ಗಂಡನ ದೇಹದ ದುರ್ವಾಸನೆಯಿಂದ ಸುಸ್ತಾಗಿದ್ದಾಳೆ ಈಕೆ, ಸಾಂತ್ವಾನ ಹೇಳುವುದ್ಹೇಗೆ?
ಸುವಾಸನೆ ಎಲ್ಲರನ್ನು ಸೆಳೆಯುತ್ತದೆ. ಹಾಗೆ ದುರ್ವಾಸನೆ ದೂರ ಓಡಿಸುತ್ತದೆ. ವ್ಯಕ್ತಿ ಎಷ್ಟೇ ಪ್ರಿಯವಾಗಿರಲಿ ಅವರ ದೇಹದ ವಾಸನೆ ಕೆಟ್ಟದಾಗಿದ್ದರೆ ಹತ್ತಿರ ಹೋಗಲು ಮನಸ್ಸು ಬರೋದಿಲ್ಲ. ಇನ್ನು ಸಂಬಂಧ ಬೆಳೆಸಲು ಮೂಡ್ ಬರೋದು ಹೇಗೆ?
ದೇಹದಿಂದ ಬರುವ ಸುವಾಸನೆ ಜನರನ್ನು ಆಕರ್ಷಿಸುತ್ತದೆ. ಆದ್ರೆ ಕೆಲವೊಮ್ಮೆ ದೇಹದಿಂದ ಬರುವ ಗಬ್ಬು ವಾಸನೆ ಜನರಿಂದ ನಮ್ಮನ್ನು ದೂರವಿಡುತ್ತದೆ. ಪ್ರತಿಯೊಬ್ಬರ ಬೆವರೂ ಒಂದೊಂದು ರೀತಿಯ ವಾಸನೆ ಹೊಂದಿರುತ್ತದೆ. ಕೆಲವರ ಬೆವರು ಕಡಿಮೆ ವಾಸನೆ ಹೊರ ಹಾಕ್ತಿದ್ದರೆ ಮತ್ತೆ ಕೆಲವರ ಬೆವರು ಕಟುವಾಗಿರುತ್ತದೆ. ಅವರು ಪಕ್ಕದಲ್ಲಿ ಹಾದು ಹೋದ್ರೂ ಮೂಗು ಮುಚ್ಚಿಕೊಳ್ಳುವಷ್ಟು ಹಿಂಸೆಯಾಗುತ್ತದೆ. ಇನ್ನು ಇಡೀ ದಿನ ಅವರ ಜೊತೆಗಿರಬೇಕೆಂದ್ರೆ, ಅವರ ಜೊತೆ ಮಲಗಬೇಕೆಂದ್ರೆ ಹಿಂಸೆಯಾಗೋದು ಸಾಮಾನ್ಯ. ನಮ್ಮ ದೇಹದಿಂದ ಬರುವ ಬೆವರಿನ ವಾಸನೆಗೆ ನಮ್ಮ ಜೀವನಶೈಲಿ ಕೂಡ ಕಾರಣವಾಗುತ್ತದೆ. ಬೆವರಿನ ವಾಸನೆ ಕ್ರೂರವಾಗಿದೆ ಎಂಬುದು ಗೊತ್ತಾದಾಗ ಜನರು ಅದನ್ನು ಹೋಗಲಾಡಿಸುವ ಪ್ರಯತ್ನ ನಡೆಸ್ತಾರೆ. ಆದ್ರೆ, ನನ್ನ ದೇಹದಿಂದ ಬರುವ ಗಬ್ಬು ವಾಸನೆ ನನಗೆ ಇಷ್ಟ ಎಂಬ ಮೊಂಡುತನ ಮಾಡಿದ್ರೆ ಸಂಸಾರ ಹಾಳಾಗೋದು ಗ್ಯಾರಂಟಿ. ಈಗ ಮಹಿಳೆಯೊಬ್ಬಳು ಗಂಡನ ದೇಹದಿಂದ ಬರುವ ವಾಸನೆಗೆ ಬೇಸತ್ತಿದ್ದಾಳೆ.
