ಟಿಂಡರ್‌ನಲ್ಲಿ ಜೊತೆಯಾದ ಸ್ನೇಹಿತ, 4.5 ಲಕ್ಷ ಕಳೆದುಕೊಂಡ ಬೆಂಗ್ಳೂರು ಯುವತಿ!

ಆನ್‌ಲೈನ್‌ನಲ್ಲಿ ಹಣ ಕಳೆದುಕೊಳ್ಳುವ ಸುದ್ದಿ ಪ್ರತಿನಿತ್ಯ ಎನ್ನುವಂತೆ ವರದಿಯಾಗುತ್ತಲೇ ಇರುತ್ತದೆ. ಹಾಗಿದ್ದರೂ, ಆನ್‌ಲೈನ್‌ನಲ್ಲಿ ದುಡ್ಡು ಕಳೆದುಕೊಳ್ಳುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಇತ್ತೀಚೆಗೆ ಬೆಂಗಳೂರಿನ ಯುವತಿಯೊಬ್ಬಳು ಟಿಂಡರ್‌ ಸ್ನೇಹಿತನಿಂದ 4.5 ಲಕ್ಷ ರೂಪಾಯಿ ವಂಚನೆಗೆ ಒಳಗಾಗಿದ್ದಾಳೆ.
 

Bengaluru  woman loses some lakh her Tinder match turns out to be a scammer san

ಬೆಂಗಳೂರು (ಮೇ. 30): ಭಾರತದಲ್ಲಿ ಆನ್‌ಲೈನ್‌ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದರ ಬೆನ್ನಲ್ಲಿಯೇ ಇತ್ತೀಚೆಗೆ ಕೇಂದ್ರ ಸರ್ಕಾರ ಕೂಡ ಮೋಸದ ಚಟುವಟಿಕೆಯ ಭಾಗವಾಗಿರುವ ಖಾತೆಗಳನ್ನು ನಿರ್ಬಂಧ ಮಾಡುವಂತೆ ಪ್ರಖ್ಯಾತ ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿರುವ ವ್ಯಾಟ್ಸ್‌ಆಪ್‌ಗೆ ಮನವಿ ಮಾಡಿದೆ. ಆದರೆ, ಆನ್‌ಲೈನ್‌ ವಂಚನೆ ಪ್ರಕರಣಗಳು ಕೇವಲ ವ್ಯಾಟ್ಸ್‌ಆಪ್‌ಗೆ ಮಾತ್ರವೇ ಸೀಮಿತವಾಗಿಲ್ಲ. ಏಕೆಂದರೆ, ಆನ್‌ಲೈನ್‌ ಡೇಟಿಂಗ್‌ ಅಪ್ಲಿಕೇಶನ್‌ಗಳ ಮೂಲಕವೂ ವಂಚಕರು ಜನರು ಕಷ್ಟಪಟ್ಟು ದುಡಿದ ಹಣವನ್ನು ದೋಚುವ ಪ್ರಯತ್ನ ಮಾಡುತ್ತಿದ್ದಾರೆ. ಇದೇ ರೀತಿಯ ಘಟನೆ ಈಗ ಟಿಂಡರ್‌ ಅಪ್ಲಿಕೇಶನ್‌ಗಲ್ಲಿ ವರದಿಯಾಗಿದೆ. ಬೆಂಗಳೂರು ಮೂಲದ ಯುವತಿಯೊಬ್ಬಳು ಟಿಂಡರ್‌ ಅಪ್ಲಿಕೇಶನ್‌ ಮೂಲಕ ನಿಜವಾದ ಪ್ರೀತಿಯನ್ನು ಕಂಡುಕೊಂಡಿದ್ದೇನೆ ಎನ್ನುನ ಖುಷಿಯಲ್ಲಿದ್ದಳು. ಆದರೆ, ನೋಡನೋಡುತ್ತಿದ್ದಂತೆ ಆಕೆ 4.5 ಲಕ್ಷ ರೂಪಾಯಿಗಳ ವಂಚನೆ ಎದುರಿಸಿದ್ದಾಳೆ. ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ 37 ವರ್ಷದ ಮಹಿಳೆಯೊಬ್ಬರು ತಮ್ಮ ಟಿಂಡರ್ ಗೆಳಯನಿಂದ 4.5 ಲಕ್ಷ ರೂಪಾಯಿಗಳನ್ನು ವಂಚನೆ ಎದುರಿಸಿದ್ದೇನೆ ಎಂದು ಆರೋಪ ಮಾಡಿದ್ದಾರೆ. ಈ ಹಣವನ್ನು ವಾಪಾಸ್‌ ಕೊಡಿಸುವಂತೆ ಯುವತಿ, ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾಳೆ.

