ಮಾಜಿ ಗರ್ಲ್ ಫ್ರೆಂಡ್ ಕೆಂಡಾಮಂಡಲ… ಭಯಕ್ಕೆ ಬೆಡ್ ರೂಮ್ ಸೇರಿದ ಬಾಯ್ ಫ್ರೆಂಡ್

ಬಾಯ್ ಫ್ರೆಂಡ್ ಇನ್ನೊಬ್ಬಳ ಜೊತೆ ಇರೋದನ್ನು ಈಕೆಗೆ ಸಹಿಸೋಕೆ ಆಗ್ಲಿಲ್ಲ. ಕೋಪದಲ್ಲಿ ಮನೆಗೆ ನುಗ್ಗಿದವಳು ಅಬ್ಬರಿಸಿದ್ಲು…ಸಿಕ್ಕಿದ್ದೆಲ್ಲ ಪೀಸ್ ಪೀಸ್.. ಬೆಡ್ ರೂಮ್ ಗೆ ಬರ್ತಿದ್ದಂತೆ ಬಂದ್ರು ಪೊಲೀಸ್.
 

A Girlfriend Who Broke Into The House Of A Cheating Boyfriend roo

ಪ್ರೀತಿಸಿದೋರು ಮೋಸ ಮಾಡಿದಾಗ ಅದನ್ನು ಸಹಿಸೋದು ಕಷ್ಟ. ನಮ್ಮವರು ಅಂತಾ ನಂಬಿದ್ದ ವ್ಯಕ್ತಿ ನಮ್ಮನ್ನು ದೂರತಳ್ಳಿ ಇನ್ನೊಬ್ಬರ ಜೊತೆ ವಾಸ ಶುರು ಮಾಡಿದಾಗ ಇದನ್ನು ಸುಲಭವಾಗಿ ಅರಗಿಸಿಕೊಳ್ಳಲು ಆಗೋದಿಲ್ಲ. ಪ್ರೀತಿ ಕಳೆದುಕೊಂಡ ಅನೇಕರು ದುಃಖದಲ್ಲಿ ಜೀವನ ನಡೆಸುತ್ತಾರೆ. ಮತ್ತೆ ಕೆಲವರು ಆತ್ಮಹತ್ಯೆ ಬಗ್ಗೆ ಆಲೋಚನೆ ಮಾಡ್ತಾರೆ. ಇನ್ನು ಕೆಲವರು ಎಲ್ಲವನ್ನೂ ಸಹಿಸಿಕೊಂಡು ಮುಂದಿನ ಜೀವನದ ಬಗ್ಗೆ ಆಲೋಚನೆ ನಡೆಸ್ತಾರೆ. ಆದ್ರೆ ಮತ್ತೊಂದಿಷ್ಟು ಮಂದಿಗೆ ಆ ದಿನಗಳನ್ನು ಮರೆಯಲು, ಸಂಗಾತಿ ಮಾಡಿದ ಮೋಸವನ್ನು ಕ್ಷಮಿಸಲು ಸಾಧ್ಯವೇ ಆಗೋದಿಲ್ಲ. ಅವರ ಮುಂದೆ ಬರೀ ಸೇಡು ಕಾಣಿಸುತ್ತಿರುತ್ತದೆ. ನನಗಿಲ್ಲದ ಸಂತೋಷ ಇನ್ನೊಬ್ಬರಿಗೂ ಸಿಗಬಾರದು ಎಂಬ ಕಾರಣಕ್ಕೆ ಅವರು ಮೈ ಮೇಲೆ ದೆವ್ವ ಬಂದಂತೆ ಆಡಲು ಶುರು ಮಾಡ್ತಾರೆ. ಕೋಪಕ್ಕೆ ಬುದ್ದಿಕೊಟ್ಟು ತಮಗೆ ತೊಂದರೆ ತಂದುಕೊಳ್ಳುವವರಿದ್ದಾರೆ. ಅವರ ಈ ದುಷ್ಟ ವರ್ತನೆಯಿಂದ ಮಾಜಿ ಸಂಗಾತಿಗೆ ಮಾತ್ರವಲ್ಲ ಅವರಿಗೂ ಸಾಕಷ್ಟು ನೋವು, ಸಮಸ್ಯೆಗಳು ಕಾಡುತ್ತವೆ. ಅದಕ್ಕೆ ಇಂಗ್ಲೆಂಡ್‌ನ ಈ ಮಹಿಳೆ ಕೂಡ ಸೇರಿದ್ದಾಳೆ. ಪ್ರೀತಿಸಿದ ವ್ಯಕ್ತಿ ದೂರ ಮಾಡಿದ ಎನ್ನುವ ಕಾರಣಕ್ಕೆ ಆತನ ಮನೆಗೆ ನುಗ್ಗಿ ರಂಪ ಮಾಡಿದ ಮಹಿಳೆ ಪ್ರಕರಣ, ಕೋರ್ಟ್ ಮೆಟ್ಟಿಲೇರಿದೆ.

