Body Shaming: ಟಿಂಡರ್‌ನಲ್ಲಿ Fatty ಇದ್ದೀಯಾ, ಜಿಮ್‌ಗೆ ಸೇರ್ಕೊಳ್ಳಮ್ಮಾ ಅಂತನ್ನೋದಾ !
ತಂತ್ರಜ್ಞಾನ ಆಧುನೀಕರಣಗೊಳ್ಳುತ್ತಿದ್ದಂತೆಯೇ ಮನುಷ್ಯರ ದೃಷ್ಟಿಕೋನ ಬದಲಾಗಿದೆ. ಯುವಜನರು ಡೇಟಿಂಗ್ ಆಪ್ ಮೂಲಕ ಜೀವನ ಸಂಗಾತಿಯನ್ನು ಹುಡುಕಲಾರಂಭಿಸಿದ್ದಾರೆ. ಆದರೆ ಈ ಡೇಟಿಂಗ್ ಆಪ್‌ನಲ್ಲಿ ಕೆಲವೊಮ್ಮೆ ಅವಾಂತರಗಳೂ ಆಗುತ್ತವೆ. ಅಂಥಹದ್ದೇ ಘಟನೆ ಇಲ್ಲೊಂದೆಡೆ ಆಗಿದ್ದು, ಯುವತಿ ಹುಡುಗಿಯನ್ನು ಸಿಕ್ಕಾಪಟ್ಟೆ ದಪ್ಪ ಇದ್ದೀಯಾ ಎಂದು ಟೀಕಿಸಿದ್ದಾನೆ.
ಸಾಮಾಜಿಕ ಜಾಲತಾಣಗಳ ಅಬ್ಬರದ ಈ ದಿನಗಳಲ್ಲಿ ಜನ ಆನ್‌ಲೈನ್ ಡೇಟಿಂಗ್, ಚಾಟಿಂಗ್, ಫ್ಲರ್ಟಿಂಗ್ ಅದೂ ಇದು ಅಂತ ಕಾಲ ಕಳೀತಾರೆ. ಎಷ್ಟೋ ಮಂದಿ ಇದರಿಂದಲೇ ಉತ್ತಮ ಬಾಳ ಸಂಗಾತಿಗಳನ್ನೂ ಕಂಡುಕೊಂಡಿದ್ದಾರೆ. ಆದರೆ ಅನೇಕ ಬಾರಿ ಜನರು ಇಂಥಾ ಡೇಟಿಂಗ್ ಆಪ್‌ನಲ್ಲಿ ಅವಮಾನವನ್ನು ಸಹ ಅನುಭವಿಸುತ್ತಾರೆ. ಯಾಕೆಂದರೆ ಕೆಲ ಮಂದಿ ಡೇಟಿಂಗ್ ಆಪ್‌ಗಳನ್ನು ಟೈಂ ಪಾಸ್‌ಗಾಗಿ ಉಪಯೋಗಿಸುತ್ತಾರೆ. ಹೀಗಾಗಿಯೇ ಪಾರ್ಟ್‌ನರ್ ಸರ್ಚ್ ಹೆಸರಲ್ಲಿ ಮತ್ತೊಬ್ಬರನ್ನು ಟೀಕಿಸುವುದು, ಅವಮಾನಿಸುವುದನ್ನು ಮಾಡುತ್ತಾರೆ. ಅಂತದ್ದೇ ಒಬ್ಬ ಯುವತಿಯ ಕತೆ ಇಲ್ಲಿದೆ.
ಟಿಂಡರ್ ಆಪ್‌ನಲ್ಲಿ ಬಾಡಿ ಶೇಮಿಂಗ್
ಮನುಷ್ಯನು ಒಬ್ಬರಂತೆಯೇ ಇನ್ನೊಬ್ಬ ಇರಲು ಸಾಧ್ಯವಿಲ್ಲ. ಪ್ರತಿಯೊಬ್ಬರ ದೇಹ (Body), ದೇಹದ ಆಕಾರ ವಿಭಿನ್ನವಾಗಿರುತ್ತದೆ. ಕೆಲವರು ದಪ್ಪ, ಕೆಲವರು ಸಣ್ಣ, ಕೆಲವರು ಉದ್ದ, ಇನ್ನು ಕೆಲವೊಬ್ಬರು ಕುಳ್ಳಗೆ ಇರಬಹುದು. ಹಾಗೆಂದು ಒಬ್ಬರ ದೇಹದ ಆಕಾರವನ್ನು ಟೀಕಿಸುವುದು ಅಥವಾ ಬಾಡಿ ಶೇಮಿಂಗ್ ಮಾಡುವುದು ಸಂಪೂರ್ಣವಾಗಿ ತಪ್ಪು. ಆದರೆ ಇಲ್ಲೊಬ್ಬ ಟಿಂಡರ್ ಮ್ಯಾಚಿಂಗ್ ಆಪ್‌ನಲ್ಲೇ ಮಹಿಳೆ (Woman)ಯನ್ನು ಟೀಕಿಸಿದ್ದಾನೆ. ಮಹಿಳೆಯನ್ನು ಫ್ಯಾಟಿ ಎಂದು ಕರೆದಿದ್ದಾನೆ. UKಯ ಅಪರಿಚಿತ ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ಡೇಟಿಂಗ್ ಮಾಡುವಾಗ ಎದುರಿಸಿದ ಪರಿಸ್ಥಿತಿಯ ಬಗ್ಗೆ ಮಾತನಾಡಲು ಟಿಕ್‌ಟಾಕ್‌ಗೆ ಕರೆದೊಯ್ದರು. ಡೇಟಿಂಗ್ ಆ್ಯಪ್ ಟಿಂಡರ್‌ನಲ್ಲಿ ವ್ಯಕ್ತಿಯೊಬ್ಬ ಹೇಗೆ ತನ್ನನ್ನು ಅವಮಾನಿಸಿದ ಮತ್ತು ಜಿಮ್ ಸದಸ್ಯತ್ವದ ಲಿಂಕ್‌ಗಳನ್ನು ಕಳುಹಿಸಿದ ಎಂಬುದನ್ನು ತಿಳಿಸಿದರು.
ಅಯ್ಯೋ ಕರ್ಮವೇ! ಹುಡುಗಿ ಚೆನಾಗಿದಾಳೆ ಅಂತ ಲೈವ್ ಚಾಟ್‌ಲಿ ಬೆತ್ತಲಾದ, ಪಾಪ ಆಮೇಲಾಗಿದ್ದೇ ಬೇರೆ
ಜಿಮ್ ಸದಸ್ಯತ್ವದ ಲಿಂಕ್ ಕಳುಹಿಸಿಕೊಟ್ಟ ಭೂಪ
ಇತ್ತೀಚಿನ ವರ್ಷಗಳಲ್ಲಿ, ಡೇಟಿಂಗ್ ಆನ್‌ಲೈನ್‌ನಲ್ಲಿ ಸಾಗಿದೆ ಮತ್ತು ಹೆಚ್ಚಿನ ಜನರು ಹಂಚಿಕೊಂಡ ಆಸಕ್ತಿಗಳೊಂದಿಗೆ ಜನರನ್ನು ಭೇಟಿ ಮಾಡಲು ಟಿಂಡರ್ ಮತ್ತು ಬಂಬಲ್‌ನಂತಹ ಅಪ್ಲಿಕೇಶನ್‌ಗಳನ್ನು ಅವಲಂಬಿಸಿದ್ದಾರೆ. ಆದರೂ, ಆನ್‌ಲೈನ್‌ನಲ್ಲಿ ಡೇಟಿಂಗ್ ಮಾಡುವುದು ಕೆಲವೊಮ್ಮೆ ತುಂಬಾ ಕಷ್ಟಕರವಾಗಿದೆ. ಏಕೆಂದರೆ ಜನರು ಅನಾಮಧೇಯ ಗುರುತುಗಳ ಅಡಿಯಲ್ಲಿ ಬೇಕಾಬಿಟ್ಟಿ ಕಮೆಂಟ್ ಮಾಡಿಬಿಡುತ್ತಾರೆ. ಮಹಿಳೆಯ ಜೊತೆ ಆರಂಭದಲ್ಲಿ ಚೆನ್ನಾಗಿಯೇ ಮಾತನಾಡಿದ ವ್ಯಕ್ತಿ ನಂತರ ನೀನು ಸಿಕ್ಕಾಪಟ್ಟೆ ದಪ್ಪಗಿದ್ದೀಯಾ (Fatty) ಎಂದಿದ್ದಾನೆ. ಮಾತ್ರವಲ್ಲ ವರ್ಕ್‌ಔಟ್ ಮಾಡುವಂತೆ ಸೂಚಿಸಿ ಆಕೆಗೆ ಜಿಮ್ ಸದಸ್ಯತ್ವದ ಲಿಂಕ್‌ಗಳನ್ನು ಕಳುಹಿಸಿಕೊಟ್ಟಿದ್ದಾನೆ.
