ಮಕ್ಕಳಿಗಾಗಿ ಸ್ವಿಗ್ಗಿಯಿಂದ ಐಸ್‌ಕ್ರೀಮ್ ಚಿಪ್ಸ್ ಆರ್ಡರ್, ಆದರೆ ಸಿಕ್ಕಿದ್ದು 2 ಪ್ಯಾಕ್ ಕಾಂಡೋಮ್!
ಆನ್‌ಲೈನ್ ಆರ್ಡರ್ ವೇಳೆ ಆದ ಹಲವು ಎಡವಟ್ಟುಗಳು ಭಾರಿ ಸದ್ದು ಮಾಡಿದೆ. ಇದೀಗ ಈ ಸಾಲಿಗೆ ಮತ್ತೊಂದು ಘಟನೆ ಸೇರಿಕೊಂಡಿದೆ. ಮಕ್ಕಳಿಗಾಗಿ ವ್ಯಕ್ತಿಯೊಬ್ಬರು ಸ್ವಿಗ್ಗಿ ಮೂಲಕ ಐಸ್‌ಕ್ರೀಮ್ ಆರ್ಡರ್ ಮಾಡಿದ್ದಾರೆ. ಆದರೆ ಬಂದಿದ್ದು ಮಾತ್ರ 2 ಪ್ಯಾಕ್ ಕಾಂಡೋಮ್.
ನವದೆಹಲಿ(ಆ.29): ಸಸ್ಯಾಹಾರ ಆರ್ಡರ್ ಮಾಡಿ ನಾನ್ ವೆಜ್ ಸ್ವೀಕರಿಸಿದ ಘಟನೆ, ಆರ್ಡರ್ ಮಾಡಿದ್ದು ಫೋನ್ ಸಿಕ್ಕಿದ್ದು ಸೋಪ್. ಹೀಗೆ ಆನ್‌ಲೈನ್ ಆರ್ಡರ್‌ನಲ್ಲಿ ಆಗುವ ಕೆಲ ಎಡವಟ್ಟುಗಳು ಭಾರಿ ಸುದ್ದಿಯಾಗಿದೆ. ಹಲವು ಸಂದರ್ಭದಲ್ಲಿ ಆನ್‌ಲೈನ್ ಆರ್ಡರ್ ಟ್ರೋಲ್ ಆದರೆ, ಮತ್ತೆ ಕೆಲವು ಸಂದರ್ಭಗಳಲ್ಲಿ ಆಕ್ರೋಶಕ್ಕೆ ತುತ್ತಾಗಿದೆ. ಇದೀಗ ಆನ್‌ಲೈನ್ ಆರ್ಡರ್ ಮಾಡಿ ಮಕ್ಕಳ ಮುಂದೆ ತಂದೆ ಫಜೀತಿಗೆ ಸಿಲುಕಿದ ಘಟನೆ ನಡೆದಿದೆ. ಮಕ್ಕಳಿಗಾಗಿ ಸ್ವಿಗ್ಗಿ ಮೂಲಕ ಐಸ್ ಕ್ರೀಮ್ ಹಾಗೂ ಚಿಪ್ಸ್ ಆರ್ಡರ್ ಮಾಡಿದ್ದಾರೆ. ಇಷ್ಟೇ ಅಲ್ಲ ಮಕ್ಕಳಿಗೆ ಸ್ವಲ್ಪ ಹೊತ್ತು ಕಾಯಿರಿ ಐಸ್‌ಕ್ರೀಮ್ ಬರಲಿದೆ ಎಂದು ತಂದೆ ಸಮಾಧಾನ ಪಡಿಸಿದ್ದಾರೆ. ಕೆಲ ಹೊತ್ತಲ್ಲಿ ಆರ್ಡರ್ ಮನೆಗೆ ಬಂದಿದೆ. ಮಕ್ಕಳನ್ನು ಕೂರಿಸಿಕೊಂಡು ಪಾರ್ಸೆಲ್ ತೆರೆದ ತಂದೆಗೆ ಮಾತೇ ಬಂದಿಲ್ಲ. ಇತ್ತ ಮಕ್ಕಳ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ. ಕಾರಣ ಐಸ್‌ಕ್ರೀಮ್ ಬದಲು ಎರಡು ಪ್ಯಾಕ್ ಕಾಂಡೋಮ್ ಬಂದಿದೆ ಎಂದು ವ್ಯಕ್ತಿಯೊಬ್ಬರು ಟ್ವಿಟರ್ ಮೂಲಕ ಆರೋಪ ಮಾಡಿದ್ದಾರೆ.