ಈಕೆ ಮದುವೆ (Marriage) ಯಾಗಿ ತುಂಬಾ ದಿನ ಕಳೆದಿಲ್ಲ. ಈಕೆಯದ್ದು ಅರೇಂಜ್ಡ್ ಮ್ಯಾರೇಜ್. ಹಾಗಾಗಿ ಮದುವೆಗೆ ಮುನ್ನ ಇಬ್ಬರ ಬಗ್ಗೆ ಸರಿಯಾಗಿ ತಿಳಿದಿರಲಿಲ್ಲ. ಮದುವೆಯಾದ್ಮೇಲೆ ಸಂಸಾರ ಚೆನ್ನಾಗಿ ನಡೆಯುತ್ತೆ ಎಂದು ನಂಬಿದ್ದವಳಿಗೆ ಈಗ ಅದ್ರ ಬಗ್ಗೆ ಆಸಕ್ತಿ ಕಡಿಮೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಸ್ವಚ್ಛತೆ (Clean). ಪತಿಯ ನಿರ್ಲಕ್ಷ್ಯ ಆಕೆಯ ಸಂಸಾರವನ್ನು ಹಾಳು ಮಾಡ್ತಿದೆ. ಪತಿ ದೇಹದಿಂದ ಬರುವ ಬೆವರಿನ ವಾಸನೆ ಆಕೆಗೆ ಹಿಂಸೆ ನೀಡ್ತಿದೆಯಂತೆ.
ಮಹಿಳೆಯರು ಹೀಗೆಲ್ಲಾ ಮಾಡೋದು ಗಂಡಸರಿಗೆ ಇಷ್ಟಾನೇ ಆಗಲ್ವಂತೆ !
ಶಾರೀರಿಕ ಸಂಬಂಧ ಬೆಳೆಸುವುದಿರಲಿ ಆತನ ಬಳಿ ಹೋಗಲು ನನಗೆ ಸಾಧ್ಯವಾಗ್ತಿಲ್ಲ ಎನ್ನುತ್ತಾಳೆ ಮಹಿಳೆ. ಸಾರ್ವಜನಿಕ (Public) ಪ್ರದೇಶಗಳಲ್ಲಿ ಹಾಗೂ ಸಮಾರಂಭಗಳಿಗೆ ಹೋದ್ರೆ ಜನರು ನನ್ನ ಜೊತೆಗಿರುವ ಪತಿಯನ್ನು ವಿಚಿತ್ರವಾಗಿ ನೋಡ್ತಾರೆ. ನನ್ನ ಸ್ನೇಹಿತೆಯರು ಕೂಡ ನನ್ನನ್ನು ನೋಡುವ ದೃಷ್ಟಿ ಬದಲಾಗಿದೆ ಎನ್ನುತ್ತಾಳೆ ಮಹಿಳೆ. ಪತಿಯ ಬೆವರಿ (Sweat)ನ ವಾಸನೆ ಬಗ್ಗೆ ಸಾಕಷ್ಟು ಬಾರಿ ಹೇಳಿದ್ದಾಳಂತೆ. ವಾಸನೆ ಕಡಿಮೆ ಮಾಡಿಕೊಳ್ಳಲು ಸಲಹೆ ನೀಡಿದ್ದಾಳಂತೆ. ಆದ್ರೆ ನನ್ನ ದೇಹ, ನನ್ನಿಷ್ಟ ಎನ್ನುವ ಪತಿ ಯಾವುದಕ್ಕೂ ಸಹಕಾರ ನೀಡೋದಿಲ್ಲವಂತೆ. ಪತಿಯ ಈ ವರ್ತನೆ ಮತ್ತಷ್ಟು ಮನಸ್ಸು ನೋಯಿಸ್ತಿದೆ ಎನ್ನುತ್ತಾಳೆ ಆಕೆ.