ಡೇಟಿಂಗ್ ಅಪ್ಲಿಕೇಶನ್‌ ಟಿಂಡರ್‌ನಲ್ಲಿ ಮಹಿಳೆ ಅದ್ವಿಕ್ ಚೋಪ್ರಾ ಎಂಬ ವ್ಯಕ್ತಿಯ ಭೇಟಿಯಾಗಿತ್ತು. ಲಂಡನ್‌ನಲ್ಲಿ ವೈದ್ಯಕೀಯ ಅಭ್ಯಾಸ ಮಾಡುತ್ತಿರುವುದಾಗಿ ಆದ್ವಿಕ್‌ ಚೋಪ್ರಾ ಹೇಳಿದ್ದರು. ಈತನೊಂದಿಗೆ ಮಾತುಕತೆ ಆರಂಭ ಮಾಡಿದ ಒಂದು ತಿಂಗಳ ಒಳಗಾಗಿ ಆತನ ಮಾತುಗಳನ್ನು ನಂಬಲು ಆರಂಭಿಸಿದ್ದಲ್ಲದೆ, ಪ್ರೀತಿಸಲು ಶುರು ಮಾಡಿದ್ದೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.

ಮಾತುಕತೆ ನಡೆಸುತ್ತಿರುವಾಗಲೇ ಒಂದು ದಿನ ಆದ್ವಿಕ್‌ ಚೋಪ್ರಾ, ತನ್ನನ್ನು ಭೇಟಿಯಾಗಲು ಬೆಂಗಳೂರಿಗೆ ಖುದ್ದಾಗಿ ಬರುವುದಾಗಿ ತಿಳಿಸಿದ್ದ. ಆದರೆ, ಮೇ 17 ರಂದು ಮಹಿಳೆಗೆ ಅಪರಇಚಿತ ಸಂಖ್ಯೆಯಿಂದ ಒಂದು ಕರೆ ಬಂದಿತ್ತು. ಕರೆಯ ಇನ್ನೊಂದು ತುದಿಯಲ್ಲಿದ್ದ ವ್ಯಕ್ತಿ ತಾನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಧಿಕಾರಿ ಎಂದು ಹೇಳಿಕೊಂಡಿದ್ದಾನೆ ಮತ್ತು ಚೋಪ್ರಾ ಲೆಕ್ಕವಿಲ್ಲದ ಹಣದೊಂದಿಗೆ ಸಿಕ್ಕಿಬಿದ್ದಿದ್ದಾನೆ ಎಂದು ಮಹಿಳೆಗೆ ತಿಳಿಸಿದ್ದಾರೆ. ಚೋಪ್ರಾ ಬೆಂಗಳೂರಿಗೆ ತೆರಳಲು 68,500 ರೂ.ಗಳನ್ನು ವರ್ಗಾಯಿಸುವಂತೆ ಪುರುಷ ಮಹಿಳೆಗೆ ಒತ್ತಾಯಿಸಿದ್ದಾನೆ. 1.8 ಲಕ್ಷ ರೂಪಾಯಿಯನ್ನು ಶುಲ್ಕದ ರೂಪದಲ್ಲಿ ಹಾಗೂ 2.06 ಲಕ್ಷ ರೂಪಾಯಿಯನ್ನು ಪ್ರೊಸೆಸಿಂಗ್‌ ಫೀಯಾಗಿ ನೀಡಬೇಕು ಎಂದು ಆತ ಹೇಳಿದ್ದ.

ತಾನು ಪ್ರೀತಿಸುತ್ತಿದ್ದ ವ್ಯಕ್ತಿ ಬೆಂಗಳೂರಿಗೆ ಬಂದು ನನ್ನನ್ನು ನೋಡಬೇಕು ಎಂದು ಬಯಸಿದ್ದರಿಂದ, ಅಪರಿಚಿತ ನಂಬರ್‌ನಿಂದ ಕರೆ ಮಾಡಿದ ವ್ಯಕ್ತಿಯ ಮಾತನ್ನು ನಂಬಿದ ಮಹಿಳೆ, ಹಣವನ್ನು ವರ್ಗಾವಣೆ ಮಾಡಿದ್ದಾಳೆ.  ಆದರೆ ಆತ,  ಹೆಚ್ಚುವರಿ 6 ಲಕ್ಷ ರೂ.ಗೆ ಬೇಡಿಕೆ ಇಟ್ಟಾಗ, ಮಹಿಳೆ ಏನೋ ನಡೆಯುತ್ತಿದೆ ಎಂದು ಭಾವಿಸಿ ವಿಮಾನ ನಿಲ್ದಾಣದ ಅಧಿಕಾರಿ ಎಂದು ಹೇಳಲಾದ ವ್ಯಕ್ತಿಗೆ ಫೋನ್‌ನಲ್ಲಿ ಕೆಲ ಪ್ರಶ್ನೆಗಳನ್ನು ಮಾಡಿದ್ದಾಳೆ. ಪ್ರಶ್ನೆಗಳು ಬರಲು ಆರಂಭವಾಗುತ್ತಿದ್ದಂತೆ ಫೋನ್‌ ಕರೆ ಕಟ್‌ ಆಗಿದೆ. ಇನ್ನು ಆಕೆಯ ಪ್ರೀತಿ ಮಾಡುತ್ತಿದ್ದ ಆದ್ವಿಕ್‌ ಚೋಪ್ರಾನನ್ನು ಸಂಪರ್ಕಿಸುವ ಮಾರ್ಗ ಕೂಡ ಬಂದ್‌ ಆಗಿದೆ. ಆತನ ಟಿಂಡರ್‌ ಪ್ರೊಫೈಲ್‌ ಕೂಡ ಡಿಲೀಟ್‌ ಆಗಿದೆ.

