ಗೂಡಿಗೆ ನುಗ್ಗಿದ ಮಳೆ ನೀರು: ಜೀವದ ಹಂಗು ತೊರೆದು ಮರಿಗಳ ರಕ್ಷಿಸಿದ ತಾಯಿ ಇಲಿ

ಇಲ್ಲೊಂದು ಕಡೆ ಪುಟ್ಟ ಇಲಿಯೊಂದು ತನ್ನ ಮರಿಗಳ ರಕ್ಷಣೆಗೆ ತನ್ನ ಪ್ರಾಣದ ಹಂಗು ತೊರೆದು ಹೋರಾಡಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Mother love, rat rescued her three babies by drowning in water video goes viral in social Media akb

ಬೆಂಗಳೂರು: ತಾಯಿ ಪ್ರೀತಿಗೆ ಸರಿಸಾಟಿಯಾದುದು ಬೇರೆ ಯಾವುದು ಇಲ್ಲ. ಇದಕ್ಕೆ ನಮ್ಮ ನಡುವೆ ಹಲವು ನಿದರ್ಶನಗಳು ನಡೆದಿವೆ. ಪ್ರಾಣಿಗಳೇ ಆಗಲಿ ಮನುಷ್ಯರೇ ಆಗಲಿ ತಾಯಿಯ ಪ್ರೇಮ ಅಮೋಘವಾದುದು. ಮನುಷ್ಯರಿಗಿಂತ ತುಸು ಹೆಚ್ಚೆ ಸೂಕ್ಷ್ಮವಾಗಿರುವ ಪ್ರಾಣಿಗಳು ತಮ್ಮ ಮರಿಗಳ ರಕ್ಷಣೆಗೆ ಸುರಕ್ಷತೆಗಾಗಿ ಇನ್ನಿಲ್ಲದ ಸಾಹಸ ಮಾಡುತ್ತವೆ. ತಮ್ಮ ಜೀವದ ಹಂಗು ತೊರೆದು ಹೋರಾಡುತ್ತವೆ. ಕೆಲ ದಿನಗಳ ಹಿಂದೆ ತನ್ನ ಮರಿಯ ಮೇಲೆ ದಾಳಿ ಮಾಡಲು ಬಂದ ಹುಲಿಯೊಂದನ್ನು ಎಮ್ಮೆಯೊಂದು ಓಡಿಸಿದ  ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅದೇ ರೀತಿ ಇಲ್ಲೊಂದು ಕಡೆ ಪುಟ್ಟ ಇಲಿಯೊಂದು ತನ್ನ ಮರಿಗಳ ರಕ್ಷಣೆಗೆ ತನ್ನ ಪ್ರಾಣದ ಹಂಗು ತೊರೆದು ಹೋರಾಡಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜೋರಾಗಿ ಸುರಿದ ಮಳೆಯಿಂದಾಗಿ ಇಲಿಯ ಗೂಡಿನೊಳಗೆ ರಸ್ತೆ ಬದಿಯ ನೀರೆಲ್ಲ ಇಳಿಯಲು ಶುರುವಾಗಿದೆ. ಕೂಡಲೇ ಎಚ್ಚೆತ್ತ ತಾಯಿ ಇಲ್ಲಿ ತನ್ನ ಮರಿಗಳ ರಕ್ಷಣೆಗೆ (Rescue Operation) ಪಣ ತೊಟ್ಟಿದ್ದು, ನೀರು ಒಳ ನುಗ್ಗುತ್ತಿದ್ದರೂ ಧೈರ್ಯಗೆಡದೇ ತನ್ನ ಒಂದೊಂದೇ ಮರಿಗಳನ್ನು ತನ್ನ ಗೂಡಿನಿಂದ ಬಾಯಿಯಲ್ಲಿ ಕಚ್ಚಿಕೊಂಡು ಬಂದು ಸುರಕ್ಷಿತ ಸ್ಥಳದಲ್ಲಿ ಬಿಡುತ್ತದೆ. ಮೊದಲಿಗೆ ನೀರು (Water) ಸ್ವಲ್ಪ ಬರಲು ಆರಂಭಿಸಿದ್ದು, ನಂತರ ನೀರು ಹೆಚ್ಚಾಗತೊಡಗಿ ತನ್ನ ಜೀವಕ್ಕೂ ಅಪಾಯವಾಗುವುದು ಎಂಬ ಅರಿವಿದ್ದರೂ ತಾಯಿ ಇಲಿ ಮಾತ್ರ ತನ್ನ ನಾಲ್ಕು ಮರಿಗಳನ್ನು ಅಲ್ಲಿಂದ ಮೇಲೆ ತರುವವರೆಗೆ ವಿಶ್ರಮಿಸಿಲ್ಲ. ನೀರೊಳಗೆ ಮುಳುಗುತ್ತಾ ಸಾಗಿ ಒಂದೊಂದೇ ಮರಿಗಳನ್ನು ಅಲ್ಲಿಂದ ರಕ್ಷಿಸಿ ಹೊರ ತೆಗೆದುಕೊಂಡು ಬರುತ್ತಿರುವ ದೃಶ್ಯ ನೋಡುಗರ ಕಣ್ಣಲ್ಲಿ ನೀರುಕ್ಕಿಸುವಂತೆ ಮಾಡುತ್ತಿದೆ. ಎರಡು ನಿಮಿಷ 20 ಸೆಕೆಂಡ್‌ಗಳಲ್ಲಿ ಅದು ಮೂರು ಮರಿಗಳನ್ನು ರಕ್ಷಿಸಿದ್ದು, ಮತ್ತೊಂದು ಮರಿ ಇರುವ ಹಿನ್ನೆಲೆಯಲ್ಲಿ ಒಳಗೆ ನೀರು ನುಗ್ಗುತ್ತಿದ್ದರು  ಒಳನುಗ್ಗಲು ಮುಂದೆ ಸಾಗುತ್ತಿದೆ. ವಿಡಿಯೋದಲ್ಲಿ ಕಾಣಿಸುವಂತೆ ಈ ಪುಟ್ಟ ಜೀವ ಒಟ್ಟು ಮೂರು ಬಾರಿ ಮರಿಗಳ ರಕ್ಷಣೆಗಾಗಿ ನೀರೊಳಗೆ ಧುಮುಕಿ ಮರಿಗಳನ್ನು ಎತ್ತಿಕೊಂಡು ಬಂದಿದೆ. 

