93ನೇ ವಯಸ್ಸಿನಲ್ಲಿ ಎಷ್ಟು ಜನರ ಜೊತೆ ಡೇಟಿಂಗ್ ಮಾಡ್ತಾಳೆ ಈ ಅಜ್ಜಿ ಗೊತ್ತಾ?
ಪ್ರೀತಿ ಮಾಡೋಕೆ, ಎಂಜಾಯ್ ಮಾಡೋಕೆ ವಯಸ್ಸಿನ ಮಿತಿ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ಕೂಡ ವಯಸ್ಸನ್ನು ಗಮನಿಸೋರಿಲ್ಲ. ಯಾವ ವಯಸ್ಸಿನಲ್ಲಿ ಬೇಕಾದ್ರೂ ನಿಮ್ಮ ಲೈಫ್ ಎಂಜಾಯ್ ಮಾಡ್ಬಹುದು ಎನ್ನುವುದಕ್ಕೆ ಈ ಅಜ್ಜಿ ಸಾಕ್ಷ್ಯ.
ವರ್ಷ ಎಂಭತ್ತು ದಾಟುತ್ತಿದ್ದಂತೆ ಭಾರತದ ಬಹುತೇಕ ಜನರು ಇನ್ನೇನು ಊರು ಹೋಗು ಎನ್ನುತ್ತೆ ಕಾಡು ಬಾ ಎನ್ನುತ್ತೆ ಎನ್ನುವ ಗಾದೆ ಶುರು ಮಾಡ್ತಾರೆ. ಮನೆಯಿಂದ ಹೊರಗೆ ಹೋಗೋದೇ ಅಪರೂಪ. ಒಂದ್ವೇಳೆ ಅವರು ಕೋಲು ಹಿಡಿದುಕೊಂಡೋ ವೀಲ್ ಚೇರ್ ನಲ್ಲೋ ಮನೆಯಿಂದ ಹೊರಗೆ ಬಂದ್ರೆ ಅಕ್ಕಪಕ್ಕದವರೇ ಅವರ ಬಗ್ಗೆ ಮಾತನಾಡೋಕೆ ಶುರು ಮಾಡ್ತಾರೆ. ಈ ವಯಸ್ಸಿನಲ್ಲಿ ಇವರಿಗ್ಯಾಕೆ ಬೇಕಿತ್ತು ಎನ್ನುವವರೇ ಹೆಚ್ಚು. ಆದ್ರೆ ಇಷ್ಟರ ಮಧ್ಯೆಯೂ ಭಾರತದಲ್ಲಿ ಕೆಲ ಉತ್ಸಾಹಿ ವೃದ್ದರಿದ್ದಾರೆ. ಅವರು ಯಾರಿಗೂ, ಯಾವುದಕ್ಕೂ ತಲೆಕೆಡಿಸಿಕೊಳ್ಳೋದಿಲ್ಲ. ಮೊಬೈಲ್, ಸಾಮಾಜಿಕ ಜಾಲತಾಣ ಅವರನ್ನು ಸಾಕಷ್ಟು ಬದಲಿಸಿದೆ. ಟೈಂ ಪಾಸ್ ಗೆ ಮೊಬೈಲ್ ನೋಡುವ ಅನೇಕರು ತಮ್ಮ ಮೊಮ್ಮಕ್ಕಳ ಜೊತೆ ಸೇರಿ ರೀಲ್ಸ್, ವಿಡಿಯೋ ಮಾಡೋಕೆ ಶುರು ಮಾಡಿದ್ದಾರೆ. ಆದ್ರೆ ಡೇಟಿಂಗ್ ವಿಷ್ಯಕ್ಕೆ ಕೈ ಹಾಕೋದು ಅಪರೂಪ. ವಿದೇಶದಲ್ಲಿ ಈ ಡೇಟಿಂಗ್ ಯುವಕರಿಗೆ ಮಾತ್ರವಲ್ಲ ವೃದ್ಧರಿಗೂ ಕಾಮನ್. ಸಂಗಾತಿ ಸಾವನ್ನಪ್ಪಿದ ಮೇಲೆ ಅವರ ನೆನಪಿನಲ್ಲೇ ಜೀವನ ಕಳೆಯುವವರು ಬಹಳ ಕಡಿಮೆ. ಹೊಸ ಜೀವನ ಅರಸಿ ಹೋಗುವ ಅಲ್ಲಿನ ಕೆಲವರು ಸುದ್ದಿಯಾಗ್ತಾರೆ. ಈಗ 93 ವರ್ಷದ ಅಜ್ಜಿಯ ಡೇಟಿಂಗ್, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
93ನೇ ವಯಸ್ಸಿನಲ್ಲಿ ಇಷ್ಟೊಂದು ಜನರ ಜೊತೆ ಡೇಟಿಂಗ್ (Dating) : ಅಜ್ಜಿ ಹೆಸರು ಲಿಲಿಯನ್ ಡ್ರೋನಿಯಾಕ್ (Lillian Droniak). ಜನರು ಅವಳನ್ನು ಪ್ರೀತಿ (love) ಯಿಂದ ಡ್ರೋನಿಯಾಕ್ ಅಜ್ಜಿ ಎಂದು ಕರೆಯುತ್ತಾರೆ. ಲಿಲಿಯನ್ ಅಮೆರಿಕದ ಕನೆಕ್ಟಿಕಟ್ ನಿವಾಸಿ. ಆಕೆ ಸಾಮಾಜಿಕ ಜಾಲತಾಣದಲ್ಲಿ ಪ್ರಭಾವಿ ವ್ಯಕ್ತಿ. ಟಿಕ್ ಟಾಕ್ ನಲ್ಲಿ 12.6 ಮಿಲಿಯನ್ ಫಾಲೋವರ್ಸ್ ಹೊಂದಿರುವ ಅಜ್ಜಿ, ಡೇಟಿಂಗ್ ಗೆ ಸಂಬಂಧಿಸಿದ ವಿಷ್ಯವನ್ನು ಪೋಸ್ಟ್ ಮಾಡಿದ್ದಾಳೆ.
ನವ ಜೋಡಿಗಳ ಹನಿಮೂನ್ ಸ್ವರ್ಗವಾಗಿರುವ ಮಾಲ್ಡೀವ್ಸ್‌ನಲ್ಲಿ ಗರಿಷ್ಠ ಡಿವೋರ್ಸ್ ಕೇಸ್!
2012ರಲ್ಲಿ ಟಿಕ್ ಟಾಕ್ ನಲ್ಲಿ ಅಜ್ಜಿ ಪ್ರಸಿದ್ಧಿಗೆ ಬಂದಿದ್ದಳು. ಹಿಂದಿನ ವರ್ಷ, ನಾನು ಡೇಟ್ ಗೆ ಸಿದ್ಧ ಎಂದು ಅಜ್ಜಿ ಹೇಳಿದ್ದಳು. 2000ರಲ್ಲಿ ಆಕೆ ಪತಿ ಸಾವನ್ನಪ್ಪಿದ್ದಾರೆ. ಪತಿ ಸಾವಿನ ನಂತ್ರ ನಾನು ಯಾರ ಜೊತೆಯೂ ಡೇಟ್ ಮಾಡಿಲ್ಲ. 25 ವರ್ಷಗಳ ನಂತ್ರ ಇದೇ ಮೊದಲ ಬಾರಿ ನಾನು ಡೇಟ್ ಗೆ ಸಿದ್ಧವಾಗಿದ್ದೇನೆ. ನಾನು ಡೇಟ್ ವೇಳೆ ಪರ್ಸ್ ತರೋದಿಲ್ಲ. ಉಚಿತವಾಗಿ ಆಹಾರ ಸೇವನೆ ಮಾಡಲು ಇಷ್ಟಪಡ್ತೇನೆ ಎಂದಿದ್ದಳು. ಇದಾದ್ಮೇಲೆ ಆಕೆ ಜೊತೆ ಡೇಟ್ ಮಾಡಲು ಅನೇಕರು ಆಸಕ್ತಿ ತೋರಿದ್ದರು.