ಆ ನಂತರವೇ ಆದ್ವಿಕ್‌ ಚೋಪ್ರಾ ಎನ್ನುವ ವ್ಯಕ್ತಿಯೇ ನಕಲಿ ಎನ್ನುವುದು ಮಹಿಳೆಗೆ ಗೊತ್ತಾಗಿದೆ. ಇಡೀ ವಿಮಾನ ನಿಲ್ದಾಣದ ಸನ್ನಿವೇಶವನ್ನು ನಕಲಿಯಾಗಿ ಸೃಷ್ಟಿ ಮಾಡಲಾಗಿತ್ತು.ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಧಿಕಾರಿ ಎಂದು ಹೇಳಿಕೊಳ್ಳುವ ವ್ಯಕ್ತಿ ಕೂಡ ವಂಚಕನಾಗಿದ್ದು, ಯಾವೊಬ್ಬ ಅಧಿಕಾರಿಯೂ ಮಹಿಳೆಯನ್ನು ಸಂಪರ್ಕಿಸಿಲ್ಲ.

Body Shaming: ಟಿಂಡರ್‌ನಲ್ಲಿ Fatty ಇದ್ದೀಯಾ, ಜಿಮ್‌ಗೆ ಸೇರ್ಕೊಳ್ಳಮ್ಮಾ ಅಂತನ್ನೋದಾ !

"ನನ್ನನ್ನು ನೋಡಲು ಚೋಪ್ರಾ ಲಂಡನ್‌ನಿಂದ ಪ್ರಯಾಣ ಮಾಡಿದ್ದಾನೆ ಎನ್ನುವುದು ನನಗೆ ಗೊತ್ತಾದ ಬಳಿಕ, ಆತ ವಿಮಾನ ನಿಲ್ದಾಣದಲ್ಲಿ ಎದುರಿಸುತ್ತಿರುವ ತೊಂದರೆಗಳ ಬಗ್ಗೆ ನಾನು ತೀವ್ರವಾಗಿ ದುಃಖಿತನಾಗಿದ್ದೆ ಮತ್ತು ಆತಂಕಕ್ಕೊಳಗಾಗಿದ್ದೆ. ಈ ಹಂತದಲ್ಲಿ ವಿಮಾನನಿಲ್ದಾಣದ ಅಧಿಕಾರಿ ಎಂದು ಕರೆ ಮಾಡಿದ ವ್ಯಕ್ತಿ ಹೇಳಿದ ಮಾತನ್ನು ನಂಬುವಂತೆ ಮಾಡಿದೆ. ಈ ಹಂತದಲ್ಲಿ ಆದ್ವಿಕ್‌ ಚೋಪ್ರಾಗೆ ಯಾವುದೇ ಸಮಸ್ಯೆ ಆಗಬಾರದು. ಆದಷ್ಟು ಬೇಗ ಅತ ಬೆಂಗಳೂರಿಗೆ ಬರಬೇಕು ಎನ್ನುವುದಷ್ಟೇ ನನ್ನ ಆಸೆಯಾಗಿತ್ತು. ಹಾಗಾಗಿ ಏನನ್ನೂ ಯೋಚನೆ ಮಾಡದೇ ಹಣವನ್ನು ಪಾವತಿ ಮಾಡಿದ್ದೆ' ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.

Meesho ಆ್ಯಪ್ ನಲ್ಲಿ ಒಂದು ಟೀ ಶರ್ಟ್ ಬುಕ್ ಮಾಡಿ 10 ಲಕ್ಷ ಕಳೆದುಕೊಂಡ ಮಹಿಳೆ!

Latest Videos
Follow Us:
Download App:
  • android
  • ios