ಕೀನ್ಯಾದಲ್ಲಿ ಕಾಡೆಮ್ಮೆಯೊಂದು ತನ್ನ ಕರುವಿನ ಮೇಲೆ ದಾಳಿ ಮಾಡಲು ಬಂದ ಸಿಂಹಗಳ ಹಿಂಡನ್ನು ಏಕಾಂಗಿಯಾಗಿ ಹೋರಾಡಿ ಓಡಿಸಿ ಕರುವನ್ನು ರಕ್ಷಿಸಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಮ್ಮನ ಪ್ರೀತಿಯ ಮುಂದೆ ಎಲ್ಲವೂ ಗೌಣ, ಮನುಷ್ಯರೇ ಆಗಿರಲಿ ಪ್ರಾಣಿಗಳೇ ಆಗಿರಲಿ ತಮ್ಮ ಕರುಳ ಬಳ್ಳಿಗೆ ಸ್ವಲ್ಪ ಹೆಚ್ಚು ಕಡಿಮೆ ಆದರೂ ಸಹಿಸುವುದಿಲ್ಲ, ತಮ್ಮ ಜೀವ ಕೊಟ್ಟಾದರೂ ತನ್ನ ಹೆತ್ತ ಮಗುವನ್ನು ಬದುಕಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅದೇ ರೀತಿ ಇಲ್ಲೊಂದು ಕಾಡೆಮ್ಮೆ ತನ್ನ ಕರುವಿನ ಮೇಲೆ ದಾಳಿ ಮಾಡಲು ಬಂದ ಒಂದಲ್ಲ ಎರಡಲ್ಲ ಇಡೀ ಸಿಂಹದ ಹಿಂಡನ್ನೇ ಒಬ್ಬಂಟಿಯಾಗಿ ದೂರ ಅಟ್ಟಿ ತನ್ನ ಕರುವನ್ನು ರಕ್ಷಿಸಿದ್ದು, ಈ ವನ್ಯಜೀವಿಗಳ ಅಪರೂಪದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಫ್ರಿಕನ್ ರಾಷ್ಟ್ರ ಕೀನ್ಯಾದ ವೀಡಿಯೋ ಇದಾಗಿದ್ದು, ಫೋಟೋಗ್ರಾಫರ್ ಹಾಗೂ ಕೀನ್ಯಾದಲ್ಲಿ ಗೈಡ್ ಆಗಿರುವ ಡೆನ್ನಿಸ್ ಕೋಶಲ್ ಎಂಬುವವರು ಈ ಅಪರೂಪದ ವೀಡಿಯೋವನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ವೀಡಿಯೋದಲ್ಲಿ ತಾಯಿಯ ಹಿಂದೆ ಹೋಗುತ್ತಿದ್ದ ಕಾಡೆಮ್ಮೆಯ ಮರಿಯನ್ನು ಸಿಂಹವೊಂದು ಬೇಟೆಯಾಡಲು ಹೋಗಿ ದಾಳಿ ಮಾಡುತ್ತದೆ. ಕರುವಿನ ಮೇಲೆ ದಾಳಿ ಮಾಡಿ ಕೆಳಗೆ ಬೀಳಿಸುತ್ತದೆ. ಕೂಡಲೇ ಓಡಿ ಬಂದ ತಾಯಿ ಕಾಡೆಮ್ಮೆ ಸಿಂಹವನ್ನು ತನ್ನ ಕೊಂಬಿನಲ್ಲಿ ತಳ್ಳುತ್ತಾ ದೂರ ಅಟ್ಟುತ್ತದೆ. ಈ ವೇಳೆ ಸುಧಾರಿಸಿಕೊಂಡ ಕರು ನಿಧಾನವಾಗಿ ಮೇಲೇಳುತ್ತದೆ. ಅಷ್ಟರಲ್ಲಿ ಮತ್ತೊಂದು ಸಿಂಹ ಅಲ್ಲಿಗೆ ಬಂದಿದೆ. ಹೀಗೆ ಆ ಸಿಂಹವನ್ನು ತಾಯಿ ಕಾಡೆಮ್ಮೆ ಓಡಿಸುತ್ತಾ ಹೋದರೆ ಇತ್ತ ಅಲ್ಲೇ ಇದ್ದ ಸಿಂಹ ಮತ್ತೆ ಕರುವಿನ ಮೇಲೆ ದಾಳಿ ಮಾಡಿ ಮತ್ತೆ ಕರುವನ್ನು ನೆಲಕ್ಕೆ ಕೆಡವುತ್ತದೆ. ಈಗ ಮತ್ತೆ ಅಲ್ಲಿಗೆ ಓಡಿ ಬಂದ ತಾಯಿ ಕಾಡೆಮ್ಮೆ ಸಿಂಹವನ್ನು ಮತ್ತೆ ದೂರ ತಳ್ಳಿದೆ. ಇದೇ ವೇಳೆ ಮತ್ತೊಂದು ಸಿಂಹ ಬಂದಿದ್ದು, ಅದನ್ನು ಕೂಡ ತಾಯಿ ಕಾಡೆಮ್ಮೆ ಓಡಿಸುತ್ತಾ ಹೋಗಿದೆ. ಹೀಗೆ ಒಂದಾದ ಮೇಲೊಂದರಂತೆ ಐದಕ್ಕೂ ಹೆಚ್ಚು ಸಿಂಹಗಳು ಪುಟ್ಟ ಕರುವಿನ ಮೇಲೆ ಮುಗಿಬಿದ್ದಿವೆ. ಆದರೆ ತಾಯಿ ಕಾಡೆಮ್ಮೆ ಅವುಗಳೆಲ್ಲವನ್ನು ಏಕಾಂಗಿಯಾಗಿ ಹೋರಾಡುತ್ತಾ ಓಡಿಸಿ ತನ್ನ ಕರುವನ್ನು ಕಾಪಾಡಿದೆ.
