ಸ್ವಿಗ್ಗಿಯಲ್ಲಿ ಜನರು ಹೆಚ್ಚು ಆರ್ಡರ್ ಮಾಡಿರೋದು ಆಹಾರವನ್ನಲ್ಲ, ಇದನ್ನಂತೆ !
ಆನ್‌ಲೈನ್ ಫ್ಲಾಟ್‌ಫಾರ್ಮ್‌ಗಳು ಶುರುವಾದ ಮನುಷ್ಯನ ಜೀವನ ಸುಲಭವಾಗಿದೆ. ಆರ್ಡರ್ ಮಾಡಿದ ಕೆಲವೇ ನಿಮಿಷಗಳಲ್ಲಿ ವಸ್ತುಗಳು ಮನೆ ಮುಂದಿರುತ್ತವೆ. ಆನ್‌ಲೈನ್ ಸೈಟ್‌ಗಳಲ್ಲಿ ಜನರು ಹೆಚ್ಚಾಗಿ ಫುಡ್ ಆರ್ಡರ್ ಮಾಡಿರೋದನ್ನು ನಾವು ಗಮನಿಸಿದ್ದೇವೆ. ಆದ್ರೆ ಸರ್ವೇಯೊಂದರ ಪ್ರಕಾರ ಆನ್‌ಲೈನ್‌ನಲ್ಲಿ ಜನರು ಅತಿ ಹೆಚ್ಚು ಆರ್ಡರ್ ಮಾಡಿರೋ ಆಹಾರವಲ್ಲ, ಕಾಂಡೋಮ್ ಅಂತೆ.
ಮುಂಬೈ: ಜನಪ್ರಿಯ ತ್ವರಿತ ವಿತರಣಾ ಅಪ್ಲಿಕೇಶನ್ ಸ್ವಿಗ್ಗಿ ನಡೆಸಿದ ಸಮೀಕ್ಷೆಯ ಪ್ರಕಾರ, ತಮ್ಮ ದಿನಸಿ ಡೆಲಿವರಿ ಪ್ಲಾಟ್‌ಫಾರ್ಮ್ ಇನ್‌ಸ್ಟಾಮಾರ್ಟ್‌ನಲ್ಲಿನ ಆರ್ಡರ್‌ಗಳು ಕಳೆದ ವರ್ಷದಲ್ಲಿ 16 ಪಟ್ಟು ಹೆಚ್ಚಾಗಿದೆ. ವರದಿಗಳ ಪ್ರಕಾರ ಬೆಂಗಳೂರು, ಮುಂಬೈ, ಹೈದರಾಬಾದ್, ದೆಹಲಿ ಮತ್ತು ಚೆನ್ನೈ ಸೇರಿದಂತೆ ಮೆಟ್ರೋ ನಗರಗಳಲ್ಲಿ ವಾಸಿಸುವ ಜನರು ಇನ್‌ಸ್ಟಾಮಾರ್ಟ್ ಅನ್ನು ಹೆಚ್ಚು ಬಳಸುತ್ತಾರೆ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ. ಆದರೆ ಅಚ್ಚರಿಪಡುವ ವಿಚಾರವೆಂದರೆ ಆನ್‌ಲೈನ್ ಫ್ಲಾಟ್‌ಫಾರ್ಮ್ ಬಳಸಿ ಜನರು ಹೆಚ್ಚು ಆರ್ಡರ್ ಮಾಡಿರೋದು ಆಹಾರ, ದಿನಸಿ, ಡ್ರೆಸ್ ಇದ್ಯಾವುದನ್ನೂ ಅಲ್ಲ. ಬದಲಿಗೆ ಕಾಂಡೋಮ್ ಆರ್ಡರ್ ಮಾಡಲು ಆನ್‌ಲೈನ್ ಫ್ಲಾಟ್‌ಫಾರ್ಮ್ ಅನ್ನು ಹೆಚ್ಚು ಬಳಸುತ್ತಾರೆ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ.
