Asianet Suvarna News Asianet Suvarna News

ರಿಕ್ಷಾ ಎಳೆಯುವಾತನಿಗೆ 1 ಕೋಟಿ ಆಸ್ತಿ ಬರೆದುಕೊಟ್ಟ ಮಹಿಳೆ, ಕಾರಣ ಇಂಟ್ರೆಸ್ಟಿಂಗ್

  • Odisha: ರಿಕ್ಷಾ ಚಾಲಕನಿಗೆ ತನ್ನೆಲ್ಲ ಒಡವೆ, ಬಂಗಲೆ, ಆಸ್ತಿ ಬರೆದುಕೊಟ್ಟ ಮಹಿಳೆ
  • ಬರೋಬ್ಬರಿ 1 ಕೋಟಿಗೂ ಹೆಚ್ಚಿನ ಸಂಪತ್ತು ನೀಡಿದ್ದೇಕೆ ?
Odisha woman hands over property worth Rs 1 crore to rickshaw puller dpl
Author
Bangalore, First Published Nov 15, 2021, 6:42 PM IST

ಆಸ್ತಿ, ಒಡವೆ, ಸಂಪತ್ತನ್ನೂ ಮೀರಿದ್ದು ಸಂಬಂಧ, ಪ್ರೀತಿ, ವಿಶ್ವಾಸ. ಇದನ್ನು ನೀತಿ ಕಥೆಗಳೂ, ಹಿರಿಯರೂ ಹೇಳಿಕೊಡುತ್ತಲೇ ಇರುತ್ತಾರೆ ಮತ್ತು ಜನ ಮರೆಯುತ್ತಲೇ ಇರುತ್ತಾರೆ. ಕೊನೆಯಲ್ಲಿ ಮೇಲೆ ನಿಲ್ಲುವುದು ಹಣ ಸಂಪತ್ತು ಮತ್ತು ಆಸ್ತಿ. ಆದರೆ ಹಲವು ಸಲ ಹಲವು ಸಂದರ್ಭಗಳು ಹಣ ಎಂದರೆ ಅದೊಂದು ಕಾಗದದ ತುಂಡು ಅಷ್ಟೇ ಎಂಬುದನ್ನು ಸಾಬೀತುಪಡಿಸುತ್ತವೆ. ಸಂಬಂಧಗಳ ಅರ್ಥವನ್ನು, ಮಾನವೀಯತೆಯನ್ನೂ ತೋರಿಸುವ ಘಟನೆಗಳು ನಮ್ಮ ಸುತ್ತ ನಡೆಯುತ್ತಿರುತ್ತವೆ.

ಈಗ ಅಂತಹ ಒಂದು ಘಟನೆ ನಡೆದಿರುವುದು ಒಡಿಶಾದಲ್ಲಿ(Odisha). ಒಡಿಶಾದಲ್ಲಿ ಮಹಿಳೆಯೊಬ್ಬರು ತಮ್ಮ ದೊಡ್ಡ ಐಷರಾಮಿ ಬಂಗಲೆ, ಒಡವೆ, ಆಭರಣ, ನಗದು ಎಲ್ಲವನ್ನೂ ರಿಕ್ಷಾ ಎಳೆಯುವಾತನಿಗೆ ಕೊಟ್ಟುಬಿಟ್ಟಿದ್ದಾರೆ. ಇದಕ್ಕೇನು ಕಾರಣ ? ಇಂಟ್ರೆಸ್ಟಿಂಗ್ ಘಟನೆಯ ವಿವರ ಇಲ್ಲಿದೆ.

ಒಡಿಶಾದ ಕಟಕ್‌ನಲ್ಲಿ ವಯಸ್ಸಾದ ಮಹಿಳೆಯೊಬ್ಬರು ರಿಕ್ಷಾ ಎಳೆಯುವಾತನಿಗೆ ತನ್ನ ಎಲ್ಲಾ ಆಸ್ತಿ ದಾನ ಮಾಡಿದ್ದಾರೆ. ತನಗೆ ಹಾಗೂ ತನ್ನ ಕುಟುಂಬಕ್ಕೆ 25 ವರ್ಷಗಳ ಸೇವೆ ನೀಡಿದ ವ್ಯಕ್ತಿಯನ್ನು ಸೇವೆಯನ್ನು ಗುರುತಿಸಿ ಈ ರೀತಿ ಆತನಿಗೆ ನೆರವಾಗಿದ್ದಾರೆ ಮಹಿಳೆ.