ಇದನ್ನೂ ಓದಿ: ಪುಟ್ಟ ಮಕ್ಕಳ ಪಾಕ್‌ಗೆ ಕಳುಹಿಸಿ ಆಚೇ ಹೋಗಲಾರದೇ ಇಲ್ಲೂ ಇರಲಾಗದೇ ತಾಯಿಯ ಸಂಕಟ
ಆದರೆ ಅಷ್ಟರಲ್ಲಿ ದೂರದಲ್ಲಿದ್ದ ಕಾಡೆಮ್ಮೆಗಳ ಹಿಂಡಿಗೆ ಈ ಸಿಂಹಗಳ ದಾಳಿಯ ವಿಚಾರ ಗಮನಕ್ಕೆ ಬಂದಿದ್ದು, ಕೂಡಲೇ ಅವುಗಳೆಲ್ಲವೂ ಒಟ್ಟಾಗಿ ಸ್ಥಳಕ್ಕೆ ಧಾವಿಸಿ ಬಂದು ಸಿಂಹಗಳನ್ನು ಅಲ್ಲಿಂದ ದೂರ ಓಡಿಸುತ್ತಿವೆ. 10ಕ್ಕೂ ಹೆಚ್ಚು ಕಾಡೆಮ್ಮೆಗಳು ಸಿಂಹಗಳನ್ನು ದೂರ ಓಡಿಸುವ ಅಪರೂಪದ ದೃಶ್ಯವನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ಗುಂಪಾಗಿ ಬಂದ ಸಿಂಹಗಳನ್ನು ಮತ್ತೊಂದು ಕಾಡೆಮ್ಮೆ ಓಡಿಸಿಕೊಂಡು ಹೋಗುವುದನ್ನು ವೀಡಿಯೋದಲ್ಲಿ ನೋಡಬಹುದು. ಹೀಗೆ ಕಾಡೆಮ್ಮೆಗಳು ಒಗ್ಗಟ್ಟಾಗಿ ಪ್ರತಿ ದಾಳಿ ಮಾಡಿದ್ದರಿಂದ ಸಿಂಹಗಳೆಲ್ಲವೂ ಚದುರಿ ದೂರ ಹೋಗಿವೆ. ಈ ಅಪರೂಪದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕರುವನ್ನು ರಕ್ಷಿಸಿಕೊಳ್ಳಲು ಏಕಾಂಗಿಯಾಗಿ ಹೋರಾಡಿದ ತಾಯಿ ಕಾಡೆಮ್ಮೆಯ ಧೈರ್ಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ತಾಯಿ ಕಾಡೆಮ್ಮೆಯ ನೆರವಿಗೆ ಧಾವಿಸಿದ ಅವುಗಳ ಬಳಗದ ಬಗ್ಗೆಯೂ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಗಳ ಮಾವನ ಜೊತೆ ಓಡಿಹೋದ ಅತ್ತೆ!
ಪ್ರಾಣಿಗಳ ಪ್ರಪಂಚದಲ್ಲಿ ಯಾವುದೂ ಕೆಟ್ಟದೂ ಇಲ್ಲ, ಯಾವುದೂ ಒಳ್ಳೆಯದು ಇಲ್ಲ, ಅದು ಕೇವಲ ಜೈವಿಕ ಸರಪಳಿಯಾಗಿದೆ. ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ಕಾಡಿನ ನಿಯಮ ಎಂದು ಇದಕ್ಕೆ ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇದು ಪರಿಸರದ ಸರಪಳಿ. ಇದು ಪ್ರೀತಿಸುವ ತಾಯಿಯೊಬ್ಬಳಿಗಿರುವ ಶಕ್ತಿ ಹಾಗೂ ಆಕೆಯನ್ನು ಬೆಂಬಲಿಸುವ ಆಕೆಯ ಕುಟುಂಬ ಹಾಗೂ ಸಮುದಾಯಕ್ಕಿರುವ ಶಕ್ತಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಕಾಡು ಪ್ರಾಣಿಗಳ ಈ ಅಮೋಘವಾದ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.
ಇದನ್ನೂ ಓದಿ:
