ಬ್ರೂಕ್ಲಿನ್‌ನಲ್ಲಿರುವ ಹಲಾಲ್ ಇಟಾಲಿಯನ್ ರೆಸ್ಟೊರೆಂಟ್‌ನಲ್ಲಿ ಮುಸ್ಲಿಂ ಮ್ಯಾಟ್ರಿಮೋನಿಯಲ್‌ ಮತ್ತು ಡೇಟಿಂಗ್ ಅಪ್ಲಿಕೇಶನ್ ಮುಝ್, ಸಿಂಗಲ್ಸ್‌ ಇವೆಂಟ್‌ಅನ್ನು ಆಯೋಜನೆ ಮಾಡಿದೆ. 

ನವದೆಹಲಿ (ಜೂ.6): ಅಮೆರಿಕದ ಬ್ರೂಕ್ಲಿನ್‌ನ ಬೇ ರಿಡ್ಜ್‌ನಲ್ಲಿ ಗುರುವಾರ ಸಂಜೆ ಸುಮಾರು 250 ಮುಸ್ಲಿಮರು ಸಿಂಗಲ್ಸ್ ಡೇಟಿಂಗ್ ಕಾರ್ಯಕ್ರಮಕ್ಕಾಗಿ ಹಲಾಲ್ ಇಟಾಲಿಯನ್ ರೆಸ್ಟೋರೆಂಟ್‌ನಲ್ಲಿ ಜೊತೆಯಾಗಿದ್ದರು. ಕೆಲವರು ಗೌಪ್ಯತೆಯ ಕಾರಣದಿಂದಾಗಿ ಕ್ಯಾಮೆರಾಗಳಿಂದ ದೂರ ಸರಿದರೆ, ಇನ್ನೂ ಕೆಲವರು ಹೆದರಿಕೆಯಲ್ಲಿಯೇ ಕ್ಯಾಮೆರಾದ ಮುಂದೆ ಹತಾಶರಾಗಿ ಪೋಸ್‌ ನೀಡುತ್ತಿದ್ದರು. ಟಿಂಡರ್‌ ಮಾದರಿಯಲ್ಲಿನ ಎಲ್ಲಾ ಅಂಶಗಳನ್ನು ಹೊಂದಿರುವ ಈ ಡೇಟಿಂಗ್‌ ಆಪ್ಲಿಕೇಶನ್, ಮ್ಯಾಟ್ರಿಮೋನಿಯಲ್‌ ಸೇವೆಗಳನ್ನೂ ನೀಡುತ್ತದೆ. ಈ ಇವೆಂಟ್‌ಅನ್ನು ಲಂಡನ್ ಮೂಲದ ಮುಸ್ಲಿಮ್ ಡೇಟಿಂಗ್ ಅಪ್ಲಿಕೇಶನ್ ಮುಜ್‌ ಆಯೋಜನೆ ಮಾಡಿದೆ. ವಿಶ್ವದಾದ್ಯಂತ 8 ಮಿಲಿಯನ್ ಬಳಕೆದಾರರನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ. ಮುಸ್ಲಿಮರಿಗೆ ಐದು ದೈನಂದಿನ ಪ್ರಾರ್ಥನೆಗಳಲ್ಲಿ ನಾಲ್ಕನೆಯದಾದ ಮಗ್ರೆಬ್‌ಗಾಗಿ ಹೊರಾಂಗಣ ಊಟದ ಟೆಂಟ್‌ನಲ್ಲಿ ಪ್ರಾರ್ಥನಾ ಚಾಪೆಗಳನ್ನು ಹಾಕಲಾಗಿತ್ತು. ರೆಸ್ಟೊರೆಂಟ್‌ನ ಒಳಗೆ, ಬೆರೆಯುವ ಅತಿಥಿಗಳಿಗೆ ಸ್ಥಳಾವಕಾಶ ಕಲ್ಪಿಸಲು ಟೇಬಲ್‌ಗಳು ಮತ್ತು ಕುರ್ಚಿಗಳನ್ನು ತೆಗೆದುಹಾಕಲಾಗಿತ್ತು. 