ಪ್ರೇಮಿ (lover) ಮನೆಗೆ ದಾಳಿ ಮಾಡಿ ರಾದ್ಧಾಂತ ಮಾಡಿದ ಮಹಿಳೆ :  ಆಕೆ ಹೆಸರು ಬುಥಿಪ್ ಕ್ಯಾಂಡ್ರೆ. ಆಕೆಗೆ ಮೋಸ ಮಾಡಿದ ವ್ಯಕ್ತಿ ಹೆಸರು  ಸ್ಟೀವನ್ ವುಡ್ಸ್‌. ಬುಥಿಪ್  ಲಿವರ್‌ಪೂಲ್‌ ನಿವಾಸಿಯಾಗಿದ್ದು, 49 ವರ್ಷ ವಯಸ್ಸಾಗಿದೆ. ಸ್ಟೀವನ್ ವುಡ್ಸ್ ಇನ್ನೊಬ್ಬಳ ಜೊತೆಗಿದ್ದಾನೆ ಎಂಬ ವಿಷ್ಯ ಗೊತ್ತಾಗ್ತಿದ್ದಂತೆ ಬುಥಿಫ್ ಕ್ಯಾಂಡ್ರೆ ಕೋಪ ನೆತ್ತಿಗೇರಿದೆ. ನೇರವಾಗಿ ಬಾಯ್ ಫ್ರೆಂಡ್ ಮನೆಗೆ ಬಂದಿದ್ದಾಳೆ ಕ್ಯಾಂಡ್ರೆ. ಮೊದಲು ಕಾರಿನ ವಿಂಗ್ ಮಿರರ್ (Wing mirror) ಮುರಿದಿದ್ದಾಳೆ ಕ್ಯಾಂಡ್ರೆ. ನಂತ್ರ ಮರದ ಹಲಗೆಗಳನ್ನು ಎಸೆದು ಲಿವಿಂಗ್ ರೂಮ್ ಕಿಟಕಿ ಒಡೆದು ಮನೆ ಪ್ರವೇಶ ಮಾಡುವ ಪ್ರಯತ್ನ ನಡೆಸಿದ್ದಾಳೆ.

ಅತ್ತ ಅಪ್ಪನ ಮದ್ವೆ- ಇತ್ತ ಸಾವಿನ ದವಡೆಯಲ್ಲಿ ಮಗಳು: ದೇವರಿದ್ದಾನೆ ಎನ್ನುತ್ತಲೇ ನಿರ್ದೇಶಕರಿಗೆ ನೆಟ್ಟಿಗರ ಕ್ಲಾಸ್​!