12 ತಿಂಗಳಲ್ಲಿ ಹಿಂದಿನ ವರ್ಷಕ್ಕಿಂತ 570 ಪಟ್ಟು ಹೆಚ್ಚು ಕಾಂಡೋಮ್ ಆರ್ಡರ್
ಮುಂಬೈನ ಬಳಕೆದಾರರು "ಕಳೆದ 12 ತಿಂಗಳಲ್ಲಿ ಹಿಂದಿನ ವರ್ಷಕ್ಕಿಂತ 570 ಪಟ್ಟು ಹೆಚ್ಚು ಕಾಂಡೋಮ್‌ಗಳನ್ನು ಆರ್ಡರ್ ಮಾಡಿದ್ದಾರೆ ಎಂದು ಸಮೀಕ್ಷೆಯು (Survey) ಬಹಿರಂಗಪಡಿಸಿದೆ. ಗಮನಾರ್ಹವಾಗಿ, ಬೆಂಗಳೂರು, ಮುಂಬೈ, ಹೈದರಾಬಾದ್, ದೆಹಲಿ ಮತ್ತು ಚೆನ್ನೈ ಸ್ಯಾನಿಟರಿ ನ್ಯಾಪ್‌ಕಿನ್‌ಗಳು, ಮುಟ್ಟಿನ ಕಪ್‌ಗಳು ಮತ್ತು ಟ್ಯಾಂಪೂನ್‌ಗಳು (2021 ರಲ್ಲಿ ಆರ್ಡರ್ ಮಾಡಿದ ಸುಮಾರು 2 ಮಿಲಿಯನ್ ಯೂನಿಟ್‌ಗಳು) ಮತ್ತು ಬ್ಯಾಂಡ್-ಏಡ್ಸ್ (ಕಳೆದ ವರ್ಷದಲ್ಲಿ ಸುಮಾರು 45,000 ಬಾಕ್ಸ್‌ಗಳ ಆರ್ಡರ್) ನಂತಹ ಸಂಕಷ್ಟದ ವಸ್ತುಗಳಿಗೆ ಗರಿಷ್ಠ ಆರ್ಡರ್‌ಗಳನ್ನು ಕಂಡಿವೆ.
ಮಕ್ಕಳಿಗಾಗಿ ಸ್ವಿಗ್ಗಿಯಿಂದ ಐಸ್‌ಕ್ರೀಮ್ ಚಿಪ್ಸ್ ಆರ್ಡರ್, ಆದರೆ ಸಿಕ್ಕಿದ್ದು 2 ಪ್ಯಾಕ್ ಕಾಂಡೋಮ್!
ಐಸ್‌ಕ್ರೀಮ್‌ಗೂ ಸ್ವಿಗ್ಗೀ ಇನ್‌ಸ್ಟಾಮಾರ್ಟ್‌ನಲ್ಲಿ ಡಿಮ್ಯಾಂಡ್
ಕಳೆದ ವರ್ಷ ಏಪ್ರಿಲ್‌ನಿಂದ ಜೂನ್‌ವರೆಗೆ ಐಸ್‌ಕ್ರೀಮ್‌ನ ಬೇಡಿಕೆಯು ಶೇಕಡಾ 42 ರಷ್ಟು ಏರಿಕೆಯಾಗಿದೆ. ಹೆಚ್ಚಿನ ಆರ್ಡರ್‌ಗಳನ್ನು ರಾತ್ರಿ (Night) 10 ಗಂಟೆಯ ನಂತರ ಮಾಡಲಾಗಿದೆ ಎಂಬ ವಿಚಾರ ಸರ್ವೇಯಲ್ಲಿ ಬಹಿರಂಗಪಡಿಸಿದೆ. ಅದಾದ ನಂತರ 5.6 ಮಿಲಿಯನ್ ಪ್ಯಾಕೆಟ್‌ಗಳ ತ್ವರಿತ ನೂಡಲ್ಸ್ ಅನ್ನು ಆರ್ಡರ್ ಮಾಡಲಾಗಿದೆ. ಹೈದರಾಬಾದಿನ ನಿವಾಸಿಗಳು ಬೇಸಿಗೆ (Summer)ಯಲ್ಲಿ ಸುಮಾರು 27,000 ತಾಜಾ ಜ್ಯೂಸ್ ಬಾಟಲಿಗಳನ್ನು ಆರ್ಡರ್ ಮಾಡಿದ್ದಾರೆ. ಮೊಟ್ಟೆ (Egg)ಗಳಿಗೆ 50 ಮಿಲಿಯನ್ ಆರ್ಡರ್‌ಗಳು ಬಂದಿವೆ. ಬೆಂಗಳೂರು, ದೆಹಲಿ ಮತ್ತು ಮುಂಬೈ ಸೇರಿದಂತೆ ನಗರಗಳು ಕಳೆದ ವರ್ಷದಲ್ಲಿ ಸರಾಸರಿ 6 ಮಿಲಿಯನ್ ಮೊಟ್ಟೆ ಆರ್ಡರ್ ಮಾಡಲಾಗಿದೆ.