2011 ರಲ್ಲಿ ಸ್ಥಾಪನೆಯಾದ ಮುಜ್‌ ಪ್ರಕಾರ, ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಭೇಟಿಯಾದ ನಂತರ 400,000 ಜೋಡಿಗಳು ಇಂದು ವಿವಾಹ ಬಂಧನಲ್ಲಿದೆ. ಮುಜ್‌ ಫ್ರೀ ಹಾಗೂ ಸಬ್ಸ್‌ಸ್ಕ್ರಿಪ್ಶನ್‌ ಸದಸ್ಯತ್ವಗಳನ್ನು ನೀಡುತ್ತದೆ.' ಈ ಅಪ್ಲಿಕೇಶನ್‌ ಯುವ ಮುಸ್ಲಿಮರಿಗೆ ತಮ್ಮದೇ ಆದ ರೀತಿಯ ಜೊತೆಗಾರರನ್ನು ಹುಡುಕಲು ಅವಕಾಶ ನೀಡುತ್ತಿದೆ. ಅವರ ನಂಬಿಕೆ, ಸಂಸ್ಕೃತಿ, ಸಂಪ್ರದಾಯಗಳು ಮತ್ತು ಕುಟುಂಬವನ್ನು ಗೌರವಿಸುವ ರೀತಿಯಲ್ಲಿ ಜೊತೆಗಾರರನ್ನು ಹುಡುಕುತ್ತಿದ್ದಾರೆ' ಎಂದು ಮುಜ್ ಸಂಸ್ಥಾಪಕ ಶಹಜಾದ್ ಯೂನಾಸ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಮೇ ತಿಂಗಳಲ್ಲಿ ಉತ್ತರ ಅಮೆರಿಕಾದ ಪ್ರವಾಸದಲ್ಲಿ, ಮುಜ್ ನಾಲ್ಕು ನಗರಗಳಲ್ಲಿ ಡೇಟಿಂಗ್ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿತ್ತು. ಕೆನಡಾದ ಟೊರೊಂಟೊ; ನ್ಯೂಜೆರ್ಸಿ ಸಿಟಿ, ನ್ಯೂ ಯಾರ್ಕ್ ಮತ್ತು ಬಾಲ್ಟಿಮೋರ್‌ನಲ್ಲಿ ಇದರ ಆಯೋಜನೆ ಆಗಿದ್ದರೆ, ಕಳೆದ ತಿಂಗಳು, ಲಂಡನ್ ಮತ್ತು ದುಬೈನಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು.

ಬ್ರೂಕ್ಲಿನ್ ಈವೆಂಟ್ 7 ಗಂಟೆಗೆ ಪ್ರಾರಂಭವಾದಾಗ ಮೊದಲಿಗೆ ಸಾಕಷ್ಟು ಭಿನ್ನಾಭಿಪ್ರಾಯಗಳು ಕಂಡಿದ್ದವು. ಯುವತಿಯುರು ಇತರ ಯುವತಿಯರೊಂದಿಗೆ ಮಾತನಾಡುತ್ತಿದ್ದರೆ, ಯುವಕರು ಅಲ್ಲಿದ್ದ ಇತರ ಯುವಕರೊಂದಿಗೆ ಬೆರೆಯುತ್ತಿದ್ದರು. ನೇರ ಸಿಂಗಲ್ಸ್ ಡೇಟಿಂಗ್ ಈವೆಂಟ್‌ಗೆ ಇದು ಕುತೂಹಲಕಾರಿ ದೃಶ್ಯವಾಗಿತ್ತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 34 ವರ್ಷದ ಫೈನಾನ್ಶಿಯಲ್‌ ಕನ್ಸಲ್ಟೆಂಟ್‌ ಅಲಿ ಫಾಲ್‌, ನಾನು ಇಲ್ಲಿಯವರೆಗೂ ಮುಸ್ಲಿಂ ಹೊರತಾದ ಯುವತಿಯರ ಜೊತೆ ಮಾತ್ರವೇ ಡೇಟ್‌ ಮಾಡಿದ್ದೆ. ನನ್ನ ಹಳೆಯ ಗೆಳತಿಯರಿಗೆ ನನ್ನ ನಂಬಿಕೆಗಳು ಅರ್ಥವಾಗುತ್ತಿರಲಿಲ್ಲ. ಈ ಕಾರ್ಯಕ್ರಮಕ್ಕೆ ಬರುವ ಮುನ್ನ ಯಾವುದೇ ನಿರೀಕ್ಷೆ ಇಟ್ಟಿರಲಿಲ್ಲ. ನಾನು ವಿಧಿಯನ್ನು ನಂಬುತ್ತೇನೆ, ಎಲ್ಲವನ್ನೂ ಈಗಾಗಲೇ ಬರೆದಿಡಲಾಗಿದೆ ಎಂದು ಹೇಳಿದ್ದಾರೆ.