ಈ ವಿಡಿಯೋವನ್ನು ನೋಡಿದ ಜನರು ಭಾವುಕರಾಗಿದ್ದು, ಎರಡು ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಮೂಲತಃ ಇದು ಹಳೆಯ ವಿಡಿಯೋವಾಗಿದ್ದು, ಈಗ ಮತ್ತೆ ವೈರಲ್ ಆಗಿದೆ. ಈ ವಿಡಿಯೋವನ್ನು ಭಾರತೀಯ ಆಡಳಿತ ಅಧಿಕಾರಿ (IFS) ಪ್ರರ್ವಿನ್ ಕಸ್ವಾನ್ ಅವರು 2020ರಲ್ಲಿಯೇ ಪೋಸ್ಟ್ ಮಾಡಿದ್ದರು. ಈ ದೃಶ್ಯ ನಿಮ್ಮ ಹೃದಯವನ್ನು ಭಾರವಾಗಿಸುವುದು. ತಾಯಿಯಿಂದ ರಕ್ಷಣಾ ಕಾರ್ಯ. ಸ್ನೇಹಿತರೊಬ್ಬರು ಈ ವಾಟ್ಸಾಪ್ (Whatsapp) ಮೂಲಕ ಕಳುಹಿಸಿಕೊಟ್ಟಿದ್ದರು ಎಂದು ಬರೆದು ಪರ್ವಿನ್ ಕಸ್ವಾನ್ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಈ ದೃಶ್ಯ ಅನೇಕರ ಕಣ್ಣಲ್ಲಿ ನೀರು ತರಿಸಿದೆ. ತಾಯಿಯ ಶ್ರಮ ತ್ಯಾಗ (Sacrifice), ಶ್ರಮ ಪ್ರೀತಿಯ ಮುಂದೆ ಎಲ್ಲವೂ ಶೂನ್ಯ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. 

