊದಲು ಏನು ಮಾಡಬೇಕು ಎಂಬುದರ ಬಗ್ಗೆ ಲೈಂಗಿಕ ತಜ್ಞರು ಸಲಹೆ ನೀಡಿದ್ದಾರೆ. ಆ ಸಲಹೆಗಳೇನು ಎಂಬುದರ ಮಾಹಿತಿ ಇಲ್ಲಿದೆ. 

ಮನೆಯಲ್ಲಿನ ಕೆಲಸಗಳ ಬಗ್ಗೆ ಚರ್ಚಿಸಿ ಪರಸ್ಪರವಾಗಿ ಹಂಚಿಕೊಳ್ಳಬೇಕು. ಈ ಬಗ್ಗೆ ಪುರುಷರೇ ಮೊದಲು ಮಾತನಾಡಬೇಕೆಂದು ಮಹಿಳೆ ಬಯಸುತ್ತಾಳೆ. ಈ ರೀತಿಯ ವಿಷಯಗಳ ಬಗ್ಗೆ ಮಾತನಾಡಿದಾಗ ಮಹಿಳೆ ಬಗ್ಗೆ ಆಕರ್ಷಿತಳಾಗುತ್ತಾಳೆ. ಉದಾಹರಣೆಗೆ ಅಡುಗೆ ಮಾಡೋದು, ತರಕಾರಿ ಕತ್ತರಿಸಿ ಕೊಡುವುದು, ಮನೆಯ ಸ್ವಚ್ಛತಾ ಕೆಲಸಗಳಲ್ಲಿ ಸಹಾಯ ಮಾಡುವುದು.

ಪುರುಷ ಸಂಗಾತಿಯಿಂದ (Male Partner) ಹೊರ ಬರುವ ವೀರ್ಯ (Sperm) ಕುಡಿದ್ರೆ ಏನಾಗುತ್ತೆ? ಲೈಂಗಿಕ ತಜ್ಞರು ಹೇಳೋದೇನು?

ತಪ್ಪುಗಳಾಗೋದು ಸಹಜ. ಒಂದು ವೇಳೆ ನಿಮ್ಮಿಂದ ಯಾವುದಾದರೂ ತಪ್ಪುಗಳು ನಡೆದಿದ್ದರೆ ಜಗಳಕ್ಕೂ ಮೊದಲೇ ಒಪ್ಪಿಕೊಳ್ಳಿ ಅಥವಾ ಸಂಗಾತಿಯಿಂದ ತಪ್ಪುಗಳು ನಡೆದಿದ್ದರೆ ಅದನ್ನು ಮನ್ನಿಸುವ ಉದಾರತೆಯನ್ನು ತೋರಿಸಿ. ತಪ್ಪು ಯಾಕಾಯ್ತು? ಅದರಿಂದಾಗುವ ಪರಿಣಾಮಗಳೇನು ಎಂಬುದರ ಬಗ್ಗೆಯೂ  ಜೊತೆಯಾಗಿ ಕುಳಿತು ಚರ್ಚಿಸಿ ಮತ್ತು ತಪ್ಪುಗಳಿಂದ ಕಲಿಯಲು ಪ್ರಯತ್ನಿಸಿದಾಗ ಒಬ್ಬರಿಗೊಬ್ಬರು ಆಕರ್ಷಣೆಗೆ ಒಳಗಾಗುತ್ತಾರೆ.

ಇಬ್ಬರೂ ಉದ್ಯೋಗಿಗಳಾಗಿದ್ದು, ಆದಾಯ ಬರುತ್ತಿದ್ದರೆ ವಸತಿ, ಆಹಾರ ವೆಚ್ಚಗಳನ್ನು ಸಮಾನವಾಗಿ ಹಂಚಿಕೊಳ್ಳಬೇಕು. ಸಂಗಾತಿ ಮೇಲೆ ಹಣಕಾಸಿನ ನಿಬಂಧನೆಗಳು ಒತ್ತಾಯಪೂರ್ವಕವಾಗಿ ಹೇರಬಾರದು. ಹೆಚ್ಚು ಖರ್ಚು ಮಾಡುತ್ತಿದ್ರೆ ತಿಳಿಸಿ ಹೇಳಬೇಕೇ ಹೊರತು ಕಿರುಚಾಡಬಾರದು. ಹಣಕಾಸಿನ ವಿಚಾರಗಳು ಸಂಸಾರದಲ್ಲಿನ ಬಿರುಕಿಗೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಒಮ್ಮೆ ಹಣಕಾಸಿನ ವಿಷಯಕ್ಕೆ ಜಗಳ ಶುರುವಾದ್ರೆ ಅದು ಪ್ರತಿದಿನ ಮಾರ್ದನಿಸುತ್ತಿರುತ್ತದೆ. ಇದರಿಂದ ಸಂಬಂಧದಲ್ಲಿ ಯಾವುದೇ ಉತ್ಸಾಹ ಉಳಿಯಲ್ಲ.  

ಅದು, ಇದು ಬಿಟ್ಟಾಕಿ, ಇದುವೇ ಪುರುಷತ್ವ ಹೆಚ್ಚಿಸುವ ಪದಾರ್ಥ ; 99% ಜನರಿಗೆ ಈ ವಿಷಯವೇ ಗೊತ್ತಿಲ್ಲ!

ಈ ಮೇಲಿನ ಎಲ್ಲಾ ಸಲಹೆಗಳನ್ನು ಪುರುಷ ಮತ್ತು ಮಹಿಳೆ ಪಾಲನೆ ಮಾಡಿದ್ರೆ ಸಾಂಸರೀಕ ಜೀವನದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರಲ್ಲ. ಈ ಮೇಲಿನ ಸಮಸ್ಯೆಗಳು ಲೈಂಗಿಕ ಜೀವನದ ಮೇಲೆಯೂ ಪರಿಣಾಮ ಬೀರುತ್ತವೆ ಎಂದು ತಜ್ಞರು ಹೇಳುತ್ತಾರೆ.

Latest Videos
Follow Us:
Download App:
  • android
  • ios