ಟಿಂಡರ್‌ನಲ್ಲಿ ಜೊತೆಯಾದ ಸ್ನೇಹಿತ, 4.5 ಲಕ್ಷ ಕಳೆದುಕೊಂಡ ಬೆಂಗ್ಳೂರು ಯುವತಿ!

ಇನ್ನು ಕಾರ್ಯಕ್ರಮದಲ್ಲಿದ್ದ ಹಲವರು ತಮ್ಮ ಜೊತೆಗಾರರನ್ನು ಕಂಡುಕೊಳ್ಳುವ ವಿಧಾನಸ ಬಗ್ಗೆಯೇ ಹೇಳಿಕೆ ನೀಡುತ್ತಿದ್ದರು.ತಮ್ಮ ಪಾಲಕರು ಅರೇಂಜ್ಡ್‌ ಮ್ಯಾರೇಜ್‌ ಆಗಿದ್ದರೂ, ಇಂದಿನ ಯುವ ಮುಸ್ಲಿಮರು, ತಮ್ಮದೇ ಆದ ನಿರ್ಧಾರ ಹಾಗೂ ನಿರೀಕ್ಷೆಗಳನ್ನು ಹೊಂದಿದ್ದಾರೆ. ಅದರೊಂದಿಗೆ ಡೇಟಿಂಗ್‌ ಸಂಸ್ಕೃತಿ ಕೂಡ ಅಡಕವಾಗಿದೆ.

Body Shaming: ಟಿಂಡರ್‌ನಲ್ಲಿ Fatty ಇದ್ದೀಯಾ, ಜಿಮ್‌ಗೆ ಸೇರ್ಕೊಳ್ಳಮ್ಮಾ ಅಂತನ್ನೋದಾ !

ನ್ಯೂಜೆರ್ಸಿಯ ಹಿಲ್‌ಸೈಡ್‌ನ ಸಹೋದರಿಯರಾದ 25 ವರ್ಷದ ಸಲ್ಮಾಹ್ ಅಹ್ಮದ್, ಮತ್ತು 27 ವರ್ಷದ ಮೊಹಿಬ್ಬಾ ಅಬ್ದುಲ್-ಅಹ್ಮದ್‌ಗೆ ಅವರ ಪೋಷಕರು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಾರೆ. ಹಾಗೂ ಈಗಾಗಲೇ ವರನ ಹುಡುಕಾಟವನ್ನೂ ಆರಂಭ ಮಾಡಿದ್ದಾರೆ. ಇದು ತಮಗೆ ಕಿರಿಕಿರಿ ನೀಡುತ್ತಿದೆ ಎಂದು ಸಹೋದರಿಯರು ನಗುತ್ತಾರೆ. ನಮಗೆ ಬೇಕಾದ ಹುಡಗನನ್ನು ನಾವು ಹುಡುಕಿಕೊಳ್ಳಬೇಕು ಅನ್ನೋದಷ್ಟೇ ತಮ್ಮ ಇಂಗಿತ ಎನ್ನುತ್ಥಾರೆ.