ಈ ವೇಳೆ ವುಡ್ಸ್ ತನ್ನ ಹೊಸ ಗರ್ಲ್ ಫ್ರೆಂಡ್ ಜೊತೆಗಿದ್ದ. ಕ್ಯಾಂಡ್ರೆಯಿಂದ ತಪ್ಪಿಸಿಕೊಳ್ಳಲು ಆತ ಬೆಡ್ ರೂಮ್ ಸೇರಿದ್ದಾನೆ. ಅಲ್ಲಿಗೆ ಕ್ಯಾಂಡ್ರೆ ಬರದಂತೆ ಒಳಗಿನಿಂದ ಲಾಕ್ ಮಾಡಿದ್ದಾನೆ. ರಕ್ಷಣೆಗಾಗಿ ಪೊಲೀಸರಿಗೆ ಕರೆ ಮಾಡಿದ್ದಾನೆ. ಕ್ಯಾಂಡ್ರೆ, ಬೆಡ್ ರೂಮ್ ಬಾಗಿಲು ಮುರಿದು ಒಳಗೆ ಬರುವ ಪ್ರಯತ್ನ ನಡೆಸಿದ್ದಾಳೆ.  ಬೆಡ್ ರೂಮಿನಲ್ಲಿ ರಕ್ಷಣೆಗೆ ಕೂಗುತ್ತಿದ್ದ ವುಡ್ಸ್ ಮತ್ತು ಆತನ ಗರ್ಲ್ ಫ್ರೆಂಡ್ ರಕ್ಷಿಸಿದ ಪೊಲೀಸರು ಕ್ಯಾಂಡ್ರೆಯನ್ನು ಬಂಧಿಸಿದ್ದಾರೆ. 

ಬಿಗ್​ಬಾಸ್​ ಮನೆಯಲ್ಲಿ ಮದುವೆ ವಿಷ್ಯ ಬಾಯ್ಬಿಟ್ಟ ಬಾಲಿವುಡ್​ ಜೋಡಿ ಸಲ್ಮಾನ್​ ಖಾನ್​-ಟಬು!

ಕ್ಯಾಂಡ್ರೆ ಹಾಗೂ ವುಡ್ಸ್ ಅನೇಕ ವರ್ಷಗಳಿಂದ ಒಟ್ಟಿಗೆ ಇದ್ದರು. ಕ್ಯಾಂಡ್ರೆ ದಾಳಿ ಮಾಡಿದ ಮನೆಯಲ್ಲೇ ಇಬ್ಬರು ವಾಸವಾಗಿದ್ದರು. ಹಾಗಾಗಿಯೇ ಕ್ಯಾಂಡ್ರೆಗೆ ಈ ಮನೆಯ ಮೂಲೆ ಮೂಲೆ ಗೊತ್ತಿದೆ. ಕೆಲ ದಿನಗಳ ಹಿಂದೆ ಇಬ್ಬರ ಮಧ್ಯೆ ಜಗಳವಾಗಿದೆ. ಕ್ಯಾಂಡ್ರೆಯನ್ನು ವುಡ್ಸ್ ಮನೆಯಿಂದ ಹೊರಗೆ ಹಾಕಿದ್ದಾನೆ. ಈ ಕೋಪ ಕ್ಯಾಂಡ್ರೆಗಿತ್ತು. ಜೊತೆಗೆ ವುಡ್ಸ್ ಹೊಸ ಗರ್ಲ್ ಫ್ರೆಂಡ್ ಜೊತೆಗಿದ್ದಾನೆ ಎಂಬ ವಿಷ್ಯ ಗೊತ್ತಾಯ್ತು. ಇದೇ ಮನೆಯಲ್ಲಿ ತನ್ನ ಪ್ರೇಮಿ ಇನ್ನೊಬ್ಬರ ಜೊತೆಗಿರೋದು ಆಕೆಗೆ ಸಹಿಸಲು ಸಾಧ್ಯವಾಗಲಿಲ್ಲ. ಇದ್ರಿಂದ ಮತ್ತಷ್ಟು ಕೆಂಡಾಮಂಡಲವಾದ ಕ್ಯಾಂಡ್ರೆ, ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.  ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಜಾನ್ ಬೆನ್ಸನ್,  ಕ್ಯಾಂಡ್ರೆಗೆ 18 ತಿಂಗಳ ಸಮುದಾಯ ಆದೇಶವನ್ನು ಹಸ್ತಾಂತರಿಸಿದ್ದಾರೆ. ರಿಹೆಬ್ಲಿಟೇಷನ್ ಆಕ್ಟಿವಿಟಿ ಸೇರಿದಂತೆ  80 ಗಂಟೆಗಳ ವೇತನರಹಿತ ಕೆಲಸ ಇದರಲ್ಲಿ ಸೇರಿದೆ.
 

Latest Videos
Follow Us:
Download App:
  • android
  • ios