ತಜ್ಞ (Expert) ರ ಸಲಹೆ : ದೇಹದಿಂದ ಬರುವ ದುರ್ವಾಸನೆ ಶಾರೀರಿಕ ಸಂಬಂಧವನ್ನು ಮಾತ್ರವಲ್ಲ ಸಂಸಾರದಲ್ಲಿ ಅನೇಕ ಸಮಸ್ಯೆ ತಂದೊಡ್ಡುತ್ತದೆ. ಪತಿಯ ನೈರ್ಮಲ್ಯ ಇದಕ್ಕೆ ಕಾರಣವಲ್ಲ. ವ್ಯಕ್ತಿಯ ದೇಹದ ವಾಸನೆಗೆ ಅಪೊಕ್ರೈನ್ ಗ್ರಂಥಿ ಕಾರಣ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು ಎನ್ನುತ್ತಾರೆ ತಜ್ಞರು. ಪತಿಯ ದೇಹದಿಂದ ಬರುವ ಕಟು ವಾಸನೆಯಿಂದ ನೀವು ಅವಮಾನ, ನಿರಾಸೆ ಅನುಭವಿಸುತ್ತಿದ್ದೀರಿ ಎಂಬುದು ನನಗೆ ತಿಳಿದಿದೆ. ಈ ಬಗ್ಗೆ ಪತಿ ಜೊತೆ ಕುಳಿತು ಮಾತನಾಡುವುದು ಉತ್ತಮ ಎನ್ನುತ್ತಾರೆ ತಜ್ಞರು. ಪತಿಗೆ ಸಮಸ್ಯೆ ಏನಾಗ್ತಿದೆ ಎಂಬುದನ್ನು ನೀವು ಹೇಳಬೇಕು. ಸ್ನೇಹಿತರಿಂದ ಎಷ್ಟು ಮುಜುಗರಕ್ಕೆ ಒಳಗಾಗ್ತಿದ್ದೀರಿ ಎಂಬುದನ್ನು ವಿವರಿಸಿ.
ಮಕ್ಕಳು ಅನಗತ್ಯವಾಗಿ ಸಾರಿ ಕೇಳ್ತಿರ್ತೀರಾ ? ಅಭ್ಯಾಸ ತಪ್ಪಿಸೋಕೆ ಹೀಗ್ ಮಾಡಿ
ಯಾವುದೇ ಕಾರಣಕ್ಕೂ ಸಂಗಾತಿ ಮನಸ್ಸು ನೋಯಿಸುವ ರೀತಿಯಲ್ಲಿ ಮಾತನಾಡಬೇಡಿ. ಅವರ ಹಿತ ಮತ್ತು ನಿಮ್ಮ ಹಿತ ಎರಡಕ್ಕಾಗಿ ಈ ಮಾತುಗಳನ್ನು ಹೇಳ್ತಿದ್ದೀರಿ ಎಂಬುದನ್ನು ಅವರಿಗೆ ಮನವರಿಕೆ ಮಾಡಿ. ಹಾಗೆ ಎಂದೂ ಪತಿಗೆ (Husband) ಕೆಟ್ಟದ್ದು ಬಯಸುವುದಿಲ್ಲವೆಂದು ತಿಳಿಸಿ. ಅವರಿಗಾಗಿ ಕೆಲ ಡಿಯೋಡ್ರೆಂಟ್ಸ್ (Deodorant) ತಂದು ಬಳಸಲು ಹೇಳಿ ಎನ್ನುತ್ತಾರೆ ತಜ್ಞರು. ಪತಿಯ ಜೀವನ ಶೈಲಿಯಲ್ಲಿ (Lifestyle) ಬದಲಾವಣೆ ಮಾಡುವುದು ಮುಖ್ಯ. ಅವರು ಸೇವನೆ ಮಾಡುವ ಆಹಾರದ (Food Habit) ಬಗ್ಗೆಯೂ ನೀವು ಗಮನ ನೀಡಬೇಕಾಗುತ್ತದೆ ಎನ್ನುತ್ತಾರೆ ತಜ್ಞರು.