ಪಾರ್ಟ್‌ನರ್ ಸರ್ಚ್ ಮಾಡುತ್ತಿದ್ದ ಮಹಿಳೆ ಕಕ್ಕಾಬಿಕ್ಕಿ
ಜಿಮ್ ಸದಸ್ಯತ್ವಕ್ಕಾಗಿ ತನ್ನ ಲಿಂಕ್ ಅನ್ನು ಕಳುಹಿಸುವುದರೊಂದಿಗೆ ದೇಹದ ಶೇಮಿಂಗ್ ಪ್ರಾರಂಭವಾಯಿತು ಎಂದು ಮಹಿಳೆ ಹೇಳಿದರು. ಮೊದಲಿಗೆ, ಅವಳು ಅದನ್ನು ನಕಾರಾತ್ಮಕವಾಗಿ (Negative) ನೋಡಲಿಲ್ಲ. ಜಿಮ್‌ನ ಹಲವಾರು ಚಿತ್ರಗಳನ್ನು ಪೋಸ್ಟ್ ಮಾಡಿದ ವ್ಯಕ್ತಿಯ ಕ್ರಮವನ್ನು ಮಹಿಳೆ ತನ್ನೊಂದಿಗೆ ಸಂಪರ್ಕ (Connection) ಸಾಧಿಸುವ ಮಾರ್ಗವೆಂದು ಭಾವಿಸಿದಳು. ಆದರೆ ವ್ಯಕ್ತಿಯು ಪದೇ ಪದೇ ಆಕೆಯ ದೇಹದ ಬಗ್ಗೆ ಮಾತನಾಡಿದ್ದು ಆಕೆಯನ್ನು ಸಿಟ್ಟಿಗೆಬ್ಬಿಸಿತು. ನಿಮ್ಮ ಸದಸ್ಯತ್ವದ (Membership) ಮೇಲೆ ಶೇಕಡಾ 10ರಷ್ಟು ರಿಯಾಯಿತಿಗಾಗಿ 'ಫ್ಯಾಟಿ' ಕೋಡ್ ಅನ್ನು ನಮೂದಿಸಿ" ಎಂದು ವ್ಯಕ್ತಿ ಸಂದೇಶ ಕಳುಹಿಸಿದ್ದಾನೆ. ಇದರಿಂದ ಮಹಿಳೆ ಸಿಟ್ಟಿಗೆದ್ದಿದ್ದಾಳೆ.
ಒಬ್ಬಾಕೆಗೆ 16 ಯುವಕರ ಮೇಲೆ ಪ್ರೀತಿ, ಎಲ್ಲರಿಗೂ ಮದುವೆಯಾಗುವ ಮಾತು ಕೊಟ್ಟು ಮೋಸ!
ಮಹಿಳೆ ತಕ್ಷಣ 'ಅವಮಾನಿಸಲು ಸಂದೇಶ ಕಳುಹಿಸುತ್ತಿದ್ದೀಯಾ' ಎಂದು ಕೇಳಿದ್ದಾಳೆ. ಮಹಿಳೆಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ವ್ಯಕ್ತಿ, 'ನಾನು ನಿಮ್ಮನ್ನು ಪ್ರೇರೇಪಿಸುತ್ತಿದ್ದೇನೆ, ಒಂದು ದಿನ, ನೀವು ನನಗೆ ಧನ್ಯವಾದ ಹೇಳುತ್ತೀರಿ' ಎಂದು ಹೇಳಿಕೆ ನೀಡಿದ್ದಾನೆ. ಮಹಿಳೆ ಸಂಭಾಷಣೆಯ ಸ್ಕ್ರೀನ್‌ಶಾಟ್‌ಗಳನ್ನು ಟಿಕ್‌ಟಾಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿದ್ದಕ್ಕಾಗಿ ಅನೇಕರು ಅವಳನ್ನು ಶ್ಲಾಘಿಸಿದ್ದಾರೆ.