ಸಾವಯವ ಉತ್ಪನ್ನ ಖರೀದಿದಾರರ ಪಟ್ಟಿಯಲ್ಲಿ ಬೆಂಗಳೂರಿಗೆ ಅಗ್ರಸ್ಥಾನ
ಹಾಲಿಗೆ 30 ಮಿಲಿಯನ್ ಆರ್ಡರ್‌ಗಳು ಬಂದಿದ್ದು, ಬೆಂಗಳೂರು ಮತ್ತು ಮುಂಬೈ ಬೆಳಗಿನ ಆರ್ಡರ್‌ಗಳಲ್ಲಿ ಪ್ರಮುಖವಾಗಿವೆ. ಸೋಯಾ ಮತ್ತು ಓಟ್ ಹಾಲು ಸೇರಿದಂತೆ ಹೆಚ್ಚಿನ ಸಂಖ್ಯೆಯ ಡೈರಿ ಅಲ್ಲದ ಹಾಲು (Milk)ಗಳನ್ನು ಬೆಂಗಳೂರು ಆರ್ಡರ್ ಮಾಡಿದೆ. ಬೆಂಗಳೂರು, ಮುಂಬೈ ಮತ್ತು ದೆಹಲಿಯಂತಹ ನಗರಗಳಲ್ಲಿ ಊಟದ ಸಮಯದಲ್ಲಿ ಹೆಚ್ಚಾಗಿ ಪೋಹಾ ಮತ್ತು ಉಪ್ಮಾವನ್ನು ರೆಡಿ-ಟು-ಈಟ್ ರೂಪದಲ್ಲಿ ಆರ್ಡರ್ ಮಾಡಲಾಗಿದೆ. ಕಳೆದ ವರ್ಷದಲ್ಲಿ 62,000 ಟನ್ ಹಣ್ಣುಗಳು ಮತ್ತು ತರಕಾರಿ (Vegetables) ಗಳನ್ನು ಆರ್ಡರ್ ಮಾಡಲಾಗಿದೆ.
ಗೋಬಿಯಲ್ಲಿ ಚಿಕನ್ ಪೀಸ್: ಸ್ವಿಗ್ವಿ ವಿರುದ್ಧ ಆಕ್ರೋಶ ಹೊರ ಹಾಕಿದ ಸಂಗೀತಗಾರ
12000 ಆರ್ಡರ್‌ಗಳೊಂದಿಗೆ ಬೆಂಗಳೂರು ಸಾವಯವ ಉತ್ಪನ್ನ ಖರೀದಿದಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಹೈದರಾಬಾದ್ ಮತ್ತು ಬೆಂಗಳೂರು ಸೇರಿ 12 ತಿಂಗಳಲ್ಲಿ 290 ಟನ್‌ಗಳಷ್ಟು ಹಸಿರು ಮೆಣಸಿನಕಾಯಿಯನ್ನು (Chillies) ಆರ್ಡರ್ ಮಾಡಿದೆ ಎಂದು ಸಮೀಕ್ಷೆ ತಿಳಿಸಿದೆ. ಕಳೆದ ವರ್ಷದಲ್ಲಿ ಬಾತ್ರೂಮ್ ಕ್ಲೀನರ್ಗಳು, ಸ್ಕ್ರಬ್ ಪ್ಯಾಡ್‌ಗಳು ಮತ್ತು ಡ್ರೈನ್ ಕ್ಲೀನರ್‌ಗಳಿಗಾಗಿ 2 ಲಕ್ಷಕ್ಕೂ ಹೆಚ್ಚು ಆರ್ಡರ್‌ಗಳನ್ನು ಮಾಡಲಾಗಿದೆ ಎಂದು ತಿಳಿದುಬಂದಿದೆ.