ನೀರಿನ ಹೊಂಡಕ್ಕೆ ಬಿದ್ದ ಮರಿ: ಜೀವದ ಹಂಗು ತೊರೆದು ರಕ್ಷಿಸಿದ ತಾಯಾನೆ: ವಿಡಿಯೋ ವೈರಲ್

ಅಮ್ಮ ತನ್ನ ಮಕ್ಕಳ ಮೇಲೆ ತೋರುವ ಕರುಣೆ ಕಾಳಜಿ ಪದಗಳಲ್ಲಿ ವರ್ಣಿಸಲಾಗದು ಅಮ್ಮನ ಮಹತ್ವ ಸಹನೆ ಕಾಳಜಿಯನ್ನು ಅರಿತೇ ತಾಯಿಗಿಂತ ದೇವರಿಲ್ಲ ಎಂಬ ಮಾತು ಚಾಲ್ತಿಯಲ್ಲಿದೆ. ಅಮ್ಮನ ಮಮತೆ ಪ್ರೇಮ ಸೆರೆಯಾದ ಹಲವು ವಿಡಿಯೋಗಳನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ನೋಡಿದ್ದೇವೆ. ಅಮ್ಮ ಎಂಬ ಕಾಳಜಿ ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ. ಪಶು ಪಕ್ಷಿಗಳು ಕೂಡ ತಮ್ಮ ತಮ್ಮ ಕರುಳ ಕುಡಿಗಳ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿವೆ. ಅದೇ ರೀತಿ ಕೆಲ ದಿನಗಳ ಹಿಂದೆ ಆನೆಯೊಂದು ಜೋರಾಗಿ ಸುರಿಯುತ್ತಿರುವ ಮಳೆಯ ಮಧ್ಯೆ ತನ್ನ ಮರಿಯ ಮೇಲೆ ಮಳೆ ಹನಿ ಬೀಳದಂತೆ ಅಡ್ಡ ನಿಂತು ರಕ್ಷಣೆ ಮಾಡಿದಂತಹ ವಿಡಿಯೋ ವೈರಲ್ ಆಗಿತ್ತು.  

ಈ ಆನೆಗಳ ವಿಡಿಯೋವನ್ನು ಭಾರತೀಯ ಆಡಳಿತ ಸೇವೆ ಅಧಿಕಾರಿ ಸುಪ್ರಿಯಾ ಸಾಹು ಅವರು ಪೋಸ್ಟ್ ಮಾಡಿದ್ದು, ತಮಿಳುನಾಡಿನ ನೀಲಗಿರಿ ಅರಣ್ಯ ಪ್ರದೇಶದಲ್ಲಿ ಸೆರೆಯಾದ ದೃಶ್ಯ ಇದಾಗಿತ್ತು. 28 ಸೆಕೆಂಡುಗಳ ಈ ವಿಡಿಯೋವನ್ನು ಪೋಸ್ಟ್ ಮಾಡಿದ ಅಧಿಕಾರಿ ಸುಪ್ರಿಯಾ ಸಾಹು, ಇದೊಂದು ಅಪರೂಪದ ಕ್ಷಣ. ತಾಯಿ ಆನೆ ದೊಡ್ಡದಾದ ಛತ್ರಿಯಂತೆ ನಿಂತು ತನ್ನ ನವಜಾತ ಶಿಶುವನ್ನು ಮಳೆಯಿಂದ ರಕ್ಷಿಸುತ್ತಿದೆ. ನೀಲಗಿರಿ ಅರಣ್ಯ ಪ್ರದೇಶ ವ್ಯಾಪ್ತಿಯ ಗುಡಲೂರಿನಲ್ಲಿ ಈ ಘಟನೆ ನಡೆದಿದೆ ಎಂದು ಸಾಹು ಬರೆದುಕೊಂಡಿದ್ದರು. 

ಬೆಕ್ಕಿನ ಮರಿಗಳಿಗೆ ತನ್ನ ರೆಕ್ಕೆಗಳಡಿ ಜಾಗ ಕೊಟ್ಟ ಕೋಳಿ: ಫೋಟೋ ವೈರಲ್

Latest Videos
Follow Us:
Download App:
  • android
  • ios