ಪೆರಿಸ್ವಾಮಿ ಅನ್ನೋ ವ್ಯಕ್ತಿ ತನ್ನ ಇಬ್ಬರು ಮಕ್ಕಳಿಗೆ ಸ್ವಿಗ್ಗಿಯಲ್ಲಿ ಎರಡು ಐಸ್‌ಕ್ರೀಮ್ ಹಾಗೂ ಚಿಪ್ಸ್ ಆರ್ಡರ್ ಮಾಡಿದ್ದಾರೆ. ಮಕ್ಕಳ ಸಲಹೆ, ಆಯ್ಕೆಯನ್ನು ಪರಿಗಣಿಸಿ ಎರಡು ಐಸ್‌ಕ್ರೀಮ್ ಆರ್ಡರ್ ಮಾಡಿದ್ದಾರೆ. ಆದರೆ ಎರಡು ಐಸ್‌ಕ್ರೀಮ್ ಬದಲು ಎರಡು ಕಾಂಡೋಮ್ ಪ್ಯಾಕ್ ಡೆಲಿವರಿ ಆಗಿದೆ. ಈ ಕುರಿತು ಪೆರಿಸ್ವಾಮಿ ಸ್ವಿಗ್ಗಿ ಬಿಲ್ ಸೇರಿದಂತೆ ಎಲ್ಲಾ ಫೋಟೋ ತೆಗೆದು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ತಕ್ಷಣವೇ ಸ್ವಿಗ್ಗಿ ಗ್ರಾಹಕನಿಗೆ ಕರೆ ಮಾಡಿ ಸಮಸ್ಯೆಯನ್ನು ಬಗೆ ಹರಿಸಿದೆ.
ಗೋಬಿಯಲ್ಲಿ ಚಿಕನ್ ಪೀಸ್: ಸ್ವಿಗ್ವಿ ವಿರುದ್ಧ ಆಕ್ರೋಶ ಹೊರ ಹಾಕಿದ ಸಂಗೀತಗಾರ
ಆದರೆ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಭಾರಿ ಸಂಚಲನ ಸೃಷ್ಟಿಸಿದೆ. ಐಸ್‌ಕ್ರೀಮ್ ಆರ್ಡರ್ ಮಾಡಿದ ವ್ಯಕ್ತಿಗೆ ಕಾಂಡೋಮ್ ಬಂದಿದೆ. ಆದರೆ ಕಾಂಡೋಮ್ ಆರ್ಡರ್ ಮಾಡಿದ ವ್ಯಕ್ತಿಗೆ ಮಾತ್ರ ತೀರಾ ಅನ್ಯಾಯವಾಗಿದೆ. ಆತನಿಗೆ ಈ ವಿಚಾರವನ್ನು ಹೇಳಲು ಆಗದೆ ಐಸ್‌ಕ್ರೀಮ್ ತಿಂದು ಒಳಗೊಳಗೆ ಸಂಕಟಪಡುತ್ತಿರಬುಹುದು. ಆತನ ನೋವು ಯಾರಿಗೂ ಕಾಣಿಸುವುದಿಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ತನ್ನ ಆರ್ಡರ್ ತಲುಪಿಸಲು ಡುನ್ಜೋ ಬುಕ್ ಮಾಡಿದ ಸ್ವಿಗ್ಗಿ ಏಜೆಂಟ್!
ಜನ ಹೋಟೆಲ್ ಅಥವಾ ಅಂಗಡಿಗೆ ಹೋಗಲು ಸಮಯವಿಲ್ಲದೆಯೋ ಅಥವಾ ಇನ್ಯಾವುದೇ ಕಾರಣದಿಂದಾಗಿ ಆನ್‌ಲೈನ್ ಸೇವೆ ನೀಡುವ ಸ್ವಿಗ್ಗಿ, ಝೊಮ್ಯಾಟೋದಂಥ ಕಂಪನಿಗಳಿಗೆ ಮೊರೆ ಹೋಗುವುದು ಸಾಮಾನ್ಯ. ಆದರೆ ಹೀಗೆ ಆರ್ಡರ್ ಪಡೆದ ಡೆಲಿವರಿ ಬಾಯ್, ತಾನು ಡೆಲಿವರಿ ನೀಡುವ ಬದಲು, ಆರ್ಡರ್ ಅನ್ನು ಮತ್ತೊಬ್ಬರಿಗೆ ಆರ್ಡರ್ ಮಾಡುವ ಮೂಲಕ ಸೇವೆ ನೀಡಿದ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಓಂಕಾರ್ ಜೋಶಿ ಎಂಬುವವರು ಸ್ವಿಗ್ಗಿ ಏಜೆಂಟ್ ನಡೆಸಿದ ಈ ಘಟನೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಓಂಕಾಶ್ ಜೋಶಿ, ಇತ್ತೀಚೆಗೆ ಸ್ವಿಗ್ಗಿ ಮೂಲಕ ಕೆಫೆ ಕಾಫಿ ಡೇದಿಂದ ಕಾಫಿ ಬುಕ್ ಮಾಡಿದ್ದರು. ಹೀಗೆ ಬುಕ್ ಆದ ಆರ್ಡರ್ ಪಡೆದ ಡೆಲಿವರಿ ಬಾಯ್‌ಗೆ, ಕಾಫಿ ಡೆಲಿವರಿ ಮಾಡಲು ಸೋಮಾರಿತನ ಕಾಡಿದೆ. ಹೀಗಾಗಿ ಅವರು ತಾನು ಕಾಫಿ ಡೇದಿಂದ ತಂದಿದ್ದ ಕಾಫಿಯನ್ನು ಆರ್ಡರ್ ನೀಡಿದ್ದವರಿಗೆ ತಲುಪಿಸಲು ಡುನ್ಜೂದಲ್ಲಿ ಆರ್ಡರ್ ಬುಕ್ ಮಾಡಿದ್ದಾನೆ. ಕೊನೆಗೆ ಡುನ್ಜೋ ಮೂಲಕ ಗ್ರಾಹಕರಿಗೆ ಕಾಫಿ ರವಾನೆಯಾಗಿದೆ.