Robbery; ದೇವರ ಹುಂಡಿ ಕಳ್ಳತನಕ್ಕೂ ಮುನ್ನ ನಮಸ್ಕಾರ ಮಾಡಿಕೊಂಡ! ವಿಡಿಯೋ

ಸುತಾಹತ್‌ನ 63 ವರ್ಷದ ಮಿನಾತಿ ಪಟ್ನಾಯಕ್ ಅವರು ತಮ್ಮ ಮೂರು ಅಂತಸ್ತಿನ ಮನೆ, ಚಿನ್ನಾಭರಣಗಳು ಮತ್ತು ಎಲ್ಲ ಆಸ್ತಿಯನ್ನು 20 ವರ್ಷಗಳಿಂದ ತನ್ನ ಕುಟುಂಬಕ್ಕೆ ಸೇವೆ ಸಲ್ಲಿಸುತ್ತಿರುವ ರಿಕ್ಷಾ ಚಾಲಕ ಬುಧಾ ಸಮಲ್‌ಗೆ ದಾನ ಮಾಡಿದ್ದಾರೆ.

ಕಳೆದ ವರ್ಷ ಕಿಡ್ನಿ ವೈಫಲ್ಯದಿಂದ ಪತಿಯನ್ನು ಕಳೆದುಕೊಂಡಿದ್ದ ಇವರ ಪ್ರೀತಿಯ ಮಗಳು ಕೋಮಲ್ ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪಿದಳು.  ತನ್ನ ಹಾಗೂ ತನ್ನ ಪತಿಗೆ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಡ ರಿಕ್ಷಾ ಚಾಲಕನ ಕುಟುಂಬಕ್ಕೆ ತನ್ನ ಆಸ್ತಿಯನ್ನು ದಾನ ಮಾಡಲು ಮಿನಾತಿ ಯೋಚಿಸಿದ್ದಾರೆ.

ಮಿನಾತಿ ಪಟ್ನಾಯಕ್ ಈ ಬಗ್ಗೆ ಮಾತನಾಡಿ, ನನ್ನ ಪತಿ ಮತ್ತು ಮಗಳ ಸಾವಿನ ನಂತರ ನಾನು ಛಿದ್ರಗೊಂಡಿದ್ದೇನೆ. ದುಃಖದಲ್ಲಿ ಬದುಕುತ್ತಿದ್ದೇನೆ. ನನ್ನ ದುರಂತದ ನಂತರ, ನನ್ನ ಸಂಬಂಧಿಕರು ಯಾರೂ ನನ್ನನ್ನು ಬೆಂಬಲಿಸಲಿಲ್ಲ. ನಾನು ಸಂಪೂರ್ಣವಾಗಿ ಒಬ್ಬಂಟಿಯಾಗಿದ್ದೆ. ಆದರೆ ಈ ರಿಕ್ಷಾ ಚಾಲಕ ಮತ್ತು ಅವನ ಕುಟುಂಬ ನನ್ನ ಕಷ್ಟದ ಸಮಯದಲ್ಲಿ ನನ್ನ ಬೆಂಬಲಕ್ಕೆ ನಿಂತಿತು. ಏನನ್ನೂ ನಿರೀಕ್ಷಿಸದೆ ನಿಸ್ವಾರ್ಥವಾಗಿ ನನ್ನ ಆರೋಗ್ಯವನ್ನು ನೋಡಿಕೊಂಡರು ಎಂದಿದ್ದಾರೆ. ನನ್ನ ಸಂಬಂಧಿಕರಿಗೆ ಸಾಕಷ್ಟು ಆಸ್ತಿ ಇದೆ. ನನ್ನದನ್ನು ಬಡ ಕುಟುಂಬಕ್ಕೆ ನೀಡಲು ಬಯಸುತ್ತೇನೆ ಎಂದಿದ್ದಾರೆ.

ಒಟ್ಟಿಗೆ ಬದುಕಿ, ಒಟ್ಟಿಗೆ ಸತ್ತರು: ಸಾವಿನ ಬಳಿಕ 12 ಮಂದಿಯ ಪ್ರಾಣ ಕಾಪಾಡಿದ ಆಪ್ತ ಸ್ನೇಹಿತರು!

ನನ್ನ ಮರಣದ(Death) ನಂತರ ಯಾರೂ ಕೂಡಾ ಅವರ ಕುಟುಂಬಕ್ಕೆ ಕಿರುಕುಳ ನೀಡದಿರಲು ನಾನು ಬುಧ ಮತ್ತು ಅವನ ಕುಟುಂಬಕ್ಕೆ ಎಲ್ಲವನ್ನೂ ಕಾನೂನುಬದ್ಧವಾಗಿ ದಾನ ಮಾಡಲು ನಿರ್ಧರಿಸಿದೆ ಎಂದು ಮಿನಾತಿ ಹೇಳಿದ್ದಾರೆ. ಈ ಮೂಲಕ ತಾನು ದಾನ ಮಾಡುವ ಸಂಪತ್ತು ಆತನಿಗೆ ದೊರಕುತ್ತದೆ ಎನ್ನುವುದನ್ನೂ ಅವರು ಖಚಿತಪಡಿಸಿಕೊಂಡಿದ್ದಾರೆ.