ಹಿಂದಿನ ವರ್ಷ ನಾನು ಐದು ಮಂದಿ ಜೊತೆ ಡೇಟ್ ಮಾಡಿದ್ದೇನೆ ಎಂದು ಅಜ್ಜಿ ವಿಡಿಯೋದಲ್ಲಿ ಹೇಳಿದ್ದಾಳೆ. ಅದ್ರಲ್ಲಿ ಇಬ್ಬರನ್ನು ಈಕೆಯೇ ರಿಜೆಕ್ಟ್ ಮಾಡಿದಳಂತೆ. ಅವರ ಸ್ವಭಾವ ಚೆನ್ನಾಗಿರಲಿಲ್ಲ. ಅವರ ಮೇಲೆ ನಂಬಿಕೆ ಇಡೋದು ಕಷ್ಟವಾಗಿತ್ತು ಎಂದಿದ್ದಾಳೆ. ಇನ್ನು ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ ಕಾರಣ ಆತನ ಜೊತೆ ಮಾತು ಮುಂದುವರೆಸಲು ಆಗ್ಲಿಲ್ಲ ಎಂದಿದ್ದಾಳೆ. ಇನ್ನೊಬ್ಬ ಆಕೆಗೆ ಸರಿ ಬರಲಿಲ್ಲ ಎನ್ನುವ ಕಾರಣಕ್ಕೆ ಮಾತನಾಡೋದನ್ನು ಬಿಟ್ಟಿದ್ದಾಳಂತೆ. ಒಬ್ಬ ಬಾಯ್ ಫ್ರೆಂಡ್ ಆಗಿದ್ದಾನೆ ಎಂದು ಅಜ್ಜಿ ವಿಡಿಯೋದಲ್ಲಿ ಹೇಳಿದ್ದಾಳೆ. ಒಬ್ಬೊಬ್ಬರು ಒಂದೊಂದು ಕಡೆ ನನಗೆ ಸಿಕ್ಕಿದ್ದರು. ಮಕ್ಕಳ ಸಹಾಯದಿಂದ ಅವರ ಜೊತೆ ಮಾತನಾಡ್ತಿದ್ದ ಎಂದ ಅಜ್ಜಿಗೆ ಮೂರು ಮಕ್ಕಳಿದ್ದಾರೆ. ಐವರು ಮೊಮ್ಮಕ್ಕಳು ಹಾಗೂ ಮೂವರು ಮರಿ ಮಕ್ಕಳನ್ನು ಅಜ್ಜಿ ಹೊಂದಿದ್ದಾಳೆ.
ಮಾಜಿ ಗರ್ಲ್ ಫ್ರೆಂಡ್ ಕೆಂಡಾಮಂಡಲ… ಭಯಕ್ಕೆ ಬೆಡ್ ರೂಮ್ ಸೇರಿದ ಬಾಯ್ ಫ್ರೆಂಡ್
ಬಾಯ್ ಫ್ರೆಂಡ್ ಆಗಿರುವ ವ್ಯಕ್ತಿ, ತನ್ನ ಮಾಹಿತಿ ನೀಡದಂತೆ ಅಜ್ಜಿಗೆ ಹೇಳಿದ್ದಾನಂತೆ. ಹಾಗಾಗಿ ಆತನ ಗುರುತು ಮುಚ್ಚಿಟ್ಟಿದ್ದೇನೆ ಎಂದು ಅಜ್ಜಿ ಹೇಳಿದ್ದಾಳೆ. ಲಿಲಿಯನ್ ಈ ವಿಡಿಯೋವನ್ನು ಈವರೆಗೆ 71 ಮಿಲಿಯನ್ ಗಿಂತಲೂ ಹೆಚ್ಚು ಬಾರಿ ಜನ ವೀಕ್ಷಿಸಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ 20 ಮಿಲಿಯನ್ ವೀವ್ಸ್ ಸಿಕ್ಕಿದೆ.