ಅವನು ನನ್ನ ಮಗಳನ್ನು ರಾವೆನ್‌ಶಾ ಕಾಲೇಜಿಗೆ ಕರೆದೊಯ್ಯುತ್ತಿದ್ದ. ಅವರು ನಮ್ಮ ಕುಟುಂಬದ ರಿಕ್ಷಾ ಚಾಲಕರಾಗಿದ್ದರು. ಅವರ ಮೇಲಿನ ನನ್ನ ನಂಬಿಕೆ ಮತ್ತು ನನಗೆ ಮತ್ತು ನನ್ನ ಕುಟುಂಬಕ್ಕೆ ಅವರ ಸಮರ್ಪಣಾ ಭಾವ ಅವರಿಗೆ ಪ್ರತಿಫಲವನ್ನು ಗಳಿಸಿ ಕೊಟ್ಟಿದೆ. ನನ್ನ ಆಸ್ತಿಯನ್ನು ಅವರಿಗೆ ನೀಡುವ ಮೂಲಕ ನಾನು ಅವರಿಗೆ ಯಾವುದೇ ದೊಡ್ಡ ಸೇವೆ ಮಾಡಿದಂತಾಗುವುದಿಲ್ಲ. ಅವರು ಅದಕ್ಕೆ ಅರ್ಹರು ಎಂದು ಅವರು ಹೇಳಿದ್ದಾರೆ.

ಬುಧನಿಗೆ ಹೆಂಡತಿ ಮತ್ತು ಮೂವರು ಮಕ್ಕಳಿದ್ದಾರೆ. ಇಬ್ಬರು ಗಂಡು ಮತ್ತು ಒಬ್ಬ ಮಗಳು. ಬುಧಾ ಸಮಲ್ ಈ ಬಗ್ಗೆ ಪ್ರತಿಕ್ರಿಯಿಸಿ, ಅಮ್ಮ ತನ್ನ ಆಸ್ತಿಯನ್ನು ನೀಡುವ ನಿರ್ಧಾರದ ಬಗ್ಗೆ ಹೇಳಿದಾಗ ನಾನು ದಿಗ್ಭ್ರಮೆಗೊಂಡೆ. ನಾನು ಎರಡು ದಶಕಗಳಿಗೂ ಹೆಚ್ಚು ಕಾಲ ಈ ಕುಟುಂಬಕ್ಕೆ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ಸಾವಿನ ತನಕ ನಾನು ಈ ಸೇವೆಯನ್ನು ಮುಂದುವರಿಸುತ್ತೇನೆ ಎಂದಿದ್ದಾರೆ.

ನನ್ನ ಮತ್ತು ನನ್ನ ಕುಟುಂಬದ ಜೀವನದ ಮೇಲೆ ಪ್ರಭಾವ ಬೀರುವಂತಹ ಮಹತ್ವದ ನಿರ್ಧಾರವನ್ನು ಅಮ್ಮ ತೆಗೆದುಕೊಂಡಿರುವುದಕ್ಕೆ ನನಗೆ ಅತೀವ ಸಂತೋಷವಾಗಿದೆ. ನಾನು ಈಗ ನನ್ನ ಕುಟುಂಬದೊಂದಿಗೆ ಒಂದೇ ಮನೆಯಲ್ಲಿ ಬದುಕಬಲ್ಲೆ ಎಂದು ಬುಧ ಸಮಲ್ ಹೇಳಿದ್ದಾರೆ.

ಬುಧ ಎರಡು ವರ್ಷಗಳ ಹಿಂದೆ ಮಿನಾತಿ ಕೇಳಿಕೊಂಡ ನಂತರ ರಿಕ್ಷಾ ಎಳೆಯುವ ಕೆಲಸವನ್ನು ನಿಲ್ಲಿಸಿದ್ದಾರೆ. ನಾಲ್ಕು ತಿಂಗಳ ಹಿಂದೆ ಅವರ ಕೋರಿಕೆಯ ಮೇರೆಗೆ ಅವನು ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಮಿನಾತಿ ಮನೆಗೆ ತೆರಳಿದ್ದಾರೆ.

ಬುಧ ಸಮಲ್ ಅವರ ಪತ್ನಿ ಮಾತನಾಡಿ, ನಾವು ಯಾವಾಗಲೂ ಮಿನಾತಿಯವರನ್ನು ನಮ್ಮ ಸ್ವಂತ ತಾಯಿ ಎಂದು ಪರಿಗಣಿಸಿದ್ದೇವೆ. ಆದ್ದರಿಂದ ನನ್ನ ಗಂಡ ಮತ್ತು ನಾನು ಮತ್ತು ನನ್ನ ಮಕ್ಕಳು ಎಲ್ಲರೂ ಅವರ ಆಶ್ರಯದಲ್ಲೇ ಇದ್ದೆವು. ನನ್ನ ಕುಟುಂಬ ಅಮ್ಮನ ಜೊತೆ ಈ ಮನೆಯಲ್ಲಿಯೇ ಉಳಿದುಕೊಳ್ಳಲಿದ್ದೇವೆ ಎಂದಿದ್ದಾರೆ.

Follow Us:
Download App:
  • android
  • ios